Uncategorized

ಕರ್ನಾಟಕದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ: ಸಂಸದ ಡಾ. ಕೆ. ಸುಧಾಕರ್ ಹೇಳಿದ್ದಿಷ್ಟು

ನವದೆಹಲಿ: ರಾಜ್ಯದಲ್ಲಿ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಂಸದ ಡಾ. ಕೆ. ಸುಧಾಕರ್ ಆರೋಪಿಸಿದ್ದಾರೆ. ಲೋಕಸಭೆಯಲ್ಲಿನ ಶೂನ್ಯ ವೇಳೆಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಮುಂಗಾರು ಅವಧಿ ಕೃಷಿಗೆ ರಸಗೊಬ್ಬರ ನಿರ್ಣಾಯಕ. ಭತ್ತ, ಜೋಳ, ದ್ವಿದಳಧಾನ್ಯ, ಸೋಯಾಬಿನ್‌ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಜಾಗತಿಕ ಕಲಹದ ನಡುವೆಯೂ ಕೇಂದ್ರ ಸರ್ಕಾರವು ಈ ಹಂಗಾಮಿನಲ್ಲಿ 8.13 ಲಕ್ಷ ಟನ್‌ ಯೂರಿಯಾವನ್ನು ರಾಜ್ಯಕ್ಕೆ ಕಳುಹಿಸಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತವನ್ನೇ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಅಸಮರ್ಪಕ ಆಡಳಿತದಿಂದ ರೈತರಿಗೆ […]

ಕರ್ನಾಟಕದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ: ಸಂಸದ ಡಾ. ಕೆ. ಸುಧಾಕರ್ ಹೇಳಿದ್ದಿಷ್ಟು Read More »

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಆಗಸ್ಟ್ 1 ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದ ನ್ಯಾಯಾಲಯ

ಬೆಂಗಳೂರು: ಅತ್ಯಾಚಾರ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನದಲ್ಲಿರುವ ‌ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ 14 ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನೀಡಬೇಕಿದ್ದ ತೀರ್ಪನ್ನು ಆಗಸ್ಟ್ 1 ಕ್ಕೆ ಮುಂದೂಡಿ ಜನಪ್ರತಿನಿಧಿಗಳ ‌ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ 26 ಸಾಕ್ಷಿಗಳನ್ನು ಕೋರ್ಟ್ ವಿಚಾರಣೆ ನಡೆಸಿದ್ದು ತೀರ್ಪನ್ನು ಆಗಸ್ಟ್ 1 ಕ್ಕೆ ಕಾಯ್ದಿರಿಸಿದೆ. ಈ ಸಂಬಂಧ ಪ್ರಜ್ವಲ್ ಕೋರ್ಟಿಗೆ ಹಾಜರಾಗಿದ್ದು, ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಆಗಸ್ಟ್ 1 ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದ ನ್ಯಾಯಾಲಯ Read More »

ಧರ್ಮಸ್ಥಳ ಪ್ರಕರಣ: ಗುರುತಿಸಲಾದ ಎರಡನೇ ಸ್ಥಳದಲ್ಲಿ ಕಾರ್ಯಾಚರಣೆಗೆ ಆ ವ್ಯಕ್ತಿಯೊಡನೆ ಬಂದ ಅಧಿಕಾರಿಗಳು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಸಹ ಹಲವಾರು ಹೆಣಗಳನ್ನು ಹೂಳಲಾಗಿದೆ ಎಂದ ಸ್ಥಳಗಳಲ್ಲಿ ಕೆಲವನ್ನು ದೂರುದಾರ ಗುರುತಿಸಿದ್ದು, ಆ ಪ್ರದೇಶಕ್ಕೆ ದೂರದಾರ ‌ವ್ಯಕ್ತಿಯ ಜೊತೆ SIT ಅಧಿಕಾರಿಗಳು ಆಗಮಿಸಿದ್ದಾರೆ. ಗುರುತು ಮಾಡಿದ ಎರಡನೇ ಸ್ಥಳದ ಅಗೆತ ಕಾರ್ಯಕ್ಕೆ ಪೌರ ಕಾರ್ಮಿಕರ ಸಹಾಯ ಪಡೆಯಲಾಗಿದೆ. ಅರಣ್ಯ ಪ್ರದೇಶವಾದ್ದರಿಂದ ಅಲ್ಲಿಗೆ ಹಿಟಾಚಿ ತೆರಳಲು ಅನುಕೂಲಗಳಿಲ್ಲವಾಗಿದ್ದು ಈ ಹಿನ್ನೆಲೆ ಪೌರ ಕಾರ್ಮಿಕರನ್ನು ಈ ಕಾರ್ಯಕ್ಕೆ ಬಳಸಲಾಗಿದೆ.

ಧರ್ಮಸ್ಥಳ ಪ್ರಕರಣ: ಗುರುತಿಸಲಾದ ಎರಡನೇ ಸ್ಥಳದಲ್ಲಿ ಕಾರ್ಯಾಚರಣೆಗೆ ಆ ವ್ಯಕ್ತಿಯೊಡನೆ ಬಂದ ಅಧಿಕಾರಿಗಳು Read More »

ಲ. ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಜನ್ಮದಿನದ ಅಮೃತ ಮಹೋತ್ಸವ, ಹುಟ್ಟುಹಬ್ಬ ಆಚರಣೆ

ಪಂಜ: ಲಯನ್ಸ್ ಕ್ಲಬ್ ಪಂಜ ವತಿಯಿಂದ ಜುಲೈ 26 ರಂದು ಲಯನ್ಸ್ ಭವನದಲ್ಲಿ ಕ್ಲಬ್‌ನ ಹಿರಿಯ ಸದಸ್ಯ ಲ. ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ MJF ಇವರ ಜನುಮ ದಿನದ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸಿ ಸನ್ಮಾನಿಸಲಾಯಿತು ಜುಲೈ ತಿಂಗಳಲ್ಲಿ ಜನಿಸಿದ ಲಯನ್ಸ್ ನ ಸದಸ್ಯರಿಗೆ ಜನ್ಮದಿನದ ಶುಭಾಶಯ ಕೋರಿ ಎಲ್ಲರಿಗೂ ಹಣ್ಣಿನ ಗಿಡವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸದಸ್ಯ, ಮಾರ್ಗದರ್ಶಕರಾದ ಲ. ಮಾಧವ ಗೌಡ ಜಾಕೆ MJF ಇವರು ಅಭಿನಂದನ ಭಾಷಣ ಮಾಡಿ

ಲ. ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ಜನ್ಮದಿನದ ಅಮೃತ ಮಹೋತ್ಸವ, ಹುಟ್ಟುಹಬ್ಬ ಆಚರಣೆ Read More »

ಧರ್ಮಸ್ಥಳ ಪ್ರಕರಣ : ಇಂದೂ ಮುಂದುವರಿಯಲಿದೆ ಅಗೆತ ಕಾರ್ಯಾಚರಣೆ

ಗುರುತಿಸಿದ ಎಲ್ಲ ಜಾಗಗಳನ್ನು ಅಗೆಯಲು ತೀರ್ಮಾನಿಸಿರುವ ಎಸ್‌ಐಟಿ ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದಂತೆ 8 ಅಡಿ ಅಗೆದರೂ ಶವವಾಗಲಿ, ಶವದ ಕುರುಹು ಆಗಲಿ ಸಿಕ್ಕಿಲ್ಲ. ಅನಾಮಿಕ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗವನ್ನು ದಿನಪೂರ್ತಿ ಅಗೆದರೂ ಏನೂ ಸಿಗದೆ ಇರುವುದರಿಂದ ಇನ್ನುಳಿದ ಜಾಗದ ಕಡೆ ಎಸ್ಐಟಿ ಗಮನ ಹರಿಸಿದೆ. ಇಂದು ಮತ್ತೆ ಅಗೆತ ಮುಂದುವರಿಯಲಿದೆ. ಇನ್ನುಳಿದ 12 ಜಾಗಗಳನ್ನೂ ಅಗೆಯಲು ಎಸ್ಐಟಿ ನಿರ್ಧರಿಸಿದೆ. ಮೊದಲ

ಧರ್ಮಸ್ಥಳ ಪ್ರಕರಣ : ಇಂದೂ ಮುಂದುವರಿಯಲಿದೆ ಅಗೆತ ಕಾರ್ಯಾಚರಣೆ Read More »

ಪಂಜ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಪಂಜ: ಲಯನ್ಸ್ ಕ್ಲಬ್ ಪಂಜ ವತಿಯಿಂದ ಲಯನ್ಸ್ ಭವನ ಪಂಜದಲ್ಲಿ ಕಾರ್ಗಿಲ್ ದಿವಸ್ ಆಚರಣೆ ನಡೆಯಿತು. ಭಾರತೀಯ ಸೇನೆಯ ಮಾಜಿ ಸೈನಿಕ ರಾಧಾಕೃಷ್ಣ ಕುಳ ಅವರನ್ನೂ ಮಾಜಿ ಪ್ರಾಂತೀಯ ಅಧ್ಯಕ್ಷ ಲ. ಮಾಧವ ಗೌಡ ಜಾಕೆ ಸನ್ಮಾನಿಸಿ ಅಭಿನಂದಿಸಿದರು. ವಲಯಾಧ್ಯಕ್ಷ ಲ. ದಿಲೀಪ್ ಬಾಬ್ಲುಬೆಟ್ಟು ಅಥಿತಿಯಾಗಿ ಭಾಗವಹಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಹಿರಿಯ ಸದಸ್ಯ ಲ. ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ನಿಕಟಪೂರ್ವ ಅಧ್ಯಕ್ಷ ಲ. ಶಶಿಧರ ಪಳಂಗಾಯ, ಕೋಶಾಧಿಕಾರಿ ಲ. ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ

ಪಂಜ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ Read More »

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಆಪರೇಷನ್ ಸಿಂಧೂರ್ ಬಗ್ಗೆ ಮಾತುಗಳನ್ನಾಡಿದ್ದಾರೆ. ನಮಗೆ ಜನತೆ ಆಶೀರ್ವದಿಸಿದ್ದಾರೆ. ನಾನು ದೇಶದ ಪರವಾಗಿ ಮಾತನಾಡಲು ನಿಂತಿರುವುದು. ನಮ್ಮ ಮೇಲೆ ವಿಶ್ವಾಸ ಇರಿಸಿದ ಜನರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ. ಪೆಹಲ್ಗಾಮ್ ದಾಳಿ ನಡೆಸಿದ ಉಗ್ರರನ್ನು ಹತ್ಯೆ ಮಾಡುವ ಮೂಲಕ ನಾವು ಮಟ್ಟ ಹಾಕಿದ್ದೇವೆ. ಈ ದೇಶದ, ಜನರ ಮನದ ಮಾತು ನನಗೆ ತಿಳಿದಿದೆ. ಧರ್ಮ ಕೇಳಿ ಕೊಂದ ಉಗ್ರರನ್ನು ‌ಮಣ್ಣಲ್ಲಿ ಮಣ್ಣಾಗಿಸಿದ್ದೇವೆ. ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಮ್ಮ ಕ್ಷಿಪಣಿ ತಾಕತ್ತಿನ

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಪ್ರಧಾನಿ ಮೋದಿ ಮಾತು Read More »

ಧರ್ಮಸ್ಥಳ ಪ್ರಕರಣ: ಹಿಟಾಚಿಗೂ ಸಿಗದ ಶವದ ಕಳೇಬರ, ಶ್ವಾನ ದಳ ಆಗಮನ

ಕಳೇಬರ ಸಿಗದೆ ಇಂದಿನ ಕಾರ್ಯಾಚರಣೆ ಮುಗಿಸಿದ ಅಧಿಕಾರಿಗಳು ಧರ್ಮಸ್ಥಳ: ಇಡೀ ದೇಶವನ್ನೇ ‌ತನ್ನತ್ತ ಸೆಳೆದಿರುವ ಧರ್ಮಸ್ಥಳ ಪ್ರಕರಣದ ದೂರುದಾರ ಗುರುತಿಸಿರುವ ಒಂದನೇ ಸ್ಥಳಗಳಲ್ಲಿ ಹಿಟಾಚಿ ಬಳಸಿ SIT ಅಧಿಕಾರಿಗಳು ಗುಂಡಿ ತೋಡಿ ಹುಡುಕಿದರೂ ಹೂತಿಟ್ಟ ಶವದ ಕಳೇಬರದ ಕುರುಹು ಸಹ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಡಾಗ್ ಸ್ಕ್ವಾಡ್ ಆಗಮಿಸಿದೆ. ಕಾರ್ಮಿಕರು ನಾಲ್ಕು ಅಡಿ ಗುಂಡಿ ತೋಡಿದ್ದು, ಶವದ ಕಳೇಬರ ಸಿಗದ ಹಿನ್ನೆಲೆ ಹಿಟಾಚಿ ಬಳಸಿ ಮತ್ತಷ್ಟು ಆಳದ ವರೆಗೆ ಗುಂಡಿ ತೋಡಿ ಶವ

ಧರ್ಮಸ್ಥಳ ಪ್ರಕರಣ: ಹಿಟಾಚಿಗೂ ಸಿಗದ ಶವದ ಕಳೇಬರ, ಶ್ವಾನ ದಳ ಆಗಮನ Read More »

ಪೂಂಚ್‌ನ 22 ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ರಾಹುಲ್ ಗಾಂಧಿ: ಕಾರಣ ಇಲ್ಲಿದೆ

ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಉಗ್ರರು ಶೆಲ್ ದಾಳಿ ನಡೆಸಿದ್ದು, ಇದರಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ 22 ಮಕ್ಕಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದತ್ತು ತೆಗೆದುಕೊಳ್ಳಲು ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ತಾರಿಖ್ ಹಮೀದ್ ಕರ್ರಾ ಮಾಹಿತಿ ನೀಡಿದ್ದು, ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಹೆತ್ತವರು ಅಥವಾ ಕುಟುಂಬದ ಏಕೈಕ ಆಧಾರವನ್ನೇ ಕಳೆದುಕೊಂಡ ಪೂಂಚ್ ಪ್ರದೇಶದ 22 ಮಕ್ಕಳ ಶಿಕ್ಷಣದ ಮೊತ್ತವನ್ನು ರಾಹುಲ್

ಪೂಂಚ್‌ನ 22 ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ರಾಹುಲ್ ಗಾಂಧಿ: ಕಾರಣ ಇಲ್ಲಿದೆ Read More »

ಪಹಲ್ಗಾಮ್ ದಾಳಿ ನಡೆಸಿದ ಮೂವರು ಉಗ್ರರ ಹತ್ಯೆ: ಲೋಕಸಭೆಗೆ ಅಮಿತ್ ಶಾ ಮಾಹಿತಿ

ನವದೆಹಲಿ: ಪಹಲ್ಗಾಮ್ ದಾಳಿ ನಡೆಸಿದ ಮೂವರು ಉಗ್ರರನ್ನು ಜಮ್ಮು ಕಾಶ್ಮೀರದಲ್ಲಿ ಆಪರೇಷನ್ ಮಹಾದೇವ್ ನಡೆಸಿ ಭದ್ರತಾ ಪಡೆಗಳು ಯಮಪುರಕ್ಕೆ ಅಟ್ಟಿರುವುದಾಗಿ ಲೋಕಸಭೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆ, ಸಿಆರ್‌ಪಿಎಫ್, ಜೆ&ಕೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಕೊಲ್ಲಲ್ಪಟ್ಟ ಉಗ್ರರನ್ನು ಸುಲೇಮಾನ್ ಯಾನೆ ಫೈಜರ್, ಅಫ್ಘಾನಿ ಮತ್ತು ಜಿಬ್ರಾನ್ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಗುಂಡುಗಳು

ಪಹಲ್ಗಾಮ್ ದಾಳಿ ನಡೆಸಿದ ಮೂವರು ಉಗ್ರರ ಹತ್ಯೆ: ಲೋಕಸಭೆಗೆ ಅಮಿತ್ ಶಾ ಮಾಹಿತಿ Read More »

error: Content is protected !!
Scroll to Top