ರಾಜ್ಯ

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ!

53 ಐತಿಹಾಸಿಕ ಸ್ಥಳಗಳ ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಬೆಂಗಳೂರು : ರಾಜ್ಯದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳನ್ನೂ ವಕ್ಫ್‌ ಬೋರ್ಡ್‌ ತನ್ನದು ಎಂದು ಘೋಷಿಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ. ವಿಜಯಪುರದ ಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನ್, ಬೀದರ್ ಮತ್ತು ಕಲಬುರಗಿಯ ಕೋಟೆಗಳು ಸೇರಿದಂತೆ ಕರ್ನಾಟಕದಾದ್ಯಂತ ಕನಿಷ್ಠ 53 ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಮಂಡಳಿ ತನ್ನದು ಎಂದು ಪ್ರತಿಪಾದಿಸುತ್ತಿದೆ. ಇವುಗಳಲ್ಲಿ ಆದಿಲ್ ಶಾಹಿಗಳ ಹಿಂದಿನ ರಾಜಧಾನಿ ವಿಜಯಪುರದಲ್ಲಿರುವ 43 ಆಸ್ತಿಗಳನ್ನು 2005ರಲ್ಲೇ ವಕ್ಫ್ ಬೋರ್ಡ್ […]

ಗೋಲ್‌ ಗುಂಬಜ್‌ ಸಹಿತ ಐತಿಹಾಸಿಕ ಸ್ಮಾರಕಗಳೂ ವಕ್ಫ್‌ ಆಸ್ತಿ! Read More »

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ

ಕೊನೇ ಕ್ಷಣದಲ್ಲಿ ನೀವು ಅವರಲ್ಲ ಕ್ಷಮಿಸಿ ಎಂದು ಹೇಳಿ ವಾಪಸು ಕಳುಹಿಸಿದ ಅಧಿಕಾರಿಗಳು ಮಂಗಳೂರು: ಮಂಗಳೂರಿನ ಸಮಾಜ ಸೇವಕರೊಬ್ಬರನ್ನು ಪ್ರಶಸ್ತಿ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿ ಕೊನೇ ಕ್ಷಣದಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಹೇಳಿ ಸರಕಾರ ಘೋರ ಅವಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕ ಸಮಾಜ ಸೇವಕ ಬಾಬು ಪಿಲಾರ್ ಎಂಬವರನ್ನು ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು

ಮಂಗಳೂರಿನ ಸಮಾಜ ಸೇವಕನನ್ನು ಬೆಂಗಳೂರು ತನಕ ಕರೆಸಿಕೊಂಡು ಪ್ರಶಸ್ತಿ ನೀಡದೆ ಅವಮಾನಿಸಿದ ಸರಕಾರ Read More »

ನ.17ರಿಂದ ಕಂಬಳ ಋತು ಆರಂಭ

ಪಿಲಿಕುಳದಲ್ಲಿ ಹಲವು ವರ್ಷಗಳ ಬಳಿಕ ಮೊದಲ ಕಂಬಳ ಮಂಗಳೂರು: ಈ ಕಂಬಳ ಋತುವಿನ ಮೊದಲ ಕಂಬಳ ನ.17ರಂದು ಪಿಲಿಕುಳದಲ್ಲಿ ನಡೆಯಲಿದೆ. ಹಿಂದೆ ಪಿಲಿಕುಳದಲ್ಲಿ ಕಂಬಳ ನಡೆಯುತ್ತಿದ್ದರೂ ನಿಂತುಹೋಗಿ ಬಹಳ ವರ್ಷಗಳಾಗಿತ್ತು. ಹೀಗಾಗಿ ಕಂಬಳ ಋತುವನ್ನು ಪಿಲಿಕುಳದಿಂದ ಪ್ರಾರಂಭಿಸಲು ಕಂಬಳ ಸಮಿತಿ ತೀರ್ಮಾನಿಸಿದೆ. ಈ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಒಂದೆರಡು ಕಡೆ ಸಾಂಪ್ರದಾಯಿಕವಾಗಿ ಜೂನಿಯರ್‌ ಮತ್ತು ಸಬ್‌ಜೂನಿಯರ್‌ ಕಂಬಳಗಳು ನಡೆದಿವೆ. ಇವುಗಳಲ್ಲಿ ಸೀಮಿತ ಸಂಖ್ಯೆಯ ಕೋಣಗಳಷ್ಟೇ ಭಾಗವಹಿಸಿವೆ. ಇದೇ ಮಾದರಿಯ ಇನ್ನೊಂದು

ನ.17ರಿಂದ ಕಂಬಳ ಋತು ಆರಂಭ Read More »

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌

ಒಂದು ವರ್ಷದ ಹಿಂದೆ ಪಹಣಿ ತಿದ್ದುಪಡಿ ಮಾಡಿರುವ ಅನುಮಾನ ಮಂಡ್ಯ : ವಕ್ಫ್ ನೋಟಿಸ್‌ಗಳಿಂದ ರೈತರು ಮತ್ತು ಮಠಗಳು ಕಂಗಾಲಾಗಿರುವ ಹೊತ್ತಲ್ಲೇ ಪುರಾತನ ದೇವಸ್ಥಾನದ ಆಸ್ತಿಯನ್ನೂ ವಕ್ಫ್‌ ಮಂಡಳಿಗೆ ಸೇರಿಸಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಪುರಾತನ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ. ರಾಜ್ಯದಾದ್ಯಂತ ವಕ್ಫ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌ Read More »

ತುಳು ಭಾಷೆಗೆ ಇನ್ನೊಂದು ಗರಿ : ತುಳು ವಿಕ್ಷನರಿ, ತುಳು ವಿಕಿಸೋರ್ಸ್‌ ಲೈವ್‌

ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುವಂತೆ ಡಿಜಿಟಲ್‌ ಆವಿಷ್ಕಾರ ಮಂಗಳೂರು: ತುಳು ಲಿಪಿಗೆ ಯುನಿಕೋಡ್‌ ಮಾನ್ಯತೆ ಸಿಕ್ಕಿದ ಬೆನ್ನಿಗೆ ಈಗ ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್‌ ಲೈವ್‌ ಆಗಿದೆ. ತುಳು ಭಾಷೆಯ ಬೆಳವಣಿಗೆಯ ಉದ್ದೇಶದಿಂದ ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ. ವಿಕಿಮೀಡಿಯಾ ಫೌಂಡೇಶನ್ ನಿರ್ವಹಿಸುವ ಅಂತರಜಾಲ ನಿಘಂಟು ತುಳು ವಿಕ್ಷನರಿ. ಬಳಕೆದಾರರು ತುಳು ವಿಕ್ಷನರಿಯಲ್ಲಿ ಮಾಹಿತಿ ಹುಡುಕಬಹುದು, ಸಂಪಾದಿಸಬಹುದು ಮತ್ತು ಕೊಡುಗೆ ನೀಡಬಹುದು. ಈ ವಿಕ್ಷನರಿ ಕರಾವಳಿ ವಿಕಿಮೀಡಿಯನ್ನರು ಮತ್ತು ತುಳು ವಿಕಿಮೀಡಿಯನ್ನರ

ತುಳು ಭಾಷೆಗೆ ಇನ್ನೊಂದು ಗರಿ : ತುಳು ವಿಕ್ಷನರಿ, ತುಳು ವಿಕಿಸೋರ್ಸ್‌ ಲೈವ್‌ Read More »

ವಕ್ಫ್‌ ಕೋಲಾಹಲ : ನ.4ರಂದು ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ

ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಕಿತ್ತೊಗೆಯಲು ಆಗ್ರಹ ಬೆಂಗಳೂರು: ವಕ್ಫ್ ಮಂಡಳಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿರುವುದನ್ನು ಪ್ರತಿಭಟಿಸಿ ಮತ್ತು ವಕ್ಫ್‌ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನ.4ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಪ್ರತಿಭಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಲೋಕಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಪತ್ರ ಬರೆದಿದ್ದು, ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ವಕ್ಫ್‌ ಕೋಲಾಹಲ : ನ.4ರಂದು ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ Read More »

ವಕ್ಫ್‌ ನೋಟಿಸ್‌ ಭೀತಿ : ಹಾವೇರಿಯಲ್ಲಿ ಮನೆಗಳಿಗೆ ಕಲ್ಲು ತೂರಾಟ

ಐವರಿಗೆ ಗಾಯ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ ಹಾವೇರಿ: ವಿಜಯಪುರ, ಕಲಬುರಗಿ, ಮಂಡ್ಯ ಬಳಿಕ ಹಾವೇರಿ ಜಿಲ್ಲೆಯಲ್ಲೂ ರೈತರಿಗೆ ವಕ್ಫ್ ಬೋರ್ಡ್​ ನೋಟಿಸ್ ಬರಲಾರಂಭಿಸಿದ್ದು, ಇದನ್ನು ಪ್ರತಿಭಟಿಸಿ ನಿನ್ನೆ ರಾತ್ರಿ ಮುಸ್ಲಿಮ್‌ ಮುಖಂಡರ ಮನೆಗೆ ಕಲ್ಲು ತೂರಾಟ ಮಾಡಲಾಗಿದೆ. ಬುಧವಾರ ರಾತ್ರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್​ ಬೋರ್ಡ್​​ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವಾಸವಿದ್ದ ಮನೆಗಳನ್ನು ಖಾಲಿ‌ ಮಾಡಿಸಬಹುದು ಎಂಬ ಭೀತಿಯಿಂದ ಜನರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ‌

ವಕ್ಫ್‌ ನೋಟಿಸ್‌ ಭೀತಿ : ಹಾವೇರಿಯಲ್ಲಿ ಮನೆಗಳಿಗೆ ಕಲ್ಲು ತೂರಾಟ Read More »

ರದ್ದಾಗಲಿದೆಯೇ ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ?

ಉಪಮುಖ್ಯಮಂತ್ರಿ ಡಿಕೆಶಿ ಹೇಳಿಕೆಯಲ್ಲಿದೆ ಶಕ್ತಿ ಯೋಜನೆ ರದ್ದಾಗುವ ಸುಳಿವು ಬೆಂಗಳೂರು : ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸರಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಶಕ್ತಿ ಯೋಜನೆ ರದ್ದಾಗುವ ಕುರಿತು ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸುಳಿವು ನೀಡಿದ್ದಾರೆ. ಶಕ್ತಿ ಯೋಜನೆ ಮುಂದುವರಿಸುವ ವಿಚಾರವಾಗಿ ಮರುಪರಿಶೀಲನೆ ನಡೆಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ನಿನ್ನೆ ಹೇಳಿದ ಬಳಿಕ ಈ ಯೋಜನೆ ರದ್ದಾಗಲಿದೆಯೇ

ರದ್ದಾಗಲಿದೆಯೇ ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ? Read More »

ಉಪಚುನಾವಣೆಯಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಪ್ರಮಾಣವಚನ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರು ಪರಿಷತ್‌ನ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಸಭಾಪತಿ ಕೊಠಡಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕರಾದ ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ

ಉಪಚುನಾವಣೆಯಲ್ಲಿ ವಿಧಾನಪರಿಷತ್ ಗೆ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಪ್ರಮಾಣವಚನ ಸ್ವೀಕಾರ Read More »

ನಟ ದರ್ಶನ್‌ಗೆ ಕೊನೆಗೂ ಸಿಕ್ಕಿತು ಜಾಮೀನು

ಬೆನ್ನುನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಆರು ವಾರ ಬಿಡುಗಡೆ ಭಾಗ್ಯ ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಬಹಳಷ್ಟು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲರಾದ

ನಟ ದರ್ಶನ್‌ಗೆ ಕೊನೆಗೂ ಸಿಕ್ಕಿತು ಜಾಮೀನು Read More »

error: Content is protected !!
Scroll to Top