ಅಪಘಾತ

ಬೈಕ್- ಬಸ್ ಅಪಘಾತ : ಬೈಕ್ ಸವಾರ ಮೃತ್ಯು !

ಪುತ್ತೂರು: ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. 15ರಂದು ಬೆಳಿಗ್ಗೆ ನಡೆದಿದೆ. ಪುರುಷರಕಟ್ಟೆ ಯಲ್ಲಿರುವ ಬಿಂದು ಪ್ಯಾಕ್ಟರಿಯಲ್ಲಿ ಸಿಪಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುವ ವಿಟ್ಲ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ ಎನ್ನುವವರು ಅಪಘಾತಕ್ಕೆ ಬಲಿಯಾದ ಯುವಕ. ಇವರು ಪುರುಷರಕಟ್ಟೆಯಲ್ಲಿ ರೂಮ್ ನಲ್ಲಿ ಉಳಿದುಕೊಂಡಿದ್ದು, ಸರ್ವಿಸ್ ಗೆ ಇಟ್ಟ ಬೈಕ್ ಅನ್ನು ವಾಪಾಸ್ ತರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್ ಮತ್ತು […]

ಬೈಕ್- ಬಸ್ ಅಪಘಾತ : ಬೈಕ್ ಸವಾರ ಮೃತ್ಯು ! Read More »

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ

ಸಂಪಾಜೆ: ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇದೀಗ ಸಂಪಾಜೆ ಮಸೀದಿ ಸಮೀಪ ಅರೆಕಲ್ಲು ರೋಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾರು ಮಡಿಕೇರಿ ಕಡೆಯಿಂದ ಬರುತ್ತಿದ್ದು ಎನ್ನಲಾಗಿದ್ದು, ಕಾರಿನಲ್ಲಿದ್ದ ಮಗುವಿಗೆ ಅಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಇದೇ ಜಾಗದಲ್ಲಿ ಮೂರು ಹಸುವಿಗೆ ವಾಹನವೊಂದು ಡಿಕ್ಕಿ ಹೊಡೆದು ಒಂದು ಹಸು ಮೃಪಟ್ಟಿತ್ತು. ಈ ಹಿಂದೆಯೂ ಕೂಡ ಹಲವು ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ Read More »

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ

ಬೆಳ್ತಂಗಡಿ: ಒಂಟಿ ಸಲಗವೊಂದು  ರಸ್ತೆ ಮಧ್ಯೆ ಬಂದು ಬೊಲೇರೊ ವಾಹನಕ್ಕೆ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ನಡೆದಿದೆ. ಒಂಟಿ ಸಲಗವೊಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ತಿರುಗಾಡುತ್ತಿತ್ತು, ನಿನ್ನೆ ಚಾರ್ಮಾಡಿ ಘಾಟ್ ಒಂದನೇ ತಿರುವಿನಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ. ಬೊಲೇರೊ ವಾಹನಕ್ಕೆ ಒಂಟಿ ಸಲಗ ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಚಿಕ್ಕಮಗಳೂರಿನಿಂದ ಮಂಗಳೂರು

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ Read More »

ರಸ್ತೆ ಬದಿ ನಿಲ್ಲಿಸಿದ್ದ ಕಾರು ಚಲಾಯಿಸಿದ ಬುದ್ಧಿಮಾಂದ್ಯ ಯುವಕ : ನಾಲ್ಕೈದು ವಾಹನಗಳಿಗೆ ಡಿಕ್ಕಿ

ಪುತ್ತೂರು: ಯುವಕನೋರ್ವ ನಿಲ್ಲಿಸಿದ್ದ ಓಮ್ನಿ ಕಾರೊಂದನ್ನು ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಸಂಪ್ಯದಲ್ಲಿ ನಡೆದಿದೆ. ಕುಂಬ್ರ ಸೇತುವೆಯ ಬಳಿ ವಾಹನ ಚಾಲಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆಯೂ ನಡೆಯಿತು.. ಬುದ್ದಿಮಾಂದ್ಯ ಯುವಕ ಕೈಯ್ಯಲ್ಲಿ ಕೋಲೊಂದನ್ನು ಹಿಡಿದು ಮಧ್ಯಾಹ್ನದ ವೇಳೆ ಸಂಪ್ಯದಲ್ಲಿ ರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ. ಸಂಜೆ ವೇಳೆ ಈತ ಯಾರೋ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮ ನಾಲ್ಕೈದು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರು ಚಲಾಯಿಸಿದ ಬುದ್ಧಿಮಾಂದ್ಯ ಯುವಕ : ನಾಲ್ಕೈದು ವಾಹನಗಳಿಗೆ ಡಿಕ್ಕಿ Read More »

ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಕಡಬ: ರೈಲು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ ಸಂಜೆ ನಡೆದಿದೆ. ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ(60) ಮೃತಪಟ್ಟವರು. ಶನಿವಾರ ಸಂಜೆ ವೇಳೆಗೆ ರೈಲ್ವೇ ಹಳಿಯಲ್ಲಿ ಮಹಾಲಿಂಗ ನಾಯ್ಕರು ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ

ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು Read More »

ಸಿಡಿಲು ಬಡಿದು ಓರ್ವ ಮೃತ್ಯು, ಇಬ್ಬರು ಗಂಭೀರ

ಕಡಬ: ಶೆಡ್ ಗೆ ಸಿಡಿಲು ಬಡಿದು ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಇಂದು ಸಂಜೆ ನಡೆದಿದೆ. ಉತ್ತರಪ್ರದೇಶ ಚೈನ್ ಪುರ್ ಮೂಲದ ಶ್ರೀಕಿಸುನ್ ಮೃತಪಟ್ಟವರು. ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಘಟನೆ ಸಂಭವಿಸಿದ್ದು, ಮರಳು ತೆಗೆಯುವ ಉತ್ತರ ಪ್ರದೇಶದ ಕಾರ್ಮಿಕರು ಎನ್ನಲಾಗಿದೆ. ಗಾಯಗೊಂಡವರು ಕುರಿತು ಮಾಹಿತಿ ತಿಳಿದು ಬಂದಿಲ್ಲ.

ಸಿಡಿಲು ಬಡಿದು ಓರ್ವ ಮೃತ್ಯು, ಇಬ್ಬರು ಗಂಭೀರ Read More »

ವಾಹವ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಮೃತ್ಯು !

ವಾಹನ ಅಪಘಾತದಲ್ಲಿ ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ನಾಯಕ ಶಿವಕುಮಾರ್ ಕೌಡಿಚ್ಚಾರ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೆಳಗಾವಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ವಾಹವ ಅಪಘಾತದಲ್ಲಿ ಕಾಂಗ್ರೆಸ್ ನಾಯಕ ಶಿವಕುಮಾರ್ ಮೃತ್ಯು ! Read More »

ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ :  ಚಾಲಕನಿಗೆ ಗಾಯ| ಮಾನವೀಯತೆ ಮೆರೆದ ಅಶ್ರಫ್ ಗೆ ಆಸ್ಪತ್ರೆಯ ಗೌರವ

ಪುತ್ತೂರು: ಮಿತ್ತೂರು ರೈಲ್ವೇ  ಓವ‌ರ್ ಬ್ರಿಡ್ಜ್ ಸಮೀಪ  ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆಟೋ ಚಾಲಕ, ಮಿತ್ತಪಡ್ಡು ಪಾಟ್ರಕೋಡಿ  ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ. ಕೆಎ 19 ಎಬಿ 3693 ನಂಬರಿನ   ರಿಕ್ಷಾ ಪುತ್ತೂರಿನಿಂದ  ಮಿತ್ತೂರು  ಕಡೆ ತೆರಳುತ್ತಿದ್ದಾಗ  ಘಟನೆ  ನಡೆದಿದೆ. ಅದೇ  ಮಾರ್ಗವಾಗಿ ತೆರಳುತ್ತಿದ್ದ ಭಾರತ್  ವೆಹಿಕಲ್  ಬಜಾರ್  ಮಾಲಕ ಅಶ್ರಫ್ ತಕ್ಷಣ ಗಾಯಾಳುವನ್ನು ಉಪಚರಿಸಿ, ಬೊಳುವಾರು ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದರು. ಅಶ್ರಫ್

ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ :  ಚಾಲಕನಿಗೆ ಗಾಯ| ಮಾನವೀಯತೆ ಮೆರೆದ ಅಶ್ರಫ್ ಗೆ ಆಸ್ಪತ್ರೆಯ ಗೌರವ Read More »

ಬೈಕ್-ಕಾರು ಡಿಕ್ಕಿ : ಬೈಕ್ ಸವಾರ ಗಂಭೀರ

ಪುತ್ತೂರು: ಬೈಕ್ ಮತ್ತು ಕಾರು ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ಕೊಡಿನೀರು ಎಂಬಲ್ಲಿ ನಡೆದಿದೆ. ಸವಣೂರಿನಿಂದ ಪುತ್ತೂರು ಕಡೆ ಬರುತ್ತಿದ್ದ ಬೈಕ್ ಸವಾರ ಬಾಲಕೃಷ್ಣ ಗೌಡ, ಪುತ್ತೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಬೈಕ್ ಸವಾರನಿಗೆ ಗಂಭಿರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್-ಕಾರು ಡಿಕ್ಕಿ : ಬೈಕ್ ಸವಾರ ಗಂಭೀರ Read More »

ಬಸ್-ಟ್ಯಾಂಕರ್ ಡಿಕ್ಕಿ : 19 ಮಂದಿಗೆ ಗಾಯ

ಬೆಳ್ತಂಗಡಿ: ಬಸ್ ಹಾಗೂ ಟ್ಯಾಂಕರ್ ಡಿಕ್ಕಿ ಹೊಡೆದುಕೊಂಡ ಪರಿಣಾಮ 19 ಮಂದಿ ಗಾಯಗೊಂಡ ಘಟನೆ ಬೆಳ್ತಂಗಡಿ ಮಾರಿಗುಡಿ ಬಳಿ ಇಂದು ನಡೆದಿದೆ. ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆಯತ್ತ ಬರುತ್ತಿದ್ದ ವಿಶಾಲ್ ಬಸ್‍, ಎದುರಿನಿಂದ ಬರುತ್ತಿದ್ದ ಎಚ್‍.ಪಿ. ಕಂಪೆನಿಯ ಪೆಟ್ರೋಲಿಯಂ ಕಂಪೆನಿಯ ಟ್ಯಾಂಕರ್ ನಡುವೆ ಮಾರಿಗುಡಿ ಬಳಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳ ಚಾಲಕರು ಸಹಿತ  ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಎರಡೂ ವಾಹನಗಳ ಮುಂಭಾಗದ ಗಾಜು ಒಡೆದು ಜಖಂಗೊಂಡಿದೆ.

ಬಸ್-ಟ್ಯಾಂಕರ್ ಡಿಕ್ಕಿ : 19 ಮಂದಿಗೆ ಗಾಯ Read More »

error: Content is protected !!
Scroll to Top