ರಾಜ್ಯ

ದಿವಾಳಿ ಮಾಡೆಲ್‌ ಆಫ್‌ ಕರ್ನಾಟಕ : ಚಾರ್ಜ್‌ಶೀಟ್‌ ಬಿಡುಗಡೆಗೊಳಿಸಿ ಬಿಜೆಪಿ ಟೀಕೆ

ಜನರು ತೆರಿಗೆ ಭಾರ ಹೊತ್ತಿರುವಾಗ ಕಾಂಗ್ರೆಸ್‌ ಸಾಧನಾ ಸಮಾವೇಶ ಎಂದು ಟೀಕೆ ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ‘ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ’ ಎಂಬ ಶೀರ್ಷಿಕೆಯಡಿ ಎಂಟು ಪುಟಗಳ ಆರೋಪ ಪಟ್ಟಿ ಬಿಡುಗಡೆ ಮಾಡಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಾಸಕರಾದ ಕೆ.ಗೋಪಾಲಯ್ಯ, ಎಸ್‌.ರಘು, ಸಿ.ಕೆ.ರಾಮಮೂರ್ತಿ, ಮುಖಂಡರಾದ ಎಸ್‌.ಹರೀಶ್‌, ಮಾಳವಿಕಾ ಅವಿನಾಶ್‌, ಸಪ್ತಗಿರಿಗೌಡ ಅವರು ಜಂಟಿಯಾಗಿ ಆರೋಪಪಟ್ಟಿ […]

ದಿವಾಳಿ ಮಾಡೆಲ್‌ ಆಫ್‌ ಕರ್ನಾಟಕ : ಚಾರ್ಜ್‌ಶೀಟ್‌ ಬಿಡುಗಡೆಗೊಳಿಸಿ ಬಿಜೆಪಿ ಟೀಕೆ Read More »

ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರಕಾರದ ನಿರ್ಧಾರ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು: ರಾಜ್ಯ ಸರಕಾರದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಖಂಡನೀಯವಾಗಿದ್ದು, ದಿನೇಶ್ ಗುಂಡೂರಾವ್ ಅವರ ಹೇಳಿಕೆ ದುರದೃಷ್ಟಕರ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಂದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು,  ಜನೌಷಧಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಜಾಪ್ರಭುತ್ವ ಯೋಜನೆಯಾಗಿದ್ದು, ಲಕ್ಷಾಂತರ ಬಡ ಜನರಿಗೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಒದಗಿಸುತ್ತಿತ್ತು. ಎಷ್ಟೋ

ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರಕಾರದ ನಿರ್ಧಾರ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು Read More »

ಗೃಹ ಸಚಿವ ಪರಮೇಶ್ವರ್‌ಗೆ ಬೆಳ್ಳಂಬೆಳಗ್ಗೆ ಇ.ಡಿ.ಶಾಕ್‌ : ಮೆಡಿಕಲ್‌ ಕಾಲೇಜಿಗೆ ದಾಳಿ

ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸಿಗೆ ಸಂಬಂಧ ಇದೆ ಎಂಬ ಗುಸುಗುಸು ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್‌ ಒಡೆತನದ ಸಂಸ್ಥೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಇ.ಡಿ ದಾಳಿ ನಡೆಸಿದೆ. ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್, ಇಂಜಿನಿಯರಿಂಗ್‌ ಕಾಲೇಜು ಅಲ್ಲದೆ ನೆಲಮಂಗಲದ ಟಿ ಬೇಗೂರು ಬಳಿ ಇರುವ ಕಾಲೇಜು ಮೇಲೂ ಇಡಿ ದಾಳಿ ನಡೆದಿದೆ. 9 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕನ್ನಡ ನಟಿ ರನ್ಯಾ ರಾವ್‌ ಒಳಗೊಂಡಿರುವ ಗೋಲ್ಡ್‌ ಸ್ಮಗ್ಲಿಂಗ್‌ ಕೇಸಿಗೆ

ಗೃಹ ಸಚಿವ ಪರಮೇಶ್ವರ್‌ಗೆ ಬೆಳ್ಳಂಬೆಳಗ್ಗೆ ಇ.ಡಿ.ಶಾಕ್‌ : ಮೆಡಿಕಲ್‌ ಕಾಲೇಜಿಗೆ ದಾಳಿ Read More »

ಕೆಟ್ಟ ರಸ್ತೆಗಳಿಂದ ಬೆನ್ನು ನೋವು : 50 ಲ.ರೂ. ಪರಿಹಾರ ಕೋರಿ ಪಾಲಿಕೆಗೆ ನೋಟಿಸ್‌

ಮೂಲಸೌಕರ್ಯ ಒದಗಿಸಲು ವಿಫಲವಾಗಿರುವ ಬಿಬಿಎಂಪಿ ಅನಾರೋಗ್ಯಕ್ಕೆ ಹೊಣೆ ಎಂದ ತೆರಿಗೆದಾರ ಬೆಂಗಳೂರು: ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳಿಂದ ನಿರಂತರ ದೈಹಿಕ ಯಾತನೆ ಅನುಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತೆರಿಗೆದಾರರೊಬ್ಬರು 50 ಲಕ್ಷ ರೂ. ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ. ರಿಚ್ಮಂಡ್ ಟೌನ್ ನಿವಾಸಿಯಾಗಿರುವ ದಿವ್ಯಕಿರಣ್ ಎಂಬವರು ಕಳುಹಿಸಿದ ನೋಟಿಸ್‌ನಲ್ಲಿ, ನಾನು ತೆರಿಗೆ ಪಾವತಿಸುವ ನಾಗರಿಕನಾಗಿದ್ದೇನೆ. ಆದರೆ ಬಿಬಿಎಂಪಿ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಇದರಿಂದ ನಾನು ದೈಹಿಕ ಮತ್ತು ಮಾನಸಿಕ ಯಾತನೆಯನ್ನು ನಿರಂತರವಾಗಿ ಎದುರಿಸುತ್ತಿದ್ದೇನೆ. ಕೆಟ್ಟ ರಸ್ತೆಯಿಂದ

ಕೆಟ್ಟ ರಸ್ತೆಗಳಿಂದ ಬೆನ್ನು ನೋವು : 50 ಲ.ರೂ. ಪರಿಹಾರ ಕೋರಿ ಪಾಲಿಕೆಗೆ ನೋಟಿಸ್‌ Read More »

ಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಡಾವಣೆಗಳು ಜಲಾವೃತ : 4 ಮಂದಿ ಸಾವು

ರಾಜಧಾನಿಯಲ್ಲಿ ಅವಾಂತರಗಳ ಸರಮಾಲೆ ಸೃಷ್ಟಿಸಿದ ಮಳೆ ಬೆಂಗಳೂರು : ಬೆಂಗಳೂರಿನಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ಚುರುಕಾಗಿರುವ ಮಳೆ ಗುಡುಗು, ಮಿಂಚು ಸಹಿತ ಸುರಿಯುತ್ತಿದೆ. ಮೊನ್ನೆ ಸುರಿದ ಮಳೆಯ ಅವಾಂತರ, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಾಗಲೇ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಬರೋಬ್ಬರಿ 135 ಮಿಲಿ ಮೀಟರ್ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ನಗರಾದ್ಯಂತ ಇಂದು ಬೆಳಗ್ಗೆ ಸುರಿದ ಮಳೆ ವಿವರ ಹೀಗಿದೆ: ಬೆಂಗಳೂರಿನಲ್ಲಿ ರಾಜರಾಜೇಶ್ವರಿ

ಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಡಾವಣೆಗಳು ಜಲಾವೃತ : 4 ಮಂದಿ ಸಾವು Read More »

ಕರಾವಳಿಯಲ್ಲಿ ಬೇಸಿಗೆಯಲ್ಲೇ ಮಳೆಗಾಲದ ಪರಿಸ್ಥಿತಿ: ಎಲ್ಲೆಡೆ ಧಾರಾಕಾರ ಮಳೆ

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ನಿನ್ನೆಯಿಂದೀಚೆಗೆ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಹಲವೆಡೆ ನೀರು ಜಮೆಯಾಗಿ ಜನರು ಸಮಕಷ್ಟಕ್ಕೀಡಾದರು. ಮೇ 20ರಿಂದ 22ರ ತನಕ ಅತಿಹೆಚ್ಚು ಮಳೆಯಾಗುವ ಮುನ್ಸೂಚನೆ ಹಿನ್ನಲೆ ಭಾರತ

ಕರಾವಳಿಯಲ್ಲಿ ಬೇಸಿಗೆಯಲ್ಲೇ ಮಳೆಗಾಲದ ಪರಿಸ್ಥಿತಿ: ಎಲ್ಲೆಡೆ ಧಾರಾಕಾರ ಮಳೆ Read More »

ಕನ್ನಡಿಗರನ್ನು ಅವಮಾನಿಸಿದ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವ ಸಂದೇಶ ಪ್ರಕಟ ಬೆಂಗಳೂರು: ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಹೇಳಿಕೆ ಪ್ರಕಟಿಸಿದ ಬೆಂಗಳೂರಿನ ಕೋರಮಂಗಲದ ಜಿ.ಎಸ್​.ಸೂಟ್​ ಹೋಟೆಲ್‌ನ ಮ್ಯಾನೇಜರ್ ಸರ್ಫಜ್​​ ಎಂಬಾತನನ್ನು ಬಂಧಿಸಲಾಗಿದ್ದು, ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ. ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ನಗರದ ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿರುವ ಈ ಹೋಟೆಲ್‌ನಲ್ಲಿ ನಿನ್ನೆ ಕನ್ನಡಿಗರಿಗೆ ಅಪಮಾನ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಮ್ಮ‌ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ.‌ ಪದೇಪದೇ ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ ಎಂದು

ಕನ್ನಡಿಗರನ್ನು ಅವಮಾನಿಸಿದ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ Read More »

ಧರ್ಮಸ್ಥಳದ ಏರೋಸ್ಪೇಸ್‌ ಉದ್ಯೋಗಿ ಪಂಜಾಬಿನಲ್ಲಿ ನಿಗೂಢ ಸಾವು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಯುವತಿ ಪಂಜಾಬಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೇ 17ರಂದು ನಡೆದಿದೆ. ಮೃತ ಯುವತಿಯನ್ನು ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ಎಂದು ಗುರುತಿಸಲಾಗಿದೆ.ಪಂಜಾಬಿನ ಎಲ್‌ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಮುಂದೆ ಜಪಾನ್‌ಗೆ ಉದ್ಯೋಗಕ್ಕೆ ಹೋಗುವವರಿದ್ದು ಪಂಜಾಬ್ ಎಲ್‌ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ತೆರಳಿದ್ದರು. ಸರ್ಟಿಫಿಕೆಟ್

ಧರ್ಮಸ್ಥಳದ ಏರೋಸ್ಪೇಸ್‌ ಉದ್ಯೋಗಿ ಪಂಜಾಬಿನಲ್ಲಿ ನಿಗೂಢ ಸಾವು Read More »

ಮದ್ಯ ಪರವಾನಗಿ ಶುಲ್ಕ ಇಮ್ಮಡಿಗೊಳಿಸಲು ಚಿಂತನೆ

ಮದ್ಯಪ್ರಿಯರಿಗೆ ಇನ್ನೊಂದು ಬರೆ ಎಳೆಯಲು ಮುಂದಾದ ಸರಕಾರ ಬೆಂಗಳೂರು: ಕಳೆದ ಎರಡು ವರ್ಷದ ಅಧಿಕಾರಾವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆಯನ್ನು ಹೆಚ್ಚಿಸಿದ ಕಾಂಗ್ರೆಸ್‌ ಸರ್ಕಾರ ಈಗ ಡಿಸ್ಟಿಲರಿಗಳು, ಬ್ರೂವರೀಸ್, ಮದ್ಯದ ಅಂಗಡಿಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮತ್ತು ಮದ್ಯ ಪೂರೈಸುವ ಕ್ಲಬ್‌ಗಳ ವಾರ್ಷಿಕ ಪರವಾನಗಿ ನವೀಕರಣ ಶುಲ್ಕವನ್ನು ಶೇಕಡ 100ರಷ್ಟು ಹೆಚ್ಚಿಸಲು ಮುಂದಾಗಿದೆ. ಪ್ರಸ್ತುತ ವಾರ್ಷಿಕ ಶುಲ್ಕದ ಮೂಲಕ ರೂ. 700 ಕೋಟಿ ಸಂಗ್ರಹಿಸುತ್ತಿರುವ ಸರ್ಕಾರ ಸುಮಾರು 12,000 ವಿವಿಧ ರೀತಿಯ ಪರವಾನಗಿಗಳಿಂದ ರೂ.1,400 ಕೋಟಿ ಸಂಗ್ರಹಿಸಲಿದೆ.

ಮದ್ಯ ಪರವಾನಗಿ ಶುಲ್ಕ ಇಮ್ಮಡಿಗೊಳಿಸಲು ಚಿಂತನೆ Read More »

ಆಪರೇಷನ್ ಸಿಂದೂರ ಬೂಟಾಟಿಕೆ ಎಂದ ಕಾಂಗ್ರೆಸ್‌ ಶಾಸಕನ ವಿರುದ್ಧ ದೂರು

ಸಿದ್ದರಾಮಯ್ಯ ಮಾದರಿಯಲ್ಲಿ ಪಾಕಿಸ್ಥಾನದ ಮಾಧ್ಯಮಗಳಲ್ಲಿ ಸ್ಟಾರ್ ಆಗಲು ಉತ್ಸುಕ ಎಂದು ಟೀಕೆ ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಬೂಟಾಟಿಕೆ ಎಂದ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ಶಾಸಕನ ವಿರುದ್ಧ ದೂರು ಸಲ್ಲಿಸಿದ್ದಾರೆ. ಕೋಲಾರ ಎಸ್ಪಿ ಬಿ ನಿಖಿಲ್ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆಪರೇಷನ್ ಸಿಂದೂರ ಬೂಟಾಟಿಕೆ ಎಂದ ಕಾಂಗ್ರೆಸ್‌ ಶಾಸಕನ ವಿರುದ್ಧ ದೂರು Read More »

error: Content is protected !!
Scroll to Top