Uncategorized

ಪ್ರಧಾನಿ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ‌ಸಲ್ಲಿಸಿದ ಸಿ.ಪಿ. ರಾಧಾಕೃಷ್ಣನ್

ನವದೆಹಲಿ: NDA ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ನಾಮನಿರ್ದೇಶನದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಇವರು ಅತ್ಯುತ್ತಮ ಉಪರಾಷ್ಟ್ರಪತಿ ಆಗುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಅವರು ನಾಮಪತ್ರ ಸಲ್ಲಿಕೆ ಮಾಡುವಾಗ ಅವರ ಜೊತೆ ಸಚಿವರು, ಪಕ್ಷದ ಸಹೊದ್ಯೋಗಿಗಳು, NDA ನಾಯಕರು ಇದ್ದರು. ಅವರು ಅತ್ಯುತ್ತಮ ಉಪರಾಷ್ಟ್ರಪತಿ ಆಗುತ್ತಾರೆ ಮತ್ತು ದೇಶದ ಪ್ರಗತಿಯತ್ತ ‌ನಮ್ಮ ಪ್ರಯಾಣವನ್ನು […]

ಪ್ರಧಾನಿ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ‌ಸಲ್ಲಿಸಿದ ಸಿ.ಪಿ. ರಾಧಾಕೃಷ್ಣನ್ Read More »

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಮಂಡನೆ: ವಿಪಕ್ಷಗಳಿಂದ ‌ಸದನದ ಬಾವಿಗಿಳಿದು ಪ್ರತಿಭಟನೆ

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ಯಾರೇ ಆಗಿರಲಿ‌, ಅವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಲ್ಲಿ ಅಥವಾ ಮೂವತ್ತು ದಿನಗಳಿಗಿಂತ ಹೆಚ್ಚು ಸಮಯ ಜೈಲು ಶಿಕ್ಷೆ ಅನುಭವಿಸಿದ್ದಲ್ಲಿ ಅಂತಹವರನ್ನು ಪದಚ್ಯುತಗೊಳಿಸುವ ನಿಬಂಧನೆಯೊಂದಿಗೆ ಹೊಸ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡನೆ ಮಾಡಿದ್ದಾರೆ. ಈ ಮಸೂದೆ ಮಂಡನೆಯಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವು ಮಂದಿ ಮಸೂದೆಯ ಪ್ರತಿಯನ್ನು ಹರಿದು ಅಮಿತ್ ಶಾ

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಮಂಡನೆ: ವಿಪಕ್ಷಗಳಿಂದ ‌ಸದನದ ಬಾವಿಗಿಳಿದು ಪ್ರತಿಭಟನೆ Read More »

ಪುನರ್ವಸತಿ ಕಾರ್ಯಕರ್ತರ ಗೌರವಧನ ಮೊತ್ತ ಹೆಚ್ಚಳ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಿಯಮಾನುಸಾರವಾಗಿ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಲಾಗಿದ್ದು, ಅವರನ್ನು ಖಾಯಂಗೊಳಿಸಲು ಅವಕಾಶ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಮುಂಗಾರು ಅಧಿವೇಶನದ ಏಳನೇ ದಿನದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನವನ್ನು 9000 ರೂ. ಗಳಿಂದ 10000 ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನವನ್ನು 15000 ರೂ. ಗಳಿಂದ 16000 ರೂ. ಗಳಿಗೆ ಏರಿಕೆ ಮಾಡಲಾಗಿದೆ

ಪುನರ್ವಸತಿ ಕಾರ್ಯಕರ್ತರ ಗೌರವಧನ ಮೊತ್ತ ಹೆಚ್ಚಳ: ಲಕ್ಷ್ಮೀ ಹೆಬ್ಬಾಳ್ಕರ್ Read More »

ದೆಹಲಿ ಸಿಎಂ‌ಗೆ ಕಪಾಳಮೋಕ್ಷ ಪ್ರಕರಣದ ಆರೋಪಿಯ ಉದ್ದೇಶ ಏನಿತ್ತು ಗೊತ್ತಾ!

ನವದೆಹಲಿ: ಸಿ ಎಂ ರೇಖಾ ಗುಪ್ತ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪಿಯನ್ನು ಪೊಲೀಸರಿ ಬಂಧಿಸಿದ್ದು, ಆತನಿಂದ ಘಟನೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಯನ್ನು ರಾಜೇಶ್ ಭಾಯಿ ಖಿಮ್ಜಿ ಭಾಯಿ ಸಕರಿಯಾ (41) ಎಂದು ಗುರುತಿಸಲಾಗಿದೆ. ಆರೋಪಿ ಜೈಲಿನಲ್ಲಿರುವ ತನ್ನ ಸಂಬಂಧಿಯನ್ನು ಹೊರಕ್ಕೆ ಕರೆ ತರುವ ಸಲುವಾಗಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಲು ಬಂದಿದ್ದು, ಈ ವೇಳೆ ಆತ ಸಿಎಂಗೆ ಕಪಾಲಮೋಕ್ಷ ಮಾಡಿರುವುದಾಗಿದೆ. ಆತನ ಸಂಬಂಧಿ ಜೈಲಿನಲ್ಲಿರುವ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ಸಂಬಂಧ ಮಾತನಾಡಲು ಬಂದ ಆತ ಬಳಿಕ

ದೆಹಲಿ ಸಿಎಂ‌ಗೆ ಕಪಾಳಮೋಕ್ಷ ಪ್ರಕರಣದ ಆರೋಪಿಯ ಉದ್ದೇಶ ಏನಿತ್ತು ಗೊತ್ತಾ! Read More »

ಹತ್ತನೇ ತರಗತಿ ಬಾಲಕನನ್ನು ಇರಿದು ಕೊಂದ ಒಂಬತ್ತನೇ ತರಗತಿ ಹುಡುಗ

ಅಹಮದಾಬಾದ್: ಖಾಸಗಿ ಶಾಲೆಯೊಂದರ ಒಂಬತ್ತನೇ ತರಗತಿ ವಿದ್ಯಾರ್ಥಿ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ಇರಿದು ಕೊಂದ ಘಟನೆ ನಡೆದಿದ್ದು, ಶಾಲೆಯ ಹೊರಗೆ ದೊಡ್ಡ ಮಟ್ಟದ ಪ್ರತಿಭಟನೆಯ ಕಾವು ಭುಗಿಲೆದ್ದಿದೆ. ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರವಾದ ಗಾಯಗಳಿಂದಾಗಿ ಆತ ಕೊನೆಯುಸಿರೆಳೆದಿದ್ದಾನೆ. ಇರಿತಕ್ಕೆ ಒಳಗಾದ ವಿದ್ಯಾರ್ಥಿ ಸಿಂಧಿ ಸಮುದಾಯಕ್ಕೆ ಸೇರಿದವನಾಗಿದ್ದು, ಆರೋಪಿ ಹುಡುಗ ಮುಸ್ಲಿಂ ಸಮುದಾಯದವನಾಗಿದ್ದಾನೆ. ಆದ್ದರಿಂದ ಈ ಘಟನೆ ಕೋಮು ಸ್ವರೂಪ ಪಡೆದುಕೊಂಡಿದೆ. ಈ ಘಟನೆಯ ಬಗ್ಗೆ ವಿದ್ಯಾರ್ಥಿಯ ಪೋಷಕರು, ಸಮುದಾಯದವರು, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಹತ್ತನೇ ತರಗತಿ ಬಾಲಕನನ್ನು ಇರಿದು ಕೊಂದ ಒಂಬತ್ತನೇ ತರಗತಿ ಹುಡುಗ Read More »

ಪೊಲೀಸ್ ಸ್ಟೇಷನ್‌ನಲ್ಲಿ ನೇಣು ಬಿಗಿದುಕೊಂಡು ಆರೋಪಿ ಆತ್ಮಹತ್ಯೆ

ರಾಮನಗರ: ದೇಗುಲದಲ್ಲಿ ‌ಕಳ್ಳತನ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಪಟ್ಟಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಶೌಚಾಲಯದಲ್ಲೇ ನೇಣಿಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ದುಂಡನಹಳ್ಳಿ ಗ್ರಾಮದ ರಮೇಶ್ ಎಂಬಾತ ಎಂ.ಕೆ. ದೊಡ್ಡಿ ಪೊಲೀಸು ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಮೇಶ್, ಆತನ ಪುತ್ರ ಮಂಜು ಮತ್ತು ಕೋಲಾರದ ಅನಿಲ್‌ನನ್ನು ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪದಲ್ಲಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ರಮೇಶ್ ಬುಧವಾರ ಶೌಚಾಲಯಕ್ಕೆ ಹೋಗುವುದಾಗಿ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರು ಇದನ್ನು ಲಾಕಪ್‌ಡೆತ್ ಎಂದು ಆರೋಪಿಸಿದ್ದಾರೆ.

ಪೊಲೀಸ್ ಸ್ಟೇಷನ್‌ನಲ್ಲಿ ನೇಣು ಬಿಗಿದುಕೊಂಡು ಆರೋಪಿ ಆತ್ಮಹತ್ಯೆ Read More »

ಒಳ ಮೀಸಲಾತಿಯಲ್ಲಿ ‌ಯಾವುದೇ ಜಾತಿಗೂ ಅನ್ಯಾಯವಾಗದಿರಲಿ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಒಳ ಮೀಸಲಾತಿಗೆ ‌ಸಂಬಂಧಿಸಿದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿದ್ದು, ಎಸ್‌ಸಿ ಸಮುದಾಯದಲ್ಲಿ 101 ಜಾತಿಗಳಿವೆ. ಯಾವುದಕ್ಕೂ ಅನ್ಯಾಯವಾಗದ ಹಾಗೆ ನಿರ್ಣಯಗಳನ್ನು ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿ ಎಂ ಸಿದ್ದರಾಮಯ್ಯ ಅವರೇ ನೀವು ರಾಜ್ಯದ ಮುಖ್ಯಮಂತ್ರಿಗಳು. ಒಳ ಮೀಸಲಾತಿ ಸಂದರ್ಭದಲ್ಲಿ ದೃಢ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಒಳ ಮೀಸಲಾತಿಯಲ್ಲಿ ‌ಯಾವುದೇ ಜಾತಿಗೂ ಅನ್ಯಾಯವಾಗದಿರಲಿ: ಬಿ.ವೈ. ವಿಜಯೇಂದ್ರ Read More »

ಮುಂದಿನ ಪ್ರಧಾನಿ ರಾಹುಲ್ ಗಾಂಧಿ: ತೇಜಸ್ವಿ ಯಾದವ್

ಬಿಹಾರ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂದು RJD ನಾಯಕ ತೇಜಸ್ವಿ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವಾಡದಲ್ಲಿ ‘ಮತದಾರ ಅಧಿಕಾರ ಯಾತ್ರೆ’ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಳೆಯ, ಅಶಕ್ತ ಎನ್‌ಡಿ‌ಎ ಸರ್ಕಾರವನ್ನು ಕಿತ್ತು ಹಾಕಿ, ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಯುವಕರು ದೃಢನಿಶ್ಚಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯವನ್ನು ಮುನ್ನಡೆಸಲು ಯುವ ಪೀಳಿಗೆಗೆ ಅವಕಾಶ ಸಿಗುವ ಕಾಲ ಬಂದಿದೆ. ನಿತೀಶ್ ಕುಮಾರ್ ಅಧಿಕಾರ ಕೆಳಗಿಳಿಸಿ,‌ಯುವ

ಮುಂದಿನ ಪ್ರಧಾನಿ ರಾಹುಲ್ ಗಾಂಧಿ: ತೇಜಸ್ವಿ ಯಾದವ್ Read More »

ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶುಕ್ಲಾ ಅವರ ಅನುಭವ ಮೌಲ್ಯಯುತವಾದದ್ದು: ಪ್ರಧಾನಿ ಮೋದಿ

Posts ನವದೆಹಲಿ: ಬಾಹ್ಯಾಕಾಶಯಾನ ಮುಗಿಸಿದ ಬಳಿಕ ಭಾರತಕ್ಕೆ ಬಂದ ಗಗನಯಾನಿ ಶುಭಂಶು ಶುಕ್ಲಾ ಆವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗಾಗಿ ಭಾರತ 40-50 ಗಗನಯಾನಿಗಳ ಗುಂಪನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶುಕ್ಲಾ ಅವರು ಸೋಮವಾರ ಸಂಜೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಬಾಹ್ಯಾಕಾಶ‌ಯಾನದ ಅನುಭವಗಳನ್ನು ಹಂಚಿಕೊಂಡರು. ಆ ಬಳಿಕ ಪ್ರಧಾನಿ ಮೋದಿ ಮಾತನಾಡಿದ್ದು, ಶುಕ್ಲಾ ಅವರ ಬಾಹ್ಯಾಕಾಶ‌ ಪ್ರಯಾಣ ಭವಿಷ್ಯದ ಕಾರ್ಯಾಚರಣೆಗಳಿಗೆ ಮೊದಲ ಹೆಜ್ಜೆಯಾಗಿದೆ.

ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶುಕ್ಲಾ ಅವರ ಅನುಭವ ಮೌಲ್ಯಯುತವಾದದ್ದು: ಪ್ರಧಾನಿ ಮೋದಿ Read More »

N.D.A. ಉಪರಾಷ್ಟ್ರಪತಿ ಅಭ್ಯರ್ಥಿಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ತಮಿಳುನಾಡಿನ ಬಿಜೆಪಿ ನಾಯಕ ಸಿ.ಪಿ. ರಾಧಾಕೃಷ್ಣನ್ ಅವರ ಹೆಸರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿ‌ಎ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಅವರನ್ನು ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಅವರನ್ನು ಭೇಟಿ ಮಾಡಿ ಪ್ರಧಾನಿ ಶುಭಾಶಯ ತಿಳಿಸಿದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ, ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದಕ್ಕೆ ‌ಶುಭಾಶಯಗಳನ್ನು ತಿಳಿಸಲಾಯಿತು. ಅವರ ದೀರ್ಘ ವರ್ಷಗಳ ಸಾರ್ವಜನಿಕ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅನುಭವವು ನಮ್ಮ

N.D.A. ಉಪರಾಷ್ಟ್ರಪತಿ ಅಭ್ಯರ್ಥಿಗೆ ಪ್ರಧಾನಿ ಮೋದಿ ಅಭಿನಂದನೆ Read More »

error: Content is protected !!
Scroll to Top