ರಾಜ್ಯ

ಶಂಕಿತ ನಕ್ಸಲರ ತಂಡ ಭೇಟಿ | ಎನ್‍ ಐ ಎ ತಂಡದಿಂದ ಕೂಂಬಿಂಗ್

ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆಯಲ್ಲಿ ಶಂಕಿತ ನಕ್ಸಲರ ತಂಡ ಭೇಟಿ ನೀಡಿದ ಬೆನ್ನಲ್ಲೇ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ತಂಡ ಆಗಮಿಸಿ, ಕೂಂಬಿಂಗ್ ಆರಂಭಿಸಿದ್ದಾರೆ‌. ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಈ ಮೂರು ಪ್ರದೇಶಗಳಿಗೆ ತೆರಳಿ ಕೂಂಬಿಂಗ್ ನಡೆಸಲು ತಯಾರಿ ನಡೆಸಿದ್ದು, ಈಗಾಗಲೇ ಕೂಜಿಮಲೆಯಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ. ಆರು ಮಂದಿ ಪುರುಷರು, ಇಬ್ಬರು ಮಹಿಳೆಯರನ್ನೊಳಗೊಂಡ ನಕ್ಸಲರು ಎನ್ನಲಾದ ಎಂಟು ಮಂದಿಯ ತಂಡ ಸಶಸ್ತ್ರಧಾರಿಗಳಾಗಿದ್ದು, ಶನಿವಾರ ಸಂಜೆ […]

ಶಂಕಿತ ನಕ್ಸಲರ ತಂಡ ಭೇಟಿ | ಎನ್‍ ಐ ಎ ತಂಡದಿಂದ ಕೂಂಬಿಂಗ್ Read More »

ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರೋ ? ಇಲ್ಲವೋ ? | ನಾಳೆ ಪತ್ರಿಕಾಗೋಷ್ಠಿ ಆಯೋಜಿಸಿದ ಡಿ.ವಿ.

ಬೆಂಗಳೂರು: ಲೋಕಸಭೆ ಚುನಾವಣೆ ಟಿಕೇಟ್ ಕುರಿತು ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕ ಮಾಡಿರುವುದು ನಿಜ. ಈ ಕುರಿತು ಕುಟುಂಬದವರ ಜತೆ ಮಾತುಕತೆ ನಡೆಸಬೇಕಾಗಿದೆ. ನಾಳೆ ಪತ್ರಿಕಾಗೋಷ್ಠಿ ನಡೆಸಿ ನನ್ನ ನಿಲುವು ತಿಳಿಸುತ್ತೇನೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಮುಖರೊಬ್ಬರು ನನ್ನ ಜತೆ ಸಮಾಲೋಚನೆ ಮಾಡಿದ್ದಾರೆ. ಅವರು ಹೇಳಿರುವ ಮಾತನ್ನು ಈಗ ಬಹಿರಂಗಪಡಿಸಲು ಆಗುವುದಿಲ್ಲ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ. ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರೆಲ್ಲಾ ಒಂದುಗೂಡಿ ಹೈಕಮಾಂಡ್ ಬಳಿ ಹೋಗೋಣ ಎಂದಿದ್ದೆ. ಆದರೆ

ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರೋ ? ಇಲ್ಲವೋ ? | ನಾಳೆ ಪತ್ರಿಕಾಗೋಷ್ಠಿ ಆಯೋಜಿಸಿದ ಡಿ.ವಿ. Read More »

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ/ಪ್ರಾಧಿಕಾರಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ/ಪ್ರಾಧಿಕಾರಗಳಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಆದೇಶಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರುಗಳಾಗಿ ಡಾ.ಪುರುಷೋತ್ತಮ (ನವದೆಹಲಿ), ಪ್ರೊ.ರಾಮಚಂದ್ರಪ್ಪ (ದಾವಣಗೆರೆ), ಡಾ.ವಿ.ಪಿ.ನಿರಂಜನಾರಾಧ್ಯ (ಬೆಂಗಳೂರು), ಟಿ.ಗುರುರಾಜ್ (ಮೈಸೂರು), ಡಾ.ರವಿಕುಮಾರ್ ನೀಹ (ತುಮಕೂರು), ದಾಕ್ಷಾಯಿಣಿ ಹುಡೇದ (ವಿಜಯಪುರ), ಯಾಕೂಬ್ ಖಾದರ್ (ಕುಂದಾಪುರ), ವಿರೂಪಣ್ಣ ಕಲ್ಲೂರು (ಕೊಪ್ಪಳ) ನೇಮಿಸಲಾಗಿದೆ. ಉಳಿದಂತೆ ಕುವೆಂಪು ಭಾಷಾ ಬಾರತಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ/ಪ್ರಾಧಿಕಾರಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ Read More »

ಕೇಂದ್ರ ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟ

ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ  ಏಪ್ರೀಲ್ 26 ಹಾಗು ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದು ಜೂನ್ 4 ರಂದು ಸಾರ್ವತ್ರಿಕ ಚುನಾವಣೆಯ ಪಲಿತಾಂಶ ಘೋಷಣೆಯಾಗಲಿದೆ. ಇಂದು ದೆಹಲಿಯ ವಿಜ್ಞಾನ್ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಟಿ ನಡೆಸಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾ‌ರ್ ಅವರ ನೇತೃತ್ವದ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಿದೆ.

ಕೇಂದ್ರ ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟ Read More »

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ !

ಶಿವಮೊಗ್ಗ: ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ  ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರ ವಿರುದ್ಧ ನಿಲ್ಲುವುದಾಗಿ ಸವಾಲು ಹಾಕಿದ್ದಾರೆ. ಕಾರ್ಯಕರ್ತರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಗೆದ್ದ ಎರಡು ತಿಂಗಳಿನಲ್ಲಿ ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರು ಅವರಿಗೆ ಬೇಕಾದವರಿಗೆ ಟಿಕೇಟ್ ನೀಡಿದ್ದಾರೆ. ಸೋತರೆ ಯಡಿಯೂರಪ್ಪನವರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ, ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದ್ದರು.

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ! Read More »

ರಾಮೇಶ್ವರಂ ಕೆಫೆ ಬಾಂಬ್‍ ಬ್ಲಾಸ್ಟ್ | ಓರ್ವ ಆರೋಪಿಯನ್ನು ಎನ್‍.ಐ.ಎ. ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‍ ಐಎ ಅಧಿಕಾರಿಗಳು ಬಾಡಿ ವಾರಂಟ್ ಆಧಾರದ ಮೇಲೆ ಓರ್ವನನ್ನು ವಿಚಾರಣೆ ನಡೆಸುತ್ತಿದ್ದಾರೆ. ಮಾಜ್ ಮುನೀರ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್‍ ನ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ. ಟ್ರಯಲ್ ಬ್ಲಾಸ್ಟ್ ಕೇಸ್ ಸಂಬಂಧ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಸದ್ಯ ಈತನನ್ನು 7 ದಿನಗಳ ಕಾಲ ಎನ್‍ ಐಎ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ರಾಮೇಶ್ವರಂ ಕೆಫೆ ಬಾಂಬ್‍ ಬ್ಲಾಸ್ಟ್ | ಓರ್ವ ಆರೋಪಿಯನ್ನು ಎನ್‍.ಐ.ಎ. ವಶಕ್ಕೆ ಪಡೆದು ವಿಚಾರಣೆ Read More »

ಪಾಕ್ ಪರ ಘೋಷಣೆ | ಬಂಧಿತ ಮೂವರು ಆರೋಪಿಗಳಿಗೆ ಜಾಮೀನು

ಬೆಂಗಳೂರು: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ ಪಾಕಿಸ್ತಾನ್‌ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರು ಆರೋಪಿಗಳಿಗೆ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ದೆಹಲಿಯ ಕಿಶನ್‌ ಗಂಜ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್‌ ನಿವಾಸಿ ಡಿ.ಎಸ್‌ ಮುನಾವರ್ ಅಹ್ಮದ್ ಅವರಿಗೆ ಜಾಮೀನು ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಬೆನ್ನಲ್ಲೇ ನಡೆಸಿದ ವಿಜಯೋತ್ಸವ ಸಂದರ್ಭ

ಪಾಕ್ ಪರ ಘೋಷಣೆ | ಬಂಧಿತ ಮೂವರು ಆರೋಪಿಗಳಿಗೆ ಜಾಮೀನು Read More »

ಹಾವೇರಿ ಕ್ಷೇತ್ರ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೆ.ಎಸ್‍.ಈಶ್ವರಪ್ಪ ಭಾರೀ ಆಕ್ರೋಶ | ಶಿವಮೊಗ್ಗದಿಂದ ಬಂಡಾಯ ಸಾಧ್ಯತೆ ?

ಶಿವಮೊಗ್ಗ: ಬಸವರಾಜ್ ಬೊಮ್ಮಾಯಿ ಅವರ ಹೆಸರು ಹಾವೇರಿ ಕ್ಷೇತ್ರಕ್ಕೆ ಘೋಷಣೆಯಾಗುತ್ತಿದ್ದಂತೆ ಮಾಜಿ ಸಿಎಂ ಕೆ.ಎಸ್‍.ಈಶ್ವರಪ್ಪ ಅವರು ಭಾರೀ ಆಕ್ರೋಶಿತರಾಗಿದ್ದಾರೆ. ಈ ಕುರಿತು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಅವರು ಮಾತನಾಡಿ ನಾನು 40 ವರ್ಷ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದು, ಅದನ್ನು ಗುರುತಿಸಿ ನನ್ನ ಮಗನಿಗೆ ಟಿಕೇಟ್ ನೀಡಬಹುದಿತ್ತು ಎಂದು ಹೇಳಿರುವ ಅವರು, ಶುಕ್ರವಾರ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ನಾನು 40 ವರ್ಷ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಅದನ್ನು ಗುರುತಿಸಿ ನನ್ನ

ಹಾವೇರಿ ಕ್ಷೇತ್ರ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೆ.ಎಸ್‍.ಈಶ್ವರಪ್ಪ ಭಾರೀ ಆಕ್ರೋಶ | ಶಿವಮೊಗ್ಗದಿಂದ ಬಂಡಾಯ ಸಾಧ್ಯತೆ ? Read More »

ಕಾಂಗ್ರೆಸ್ ಸೇರಲಿದ್ದಾರೆಯೇ ಡಿ.ವಿ.ಸದಾನಂದ ಗೌಡ | ಅಚ್ಚರಿ ಹೇಳಿಕೆ ನೀಡಿದ ಡಿ.ಕೆ.ಶಿ.

ಬೆಂಗಳೂರು: ಮಾಜಿ ಸಿ.ಎಂ. ಡಿ.ವಿ.ಸದಾನಂದ ಗೌಡರಿಗೆ ಈ ಬಾರಿ ಲೋಕಸಭೆ ಬಿಜೆಪಿ ಟಿಕೇಟ್ ಸಿಗಲಿದೆಯೇ ಅನುಮಾನ ಒಂದೆಡೆ ಇದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವದಂತಿಯಿದೆ. ಈ ವಿಚಾರಕ್ಕೆ ಪೂರಕ ಎಂಬಂತೆ ಡಿ.ವಿ.ಸದಾನಂದ ಗೌಡರ ಕುರಿತು ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿರುವುದು. ಕಾಂಗ್ರೆಸ್ ಪಕ್ಷಕ್ಕೆ ಸೇರುವ ಕುರಿತು ಹಲವಾರು ಮಂದಿ ನಮ್ಮನ್ನು ಭೇಟಿ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅನೇಕ ಜನ ಪಕ್ಷ ಸೇರ್ಪಡೆ ಕುರಿತು ಈಗಾಗಲೇ ನನ್ನ ಜತೆ ಮಾತನಾಡಿದ್ದಾರೆ. ನಿನ್ನೆ

ಕಾಂಗ್ರೆಸ್ ಸೇರಲಿದ್ದಾರೆಯೇ ಡಿ.ವಿ.ಸದಾನಂದ ಗೌಡ | ಅಚ್ಚರಿ ಹೇಳಿಕೆ ನೀಡಿದ ಡಿ.ಕೆ.ಶಿ. Read More »

5,8 ಹಾಗೂ 9 ಮೌಲ್ಯಾಂಕನ ಪರೀಕ್ಷೆಗೆ ಸುಪ್ರೀಂ ಕೋರ್ಟ್‍ ತಡೆ

ನವದೆಹಲಿ: 5,8 ಹಾಗೂ 9ನೇ  ತರಗತಿ ಮೌಲ್ಯಾಂಕನ ಪರೀಕ್ಷೆ ರದ್ದುಪಡಿಸಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ ಮೇಲ್ಮವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ ತಡೆ ನೀಡಿರುವುದಾಗಿ ವರದಿಯಾಗಿದೆ. ರಾಜ್ಯಾದ್ಯಂತ ಸೋಮವಾರ ಹಾಗೂ ಮಂಗಳವಾರ ಮೌಲ್ಯಾಂಕನ ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು. ಇಂದು ನಡೆದಿ ವಿಚಾರಣೆಯಲ್ಲಿ ಕರ್ನಾಟಕ ಸರಕಾರ ನಡೆಸುತ್ತಿರುವ ಬೋರ್ಡ್‍ ಪರೀಕ್ಷೆಗಳನ್ನು ನಡೆಸದಂತೆ ನ್ಯಾಯಮೂರ್ತಿಗಳಾದ ಬೆಲಾ ಎಂ.ತ್ರಿವೇದಿ ಹಾಗೂ ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ತಡೆ ನೀಡಿದೆ. ಹೈಕೋರ್ಟ್‌ ನ ದ್ವಿಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು

5,8 ಹಾಗೂ 9 ಮೌಲ್ಯಾಂಕನ ಪರೀಕ್ಷೆಗೆ ಸುಪ್ರೀಂ ಕೋರ್ಟ್‍ ತಡೆ Read More »

error: Content is protected !!
Scroll to Top