ಅಪಘಾತ

ಗೇರು ತೋಪಿಗೆ ಅಕಸ್ಮಿಕ ಬೆಂಕಿ : ಅಪಾರ ಗಿಡಗಳ ನಾಶ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಭಾನುವಾರ ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಒಂದು ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಗೇರು ತೋಪಿಗೆ ಆವರಿಸಿತ್ತು. ದಿವಾಕರ ರೈ ಎಂಬವರಿಗೆ ಸೇರಿದ ಗೇರು ತೋಟದಲ್ಲಿ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ತೋಟದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಿಂದ ಶಾರ್ಟ್ ಆಗಿ ಬೆಂಕಿ ಕಿಡಿ […]

ಗೇರು ತೋಪಿಗೆ ಅಕಸ್ಮಿಕ ಬೆಂಕಿ : ಅಪಾರ ಗಿಡಗಳ ನಾಶ Read More »

ರಿಕ್ಷಾಗಳೆರಡು ಮುಖಾಮುಖಿ ಡಿಕ್ಕಿ | ಓರ್ವ ಮೃತ್ಯು, 9 ಮಂದಿಗೆ ಗಾಯ

ವಿಟ್ಲ: ಎರಡು ರಿಕ್ಷಾಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು, 9 ಮಂದಿ ಗಾಯಗೊಂಡ ಘಟನೆ ಪಡಿಬಾಗಿಲು ಅಳಿಕೆ ಸಮೀಪ ನಡೆದಿದೆ. ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಮೃತಪಟ್ಟವರು. ಎರುಂಬು ನಿವಾಸಿ ಹಮೀದ್, ಪಡಿಬಾಗಿಲು ನಿವಾಸಿ ರವಿ ಎಂಬವರಿಗೆ ಸೇರಿದ ರಿಕ್ಷಾಗಳಾಗಿದ್ದು, ಅಪಘಾತದ ತೀವ್ರತೆಗೆ ರಿಕ್ಷಾಗಳ ಮುಂಭಾಗ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ರಿಕ್ಷಾಗಳೆರಡು ಮುಖಾಮುಖಿ ಡಿಕ್ಕಿ | ಓರ್ವ ಮೃತ್ಯು, 9 ಮಂದಿಗೆ ಗಾಯ Read More »

ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತ್ಯು

ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಭಾನುವಾರ ಮುಂಜಾನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾ‌ರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು – ಆಲಡ್ಕ ವಾಸ್ತವ್ಯವಿರುವ ಆಶ್ರಫ್ (32) ಮೃತಪಟ್ಟ ಯುವಕ. ಆಲಡ್ಕ ನಿವಾಸಿ ತಸ್ವೀ‌ರ್ ಆಶ್ರಫ್‌ ಅವರ ಸ್ನೇಹಿತರಾಗಿದ್ದು, ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತನಿಗೆ ಡ್ರಾಫ್ ಕೊಡುವ ಉದ್ದೇಶದಿಂದ ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡಿಗೆ ತೆರಳಿದ್ದು ಬೆಳಿಗ್ಗೆ ಸುಮಾರು 5.30

ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತ್ಯು Read More »

ಮುರದಲ್ಲಿ ಟಿಪ್ಪರ್-ದ್ವಿಚಕ್ರ ವಾಹನ ಡಿಕ್ಕಿ | ಟಿಪ್ಪರ್ ಚಾಲಕ ಬಿ. ಕೆ. ಮಹಮ್ಮದ್ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಮುರದಲ್ಲಿ ಸಂಭವಿಸಿದ ಟಿಪ್ಪ‌ರ್ ಹಾಗೂ ಸ್ಕೂಟ‌ರ್ ನಡುವಿನ ಅಪಘಾತದಲ್ಲಿ, ದ್ವಿಚಕ್ರ ವಾಹನ ಸವಾರ ತೇಜಸ್ ಸಾವನ್ನಪ್ಪಿದ್ದು, ಟಿಪ್ಪರ್ ಚಾಲಕನ ವಿರುದ್ಧ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಎಂಬವರು ನೀಡಿದ ದೂರಿನ ಮೇರೆಗೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಫೆ.22 ರಂದು ಸಂಜೆ ಟಿಪ್ಪರ್ ಲಾರಿ ಚಾಲಕ ಬಿ.ಕೆ. ಮಹಮ್ಮದ್ ಎಂಬವರು ಟಿಪ್ಪ‌ರ್ ಲಾರಿಯನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಬಕ ಗ್ರಾಮದ ಮುರ ಎಂಬಲ್ಲಿ,

ಮುರದಲ್ಲಿ ಟಿಪ್ಪರ್-ದ್ವಿಚಕ್ರ ವಾಹನ ಡಿಕ್ಕಿ | ಟಿಪ್ಪರ್ ಚಾಲಕ ಬಿ. ಕೆ. ಮಹಮ್ಮದ್ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು Read More »

ಮಹಿಳೆ ಮೇಲೆ ಕಾಡುಹಂದಿ ದಾಳಿ : ಗಂಭೀರ ಗಾಯ

ಕಡಬ: ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಗೆ ತೆರಳಿದ್ದ ಮಹಿಳೆಯೊಬ್ಬರಿಗೆ ಕಾಡುಹಂದಿಯೊಂದು ತಿವಿದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಸುಳ್ಯ ತಾಲೂಕಿನ ದುಗಲಡ್ಕ ಕೂಟೇಲು ನಿವಾಸಿ ಪದ್ಮಾವತಿ ಕಾಡುಹಂದಿ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡವರು. ಸುಳ್ಯ ತಾಲೂಕು ದುಗಲಡ್ಕ ಕೂಟೇಲು ಎಂಬಲ್ಲಿ ಈ ಘಟನೆ ನಡೆದಿದ್ದು  ಪದ್ಮಾವತಿ ಅವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪ‌ರ್ ಆಗಿದ್ದು ಗುರುವಾರ ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ಧಾಳಿ ನಡೆಸಿದಾಗ

ಮಹಿಳೆ ಮೇಲೆ ಕಾಡುಹಂದಿ ದಾಳಿ : ಗಂಭೀರ ಗಾಯ Read More »

ಟಿಪ್ಪರ್-ಸ್ಕೂಟರ್ ಡಿಕ್ಕಿ | ಸ್ಕೂಟರ್ ಸವಾರರಿಗೆ ಗಂಭೀರ ಗಾಯ

ಪುತ್ತೂರು: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮುರ ಸಮೀಪದ ಎಂಪಿಎಂ ಸ್ಕೂಲ್ ಬಳಿ ಗುರುವಾರ ನಡೆದಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಪುತ್ತೂರಿನಿಂದ ಕಬಕ ಕಡೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ಕಬಕದಿಂದ ಪುತ್ತೂರ ಕಡೆ ಬರುತ್ತಿದ್ದ ಟಿಪ್ಪ‌ರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಟಿಪ್ಪರ್-ಸ್ಕೂಟರ್ ಡಿಕ್ಕಿ | ಸ್ಕೂಟರ್ ಸವಾರರಿಗೆ ಗಂಭೀರ ಗಾಯ Read More »

ಬೈಕ್-ಟಿಪ್ಪರ್ ಅಪಘಾತ | ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸಫ್ವಾನ್ ಮೃತ್ಯು

ಪುತ್ತೂರು: ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮುಕ್ವೆ ನಿವಾಸಿ ಸಫ್ವಾನ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ. ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಸಫ್ವಾನ್ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್-ಟಿಪ್ಪರ್ ಅಪಘಾತ | ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸಫ್ವಾನ್ ಮೃತ್ಯು Read More »

ಬೈಕ್-ಟಿಪ್ಪರ್ ಅಪಘಾತ | ಬೈಕ್ ಸವಾರನಿಗೆ ಗಂಭೀರ ಗಾಯ

ಪುತ್ತೂರು: ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ನಡೆದಿದೆ.  ಮುಕ್ವೆ ನಿವಾಸಿ ಸಫ್ವಾನ್ ಗಂಭೀರ ಗಾಯಗೊಂಡವರು. ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ರಸ್ತೆ ಬದಿ ನಿಲ್ಲಿಸಲಾಗಿದ್ದ ಇನ್ನೊಂದು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ ಎನ್ನಲಾಗಿದೆ.

ಬೈಕ್-ಟಿಪ್ಪರ್ ಅಪಘಾತ | ಬೈಕ್ ಸವಾರನಿಗೆ ಗಂಭೀರ ಗಾಯ Read More »

ಟಿಪ್ಪರ್-ಆಕ್ಟಿವಾ ಡಿಕ್ಕಿ : ಆಕ್ಟಿವಾ ಸವಾರನಿಗೆ ಗಾಯ !

ಪುತ್ತೂರು: ಆಕ್ಟಿವಾ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಕ್ಟಿವಾ ಸವಾರ ಗಾಯಗೊಂಡ ಘಟನೆ ದರ್ಬೆ ಬೈಪಾಸ್ ಸರ್ಕಲ್ ಬಳಿ ನಡೆದಿದೆ. ದಿವಾಕರ ಮಡಿವಾಳ ಗಾಯಗೊಂಡ ಆಕ್ಟಿವಾ ಸವಾರ. ಅಪಘಾತ ನಡೆದ ತಕ್ಷಣ ಗಾಯಾಳುವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಟಿಪ್ಪರ್-ಆಕ್ಟಿವಾ ಡಿಕ್ಕಿ : ಆಕ್ಟಿವಾ ಸವಾರನಿಗೆ ಗಾಯ ! Read More »

ಬಸ್-ಬೈಕ್ ಡಿಕ್ಕಿ | ಬೈಕ್ ಸವಾರ ಗಂಭೀರ

ಕಡಬ: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಮರ್ದಾಳದಲ್ಲಿ ಸೋಮವಾರ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಮಣಿಭಾಂಡದ ಮೆಕ್ಯಾನಿಕ್ ವಾಸು ಗಾಯಗೊಂಡ ಬೈಕ್ ಸವಾರ. ಕೆಎಸ್‍ ಆರ್‍ ಟಿಸಿ ಬಸ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‍ ಗೆ ಡಿಕ್ಕಿ ಹೊಡೆದಿದೆ. ಎನ್ನಲಾಗಿದೆ. ಗಂಭೀರ ಗಾಯಗೊಂಡ ಬೈಕ್‍ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಸ್-ಬೈಕ್ ಡಿಕ್ಕಿ | ಬೈಕ್ ಸವಾರ ಗಂಭೀರ Read More »

error: Content is protected !!
Scroll to Top