ರಾಜ್ಯ

ಮತ್ತೆ ಹೆಚ್ಚಾಗಲಿದೆ ನಂದಿನಿ ಹಾಲಿನ ಬೆಲೆ

ಲೀಟರಿಗೆ 3 ರೂ. ಹೆಚ್ಚಿಸುವ ಕುರಿತು ಸಿದ್ದರಾಮಯ್ಯ ಸುಳಿವು ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಈ ಕುರಿತು ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡುತ್ತೇವೆ. ಏರಿಕೆ ಮಾಡಿದ ಹಣ ಸಂಪೂರ್ಣ ರೈತರಿಗೆ ಹೋಗಬೇಕು ಎಂದರು. ನಮ್ಮ ಸರ್ಕಾರ ಯಾವಾಗಲೂ ರೈತರ ಪರ, ಹಾಲು ಉತ್ಪಾದಕರ ಪರ, ದಲಿತರು, ಬಡವರ ಪರ ಇರುತ್ತದೆ ಎಂದು ತಿಳಿಸಿದರು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು […]

ಮತ್ತೆ ಹೆಚ್ಚಾಗಲಿದೆ ನಂದಿನಿ ಹಾಲಿನ ಬೆಲೆ Read More »

ಎಸ್‍ಡಿಪಿಐ, ಪಿಎಫ್‍ಐಗೆ ಶರಣಾಗಿರುವ ಕಾಂಗ್ರೆಸ್‌ ಸರಕಾರ : ತೇಜಸ್ವಿ ಸೂರ್ಯ ಕಿಡಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಟಿಪ್ಪು, ಔರಂಗಜೇಬನ ಸಂತತಿ ಜನನ ಎಂದು ಆಕ್ರೋಶ ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆಯನ್ನು ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ ಎಂದು ಹೇಳುತ್ತಾರೆ. ನಿಮ್ಮ ಮನೆ ರೋಡ್‍ನಲ್ಲಿ ಯಾರಾದ್ರೂ ಗಣೇಶ ಕೂರಿಸಿದಾಗ ಅಲ್ಲಿ ಯಾರಾದ್ರೂ ಕಲ್ಲು ಹೊಡೆದ್ರೆ, ಬೆಂಕಿ ಹಾಕಿದ್ರೆ ಸಣ್ಣ ಘಟನೆ ಎಂದು ಹೇಳುತ್ತೀರಾ? ನಿಮ್ಮ ಮನೆಗೆ ಬೆಂಕಿ ಬೀಳುವವರೆಗೂ

ಎಸ್‍ಡಿಪಿಐ, ಪಿಎಫ್‍ಐಗೆ ಶರಣಾಗಿರುವ ಕಾಂಗ್ರೆಸ್‌ ಸರಕಾರ : ತೇಜಸ್ವಿ ಸೂರ್ಯ ಕಿಡಿ Read More »

ಪಿಯುಸಿ ಪರೀಕ್ಷೆ ಅವಧಿ 15 ನಿಮಿಷ ಕಡಿತ

ಇನ್ನು 2.45 ತಾಸಲ್ಲಿ ಮಕ್ಕಳು ಉತ್ತರ ಬರೆದು ಮುಗಿಸಬೇಕು ಬೆಂಗಳೂರು: ಶಾಲೆ ಮತ್ತು ಕಾಲೇಜನ್ನು ತನ್ನ ಪ್ರಯೋಗಶಾಲೆಯಾಗಿ ಮಾಡಿಕೊಂಡಿರುವ ಕಾಂಗ್ರೆಸ್‌ ಸರಕಾರ ಈಗ ಇನ್ನೊಂದು ಪ್ರಯೋಗಕ್ಕೆ ಮುಂದಾಗಿದೆ. ಈ ವರ್ಷದಿಂದಲೇ ದ್ವಿತೀಯ ಪಿಯುಸಿ ಮಕ್ಕಳ ಪರೀಕ್ಷೆ ಬರೆಯುವ ಅವಧಿಯನ್ನು ಕಡಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಹೊಸ ನಿಯಮವನ್ನು ಈ ವರ್ಷದಿಂದಲೇ ಅನುಷ್ಠಾನಗೊಳಿಸಲು ಮಂಡಳಿ ಸಜ್ಜಾಗಿದ್ದು, ದ್ವಿತೀಯ ಪಿಯು ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು

ಪಿಯುಸಿ ಪರೀಕ್ಷೆ ಅವಧಿ 15 ನಿಮಿಷ ಕಡಿತ Read More »

ಕಲ್ಲು ತೂರಿದವರು ಮುಸ್ಲಿಮರು, ಕೇಸ್‌ ಹಿಂದುಗಳ ಮೇಲೆ : ಬಿಜೆಪಿ ಆಕ್ರೋಶ

1ರಿಂದ 23ರ ವರೆಗಿನ ಆರೋಪಿಗಳೆಲ್ಲ ಹಿಂದುಗಳು ಎಂದು ಆರೋಪ ಮಂಡ್ಯ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಪೊಲೀಸರು ಹಿಂದುಗಳ ಮೇಲೇಯೇ ಕೇಸ್‌ ಹಾಕುತ್ತಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗಳ ಪೈಕಿ ಎ1ನಿಂದ ಎ23 ವರೆಗಿನ ಆರೋಪಿಗಳು ಹಿಂದೂಗಳೇ ಆಗಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದು, ಇದು ಮುಸ್ಲಿಮ್‌ ಒಲೈಕೆಯ ಪರಾಕಾಷ್ಠೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸಹಿತ ಹಲವು ನಾಯಕರು ಕಿಡಿಕಾರಿದ್ದಾರೆ. ಗಲಭೆ ನಡೆದ ಬಳಿಕ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಆರ್‌

ಕಲ್ಲು ತೂರಿದವರು ಮುಸ್ಲಿಮರು, ಕೇಸ್‌ ಹಿಂದುಗಳ ಮೇಲೆ : ಬಿಜೆಪಿ ಆಕ್ರೋಶ Read More »

ಪೊಲೀಸ್‌ ಠಾಣೆ ಎದುರು ಮಹಿಳೆಯರ ಹೈಡ್ರಾಮ

ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಧರಣಿ ಕುಳಿತು ಆಗ್ರಹ ಮಂಡ್ಯ: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದ ಕೆಲವು ವ್ಯಕ್ತಿಗಳ ಕುಟುಂಬದ ಹೆಂಗಸರು ಇಂದು ಬೆಳಗ್ಗೆ ಪೊಲೀಸ್‌ ಠಾಣೆಯ ಎದುರು ಧರಣಿ ಕುಳಿತು ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಹೈಡ್ರಾಮ ಮಾಡಿದ್ದಾರೆ. ನಾಗಮಂಗಲ ನಗರ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಮಹಿಳೆಯರು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಗುಂಪುಗೂಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಮ್ಮ ಮಕ್ಕಳನ್ನು ತೋರಿಸಿ, ಅವರನ್ನು

ಪೊಲೀಸ್‌ ಠಾಣೆ ಎದುರು ಮಹಿಳೆಯರ ಹೈಡ್ರಾಮ Read More »

ನಾಗಮಂಗಲದಲ್ಲಿ ನಡೆದದ್ದು ಆಕಸ್ಮಿಕ ಘಟನೆ : ಗೃಹ ಸಚಿವರ ಹೇಳಿಕೆ

ಕೋಮುಗಲಭೆಯಾಗಿಲ್ಲ ಜನರು ಕಲ್ಲು ತೂರಿಕೊಂಡಿದ್ದಾರೆ ಎಂದು ತೇಲಿಸಿಬಿಟ್ಟ ಪರಮೇಶ್ವರ್‌ ಬೆಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಿನ್ನೆ ರಾತ್ರಿ ಗಣೇಶ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರಿದ ಬಳಿಕ ಸ್ಫೋಟಗೊಂಡ ಗಲಭೆಯನ್ನು ಗೃಹ ಸಚಿವ ಜಿ.ಪರಮೇಶ್ವರ್‌ ಕೋಮುಗಲಭೆಯಲ್ಲ ಸಣ್ಣ ಘಟನೆ ಎಂದು ಬಣ್ಣಿಸಿ ಮತ್ತೆ ಬೇಜವಾಬ್ದಾರಿ ಮೆರೆದಿದ್ದಾರೆ.ಕೋಮು ಗಲಭೆಯಾಗಿಲ್ಲ, ಆಕಸ್ಮಿಕ ಘಟನೆ ನಡೆದಿದೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಅದು ಕೋಮು ಗಲಭೆ ಅಲ್ಲ, ಆಕಸ್ಮಿಕವಾಗಿ ನಡೆದಿರುವ ಘಟನೆ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ

ನಾಗಮಂಗಲದಲ್ಲಿ ನಡೆದದ್ದು ಆಕಸ್ಮಿಕ ಘಟನೆ : ಗೃಹ ಸಚಿವರ ಹೇಳಿಕೆ Read More »

ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಫಲ ಕೋಮುಗಲಭೆ : ಎಚ್‌ಡಿಕೆ

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಸಂಭವಿಸಿದ ಕೋಮು ಗಲಭೆಯನ್ನು ಖಂಡಿಸಿರುವ ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ ಎಂದು ಎಚ್​ಡಿಕೆ ಹೇಳಿದ್ದಾರೆ.ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿ ದಾಂಧಲೆ ಎಬ್ಬಿಸಿರುವುದನ್ನು

ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಫಲ ಕೋಮುಗಲಭೆ : ಎಚ್‌ಡಿಕೆ Read More »

ಮಂಡ್ಯ : ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಕೋಮು ಹಿಂಸಾಚಾರ

ಅಂಗಡಿ ವಾಹನಗಳಿಗೆ ಬೆಂಕಿ, ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಕಲ್ಲುತೂರಾಟವಾಗಿ ಬಳಿಕ ಕೋಮು ಗಲಭೆ ಸಂಭವಿಸಿ ಪರಿಸ್ಥಿತಿ ಬಿಗಡಾಯಿಸಿದ್ದು, ಇಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಿಡಿಗೇಡಿಗಳು ಮೆರವಣಿಗೆಯ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ನಡುರಸ್ತೆಯಲ್ಲೇ ತಲ್ವಾರ್, ಲಾಂಗು, ರಾಡ್‌ಗಳನ್ನು ಜಳಪಿಸಿದ್ದಾರೆ. ಪೆಟ್ರೋಲ್ ಬಾಂಬ್ ದಾಳಿಗೆ ಅಂಗಡಿಗಳು ಹೊತ್ತಿ ಉರಿದಿವೆ. ಪೊಲೀಸ್ ಠಾಣೆ ಮುಂದೆಯೇ ಹಿಂದೂ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ

ಮಂಡ್ಯ : ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಕೋಮು ಹಿಂಸಾಚಾರ Read More »

ವಾಲ್ಮೀಕಿ ನಿಗಮದ 21 ಕೋ. ರೂ. ಕಾಂಗ್ರೆಸ್‌ ಬೂತ್‌ಗಳಿಗೆ ಹಂಚಿಕೆ : ಚಾರ್ಜ್‌ಶೀಟ್‌ನಲ್ಲಿದೆ ಸ್ಫೋಟಕ ಮಾಹಿತಿ

ಇಡೀ ಹಗರಣದ ಸೂತ್ರಧಾರ ಮಾಜಿ ಸಚಿವ ನಾಗೇಂದ್ರ ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 21 ಕೋ.ರೂ.ಯನ್ನು ಮಾಜಿ ಸಚಿವ ನಾಗೇಂದ್ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಬೂತ್‌ಗಳಿಗೆ ಹಂಚಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ರಾಜ್ಯ ಸರಕಾರ ನೇಮಿಸಿದ್ದ ಎಸ್‌ಐಟಿಯಿಂದ ಕ್ಲೀನ್‌ಚಿಟ್‌ ಪಡೆದುಕೊಂಡಿದ್ದ ನಾಗೇಂದ್ರ ವಿರುದ್ಧ ಜಾರಿ ನಿರ್ದೇಶನಾಲಯ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ವಾಲ್ಮೀಕಿ ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ಯಾವ ರೀತಿ ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂಬುದರ ಬಗ್ಗೆ ವಿಸ್ತೃತವಾದ ವಿವರವಿದೆ.ಎಸ್​ಐಟಿ ಚಾರ್ಜ್​ಶೀಟ್​​ನಲ್ಲಿ ನಾಗೇಂದ್ರ

ವಾಲ್ಮೀಕಿ ನಿಗಮದ 21 ಕೋ. ರೂ. ಕಾಂಗ್ರೆಸ್‌ ಬೂತ್‌ಗಳಿಗೆ ಹಂಚಿಕೆ : ಚಾರ್ಜ್‌ಶೀಟ್‌ನಲ್ಲಿದೆ ಸ್ಫೋಟಕ ಮಾಹಿತಿ Read More »

ಬಿಜೆಪಿ ಹಗರಣಗಳ ತನಿಖೆಯ ಮೇಲುಸ್ತುವಾರಿಗೆ ಸಚಿವರ ಸಮಿತಿ ರಚನೆ

ಮುಡಾ, ವಾಲ್ಮೀಕಿ ನಿಗಮ ಹಗರಣ ಆರೋಪಕ್ಕೆ ಕಾಂಗ್ರೆಸ್‌ ಮುಯ್ಯಿ ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಮತ್ತು ಇತರ ಹಗರಣಗಳ ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಮೇಲುಸ್ತುವಾರಿಗೆ ಗೃಹಸಚಿವ ಡಾ. ಜಿ ಪರಮೇಶ್ವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಗಳ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ

ಬಿಜೆಪಿ ಹಗರಣಗಳ ತನಿಖೆಯ ಮೇಲುಸ್ತುವಾರಿಗೆ ಸಚಿವರ ಸಮಿತಿ ರಚನೆ Read More »

error: Content is protected !!
Scroll to Top