ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ವಿಚಾರಣೆಗೆ ಹಾಜರಾಗಲು ಸಮೀರ್‌ಗೆ ನೊಟೀಸ್ ನೀಡಿದ ಪೊಲೀಸರು
ಬಳ್ಳಾರಿ: ಧರ್ಮಸ್ಥಳಕ್ಕೆ ಅಪಚಾರ ಎಸಗಿದ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್‌ಗೆ ನೊಟೀಸ್ ನೀಡಲಾಗಿದ್ದು, ಆತನ ಬಳ್ಳಾರಿಯಲ್ಲಿರುವ ಮನೆಗೆ ಪೊಲೀಸರು ನೊಟೀಸ್ ಹಚ್ಚಿ ಬಂದಿದ್ದಾರೆ. ಈ ನೊಟೀಸ್‌ನಲ್ಲಿ ಬೆಳ್ತಂಗಡಿ ಪೊಲೀಸರು ಸಮೀರ್‌ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸಮೀರನ ಆಧಾರ್ ಕಾರ್ಡ್‌ನಲ್ಲಿ ಸಮೀರನ ವಿಳಾಸ ಬಳ್ಳಾರಿ ಎಂದು ನಮೂದಾಗಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಬೆಂಗಳೂರು ಮನೆಗೆ ನೊಟೀಸ್ ನೀಡಿದ್ದಾರೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ: ವಿಚಾರಣೆಗೆ ಹಾಜರಾಗಲು ಸಮೀರ್‌ಗೆ ನೊಟೀಸ್ ನೀಡಿದ ಪೊಲೀಸರು Read More »









