ರಾಜ್ಯ

ಗಂಡನ ನಡೆಗೆ ಬೇಸತ್ತು ಹೆಂಡತಿ ಆತ್ಮಹತ್ಯೆ !

ಬೆಂಗಳೂರು: ಹೆಂಡತಿಗೆ ಪ್ರತಿನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಪರಿಣಾಮ ಬೇಸತ್ತು ಹೆಂಡತಿ ಪೆಟ್ರೋಲ್  ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ. ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಈಕೆಯ ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ. […]

ಗಂಡನ ನಡೆಗೆ ಬೇಸತ್ತು ಹೆಂಡತಿ ಆತ್ಮಹತ್ಯೆ ! Read More »

ಎತ್ತಿನಹೊಳೆ ಯೋಜನೆ ಕೊನೆಗೂ ಲೋಕಾರ್ಪಣೆ

ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಹಾಸನ : ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲೂಕಿನ ಬೈಕೆರೆ ದೊಡ್ಡನಗರದ ಪಂಪ್‌ಹೌಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿಎಂ, ದೊಡ್ಡನಾಗರದ 9ನೇ ಪಂಪ್‌ಹೌಸ್​​ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದರು.ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸಲಿರುವ ಮಹತ್ವಾಕಾಂಕ್ಷೆಯ ಯೋಜನೆ ಇದು ಎಂದು

ಎತ್ತಿನಹೊಳೆ ಯೋಜನೆ ಕೊನೆಗೂ ಲೋಕಾರ್ಪಣೆ Read More »

ದರ್ಶನ್‌ ಕೊಟ್ಟ ಮೂರೇ ಏಟಿಗೆ ರೇಣುಕಾಸ್ವಾಮಿ ಗೊಟಕ್‌

ದರ್ಶನ್‌ ಮತ್ತು ಗ್ಯಾಂಗ್‌ನ ಬರ್ಬರ ಕ್ರೌರ್ಯ ಬಿಚ್ಚಿಟ್ಟ ಚಾರ್ಜ್‌ಶೀಟ್‌ ಬೆಂಗಳೂರು: ಪೊಲೀಸರು ನಿನ್ನೆ ಕೋರ್ಟಿಗೆ ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ ನಟ ದರ್ಶನ್ ಮತ್ತು ಗ್ಯಾಂಗ್‌ ನರಪೇತಲನಂತಿದ್ದ ಬಡಪಾಯಿ ರೇಣುಕಾಸ್ವಾಮಿಯ ಮೇಲೆ ಎಸಗಿದ ಮಾರಣಾಂತಿಕ ದೌರ್ಜನ್ಯದ ಕರಾಳ ಮುಖಗಳನ್ನು ಬಯಲುಗೊಳಿಸಿ ಬೆಚ್ಚಬೀಳಿಸಿದೆ. ಪವಿತ್ರಾ ಗೌಡ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದ್ದರೂ ರೇಣುಕಾಸ್ವಾಮಿಗೆ ಮಾರಣಾಂತಿಕ ಏಟು ಕೊಟ್ಟದ್ದು ದರ್ಶನ್‌ ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. ರೇಣುಕಾಸ್ವಾಮಿ ಸಾವಿಗೆ ದರ್ಶನ್ ಹೊಡೆತವೇ ಕಾರಣವಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಸಾಯುವ ಮುನ್ನ ದರ್ಶನ್ ಆತನಿಗೆ

ದರ್ಶನ್‌ ಕೊಟ್ಟ ಮೂರೇ ಏಟಿಗೆ ರೇಣುಕಾಸ್ವಾಮಿ ಗೊಟಕ್‌ Read More »

ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಧರಿಸಬೇಕು ಸೇಫ್ಟಿ ಹಾರ್ನೆಸ್ಟ್‌ ಬೆಲ್ಟ್‌!

ಮಕ್ಕಳ ಸುರಕ್ಷತೆಗೆ ನಿಯಮ ಕಡ್ಡಾಯಗೊಳಿಸಲು ಚಿಂತನೆ ಬೆಂಗಳೂರು: ಮಕ್ಕಳನ್ನು ಸ್ಕೂಟಿ ಅಥವಾ ಬೈಕಿನಲ್ಲಿ ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ಟ್‌ ಬೆಲ್ಟ್‌ ಧರಿಸುವ ನಿಯಮ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಒಂಬತ್ತು ತಿಂಗಳ ಮಗುವಿನಿಂದ ತೊಡಗಿ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಶಿಶು ಸುರಕ್ಷಾ ಕವಚ ಅಥವಾ ಸುರಕ್ಷತಾ ಬೆಲ್ಟ್ (ಸೇಫ್ಟಿ ಹಾರ್ನೆಸ್ ಬೆಲ್ಟ್) ಧರಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ನಿಯಮವನ್ನು ಕಡ್ಡಾಯಗೊಳಿಸಿದ್ದರೂ ಕರ್ನಾಟಕದಲ್ಲಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ

ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಧರಿಸಬೇಕು ಸೇಫ್ಟಿ ಹಾರ್ನೆಸ್ಟ್‌ ಬೆಲ್ಟ್‌! Read More »

ಹಿಜಾಬ್‌ ವಿವಾದ ಕಾರಣ: ಕುಂದಾಪುರ ಪ್ರಾಂಶುಪಾಲರ ಪ್ರಶಸ್ತಿಗೆ ತಡೆ

ಸರಕಾರದ ಕ್ರಮಕ್ಕೆ ಭಾರಿ ಆಕ್ರೋಶ ಉಡುಪಿ: ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಿಸಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ಕೊನೇ ಕ್ಷಣದಲ್ಲಿ ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ತಡೆಹಿಡಿದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಸರಕಾರ ಅವರ ಪ್ರಶಸ್ತಿಯನ್ನು ತಡೆಹಿಡಿದಿದೆ. ಇದಕ್ಕೆ ಕಾರಣ ಎರಡು

ಹಿಜಾಬ್‌ ವಿವಾದ ಕಾರಣ: ಕುಂದಾಪುರ ಪ್ರಾಂಶುಪಾಲರ ಪ್ರಶಸ್ತಿಗೆ ತಡೆ Read More »

ಗಣೇಶೋತ್ಸವಕ್ಕೆ ಬರುವ ಅತಿಥಿಗಳ ಮೊಬೈಲ್‌ ನಂಬರ್‌ ನೀಡುವ ನಿಯಮಕ್ಕೆ ವೇದವ್ಯಾಸ ಕಾಮತ್‌ ಕಿಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಚಿತ್ರವಿಚಿತ್ರ ನಿಯಮ ಹೇರಿದ್ದಾರೆ ಎಂದು ಆರೋಪ ಮಂಗಳೂರು: ರಾಜ್ಯ ಸರಕಾರ ವಿಘ್ನ ವಿನಾಯಕನಿಗೆ ಈಗ ವಿಘ್ನ ತಂದಿರಿಸಿದೆ. ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಿದರೆ ಚಿತ್ರವಿಚಿತ್ರ ನಿಯಮ ಹೇರಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ, ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ ನೀಡಲು ಹೇಳಲಾಗುತ್ತಿದೆ. ಅವರ ವಿಳಾಸ ನೀಡಬೇಕು, ಭಾಗವಹಿಸುವ ಟ್ಯಾಬ್ಲೊಗಳ ತಂಡ ಯಾವುದು ಎಂದು ಸೂಚಿಸಬೇಕು. ಯಾವ ವಾಹನದಲ್ಲಿ ಬರುತ್ತಾರೆ, ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು ಎಂದು ಅರ್ಥವಿಲ್ಲದ ಸೂಚನೆಗಳನ್ನು ಸರ್ಕಾರ

ಗಣೇಶೋತ್ಸವಕ್ಕೆ ಬರುವ ಅತಿಥಿಗಳ ಮೊಬೈಲ್‌ ನಂಬರ್‌ ನೀಡುವ ನಿಯಮಕ್ಕೆ ವೇದವ್ಯಾಸ ಕಾಮತ್‌ ಕಿಡಿ Read More »

ಕೊಲೆ ಪ್ರಕರಣ : ದರ್ಶನ್‌ ವಿರುದ್ಧ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಪವಿತ್ರಾ ಎ1, ದರ್ಶನ್‌ ಎ2 ಆರೋಪಿ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧ ಕೋರ್ಟ್‌ಗೆ ಪೊಲೀಸರು ಇಂದು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 24ನೇ ಎಸಿಎಂಎಂ ಕೋರ್ಟ್‌ಗೆ ಸುಮಾರು 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.ಇಂದು ಬೆಳಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಮೊದಲು ಎಫ್​ಐಆರ್​ ಹಾಕುವಾಗ ದರ್ಶನ್ ಎ2 ಆರೋಪಿ ಆಗಿದ್ದರೆ, ಪವಿತ್ರಾ

ಕೊಲೆ ಪ್ರಕರಣ : ದರ್ಶನ್‌ ವಿರುದ್ಧ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ Read More »

ಶಾಲೆಯ ಸೈಟ್‌ನಲ್ಲಿ ದಮ್‌ ಬಿರಿಯಾನಿ ಹೋಟೆಲ್‌ : ಛಲವಾದಿ ವಿರುದ್ಧ ಕಾಂಗ್ರೆಸ್‌ ಆರೋಪ

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಭೂ ಹಗರಣಗಳನ್ನು ಬಯಲು ಮಾಡಿ ದಾಳಿ ನಡೆಸುತ್ತಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮೇಲೆ ಕಾಂಗ್ರೆಸ್‌ ಮುಗಿಬಿದ್ದಿದೆ. ಛಲವಾದಿ ನಾರಾಯಣ ಸ್ವಾಮಿ ಶಾಲೆಗೆಂದು ಪಡೆದುಕೊಂಡ ಸೈಟ್‌ನಲ್ಲಿ ದಮ್‌ ಬಿರಿಯಾನಿ ಹೋಟೆಲ್‌ ಪ್ರಾರರಂಭಿಸಿದ್ದಾರೆ ಎಂದು ನಿನ್ನೆ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ದೂರು ನೀಡಿ ವಿಧಾನಪರಿಷತ್‌ ಸದಸ್ಯ ಸ್ಥಾನದಿಂದ ಅವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿದ್ದಾರೆ.ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ನೇತೃತ್ವದಲ್ಲಿ ಕಾಂಗ್ರೆಸ್‌‍ ನಾಯಕರು ಮಂಗಳವಾರ

ಶಾಲೆಯ ಸೈಟ್‌ನಲ್ಲಿ ದಮ್‌ ಬಿರಿಯಾನಿ ಹೋಟೆಲ್‌ : ಛಲವಾದಿ ವಿರುದ್ಧ ಕಾಂಗ್ರೆಸ್‌ ಆರೋಪ Read More »

ಮಾಜಿ ಸಚಿವ ಸುರೇಶ್‌ಕುಮಾರ್‌ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ಬಿಜೆಪಿ ಮಾಜಿ ಸಚಿವ, ಹಾಲಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸುರೇಶ್‌ ಕುಮಾರ್‌ ಅವಋ ಮೆದುಳಿಗೆ ಜ್ವರ ತಗುಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಕಳೆದ ತಿಂಗಳು ಬೆಂಗಳೂರಿನಿಂದ ತಿರುಪತಿಗೆ ಸೈಕಲ್ ಪ್ರಯಾಣ ಬೆಳೆಸಿದ್ದ ಸುರೇಶ್‌ಕುಮಾರ್‌ ಬಳಿಕ ದೋಸ್ತಿ ಪಾದಯಾತ್ರೆಯಲ್ಲೂ ಒಂದು ದಿನ ಭಾಗಿ ಆಗಿದ್ದರು. ಕಳೆದ 3-4 ದಿನಗಳ

ಮಾಜಿ ಸಚಿವ ಸುರೇಶ್‌ಕುಮಾರ್‌ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ Read More »

ಮುಡಾ ಹಗರಣ : ಅಮಾನತು ಆದೇಶವೇ ಸಿಎಂಗೆ ಮುಳ್ಳಾಗುತ್ತಾ?

ಸೈಟ್‌ಗೆ ಸಂಬಂಧಪಟ್ಟ ಆದೇಶದಲ್ಲೇ ಸತ್ಯ ಬಹಿರಂಗ ಬೆಂಗಳೂರು: ತನ್ನನ್ನು ಸುತ್ತಿಕೊಂಡಿರುವ ಮುಡಾ ಭೂ ಹಗರಣದಿಂದ ಪಾರಾಗುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೊಂದು ತಂತ್ರಗಾರಿಕೆ ಮಾಡುತ್ತಿದ್ದಾರೆ. ಅದರಂತೆ ನಿನ್ನೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಿಂದಿನ‌ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ ಈ ಅಮಾನತು ಆದೇಶದಲ್ಲೇ ಸರ್ಕಾರ ಹಲವು ಸತ್ಯಗಳನ್ನು ಬಿಚ್ಚಿಟ್ಟಿದೆ. ಸರ್ಕಾರದ ಅಮಾನತು ಆದೇಶದ ಅಂಶಗಳೇ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2001ರಲ್ಲೇ ದೇವನೂರು ಬಡಾವಣೆ ನಿರ್ಮಾಣವಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರ

ಮುಡಾ ಹಗರಣ : ಅಮಾನತು ಆದೇಶವೇ ಸಿಎಂಗೆ ಮುಳ್ಳಾಗುತ್ತಾ? Read More »

error: Content is protected !!
Scroll to Top