ಅಪಘಾತ

ರೈಲ್ವೆ ಹಳಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ಹರಿದ ರೈಲು | ಮೂವರೂ ಮೃತ್ಯು

ಗಂಗಾವತಿ: ರೈಲು ಹಳಿಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭ ಮೂವರು ಯುವಕರ ಮೇಲೆ ರೈಲು ಹರಿದು ಮೂವರೂ ಮೃತಪಟ್ಟ ಘಟನೆ ಗಂಗಾವತಿಯ ಕನಕಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಗಂಗಾವತಿಯ ಮೌನೇಶ (23), ಸುನೀಲ್ ಕುಮಾರ(23), ವೆಂಕಟ್ (20) ಮೃತಪಟ್ಟವರು.  ಮೂವರು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕನಕಗಿರಿ ರಸ್ತೆಯಲ್ಲಿರುವ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಡೆಯಿಂದ ಆಗಮಿಸಿದ ರೈಲು […]

ರೈಲ್ವೆ ಹಳಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ಹರಿದ ರೈಲು | ಮೂವರೂ ಮೃತ್ಯು Read More »

ಹಳಿತಪ್ಪಿದ ರೈಲು | ನಾಲ್ವರು ಸಾವು, 25 ಮಂದಿಗೆ ಗಾಯ

ಉತ್ತರ ಪ್ರದೇಶ: ದಿಬ್ರುಗಢ ಎಕ್ಸ್‌ಪ್ರೆಸ್‌ನ  15 ಬೋಗಿಗಳು ಹಳಿ ತಪ್ಪಿ ನಾಲ್ವರು ಮೃತಪಟ್ಟು, 25 ಮಂದಿ ಗಾಯಗೊಂಡ ಘಟನೆ ನಡೆದಿದೆ. ಹಳಿ ತಪ್ಪಿದ ರೈಲು ಚಂಡೀಗಢದಿಂದ ಬರುತ್ತಿತ್ತು. ಯುಪಿಯ ಜಿಲಾಹಿ ರೈಲು ನಿಲ್ದಾಣ ಮತ್ತು ಗೋಸಾಯಿ ದಿಹ್ವಾ ನಡುವೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಉತ್ತರ ಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳು ಕಾರ್ಯಾಚರಣೆಯನ್ನು ಗಮನಿಸುತ್ತಿವೆ. ಕಳೆದ ತಿಂಗಳು ಜೂನ್ 17ರಂದೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ

ಹಳಿತಪ್ಪಿದ ರೈಲು | ನಾಲ್ವರು ಸಾವು, 25 ಮಂದಿಗೆ ಗಾಯ Read More »

ಐರಾವತ ಬಸ್ಸಿಗೆ ಬೆಂಕಿ | ಸ್ಥಳೀಯ ಯುವಕರ ಸಕಾಲಿಕ ಪ್ರಯತ್ನದಿಂದ ತಪ್ಪಿದ ಅನಾಹುತ

ಉಪ್ಪಿನಂಗಡಿ: ಐರಾವತ ಬಸ್ಸೊಂದಕ್ಕೆ ಬೆಂಕಿ ಹಿಡಿದ ಘಟನೆ ಇಂದು ಬೆಳಿಗ್ಗೆ ಉಪ್ಪಿನಂಗಡಿ ಹಳೆಗೇಟು ಎಂಬಲ್ಲಿ ನಡೆದಿದೆ. ಬೆಂಕಿ ಹತ್ತಿಕೊಂಡ ತಕ್ಷಣ ಸ್ಥಳೀಯ ಯುವಕರ ಸಕಾಲಿಕ ಪ್ರಯತ್ನದಿಂದ ಬೆಂಕಿ ಆರಿಸಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದೆ. ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಆಗ ಅಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿಯಾದ ಇಸಾಕ್, ಇನ್ಸಾಲ್, ಸ್ಥಳೀಯರಾದ ಜಾಯಿ, ಸ್ನೇಕ್

ಐರಾವತ ಬಸ್ಸಿಗೆ ಬೆಂಕಿ | ಸ್ಥಳೀಯ ಯುವಕರ ಸಕಾಲಿಕ ಪ್ರಯತ್ನದಿಂದ ತಪ್ಪಿದ ಅನಾಹುತ Read More »

ಅಂಬಲಪಾಡಿ ಅಗ್ನಿ ಅವಘಡ | ಮೃತಪಟ್ಟ ರಮಾನಂದ ಶೆಟ್ಟಿ ಅವರ ಪತ್ನಿಯೂ ಮೃತ್ಯು

ಉಡುಪಿ : ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ  ಮೃತಪಟ್ಟಿದ್ದು, ಇದೀಗ ಗಂಭೀರ ಗಾಯಗೊಂಡಿದ್ದ ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ. ಅಶ್ವಿನಿ (50) ಮೃತ ಪಟ್ಟವರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಅಶ್ವಿನಿ ಮೃತಪಟ್ಟಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಗಂಭಿರವಾಗಿ ಗಾಯಗೊಂಡಿದ್ದ ಅಶ್ವಿನಿ ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ಅವರಿಬ್ಬರ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.

ಅಂಬಲಪಾಡಿ ಅಗ್ನಿ ಅವಘಡ | ಮೃತಪಟ್ಟ ರಮಾನಂದ ಶೆಟ್ಟಿ ಅವರ ಪತ್ನಿಯೂ ಮೃತ್ಯು Read More »

ವಿದ್ಯುತ್ ಶಾಕ್‍ ಗೆ ಯುವ ಕಬಡ್ಡಿ ಆಟಗಾರ ಮೃತ್ಯು

ಉಪ್ಪಿನಂಗಡಿ : ಪ್ಯೂಸ್ ಹಾಕಲು ಹೋದ ಯುವಕನೋರ್ವ ವಿದ್ಯುತ್ ಶಾಕ್ ಗೊಳಪಟ್ಟು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ. ಪುಲೇರಿ ಗೋಳಿತ್ತಡಿ ಯುವ ಕಬಡ್ಡಿ ಆಟಗಾರ ಹರೀಶ್ (32) ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ವಿದ್ಯುತ್ ಶಾಕ್‍ ಗೆ ಯುವ ಕಬಡ್ಡಿ ಆಟಗಾರ ಮೃತ್ಯು Read More »

ಕೊಂಬೆಟ್ಟು ಬಳಿ ಧರೆಗುರುಳಿದ ಮರ : ವಿದ್ಯುತ್‍ ಕಂಬಗಳಿಗೆ ಹಾನಿ

ಪುತ್ತೂರು: ಇಂದು ಮುಂಜಾನೆ  ಸುರಿದ ಭಾರೀ ಗಾಳಿ ಮಳೆಯಿಂದಾಗಿ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಬಳಿ ಭಾರೀ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್‍ ಆದ ಘಟನೆ ನಡೆದಿದೆ. ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್‍ ಕಂಬಗಳು ಧರೆಗುರುಳಿದೆ. ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ವೀಕ್ಷಿಸಿ ವಿದ್ಯುತ್‍ ಕಂಬಗಳನ್ನು ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು.

ಕೊಂಬೆಟ್ಟು ಬಳಿ ಧರೆಗುರುಳಿದ ಮರ : ವಿದ್ಯುತ್‍ ಕಂಬಗಳಿಗೆ ಹಾನಿ Read More »

ಉಡುಪಿ ಮನೆಯೊಂದರಲ್ಲಿ ಬೆಂಕಿ ಅವಘಡ : ಓರ್ವ ಮೃತ್ಯು, ಮಹಿಳೆ ಗಂಭೀರ

ಉಡುಪಿ : ಮನೆಯೊಂದರಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿದ ಘಟನೆ ಉಡುಪಿ ತಾಲೂಕಿನ ಅಂಬಲಪಾಡಿಯ ಗಾಂಧಿನಗರದಲ್ಲಿ ನಡೆದಿದೆ. ಬೆಂಕಿ ಅವಘಡದಿಂದ ಗಂಭೀರ ಗಾಯಗೊಂಡಿದ್ದ ಬಾರ್ ಮಾಲಕರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಅವರ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬೆಂಕಿಯ ಜ್ವಾಲೆಯಿಂದಾಗಿ ಪ್ರಜ್ಞೆ ತಪ್ಪಿದ್ದ ಗಂಡ

ಉಡುಪಿ ಮನೆಯೊಂದರಲ್ಲಿ ಬೆಂಕಿ ಅವಘಡ : ಓರ್ವ ಮೃತ್ಯು, ಮಹಿಳೆ ಗಂಭೀರ Read More »

ಮಂಗಳೂರಿನ ಫಿಶ್‍ ಮಿಲ್‍ ನಲ್ಲಿ ಬೆಂಕಿ ಅವಘಡ | ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ

ಮಂಗಳೂರು: ಅಥೆಂಟಿಕ್ ಓಪನ್ ಟ್ರೆಷರ್ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಇಂದು ನಡೆದಿದೆ. ಸುರತ್ಕಲ್ ನ ಎಸ್‍ ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಿಶ ಮಿಲ್‍ ನಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಘಡದಿಂದ ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಮಂಗಳೂರಿನ ಫಿಶ್‍ ಮಿಲ್‍ ನಲ್ಲಿ ಬೆಂಕಿ ಅವಘಡ | ಲಕ್ಷಾಂತರ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ Read More »

ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ಸಂಚಾರದಲ್ಲಿ ವ್ಯತ್ಯಯ

ಪುತ್ತೂರು: ನಗರದ ಬೈಪಾಸ್ ರಸ್ತೆಯ ತೆಂಕಿಲ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಬೃಹತ್ ಗಾತ್ರದ ಮರವೊಂದು ರಸ್ತೆಗಡ್ಡವಾಗಿ ಬಿದ್ದಿದೆ. ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್‍ ಆಗಿತ್ತು. ಬೈಪಾಸ್ ರಸ್ತೆಯ ವಿವೇಕಾನಂದ ಶಾಲೆ ಬಳಿ ಇರುವ ಕಿರು ಸೇತುವೆಗೆ ಮರ ಬಿದ್ದಿದೆ. ವಾಹನ ಸವಾರರು ಪುತ್ತೂರು ನಗರಕ್ಕೆ ಬಂದು ಸುಳ್ಯ, ಮಂಗಳೂರು ಕಡೆಗೆ ಚಲಿಸಬೇಕಾಯಿತು. ತೆರವು ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ಸಂಚಾರದಲ್ಲಿ ವ್ಯತ್ಯಯ Read More »

ನೆಲ್ಯಾಡಿಯಲ್ಲಿ ಬೈಕ್-ಪಿಕಪ್ ಡಿಕ್ಕಿ : ಬೈಕ್ ಸವಾರ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯ ಕೊಣಾಲು ಸಮೀಪ ಇಂದು ನಡೆದಿದೆ. ಮಂಗಳೂರು ಕೋಡಿಕ್ಕಲ್ ನಿವಾಸಿ, ಬೈಕ್ ಸವಾರ ಪ್ರಣಮ್ ಕೋಟ್ಯಾನ್ ಮೃತಪಟ್ಟ ಬೈಕ್ ಸವಾರ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಪ್ರಣಮ್‍ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಣಮ್ ಮೆಡಿಕಲ್ ರೆಪ್ರೆಸೆಂಟಿವ್ ಆಗಿ ಕೆಲಸ ಮಾಡುತ್ತಿದ್ದು, ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ವೇಳೆ ನೆಲ್ಯಾಡಿಯಿಂದ

ನೆಲ್ಯಾಡಿಯಲ್ಲಿ ಬೈಕ್-ಪಿಕಪ್ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

error: Content is protected !!
Scroll to Top