Uncategorized

ರಾಧಿಕಾ ಎಲೆಕ್ಟ್ರಿಕಲ್ ಮಾಲಕ ಕೃಷ್ಣ ಗೌಡರ ತಂದೆ ಶಿವಪ್ಪ ಗೌಡ ಅಮ್ಮುಂಜೆ ನಿಧನ

ಪುತ್ತೂರು: ರಾಧಿಕಾ ಎಲೆಕ್ಟ್ರಿಕಲ್ ನ ಮಾಲಕ ಕೃಷ್ಣ ಗೌಡ ಅವರ ತಂದೆ ಶಿವಪ್ಪ ಗೌಡ ಅಮ್ಮುಂಜೆ ಮೊಟ್ಟೆತಡ್ಕ ಸೋಮವಾರ ನಿಧನರಾದರು. ಅಲ್ಪ ಕಾಲ ಅಸೌಖ್ಯದಿಂದಿದ್ದ ಅವರು ಸ್ವಗೃಹದಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

ರಾಧಿಕಾ ಎಲೆಕ್ಟ್ರಿಕಲ್ ಮಾಲಕ ಕೃಷ್ಣ ಗೌಡರ ತಂದೆ ಶಿವಪ್ಪ ಗೌಡ ಅಮ್ಮುಂಜೆ ನಿಧನ Read More »

ನಟ ದರ್ಶನ್‌ಗೆ ವಿಶೇಷ ಸೌಲಭ್ಯ : 7 ಜೈಲ್‌ ಅಧಿಕಾರಿಗಳು ಸಸ್ಪೆಂಡ್‌

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ ಕೇಂದ್ರ ಕಾರಾಗೃಹದಲ್ಲಿ ಸಕಲ ಸೌಲಭ್ಯ ಮಾಡಿಕೊಟ್ಟ ಫೋಟೊ ಬಯಲಾದ ಬೆನ್ನಿಗೆ ಕೆಲವು ಅಧಿಕಾರಿಗಳ ತಲೆದಂಡವಾಗಿದೆ. ಜೈಲಿನ ಏಳು ಅಧಿಕಾರಿಗಳನ್ನು ಅಮಾನತು ಮಾಡಿ ಗೃಹ ಸಚಿವ ಜಿ.ಪರಮೇಶ್ವರ್‌ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿರುವ ದರ್ಶನ್‌ ರೌಡಿಗಳ ಜೊತೆಗೆ ಕುರ್ಚಿಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟು ಸೇದುತ್ತಿರುವ ಫೋಟೊ ನಿನ್ನೆ ಬಹಿರಂಗವಾದ ಬಳಿಕ ನಟನಿಗೆ ಜೈಲಿನಲ್ಲಿ ರಾಜಾತಿಥ್ಯ ದೊರೆಯುತ್ತಿರುವ ವಿಷಯ ಬಯಲಾಗಿತ್ತು. ಇದರ ಬೆನ್ನಿಗೆ ದರ್ಶನ್‌ ಜೈಲಿನಿಂದಲೇ ವೀಡಿಯೊ ಕಾಲ್‌ನಲ್ಲಿ ಮಾತನಾಡಿರುವ ವಿಚಾರವೂ ಬಹಿರಂಗಗೊಂಡು

ನಟ ದರ್ಶನ್‌ಗೆ ವಿಶೇಷ ಸೌಲಭ್ಯ : 7 ಜೈಲ್‌ ಅಧಿಕಾರಿಗಳು ಸಸ್ಪೆಂಡ್‌ Read More »

ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಬಾಕಿಯಾಗಲಿದ್ದಾರೆ ಸುನಿತಾ ವಿಲ್ಲಿಯಮ್ಸ್‌

ನ್ಯೂಯಾರ್ಕ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಕಳೆದ ಸುಮಾರು 80 ದಿನಗಳಿಂದ ಬಾಕಿಯಾಗಿರುವ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ವಾಪಸಾಗಲು ಇನ್ನೂ 6 ತಿಂಗಳು ಬೇಕಾಗಬಹುದು ಎಂದು ನಾಸಾ ಹೇಳಿದೆ.ಅವರು ಗಗನಯಾತ್ರೆ ಕೈಗೊಂಡಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ಏರ್‌ಕ್ರಾಫ್ಟನ್ನು ನಾಸಾ ಭೂಮಿಗೆ ತರಲಿದೆ. ಆದರೆ ಸುನಿತಾ ಮತ್ತು ವಿಲ್ಮೋರ್‌ ಅವರನ್ನು ಮುಂದಿನ ಫೆಬ್ರವರಿಯಲ್ಲಿ ಕ್ರ್ಯೂ ಡ್ರಾಗನ್‌ ಕ್ಯಾಪ್ಸೂಲ್‌ನಲ್ಲಿ ಕರೆತರಲಾಗುವುದು ಎಂದು ನಾಸಾ ಹೇಳಿದೆ. ಜೂನ್ 5 ರಂದು ಉಡಾವಣೆಯಾದ ಬೋಯಿಂಗ್‌ನ ಸ್ಟಾರ್‌ಲೈನರ್‌ನ ಮೊದಲ

ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಬಾಕಿಯಾಗಲಿದ್ದಾರೆ ಸುನಿತಾ ವಿಲ್ಲಿಯಮ್ಸ್‌ Read More »

ಸೀನಿಯರ್ ವೆಯಿಟ್ಲಿ ಫ್ಟಿಂಗ್ ನಲ್ಲಿ ಪುತ್ತೂರಿನ ರಜತ್ ರೈ ಗೆ ಚಿನ್ನದ ಪದಕ

ಮೈಸೂರಿನಲ್ಲಿ ನಡೆದ ಸೀನಿಯರ್ ವೆಯಿಟ್ಲಿಫ್ಟಿಂಗ್ ನಲ್ಲಿ 81ಕೆಜಿ ವಿಭಾಗದಲ್ಲಿ ರಜತ್ ರೈ ಇವರು ಚಿನ್ನದ ಪದಕ ಪಡೆದಿದ್ದಾರೆ ಮತ್ತು ಒಟ್ಟು 298ಕೆಜಿ ಭಾರ ಎತ್ತುವ ಮೂಲಕ ಹೊಸ ರಾಜ್ಯ ಕೂಟ ದಾಖಲೆಯನ್ನು ಮಾಡಿರುತ್ತಾರೆ. ಕಳೆದ 2ವರ್ಷಗಳಿಂದ ಚಿನ್ನದ ಪದಕ ಪಡೆದಿದ್ದು 3ನೇ ವರ್ಷ ಕೂಡ ಚಿನ್ನದ ಪದಕ ಪಡೆದು hat-trick ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಅಕ್ಟೋಬರ್ ನಲ್ಲಿ ಹಿಮಾಚಲ್ ಪ್ರದೇಶದಲ್ಲಿ ನಡೆಯುವ ಸೀನಿಯ‌ರ್ ನ್ಯಾಷನಲ್ ವೆಯಿಟ್ಲಿಫ್ಟಿಂಗ್ ಚಾಂಪಿನ್ಶಿಪ್ ಗೆ ಮೂರನೇ ಭಾರಿ ಕರ್ನಾಟಕ ರಾಜ್ಯ ತಂಡವನ್ನು

ಸೀನಿಯರ್ ವೆಯಿಟ್ಲಿ ಫ್ಟಿಂಗ್ ನಲ್ಲಿ ಪುತ್ತೂರಿನ ರಜತ್ ರೈ ಗೆ ಚಿನ್ನದ ಪದಕ Read More »

ಚೂರಿ ಇರಿತ | ಯುವಕನಿಗೆ ಗಂಭೀರ ಗಾಯ

ವಿಟ್ಲ: ಚೂರಿ ಇರಿತ ಘಟನೆಯೊಂದು ಇಂದು ಬೆಳಿಗ್ಗೆ ಉರಿಮಜಲು ವೃತ್ತದ ಬಳಿ ನಡೆದಿದೆ. ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್‌ ಎದುರಲ್ಲಿ ಕಾರ್ಯಡಿ ನಿವಾಸಿ ರಾವೂಫ್ ಎಂಬವರ ಪುತ್ರ ಆಫೀ ಎಂಬವನು ಚೂರಿ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಶರೀಫ್‌ನನ್ನು ಸ್ಥಳಿಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಚೂರಿ ಇರಿತ | ಯುವಕನಿಗೆ ಗಂಭೀರ ಗಾಯ Read More »

ಇಂದು ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರೆ

ಪ್ಯಾರಿಸ್ : ಜು.26ರಿಂದ ಆರಂಭಗೊಂಡಿದ್ದ ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ಸ್ ಇಂದು ತೆರೆ ಕಾಣಲಿದೆ. 17 ದಿನಗಳ ಕಾಲ ನಡೆದ ಒಲಿಂಪಿಕ್ಸ್ ನಲ್ಲಿ ಎಲ್ಲಾ ದೇಶಗಳ ಆಯ್ದ ಸುಮಾರು 100 ಕ್ರೀಡಾಪಟುಗಳು ಭಾಗವಹಿಸಿದ್ದು, ಭಾರತ ಈವರೆಗೆ 6 ಪದಕಗಳನ್ನು ಮಾತ್ರ ಗೆದ್ದುಕೊಂಡಿದೆ. ಈ ಅರು ಪದಕಗಳಲ್ಲಿ ಮೂರು ಮೆಡಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬಂದಿರುವುದು ವಿಶೇಷ. ಜೊತೆಗೆ ಜಾವೆಲಿನ್ ಥೋನಲ್ಲಿ ಬೆಳ್ಳಿ, ಹಾಕಿಯಲ್ಲಿ ಕಂಚು, ಕುಸ್ತಿ ಫ್ರೀಸ್ಟೈಲ್‌ನಲ್ಲಿ ಕಂಚು ಗೆದ್ದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಎಲ್ಲ ದೇಶಗಳ ಆಯ್ದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಇಂದು ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರೆ Read More »

ಅಕ್ಷಯ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಸಂವಹನ ಅಡೆತಡೆಗಳ  ತರಬೇತಿ ಕಾರ್ಯಗಾರ

ಪುತ್ತೂರು : ವೇಗದ ಜಗತ್ತಿನಲ್ಲಿ, ಯಶಸ್ಸನ್ನು ಸಾಧಿಸಬೇಕಾದರೆ ಪರಿಣಾಮಕಾರಿ ಸಂವಹನವು ಅತ್ಯವಶ್ಯ. ಪರಿಣಾಮಕಾರಿ ಸಂವಹನವು ಪ್ರತೀ ಕ್ಷೇತ್ರದಲ್ಲೂ ಅಗತ್ಯವಿದ್ದು, ಪ್ರತಿಯೊಬ್ಬನ ವ್ಯಕ್ತಿತ್ವ ವಿಕಸನಕ್ಕೆ ಮಾತ್ರವಲ್ಲದೆ ಮುಖ್ಯವಾಗಿ ವೃತ್ತಿ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂವಹನ ಕಲೆಯನ್ನು ಜಾಗೃತ ಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ  ನಡೆಯಿತು.  ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, ಫಸೆರಾ ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್

ಅಕ್ಷಯ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಸಂವಹನ ಅಡೆತಡೆಗಳ  ತರಬೇತಿ ಕಾರ್ಯಗಾರ Read More »

ವಕ್ಫ್ ಆಸ್ತಿಯ ಕುರಿತು ಕೇಂದ್ರದ ಹೊಸ ಕಾಯ್ದೆ

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ  ವಕ್ಫ್ ಕಾಯಿದೆ 1995ಕ್ಕೆ ತಿದ್ದುಪಡಿ ತಂದು,  ಸಂಸತ್ತಿನಲ್ಲಿ ಮಂಡಿಸಲು ಸನ್ನದ್ಧವಾಗಿದೆ. ಭೂಮಿಯ ಹಕ್ಕು ಪಡೆಯಲು ವಕ್ಫ್ ಮಂಡಳಿಗಳ  ಅಧಿಕಾರವನ್ನು ಸೀಮಿತಗೊಳಿಸುವುದು, ಮಂಡಳಿಯ ಸಂಯೋಜನೆಗಳನ್ನು ಪುನರ್ರಚಿಸುವುದು ಮತ್ತು ಸರಿಯಾದ ಪರಿಶೀಲನಾ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವುದು ಸೇರಿ ಕಾಯಿದೆಗೆ ಸಂಬಂಧಿಸಿದಂತೆ ಸೆಕ್ಷನ್ 40ಕ್ಕೆ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ವಿವಾದಿತ ಭೂಮಿ ಹಕ್ಕುಗಳಂತಹ ಸಮಸ್ಯೆಗಳನ್ನು ಪರಿಹರಿಸುವುದು, ವಕ್ಫ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಒದಗಿಸುವುದು, ವಕ್ಫ್ ಆಸ್ತಿಗಳ ದುರ್ಬಳಕೆ ತಡೆಯೋದು ಕೇಂದ್ರ ಸರ್ಕಾರದ ಹೊಸ ಕಾನೂನಿನ ಉದ್ದೇಶವಾಗಿದೆ. 1995ರಲ್ಲಿ

ವಕ್ಫ್ ಆಸ್ತಿಯ ಕುರಿತು ಕೇಂದ್ರದ ಹೊಸ ಕಾಯ್ದೆ Read More »

Editais Auxílios Estudanti

Editais Auxílios Estudantis Mostbet Apostas Desportivas E Casino On The Internet Site Oficial No Brasil Obter Bônus 1600 R$ Entar Content Acesso À Informação Opções De Acessibilidade Escolhendo Os Melhores Esportes Para Apostar Aplicativo Mostbet Para Google Android E Ios Application Benefits Caça-níqueis E Jogos Processos Legislativos Como Fazer Um Depósito No Mostbet? Apostas Esportivas

Editais Auxílios Estudanti Read More »

ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

ಬೆಳ್ತಂಗಡಿ : ಮಹಿಳೆಯೊಬ್ಬರು ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ಕೃಷಿ ಇಲಾಖೆಯ ಸೀಡ್ ಫಾರ್ಮ್‍ ರಸ್ತೆ ಬಳಿ ನಡೆದಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಜೀವಂದರ್ ಪಡಿವಾಳ ಅವರ ಪತ್ನಿ ಸುಮಾಲಿನಿ ಜೈನ್ (63) ಮೃತಪಟ್ಟ ಮಹಿಳೆ. ಮೃತರು ಪತಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು Read More »

error: Content is protected !!
Scroll to Top