ಅಪಘಾತ

ಬಸ್-ಆಟೋರಿಕ್ಷಾ ಡಿಕ್ಕಿ : ಆಟೋ ಚಾಲಕ ಮೃತ್ಯು

ಪುತ್ತೂರು : ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಇಂದು ಮುಂಜಾನೆ ಮುಕ್ರಂಪಾಡಿಯಲ್ಲಿ ನಡೆದಿದೆ. ಆಟೋ ರಿಕ್ಷಾ ಚಾಲಕ ಜೈಸನ್ (30) ಮೃತಪಟ್ಟವರು. ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ರಿಕ್ಷಾ ಮಧ್ಯೆ ಡಿಕ್ಕಿ  ಸಂಭವಿಸಿದೆ. ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದು ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ […]

ಬಸ್-ಆಟೋರಿಕ್ಷಾ ಡಿಕ್ಕಿ : ಆಟೋ ಚಾಲಕ ಮೃತ್ಯು Read More »

ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು

ಧರ್ಮಸ್ಥಳ: ಬಸ್ಸಿನಡಿಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಕೆ ಎಸ್‌ ಆರ್‌ ಟಿ ಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಧರ್ಮಸ್ಥಳ ಬಸ್‌ ನಿಲ್ದಾಣದಲ್ಲಿ ಸುಬ್ರಹ್ಮಣ್ಯಕ್ಕೆ ಹೋಗುವ ಕೆ ಎಸ್‌ ಆರ್‌ ಟಿ ಸಿ ಬಸ್ ರಿವರ್ಸ್ ತೆಗೆಯುವ ವೇಳೆ ಮಹಿಳೆ ಆಕಸ್ಮಿಕವಾಗಿ ಟಯರ್‌ನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಸೇರಿ 8 ಜನ ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದ ಧರ್ಮಸ್ಥಳಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿರುವ ಮಹಿಳೆ ಆಕಸ್ಮಿಕವಾಗಿ ಟಯರ್

ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು Read More »

ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು

ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಕೆಳಗೆ ಬಿದ್ದು ಬೆಂಗಳೂರಿನ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಬೆಂಗಳೂರು ಸುಂಕದಕಟ್ಟೆಯ ಮಂಜುನಾಥ ಮೃತಪಟ್ಟವರು. ಮಂಜುನಾಥ ಅವರು ಪತ್ನಿ ಜೊತೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದು, ಬಸ್ಸು ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತಲುಪುವಾಗ ಬಸ್ಸಿನ ಚಾಲಕ ನಿರ್ಲಕ್ಷತೆ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಬಸ್ಸಿನ ನಿರ್ವಾಹಕ ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೇ ಇದ್ದುದರಿಂದ ಮಂಜುನಾಥ ಅವರು ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಖಾಸಗಿ

ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು Read More »

ಆಕ್ಸಿಜನ್ ಕೊರತೆ : ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು

ಕೇಪು: ಆಕ್ಸಿಜನ್ ಸಿಗದೆ ಬಾವಿಗೆ ರಿಂಗ್ ಹಾಕಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ಇಂದು ನಡೆದಿದೆ. ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ (40) ಮತ್ತು ಮಲಾರ್ ನಿವಾಸಿ ಆಲಿ(24) ಮೃತಪಟ್ಟ ಕಾರ್ಮಿಕರು. ಸುಮಾರು 30 ಫೀಟ್ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದ.

ಆಕ್ಸಿಜನ್ ಕೊರತೆ : ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು Read More »

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ

ಸುಳ್ಯ: ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಬೈಲಿನಲ್ಲಿ ಇಂದು ಸಂಜೆ ಬೀಸಿದ ಭಾರಿ ಗಾಳಿಗೆ ಅಡಕೆ ಮರಗಳು ಧರೆಗುರುಳಿ ಅಪಾರ ನಷ್ಟ ಉಂಟಾಗಿದೆ. ಇಂದು ಸಂಜೆ ಅಜ್ಜಾವರದ ಮೇನಾಲದ ವ್ಯಾಪ್ತಿಯಲ್ಲಿ ಮತ್ತು ಮೇದಿನಡ್ಕ, ಪಡ್ಡಂಬೈಲು ಭಾಗದಲ್ಲಿ ಮಾತ್ರ ಭಾರಿ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಕೂಡ ಹಾನಿಯಾಗಿದೆ. ಇಂದು ರಾತ್ರಿ ಅಜ್ಜಾವರ ವ್ಯಾಪ್ತಿಯಲ್ಲಿನ ಜನತೆ ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. .

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ Read More »

ನದಿಗೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

ಬಂಟ್ವಾಳ : ನೇತ್ರಾವತಿ ನದಿಗೆ ಈಜಲು ಹೋದ ಬಾಲಕನೋರ್ವ ನೀರುಪಾಲಾದ ಘಟನೆ ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ಎಂಬಲ್ಲಿ ಶನಿವಾರ ಸಂಜೆ ವೇಳೆಗೆ ಸಂಭವಿಸಿದೆ. ಸ್ಥಳೀಯ ನಿವಾಸಿ ಸಹೀರ್ ಎಂಬವರ ಪುತ್ರ ಸುಹೈಲ್ (13) ನೀರುಪಾಲಾದ ಬಾಲಕ. ಕೆಮ್ಮನ್ ಪಳಿಕೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, 7 ನೇ ತರಗತಿ ತೇರ್ಗಡೆ ಹೊಂದಿದ್ದ ಸುಹೈಲ್‍ ತನ್ನ ಮನೆ ಸಮೀಪದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಸ್ನೇಹಿತರ ಜೊತೆಗೆ ಪಕ್ಕದ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದು ಆ ವೇಳೆ ಈ ಘಟನೆ ನಡೆದಿದೆ

ನದಿಗೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು Read More »

ಎರಡು ಕಾರುಗಳ ಮುಖಾಮುಖಿ ಡಿಕ್ಕಿ : ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಸುಳ್ಯ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡ ಘಟನೆ ಸುಳ್ಯ ಶ್ರೀರಾಮ್ ಪೇಟೆ ಬಳಿ ಇಂದು ನಡೆದಿದೆ. ಓಮ್ನಿ ಕಾರು ಹಾಗೂ ಸೆಲಾರಿಯೋ ಕಾರಿನ ನಡುವೆ ಶ್ರೀರಾಮ್ ಪೇಟೆ ಪೋಸ್ಟ್ ಆಫೀಸ್ ಕಚೇರಿಯ ಬಳಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಎರಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕಾರುಗಳ ಡಿಕ್ಕಿಯಿಂದ ಸುಳ್ಯ ಮುಖ್ಯ ಬೀದಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಎರಡು ಕಾರುಗಳ ಮುಖಾಮುಖಿ ಡಿಕ್ಕಿ : ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ Read More »

ಟ್ಯಾಂಕರ್-ಕಂಟೈನರ್ ಡಿಕ್ಕಿ : ಕಂಟೈನರ್ ಚಾಲಕ ಗಂಭೀರ

ಉಪ್ಪಿನಂಗಡಿ: ಟ್ಯಾಂಕರ್ ಮತ್ತು ಕಂಟೆನರ್ ಮದ್ಯೆ ನಡೆದ ಭೀಕರ ಅಪಘಾತಕ್ಕೆ ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿಯೇ ಕಾರಣ ಎಂದು ತಿಳಿದು ಬಂದಿದ್ದು, ಕಂಟೇನ‌ರ್ ಚಾಲಕ ಗಂಭೀರ ಗಾಯಗೊಂಡಿದ್ದು, ಅಪಘಾತ ಸಂಭವಿಸಿ ಒಂದು ಗಂಟೆಗಳು ಕಳೆದರೂ ಚಾಲಕನನ್ನು ಹೊರ ತೆಗೆಯಲು ಹರ ಸಾಹಸ ಪಡಲಾಯಿತು. ಸ್ಥಳೀಯ ಯುವಕರ ಶತ ಪ್ರಯತ್ನಗಳಿಂದ ಚಾಲಕನನ್ನು ಹೊರ ತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ

ಟ್ಯಾಂಕರ್-ಕಂಟೈನರ್ ಡಿಕ್ಕಿ : ಕಂಟೈನರ್ ಚಾಲಕ ಗಂಭೀರ Read More »

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ

ಪುತ್ತೂರು : ಪುತ್ತೂರಿನಿಂದ ದರ್ಬೆ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ , ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆಯಲ್ಲಿ ನಡೆದಿದೆ. ಕೆಮ್ಮಾಯಿಯ ವ್ಯಕ್ತಿಯೊಬ್ಬರು ಕಾರು ಚಲಾಯಿಸುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಸ್ಕೂಟರ್ ಸೇರಿದಂತೆ ಸಾಮೆತ್ತಡ್ಕದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ವ್ಯಕ್ತಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದಾರೆ. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗಿದ್ದು, ಕಾರು ಚಾಲಕ ಜಖಂಗೊಂಡ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ Read More »

ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ : ಸವಾರ ಮೃತ್ಯು

ಮಂಗಳೂರು: ದ್ವಿಚಕ್ರ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಹೇರೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೇರೂರು ನಿವಾಸಿ ಕೃಷ್ಣ ಗಾಣಿಗ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಂತೆಕಟ್ಟೆಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿ ರಸ್ತೆಯನ್ನು ಏಕ ಪಥಕ್ಕೆ ಪರಿವರ್ತಿಸಲಾಗಿತ್ತು. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಲಾರಿಗೆ ಕೃಷ್ಣ ಅವರ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದ್ವಿಚಕ್ರ ವಾಹನ ಲಾರಿಗೆ ಡಿಕ್ಕಿ : ಸವಾರ ಮೃತ್ಯು Read More »

error: Content is protected !!
Scroll to Top