ರಾಜ್ಯ

ಪಕ್ಷಗಳ ಉಚಿತ ಕೊಡುಗೆಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು

ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳು ಮತದಾರರನ್ನು ಮರಳು ಮಾಡಲು ನೀಡುತ್ತಿರುವ ಉಚಿತ ಕೊಡುಗೆಗಳ ಭರವಸೆಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ನಿಯಮಗಳಂತೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆಗಳ ಕುರಿತು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನೇತೃತ್ವದಲ್ಲಿ ಬುಧವಾರ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯ ಮಟ್ಟದ […]

ಪಕ್ಷಗಳ ಉಚಿತ ಕೊಡುಗೆಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು Read More »

ಪ್ರಚಾರದ ಕೊರತೆಯಿಂದ ಕಾಂತಾರಕ್ಕೆ ಓಸ್ಕರ್‌ ಮಿಸ್‌

ಕಾಂತಾರ-2 ಓಸ್ಕರ್‌ಗೆ ಸ್ಪರ್ಧಿಸುವ ನಿರೀಕ್ಷೆ ಬೆಂಗಳೂರು : ಯಶಸ್ವಿ ಸಿನೆಮಾ ಕಾಂತಾರ ಈ ಸಲ ಪ್ರತಿಷ್ಠಿತ ಓಸ್ಕರ್‌ ಪ್ರಶಸ್ತೆಗೆ ನಾಮಿನೇಟ್‌ ಆಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಆಯಕೆ ಸುತ್ತಿನಲ್ಲಿ ಚಿತ್ರ ಹೊರಬಿದ್ದು ಕನ್ನಡಿಗರು ಬಹಳಷ್ಟು ನಿರಾಶೆ ಅನುಭವಿಸಿದ್ದಾರೆ. ಕಾಂತಾರ ಓಸ್ಕರ್‌ ಸ್ಪರ್ಧೆಯಿಂದ ಹೊರಬೀಳಲು ಕಾರಣ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಿಯಾದ ಪ್ರಚಾರ ಸಿಗದಿರುವುದು ಎಂದು ಅಭಿಪ್ರಾಯಪಟ್ಟಿದ್ದಾರೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್. ಕಾಂತಾರ ಸಿನಿಮಾ ಸೆಪ್ಟೆಂಬರ್‌ ಕೊನೆಗೆ ಬಿಡುಗಡೆ ಆಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಾರ್ಡ್ಸ್ ನಾಮಿನೇಷನ್‌

ಪ್ರಚಾರದ ಕೊರತೆಯಿಂದ ಕಾಂತಾರಕ್ಕೆ ಓಸ್ಕರ್‌ ಮಿಸ್‌ Read More »

ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಕೊಡದ ಸರಕಾರಕ್ಕೆ ಹೈಕೋರ್ಟ್‌ ಛೀಮಾರಿ

ಉತ್ಸವಗಳನ್ನು ನಡೆಸಲು ದುಡ್ಡಿದೆ, ಮಕ್ಕಳಿಗೆ ಸಮವಸ್ತ್ರ ಕೊಡಲು ಬರಗಾಲವೇ ಎಂದು ಪ್ರಶ್ನೆ ಬೆಂಗಳೂರು: ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ತೀಕ್ಷ್ಣವಾಗಿ ತರಾಟೆಗೆಗ ತೆಗೆದುಕೊಂಡಿದೆ. ಸರ್ಕಾರಕ್ಕೆ ಉತ್ಸವಗಳನ್ನು ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಮನಸ್ಸಿದೆ. ಆದರೆ, ಮಕ್ಕಳ ಹಕ್ಕು, ಶಿಕ್ಷಣಗಳ ವಿಚಾರದಲ್ಲಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಮಾತ್ರ ಆಗುತ್ತಿಲ್ಲ. ಅಧಿಕಾರಿಗಳಿಗಂತೂ ಮಾನ ಮರ್ಯಾದೆ,

ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಕೊಡದ ಸರಕಾರಕ್ಕೆ ಹೈಕೋರ್ಟ್‌ ಛೀಮಾರಿ Read More »

15 ಸಾವಿರ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ರದ್ದು

ಹೊಸ ಆಯ್ಕೆ ಪಟ್ಟಿ ರಚಿಸಲು ಸರಕಾರಕ್ಕೆ ಹೈಕೋರ್ಟ್‌ ಆದೇಶ ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಕೋರಿ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು, ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿ ಶಿಕ್ಷಕರಾಗುವ ಕನಸು ಕಾಣುತ್ತಿದ್ದವರಿಗೆ ಹೈಕೋರ್ಟ್ ಶಾಕ್ ನೀಡಿದೆ.ಅಭ್ಯರ್ಥಿಗಳ ಆಯ್ಕೆ

15 ಸಾವಿರ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ರದ್ದು Read More »

ಕವಿ, ವಿಮರ್ಶಕ ಕೆ. ವಿ. ತಿರುಮಲೇಶ್‌ ಇನ್ನಿಲ್ಲ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬೆಂಗಳೂರು : ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್‌ (82) ಇನ್ನಿಲ್ಲ. ಇಂದು ಮುಂಜಾನೆ ಹೈದರಾಬಾದಿನ ಮಗಳ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಹೃದಯ ಕಾಯಿಲೆ ಹೊಂದಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ನಿನ್ನೆ ಡಿಸ್‌ಚಾರ್ಜ್‌ ಆಗಿ ಮನೆಗೆ ಬಂದಿದ್ದರು. ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ಕೆ.ವಿ. ತಿರುಮಲೇಶ್

ಕವಿ, ವಿಮರ್ಶಕ ಕೆ. ವಿ. ತಿರುಮಲೇಶ್‌ ಇನ್ನಿಲ್ಲ Read More »

ಪುತ್ತೂರು:  ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದೆ

ಪುತ್ತೂರು:  ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದೆ, ಹುದ್ದೆ :-ಕ್ಲಸ್ಟರ್ ಮ್ಯಾನೇಜರ್ ವಿದ್ಯಾಭ್ಯಾಸ :- ಯಾವುದೇ ಡಿಗ್ರಿ ಮತ್ತು 3 -4 year of experience Home loan or loan against property in an NBFC/Bank/HFC  . ಸ್ಥಳ :-ಬೆಂಗಳೂರು,ತುಮಕೂರು, ಹುಬ್ಬಳ್ಳಿ, ಬೆಳಗಾವಿ ಈ ಕೆಳಗಿನ ವಿಳಾಸಕ್ಕೆ ನಿಮ್ಮ Biodata ಕಳುಹಿಸಿ : Email ID :[email protected] Whatsapp and Call:8904877721, 7204977721

ಪುತ್ತೂರು:  ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದೆ Read More »

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾವಳಿಗೆ ಭರಪೂರ ಕೊಡುಗೆಯ ಭರವಸೆ

ಕರಾವಳಿಗೆ ಪ್ರತ್ಯೇಕ ಪ್ರಣಾಳಿಯನ್ನೇ ಘೋಷಿಸಿದ ಕೈ ಪಕ್ಷ ಮಂಗಳೂರು: ಕರಾವಳಿಯ ಬಿಜೆಪಿ ಭದ್ರಕೋಟೆಗೆ ನುಗ್ಗಬೇಕೆಂದು ಸಂಕಲ್ಪಸಿರುವ ಕಾಂಗ್ರೆಸ್‌ ಕರಾವಳಿ ಭಾಗಕ್ಕಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಿಸಿದೆ. ಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿರುವ ಕಾಂಗ್ರೆಸ್‌ ಪ್ರತ್ಯೇಕ ಪ್ರಣಾಲಿಕೆಯನ್ನು ಪ್ರಕಟಿಸಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಘೋಷಿಸಿದ್ದಾರೆ. ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಇಂತಿವೆ:*ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮೂಲಕ ತಾಯಂದಿರು ಮತ್ತು ಮಹಿಳೆಯರಿಗೆ ಉದ್ಯೋಗ*ಮೀನುಗಾರರಿಗೆ 10

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾವಳಿಗೆ ಭರಪೂರ ಕೊಡುಗೆಯ ಭರವಸೆ Read More »

ಮುರುಡೇಶ್ವರ- ಬೆಂಗಳೂರು ರೈಲು ಮೇ ತನಕ ವಿಸ್ತರಣೆ

ಮೂರು ಜಿಲ್ಲೆಗಳ ಜನರಿಗೆ ಅನುಕೂಲ ಮಂಗಳೂರು: ಪ್ರಯಾಣಿಕರ ಬೇಡಿಕೆಗೆ ಮಣಿದು ರೈಲ್ವೆ ಇಲಾಖೆ ಮುರುಡೇಶ್ವರ- ಬೆಂಗಳೂರು ರೈಲು ಸೇವೆಯನ್ನು 2023ರ ಮೇ ತಿಂಗಳ ಕೊನೆಯ ತನಕ ವಿಸ್ತರಿಸಿ ಆದೇಶ ಹೊರಡಿಸಿದೆ. ಚಳಿಗಾಲದ ಅವಧಿಗಾಗಿ ಜನವರಿ ಅಂತ್ಯದ ತನಕ ಮಾತ್ರ ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಲಾಗಿತ್ತು.ಆದರೆ ಈ ರೈಲು ಜನರಿಗೆ ಬಹಳ ಅನುಕೂಲಕರವಾಗಿರುವುದರಿಂದ ವಿಸ್ತರಿಸಲು ಒತ್ತಾಯವಿತ್ತು. ಕರಾವಳಿ ಜನರಿಗೆ ಬೆಂಗಳೂರಿಗೆ ಹೋಗಿ ಬರಲು ಈ ರೈಲು ಅನುಕೂಲಕರವಾಗಿದೆ. ಮೂರು ಜಿಲ್ಲೆಗಳ ಜನರು

ಮುರುಡೇಶ್ವರ- ಬೆಂಗಳೂರು ರೈಲು ಮೇ ತನಕ ವಿಸ್ತರಣೆ Read More »

 ವೈಭವಕ್ಕೆ ಸಾಕ್ಷಿಯಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ, ಗುರುವಂದನೆ, ತುಲಾಭಾರ, ಗ್ರಂಥ ಬಿಡುಗಡೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ, ತುಲಾಭಾರ ಸಮಾರಂಭ ವೈಭವದಿಂದ ಜರಗಿತು. ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಯತಿವರೇಣ್ಯರ ಉಪಸ್ಥಿತಿಯಲ್ಲಿ ನಡೆದ ಸಮಾರಂಭಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು. ರಾಜಕೀಯ ನಾಯಕರ ಸಹಿತ, ಅನೇಕ ಗಣ್ಯರು ಆಗಮಿಸಿ ಗುರುಗಳ ಆಶೀರ್ವಾದ ಸ್ವೀಕರಿಸಿದರು. ಬೆಳಿಗ್ಗೆ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ದರ್ಬೆಯಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀಗಳ ಉಪಸ್ಥಿತಿಯಲ್ಲಿ ಗಣ್ಯರು ಚೆಂಡೆ,

 ವೈಭವಕ್ಕೆ ಸಾಕ್ಷಿಯಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ, ಗುರುವಂದನೆ, ತುಲಾಭಾರ, ಗ್ರಂಥ ಬಿಡುಗಡೆ Read More »

ಮಕ್ಕಳಿಗೆ ಕಾಂಡೋಮ್‌ ಮಾರಿದರೆ ಕಾನೂನು ಕ್ರಮ

ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ ಬೆಂಗಳೂರು : ಶಾಲಾ ಮಕ್ಕಳ ಬ್ಯಾಗುಗಳಲ್ಲಿ ಕೆಲ ಸಮಯದ ಹಿಂದೆ ಕಾಂಡೋಮ್‌, ಗರ್ಭ ನಿರೋಧಕ ಗುಳಿಗೆಯಂಥ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೆಡಿಕಲ್‌ ಶಾಪ್‌ಗಳು ಮಕ್ಕಳಿಗೆ ಕಾಂಡೋಮ್‌ ಮತ್ತು ಗರ್ಭ ನಿರೋಧಕಗಳನ್ನು ಮಾರುವುದಿಲ್ಲ ಎಂಬ ಫಲಕ ಹಾಕಲು ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.ಕಾಂಡೋಮ್‌ ಮತ್ತು ಗರ್ಭನಿರೋಧಕ ಮಾತ್ರೆ ಕುರಿತು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಮಟ್ಟದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ರಾಜ್ಯ ಔಷಧ

ಮಕ್ಕಳಿಗೆ ಕಾಂಡೋಮ್‌ ಮಾರಿದರೆ ಕಾನೂನು ಕ್ರಮ Read More »

error: Content is protected !!
Scroll to Top