Uncategorized

‘ಗ್ರೇಟರ್ ಬೆಂಗಳೂರು’ಗೆ ಕನ್ನಡ ಹೆಸರಿಡಲು ಆಗ್ರಹ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕನ್ನಡ ಹೆಸರಿಡಬೇಕು ಎಂದು ಕನ್ನಡ ಪರ ಸಂಘನೆಗಳು ಆಗ್ರಹಿಸಿವೆ. ಮುಂಬೈ, ಚೆನ್ನೈ ಮೊದಲಾದ ಪುರಸಭೆಗಳು ರಾಜ್ಯ ಭಾಷೆಗೆ ಪ್ರಾಧಾನ್ಯತೆ ನೀಡಿವೆ. ಅದೇ ರೀತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕನ್ನಡ ಹೆಸರಿಡಬೇಕು ಎಂದು ಕನ್ನಡ ಸಂಘಟನೆಗಳು ಆಗ್ರಹ ಮಾಡಿರುವುದಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅವರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕನ್ನಡ ಹೆಸರಿಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು […]

‘ಗ್ರೇಟರ್ ಬೆಂಗಳೂರು’ಗೆ ಕನ್ನಡ ಹೆಸರಿಡಲು ಆಗ್ರಹ Read More »

ಧರ್ಮಸ್ಥಳ ಪ್ರಕರಣ NIA ಅಥವಾ CBI ಗೆ ವಹಿಸಿ: ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯಗಳು ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಲೇ ಇದೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಆಗುತ್ತಿದ್ದರೂ ಸಹ ಇದಕ್ಕೆ ಕಡಿವಾಣ ಹಾಕುವಂತಹ ಮನಸ್ಸು ಸರ್ಕಾರಕ್ಕೆ ಬಂದಿಲ್ಲ. ದೇಶ ವಿದೇಶಗಳಲ್ಲಿ ಅಪಪ್ರಚಾರ ಆಗುತ್ತಿರುವ ಈ ವಿಷಯದ ಬಗ್ಗೆ ರಾಷ್ಟ್ರೀಯ ಪಕ್ಷವಾಗಿ ಮೌನ ವಹಿಸಲು ಸಾಧ್ಯ ಇಲ್ಲ ಎಂದು ಬಿಜೆಪಿ ರಾಜ್ ರಾಜ್ ಪಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಧರ್ಮಸ್ಥಳ ಚಲೋ ಯಾತ್ರೆಗೆ

ಧರ್ಮಸ್ಥಳ ಪ್ರಕರಣ NIA ಅಥವಾ CBI ಗೆ ವಹಿಸಿ: ಬಿ.ವೈ. ವಿಜಯೇಂದ್ರ Read More »

ನಾನು ಕನ್ನಡ ಕಲಿಯುತ್ತೇನೆ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರು: ದೇಶದ ಎಲ್ಲಾ ಭಾಷೆ, ಸಂಸ್ಕೃತಿಗಳ ಮೇಲೆ ತಮಗೆ ಗೌರವ ಇದ್ದು, ಕನ್ನಡವನ್ನೂ ಕಲಿಯುವುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿಳಿಸಿದ್ದಾರೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನನ್ನ ಮಾತೃಭಾಷೆ ಅಲ್ಲದೇ ಹೋದರೂ ನನ್ನ ದೇಶದ ಎಲ್ಲಾ ಸಂಸ್ಕೃತಿ, ಸಂಪ್ರದಾಯಗಳನ್ನು ಆಳವಾಗಿ ಗೌರವಿಸುತ್ತೇನೆ. ಅವೆಲ್ಲದರಲ್ಲೂ ನನಗೆ ಅಪಾರ ಗೌರವ ಇದೆ ಎಂದು ನಾನು ಮುಖ್ಯಮಂತ್ರಿಗಳಿಗೆ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಭಾಷೆಗಳನ್ನು ಜೇವಂತವಾಗಿಡಲು ಮತ್ತು ಅವರ

ನಾನು ಕನ್ನಡ ಕಲಿಯುತ್ತೇನೆ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು Read More »

ಶೀಘ್ರದಲ್ಲೇ ಸಾರ್ವಜನಿಕರಿಗೆ ಸಿಗಲಿದೆ ರಾಜಭವನ ವೀಕ್ಷಣೆಗೆ ಅವಕಾಶ

ಬೆಂಗಳೂರು: ವಿಧಾನ ಸೌಧವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದ ಸರ್ಕಾರ ಸದ್ಯ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜ ಭವನದ ವೀಕ್ಷಣೆಗೂ ಜನರಿಗೆ ಮುಕ್ತ ಅವಕಾಶವನ್ನು ಶೀಘ್ರದಲ್ಲೇ ಕಲ್ಪಿಸಲು ಮುಂದಾಗಿದೆ. 1840-1842 ರ ಅವಧಿಯಲ್ಲಿ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ ರಾಜಭವನ ಮೂಲತಃ ಬ್ರಿಟಿಷ್ ಆಯುಕ್ತರ ನಿವಾಸವಾಗಿ ಬಳಸಲಾಗುತ್ತಿತ್ತು. ಆ ಕಾಲದಲ್ಲಿ ‘ರೆಸಿಡೆನ್ಸಿ’ ಎಂದೇ ಕರೆಯಲ್ಪಟ್ಟ ಈ ಕಟ್ಟಡವನ್ನು ನಂತರ ಗಣ್ಯರಿಗೆ ಆತಿಥ್ಯ ವಹಿಸುವ ಅತಿಥಿ ಗೃಹವಾಗಿ ಪರಿವರ್ತಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು

ಶೀಘ್ರದಲ್ಲೇ ಸಾರ್ವಜನಿಕರಿಗೆ ಸಿಗಲಿದೆ ರಾಜಭವನ ವೀಕ್ಷಣೆಗೆ ಅವಕಾಶ Read More »

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಸ್ವಾಗತಾರ್ಹ: ಗೋಪಾಲಕೃಷ್ಣ ಬೇಳೂರು

ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಹಬ್ಬವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ದಸರಾ ಹಬ್ಬ ರಾಷ್ಟ್ರೀಯ ಹಬ್ಬ. ಇದನ್ನು ಜಾತ್ಯಾತೀತವಾಗಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಬಾನು ಮುಷ್ತಾಕ್ ದಸರಾ ಹಬ್ಬ ಉದ್ಘಾಟನೆ ಮಾಡುವ ಸಂಗತಿ ನನಗೆ ಸಂತಸ ತಂದಿದೆ. ಮಹಾರಾಜರು ಸಹ ಇದನ್ನು ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಜಾತಿ ಧರ್ಮ ಮರೆತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬೆರೆಯಬೇಕು. ಇಂತಹ ವಿಷಯಗಳಲ್ಲಿ ಗೊಂದಲ ಸೃಷ್ಟಿ ಮಾಡುವುದನ್ನು ಬಿಜೆಪಿಯವರು

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಸ್ವಾಗತಾರ್ಹ: ಗೋಪಾಲಕೃಷ್ಣ ಬೇಳೂರು Read More »

ಪಾಪಿ ತಂದೆಯಿಂದಲೇ 5 ವರ್ಷದ ಮಗಳ ಮೇಲೆ ಅತ್ಯಾಚಾರ: ದೂರು ದಾಖಲಿಸಿದ ತಾಯಿ

ವಿಜಯಪುರ: ಪಾಪಿ ತಂದೆಯಿಂದಲೇ ಐದು ವರ್ಷದ ಮಗುವೊಂದು ಅತ್ಯಾಚಾರಕ್ಕೆ ಒಳಗಾದ ಘಟನೆ ವಿಜಯಪುರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸುಮಾರು 2 ವರ್ಷಗಳಿಂದ ಇಂಡಿ ತಾಲೂಕಿನ ದಂಪತಿ ತಮ್ಮಿಬ್ಬರು ಹೆಣ್ಣು ಮಕ್ಕಳ ಜೊತೆ ವಿಜಯಪುರದಲ್ಲಿ ವಾಸವಿದ್ದಾರೆ. ಪತಿ, ಪತ್ನಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು, ಆಗಾಗ ಇವರಿಬ್ಬರ ಮಧ್ಯೆ ವೈಮನಸ್ಸು ಮೂಡುತ್ತಿತ್ತು. ಆ.30ರಂದು ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಮಕ್ಕಳು ಗಣಪತಿ ನೋಡಲು ಹೋಗಿದ್ದರು. ಮರಳಿ ಬರಬೇಕಾದರೆ

ಪಾಪಿ ತಂದೆಯಿಂದಲೇ 5 ವರ್ಷದ ಮಗಳ ಮೇಲೆ ಅತ್ಯಾಚಾರ: ದೂರು ದಾಖಲಿಸಿದ ತಾಯಿ Read More »

SIT ತನಿಖೆಯಿಂದ ‌ಸತ್ಯ ಬಯಲಾಗುತ್ತಿದೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ: ಸತ್ಯದ ಸತ್ವ ಪರೀಕ್ಷೆಯ ಕಾಲ ಇದಾಗಿದ್ದು, ಹಲವಾರು ನ್ಯಾಯಯುತವಾದ ಸಂಗತಿಗಳು SIT ತನಿಖೆಯಿಂದ ಹೊರ ಬರುತ್ತಿವೆ. ಸತ್ಯದ ಸಾಕ್ಷಾತ್ಕಾರ ಆಗುತ್ತಿರುವುದು ಸಂತಸದ ವಿಷಯ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯದವರು ಬೆಳ್ತಂಗಡಿ ತಾಲ್ಲೂಕು ಜೈನಸಮಾಜದ ಆಶ್ರಯದಲ್ಲಿ ಧರ್ಮಸ್ಥಳಕ್ಕೆ ನಡೆದ ವಾಹನ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಧರ್ಮಸ್ಥಳದಲ್ಲಿ ಹುಟ್ಟಿದ ನಮ್ಮ ಕುಟುಂಬಸ್ಥರು ಭಾಗ್ಯವಂತರು. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ, ಚಂದ್ರ ನಾಥ ಸ್ವಾಮಿ, ಧರ್ಮದೇವತೆಗಳ

SIT ತನಿಖೆಯಿಂದ ‌ಸತ್ಯ ಬಯಲಾಗುತ್ತಿದೆ: ಡಾ. ಡಿ. ವೀರೇಂದ್ರ ಹೆಗ್ಗಡೆ Read More »

ಭಯೋತ್ಪಾದನೆ ವಿರುದ್ಧ SCO ಸದಸ್ಯರ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು

ಟಿಯಾಂಜಿನ್: ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ‌ ಸಂಸ್ಥೆ ಸದಸ್ಯರ ಅಧಿವೇಶನದಲ್ಲಿ ಭಯೋತ್ಪಾದನೆಯ ವಿರುದ್ಧ ತಮ್ಮ ಬಲವಾದ ಸಂದೇಶವನ್ನು ಸಾರಿದ್ದಾರೆ. ಉಗ್ರವಾದವನ್ನು ಇಡೀ ಮಾನವೀಯತೆಗೆ ಸವಾಲು ಎಂದು ಅವರು ಹೇಳಿದ್ದು, ಈ ಅಪಾಯದಿಂದ ಯಾವುದೇ ದೇಶ ಸುರಕ್ಷಿತವಾಗಿದೆ ಎಂದು ತೀರ್ಮಾನಿಸಲು ಅಸಾಧ್ಯ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವೆಲ್ಲರೂ ಸರ್ವಾನುಮತದಿಂದ ಭಯೋತ್ಪಾದನೆಯ ಬಗ್ಗೆ ದ್ವಂದ್ವ ಮಾನದಂಡ ಸ್ವೀಕಾರಾರ್ಹ ಅಲ್ಲ ಎಂದು ಹೇಳಬೇಕಾಗಿದೆ. ಪ್ರತ್ಯೇಕವಾದ, ಉಗ್ರ ವಾದ, ಉಗ್ರರಿಗೆ ಹಣಕಾಸು ಬೆಂಬಲ ನೀಡುವುದರ ವಿರುದ್ಧ ಒಗ್ಗಟ್ಟಾಗಿ SCO ರಾಷ್ಟ್ರಗಳು

ಭಯೋತ್ಪಾದನೆ ವಿರುದ್ಧ SCO ಸದಸ್ಯರ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 51.50 ರೂ. ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ ಮಾಡಿವೆ. ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರೋದ್ಯಮಗಳಿಗೆ ತುಸು ಅನುಕೂಲವಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 1) ಜಾರಿಗೆ ಬಂದಿವೆ. ಪರಿಷ್ಕೃತ ಬೆಲೆಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಪ್ರತಿ ಸಿಲಿಂಡರ್‌ಗೆ 51.50 ರೂ.ಗಳ ಕಡಿತ ಆಗಿದೆ. ಜಾಗತಿಕ ಇಂಧನ ಬೆಲೆ ಮತ್ತು

ಗ್ಯಾಸ್‌ ಸಿಲಿಂಡರ್‌ ಬೆಲೆ 51.50 ರೂ. ಇಳಿಕೆ Read More »

ಬಾನು ಮುಷ್ತಾಕ್ ತಮ್ಮ ಹಿಂದಿನ ಹೇಳಿಕೆಗಳಿಗೆ ‌ಸ್ಪಷ್ಚನೆ ನೀಡಲಿ: ಸಂಸದ ಯದುವೀರ್

ಮೈಸೂರು: ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ಈ ಹಿಂದೆ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಲಿ. ಇಲ್ಲವಾದರೆ ಅವರಿಂದ ದಸರಾ ಉದ್ಘಾಟನೆಯಾಗುವುದಕ್ಕೆ ನನ್ನ ವಿರೋಧ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ. ಆದರೆ ನಾನು ಅವರ ಹಳೆಯ ಭಾಷಣವನ್ನು ಆ ಬಳಿಕ ಕೇಳಿದ್ದು, ಅದಕ್ಕೆ ಸ್ಪಷ್ಚೀಕರಣ ನೀಡಲಿ. ಇಲ್ಲವಾದರೆ ಅವರು ನಾಡಹಬ್ಬವನ್ನು ಉದ್ಘಾಟನೆ ಮಾಡುವುದಕ್ಕೆ ನನ್ನ ವಿರೋಧ ಇದೆ ಎಂದು ತಿಳಿಸಿದ್ದಾರೆ.

ಬಾನು ಮುಷ್ತಾಕ್ ತಮ್ಮ ಹಿಂದಿನ ಹೇಳಿಕೆಗಳಿಗೆ ‌ಸ್ಪಷ್ಚನೆ ನೀಡಲಿ: ಸಂಸದ ಯದುವೀರ್ Read More »

error: Content is protected !!
Scroll to Top