ರಾಜ್ಯ

ಇಂದು ಸರಕಾರದ ಧೋರಣೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು : ಬೆಂಗಳೂರು ನಗರದ ಹೊಂಡ-ಗುಂಡಿಗಳನ್ನು ಮುಚ್ಚಲೂ ಇವರ ಬಳಿ ದುಡ್ಡಿಲ್ಲ. ಸರಕಾರದ ಧೋರಣೆಯನ್ನು ಖಂಡಿಸಿ ನಾಳೆ ಇಂದು  ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಅನುದಾನವನ್ನೇ ಕೊಡದ ಬ್ರ್ಯಾಂಡ್ ಬೆಂಗಳೂರು ನಮಗೆ ಬೇಡ. ಮಳೆ ನೀರು ಎಲ್ಲ ಮನೆಗಳಿಗೆ ನುಗ್ಗಿ ಅಪಾರ ಹಾನಿ ಆಗಿದೆ. ಈ ಸರ್ಕಾರ ಬಂದ ಬಳಿಕ ರಸ್ತೆ ಕಾಮಗಾರಿಗಳು ನಡೆದಿಲ್ಲ. ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯ ನಡೆದಿಲ್ಲ ಎಂದು ಟೀಕಿಸಿದರು. ಅಭಿವೃದ್ಧಿ ಕಾಮಗಾರಿಗಳನ್ನೇ ಮಾಡದ ಈ ಸರಕಾರದ ವಿರುದ್ಧ ಒಂದು […]

ಇಂದು ಸರಕಾರದ ಧೋರಣೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ Read More »

ಮೇ 31 ರಂದು ಭಾರತಕ್ಕೆ ಬರುವೆ ಎಂದ ಪ್ರಜ್ವಲ್ ರೇವಣ್ಣ | ವಿದೇಶದಿಂದ ವೀಡಿಯೋ ಮೂಲಕ ಹೇಳಿಕೆ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್‍ ಐಟಿ ತನಿಖೆಗೆ ಬರುವುದಾಗಿ ತಿಳಿಸಿದ್ದಾರೆ. ಅವರ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ದೇಶದೆಲ್ಲೆಡೆ ಕಿಡಿ ಹೊತ್ತಿದ ಬಳಿಕ ಒಂದು ತಿಂಗಳ ನಂತರ ವೀಡಿಯೋ ರಿಲೀಸ್ ಮಾಡುವ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಪ್ರಕರಣ ಕುರಿತು ಮಾತನಾಡಿ, ರಾಜ್ಯದ ಹಾಗೂ ಜೆಡಿಎಸ್ ಕಾರ್ಯಕರ್ತರ ಕ್ಷಮೆಯಾಚಿಸಿದ್ದಾರೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಕೆಲ ಶಕ್ತಿಗಳು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಹೀಗಾಗಿ ಎಲ್ಲರಲ್ಲಿ ಕ್ಷಮೆ ಕೇಳುವೆ ಎಂದಿದ್ದಾರೆ.

ಮೇ 31 ರಂದು ಭಾರತಕ್ಕೆ ಬರುವೆ ಎಂದ ಪ್ರಜ್ವಲ್ ರೇವಣ್ಣ | ವಿದೇಶದಿಂದ ವೀಡಿಯೋ ಮೂಲಕ ಹೇಳಿಕೆ Read More »

ಬ್ಯೂಟಿಷಿಯನ್ ಅಕ್ಷತಾ ಆತ್ಮಹತ್ಯೆಗೆ ಶರಣು

ಶಿವಮೊಗ್ಗ: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಗತ್ಯೆ ಮಾಡಿಕೊಂಡ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಇಂದು ನಡೆದಿದೆ. ಅಕ್ಷತಾ (30)  ಆತ್ಮಹತ್ಯೆ ಮಾಡಿಕೊಂಡವರು. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಅಕ್ಷತಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಕ್ಷತಾ ಅವರು ಭದ್ರಾವತಿ ತಾಲೂಕಿನ ಕೆರೆಬೀರನಹಳ್ಳಿ ಗ್ರಾಮದವರು. ಚಂದ್ರಗುತ್ತಿ ಗ್ರಾಮದ ಸಂತೋಪ್ ಜೊತೆ ಅಕ್ಷತಾ ಅವರ ಮದುವೆ ಆಗಿತ್ತು. ಹೊಟ್ಟೆನೋವು ತಾಳಲಾರದೆ ಸೊರಬ ಪಟ್ಟಣದ ವಿದ್ಯುತ್ ನಗರದ ಮನೆಯಲ್ಲಿ ಅಕ್ಷತಾ ಆತ್ಮಹತ್ಯೆ

ಬ್ಯೂಟಿಷಿಯನ್ ಅಕ್ಷತಾ ಆತ್ಮಹತ್ಯೆಗೆ ಶರಣು Read More »

ಟ್ರಕ್-ಕಾರು ಭೀಕರ ಅಪಘಾತ : ಐವರು ಸ್ಥಳದಲ್ಲೇ ಮೃತ್ಯು

ಹಾಸನ: ಕಾರು ಹಾಗೂ ಟ್ರಕ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ಇಂದು ಮುಂಜಾನೆ ಸಂಭವಿಸಿದೆ. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಬಾಲಕ ಚೇತನ್, ಡ್ರೈವರ್ ರಾಕೇಶ್ ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತರು ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎನ್ನಲಾಗಿದೆ. ಇಬ್ಬರು ಮಹಿಳೆ, ಮೂವರು ಪುರುಷರು, ಒಂದು ಮಗು ಕೂಡ ಮೃತಪಟ್ಟಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಕುಟುಂಬ ತೆರಳಿತ್ತು.

ಟ್ರಕ್-ಕಾರು ಭೀಕರ ಅಪಘಾತ : ಐವರು ಸ್ಥಳದಲ್ಲೇ ಮೃತ್ಯು Read More »

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ | ಐದನೇ ಆರೋಪಿ ಬಂಧನ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಮತ್ತೊಬ್ಬ ಶಂಕಿತನನ್ನು ಬಂಧಿಸಿದೆ.  ಲಷ್ಕರ್-ಎ- ತೊಯ್ಯಾ (ಎಲ್ಇಟಿ) ಪ್ರಕರಣದ ಮಾಜಿ ಅಪರಾಧಿ, ಕರ್ನಾಟಕದ ಹುಬ್ಬಳ್ಳಿ ಮೂಲದ ಶೋಯೆಬ್ ಅಹ್ಮದ್ ಮಿರ್ಜಾ (35) ಬಂಧಿತ ಐದನೇ ವ್ಯಕ್ತಿ. ಈ ಹಿಂದೆ ಎಲ್ಇಟಿ ಬೆಂಗಳೂರು ಪಿತೂರಿ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಮಿರ್ಜಾ ಜೈಲಿನಿಂದ ಹೊರಬಂದ ನಂತರ ಹೊಸ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂದು ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ. ಎನ್ಐಎ ಅಧಿಕಾರಿಗಳು ಮೂರು ದಿನಗಳ ಹಿಂದಷ್ಟೇ ರಾಮೇಶ್ವರಂ ಕೆಫೆ ಸ್ಫೋಟ

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ | ಐದನೇ ಆರೋಪಿ ಬಂಧನ Read More »

ಲಾರಿ-ಓಮ್ನಿ ಭೀಕರ ಅಪಘಾತ | ನಾಲ್ವರು ಸ್ಥಳದಲ್ಲೇ ಮೃತ್ಯು | ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿ ತೆರಳುತ್ತಿರುವಾಗ ದುರ್ಘಟನೆ

ಲಾರಿ ಹಾಗೂ ಓಮ್ನಿ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಚಿಕ್ಕಮಗಳೂರಿನಲ್ಲಿ ಇಂದು ನಡೆದಿದೆ. ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದುಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಭೀಕರ ಅಪಘಾತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೂಡಲೇ ಸ್ಥಳಕ್ಕೆ

ಲಾರಿ-ಓಮ್ನಿ ಭೀಕರ ಅಪಘಾತ | ನಾಲ್ವರು ಸ್ಥಳದಲ್ಲೇ ಮೃತ್ಯು | ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿ ತೆರಳುತ್ತಿರುವಾಗ ದುರ್ಘಟನೆ Read More »

ಬಸ್‍ ಗೆ ಡೀಸೆಲ್‍ ಹಾಕಲು ಸರಕಾರದ ಬಳಿ ಹಣವಿಲ್ಲವಂತೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ

ಸರಕಾರಿ ಬಸ್ಸಿಗೆ ಡೀಸೆಲ್ ಹಾಕಲು ಹಣವಿಲ್ಲವಂತೆ. ಪರಿಣಾಮ ಬೆಂಗಳೂರು-ಕುಂದಾಪುರ ಬಸ್ ಹುಲಿಕಲ್ ಬಳಿ ಬಾಕಿಯಾಗಿದೆ. ಫ್ರೀ ಎಂದು ಬೊಗಳೆ ಬಿಡುತ್ತಿರುವ ಕರ್ನಾಟಕ ಸರಕಾರದ ಬಳಿ ಡೀಸೆಲ್‍ ಹಾಕಲು ಹಣವಿಲ್ಲವಂತೆ. ಬಸ್ ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿಸಲ್ಲಿ ಡೀಸೆಲ್‍ ತುಂಬಿಸಬೇಕಂತೆ. ಹೀಗೊಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

ಬಸ್‍ ಗೆ ಡೀಸೆಲ್‍ ಹಾಕಲು ಸರಕಾರದ ಬಳಿ ಹಣವಿಲ್ಲವಂತೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ Read More »

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಪ್ರವೇಶದ ವಯೋಮಿತಿ 6 ವರ್ಷ  | ಪೋಷಕರಿಂದ ಬದಲಾವಣೆಗೆ ಆಗ್ರಹ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ ಪ್ರವೇಶಕ್ಕೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ನಿಗದಿಪಡಿಸಿರುವ ವಯೋಮಿತಿ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಎಲ್ ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್ 1 ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 1 ನೇ ತರಗತಿ ಪ್ರವೇಶಕ್ಕೆ 2024-25 ನೇ ಸಾಲಿನಿಂದ ಆಯಾ ಸಾಲಿನ ಜೂನ್ 1 ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. ಆದರೆ ನಿಗದಿತ ವಯೋಮಿತಿಗೆ

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಪ್ರವೇಶದ ವಯೋಮಿತಿ 6 ವರ್ಷ  | ಪೋಷಕರಿಂದ ಬದಲಾವಣೆಗೆ ಆಗ್ರಹ Read More »

ಡಾ.ಧನಂಜಯ ಸರ್ಜಿ, ಎಸ್‍.ಎಲ್.ಭೋಜೇಗೌಡ ಗೆಲುವಿಗಾಗಿ ಶ್ರಮಿಸೋಣ : ಕುಮಾರ್ ಬಂಗಾರಪ್ಪ

ಸೊರಬ: ಡಾ. ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ಗೆಲುವಿಗಾಗಿ ಎಲ್ಲ ಮುಖಂಡರು, ಕಾರ್ಯಕರ್ತರು ಒಂದಾಗಿ ಶ್ರಮಿಸೋಣ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ನಿಟ್ಟಿನಲ್ಲಿ ವಾಸವಿ ಕಲ್ಯಾಣ ಮಂಟಪದಲ್ಲಿ ಸೊರಬ ಮಂಡಲ ಮತದಾರರ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪದವೀಧರರ ಸಮಸ್ಯೆಗಳ ಕುರಿತು ತಿಳಿದಿರುವ ಡಾ. ಧನಂಜಯ ಸರ್ಜಿಯವರನ್ನು ಪರಿಷತ್ ಗೆ ಆಯ್ಕೆ ಮಾಡಿದರೆ ಪದವೀಧರರು ಮತ್ತು

ಡಾ.ಧನಂಜಯ ಸರ್ಜಿ, ಎಸ್‍.ಎಲ್.ಭೋಜೇಗೌಡ ಗೆಲುವಿಗಾಗಿ ಶ್ರಮಿಸೋಣ : ಕುಮಾರ್ ಬಂಗಾರಪ್ಪ Read More »

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ | ಪ್ರಮುಖ ಆರೋಪಿಗಳಿಗೆ ಹಣ ಸಹಾಯ ಮಾಡಿದ ಸಹೋದರರು ಎನ್ ಐ ಎ ವಶಕ್ಕೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಇಬ್ಬರು ಸಹೋದರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯ ಗೌಸಿಯಾ ಟೌನ್ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ಸದ್ಯ ಎನ್ಐಎ ವಶದಲ್ಲಿದ್ದು, ಇವರಿಬ್ಬರೂ ವಿದೇಶಿ ಹ್ಯಾಂಡ್ಲರ್ಗಳ ಸೂಚನೆಯಂತೆ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ ಗೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಎನ್ಐಎ ಅಧಿಕಾರಿಗಳಿಗೆ

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ | ಪ್ರಮುಖ ಆರೋಪಿಗಳಿಗೆ ಹಣ ಸಹಾಯ ಮಾಡಿದ ಸಹೋದರರು ಎನ್ ಐ ಎ ವಶಕ್ಕೆ Read More »

error: Content is protected !!
Scroll to Top