ರಾಜ್ಯ

ಭೂ ಪರಿವರ್ತನೆ ಸರಳಗೊಳಿಸುವ ಮಸೂದೆ ಮಂಡನೆ

ಬೆಳಗಾವಿ: ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95 ಮತ್ತು 96ಕ್ಕೆ ತಿದ್ದುಪಡಿ ತರುವ ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ 1964ನ್ನು ಕಂದಾಯ ಸಚಿವ ಆರ್.ಅಶೋಕ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.ಈ ತಿದ್ದುಪಡಿ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕೆಎಲ್‌ಆರ್‌ ಕಾಯಿದೆಯ ಸೆಕ್ಷನ್ 95ರ ಉಪ-ವಿಭಾಗ (2)ನ್ನು ತಿದ್ದುಪಡಿ ಮಾಡಲು ಮಸೂದೆಯು ಪ್ರಸ್ತಾಪಿಸುತ್ತದೆ, ಕೃಷಿಭೂಮಿಯ ನಿವಾಸಿಗಳು ಅದನ್ನು ಸಂಪೂರ್ಣವಾಗಿ ಅಥವಾ ಅದರ ಭಾಗವನ್ನು ಬೇರೆ […]

ಭೂ ಪರಿವರ್ತನೆ ಸರಳಗೊಳಿಸುವ ಮಸೂದೆ ಮಂಡನೆ Read More »

21 ನಾಯಕರ ಮೇಲೆ ಇಡಿ ದಾಳಿಗೆ ಸಿದ್ಧತೆ : ಕಾಂಗ್ರೆಸ್‌ ಆರೋಪ

ಕಾಂಗ್ರೆಸ್‌ ಶಾಸಕರನ್ನು ಬೆದರಿಸಿ ಸೆಳೆಯುವ ಪ್ರಯತ್ನ ಎಂಬ ಆರೋಪ ಬೆಂಗಳೂರು : ಕಾಂಗ್ರೆಸ್ ಮುಖಂಡರನ್ನು ಬೆದರಿಸಿ ಸೆಳೆಯಲು ಬಿಜೆಪಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವಾಗಿ ಮಾಡಿಕೊಂಡಿದೆ. ಚುನಾವಣೆ ಸಮೀಪಿಸುವಾಗ 21 ಕಾಂಗ್ರೆಸ್‌ ನಾಯಕ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.ಕಾಂಗ್ರೆಸ್‌ನ 21 ಮುಖಂಡರ ಮೇಲೆ ಇಡಿ ದಾಳಿ ಮಾಡಲು ಸಿದ್ಧತೆ ನಡೆದಿದೆ. ಕರ್ನಾಟಕಕ್ಕೆ 300 ಐಟಿ ಅಧಿಕಾರಿಗಳು ಬಂದಿದ್ದಾರೆ. ಇವರಿಗೆ 1,200 ಆರ್‌ಎಸ್‌ಎಸ್‌ ಕಾರ್ಯಕರ್ತರು

21 ನಾಯಕರ ಮೇಲೆ ಇಡಿ ದಾಳಿಗೆ ಸಿದ್ಧತೆ : ಕಾಂಗ್ರೆಸ್‌ ಆರೋಪ Read More »

ಗ್ರಾ.ಪಂ. ನೌಕರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ | ಸಂಘದ ಪುತ್ತೂರು ತಾಲೂಕು ಪದಾಧಿಕಾರಿಗಳು ಭಾಗಿ

ಪುತ್ತೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ಆರಂಭಿಸಿದ್ದು, ಪುತ್ತೂರು ಸೇರಿದಂತೆ ಕರಾವಳಿಯ ಗ್ರಾಮ ಪಂಚಾಯತ್ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್ನುತ್ತಿರುವಾಗಲೇ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಕಲಾಪ ಸೋಮವಾರದಿಂದ ಆರಂಭವಾಗಿದೆ. ಇದರ ನಡುವೆಯೇ, ಗ್ರಾ. ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘ ಹೋರಾಟವನ್ನು ಕೈಗೆತ್ತಿಕೊಂಡಿದೆ. ಬೆಳಗ್ಗಿನಿಂದಲೇ ವಿವಿಧ ಘೋಷಣೆಗಳನ್ನು ಕೂಗುತ್ತಾ, ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂಬ ಆಗ್ರಹ

ಗ್ರಾ.ಪಂ. ನೌಕರರಿಂದ ಬೆಳಗಾವಿಯಲ್ಲಿ ಪ್ರತಿಭಟನೆ | ಸಂಘದ ಪುತ್ತೂರು ತಾಲೂಕು ಪದಾಧಿಕಾರಿಗಳು ಭಾಗಿ Read More »

ದಯಾಮರಣ ಕೋರಿ ಪೊಲೀಸ್‌ ಸಿಬ್ಬದಿಯಿಂದ ರಾಷ್ಟ್ರಪತಿಗೆ ಪತ್ರ

ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ವಿರುದ್ಧ ಆರೋಪ ಬೆಂಗಳೂರು : ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ವಿರುದ್ಧ ವಿಧಾನಸೌಧದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಮಾನಸಿಕ ಕಿರುಕುಳ ಹಾಗೂ ಆಡಳಿತಾತ್ಮಕ ಹಿಂಸೆಯ ಆರೋಪ ಮಾಡಿ ರಾಷ್ಟ್ರಪತಿಗೆ ದಯಾ ಮರಣ ಕೋರಿ ಅನಾಮಧೇಯ ಪತ್ರ ಬರೆದಿದ್ದಾರೆ. ಇದೀಗ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡಿಸಿಪಿ ಅಶೋಕ ರಾಮಪ್ಪ ಮಾನವೀಯತೆ ಇಲ್ಲದ ಅಧಿಕಾರಿ. ಕೆಳಹಂತದ ಅಧಿಕಾರಿ

ದಯಾಮರಣ ಕೋರಿ ಪೊಲೀಸ್‌ ಸಿಬ್ಬದಿಯಿಂದ ರಾಷ್ಟ್ರಪತಿಗೆ ಪತ್ರ Read More »

ಕುರ್ಕುರೆ ಪೊಟ್ಟಣದಲ್ಲಿ 500 ರೂ. ನೋಟು!

ಮುಗಿಬಿದ್ದು ಖರೀದಿಸಿದ ಜನ ರಾಯಚೂರು: ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ಕುರಕು ತಿಮಡಿ ಕುರ್ಕುರೆಯ ಪೊಟ್ಟಣದಲ್ಲಿ 500 ರೂ. ನೋಟುಗಳು ಸಿಕ್ಕಿರುವ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹುನೂರು ಗ್ರಾಮದ ಒಂದು ಅಂಗಡಿಯಲ್ಲಿ ಮಾರಾಟವಾದ 5 ರೂ. ಬೆಲೆಯ ಕುರ್ಕುರೆ ಪೊಟ್ಟಣಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ದೊರಕಿವೆ! ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ಹಬ್ಬುತ್ತಿದ್ದಂತೆ ಜನ ಮುಗಿಬಿದ್ದು ಕುರ್ಕುರೆ ಪೊಟ್ಟಣಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್

ಕುರ್ಕುರೆ ಪೊಟ್ಟಣದಲ್ಲಿ 500 ರೂ. ನೋಟು! Read More »

310 ಪ್ರಾಂಶುಪಾಲರ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಾಂಶುಪಾಲರು ಗ್ರೇಡ್-1 (ಯು. ಜಿ) 310 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಹಾಕಲು 15-1-2023 ಕೊನೆಯ ದಿನಾಂಕ. ಆಸಕ್ತರು 16-12-2022ರಿಂದ ಅರ್ಜಿ ಸಲ್ಲಿಸಬಹುದು.ಪ್ರಾಧಿಕಾರದ https://cetonline.karnataka.gov.in/kea/ ಲಿಂಕ್ ಉಪಯೋಗಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸುವವರು 55 ವರ್ಷಗಳ ವಯೋಮಿತಿ ಮೀರಿರಬಾರದು.ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ

310 ಪ್ರಾಂಶುಪಾಲರ ನೇಮಕಾತಿಗೆ ಅರ್ಜಿ ಆಹ್ವಾನ Read More »

ಚುನಾವಣೆ ವಿಳಂಬ : ಸರಕಾರಕ್ಕೆ 5 ಲ.ರೂ. ದಂಡ

ಜಿಪಂ, ತಾಪಂ ಚುನಾವಣೆ ವಿಳಂಬಿಸಿದ್ದಕ್ಕೆ ತರಾಟೆ ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕದ ಪಂಚಾಯತ್ ರಾಜ್ ಡಿಲಿಮಿಟೇಷನ್ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.ಮೀಸಲಾತಿ ಹಾಗೂ ಡೀಲಿಮಿಟೇಷನ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಫೆ.1, 2023ರ ವೇಳೆಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಗಡು ವಿಧಿಸಿದೆ. ನ್ಯಾ. ಪ್ರಸನ್ನ ಬಿ. ವರಾಳೆ, ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ

ಚುನಾವಣೆ ವಿಳಂಬ : ಸರಕಾರಕ್ಕೆ 5 ಲ.ರೂ. ದಂಡ Read More »

ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡಿದರೆ 5 ಲ.ರೂ.

ಬಹುಮಾನ ಮೊತ್ತವನ್ನು 20 ಸಾವಿರದಿಂದ 5 ಲಕ್ಷಕ್ಕೇರಿಸಿದ ಸರಕಾರ ಬೆಂಗಳೂರು: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡುವವರಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು 20 ಸಾವಿರದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಗೃಹ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.ರಾಷ್ಟ್ರೀಯ ಭದ್ರತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ, ಮಾದಕ ವಸ್ತು ಹಾಗೂ ಆಯುಧ ಕಳ್ಳಸಾಗಣೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಘೋಷಿತ ಅಪರಾಧಿಗಳ ಬಗ್ಗೆ ಮಾಹಿತಿ ನೀಡಿ ಪೊಲೀಸರಿಗೆ ನೆರವಾಗುವವರಿಗೆ 20

ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡಿದರೆ 5 ಲ.ರೂ. Read More »

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರರ ಟೆಕ್‌ ಪಾರ್ಕ್‌ : ಬಿಜೆಪಿ ತಿರುಗೇಟು

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಬಿಜೆಪಿ ಸಂಚು ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕೆಂಡಾಮಂಡಲ ಬೆಂಗಳೂರು: ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಮಾಡಿಸಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಬಿಜೆಪಿ ಕಿಡಿಕಿಡಿಯಾಗಿದೆ. ಚುನಾವಣೆ ಹೊಸ್ತಿಲಲ್ಲಿ ಉಗ್ರಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿವಕುಅಮರ್‌ ನಡೆ ಒಂದೆಡೆ ಕಾಂಗ್ರೆಸ್‌ಗೂ ಮುಜುಗರವುಂಟು ಮಾಡಿದೆ.ಮತದಾರರ ಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯದ ಬಿಜೆಪಿ ಸರ್ಕಾರ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರರ ಟೆಕ್‌ ಪಾರ್ಕ್‌ : ಬಿಜೆಪಿ ತಿರುಗೇಟು Read More »

ಶಿಗ್ಗಾಂವ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಆಗಲಿದೆ – ಸಿಎಂ ಬೊಮ್ಮಾಯಿ

ಶಿಗ್ಗಾಂವ್ ತಾಲ್ಲೂಕಿನಲ್ಲಿ ಶೀಘ್ರದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ರಾರಂಭವಾಗುತ್ತದೆ. ಬೇರೆ ಬೇರೆ ತಂತ್ರಜ್ಞಾನದಲ್ಲಿ ಆಧುನಿಕ ತರಬೇತಿ ಕೇಂದ್ರಕ್ಕೆ ಮುಂದಿನ ತಿಂಗಳು ಅದಕ್ಕೆ ಅಡಿಗಲ್ಲು ಹಾಕಲಿದ್ದೇನೆ. ಈ ಮೂಲಕ ಶಿಗ್ಗಾಂವ್ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವ ಇಚ್ಛೆ ನನ್ನದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಶಿಗ್ಗಾಂವ್ ನೂತನ ಬಸ್ ಘಟಕ ಮತ್ತು ಚಾಲನಾ ಹಾಗೂ ತಾಂತ್ರಿಕ ತರಬೇತಿ ಕೇಂದ್ರದ ಶಂಕುಸ್ಥಾಪನಾ

ಶಿಗ್ಗಾಂವ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಆಗಲಿದೆ – ಸಿಎಂ ಬೊಮ್ಮಾಯಿ Read More »

error: Content is protected !!
Scroll to Top