ಧಾರ್ಮಿಕ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಬೈಲುವಾರು ಸಭೆ

ಪುತ್ತೂರು : ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಬೈಲುವಾರು ಸಭೆ ಗುರುವಾರ ಸಂಜೆ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್‍ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೀರ್ಣೋದ್ಧಾರದ ಕುರಿತು ಚರ್ಚಿಸಿ ಸಾರ್ವಜನಿಕರ ಸಹಕಾರ ಕೋರಲಾಯಿತು. ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್‍ ಆರ್ಯಾಪು, ರಾಮಕೃಷ್ಣ ಭಟ್‍ ಬಂಗಾರಡ್ಕ, ವಿರೂಪಾಕ್ಷ ಭಟ್ ಮಚ್ಚಿಮಲೆ, ಪ್ರದೀಪ್ ಕೃಷ್ಣ ಭಟ್ ಬಂಗಾರಡ್ಕ, ಗ್ರಾಮಸ್ಥರು […]

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಬೈಲುವಾರು ಸಭೆ Read More »

ನಾಳೆ (ಫೆ.18) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಪೂರ್ವಶಿಷ್ಟ ಪದ್ಧತಿಯಂತೆ ಫೆ.18 ರಂದು ನಡೆಯಲಿದೆ. ಮಧ್ಯಾಹ್ನ ಹವನ ಅಭಿಷೇಕ ಪೂಜಾದಿಗಳು, ರಾತ್ರಿ ಶ್ರೀ ದೇವರ ಬಲಿ ಹೊರಟು, ತಂತ್ರ ಸುತ್ತು ಜರಗಿ ಬಳಿಕ ಹೊರಾಂಗಣದಲ್ಲಿ ಉಡಕೆ, ಚಂಡೆ, ವಾದ್ಯ, ಸರ್ವವಾದ್ಯ ಸುತ್ತುಗಳು ನಡೆಯಲಿದೆ. ಬಳಿಕ ಕಟ್ಟೆಪೂಜೆ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವದೊಂದಿಗೆ ಉತ್ಸವ ಮುಗಿದು, ತಡರಾತ್ರಿ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಬಲಿ ಉತ್ಸವ ನೆರವೇರಲಿದೆ. ಜತೆಗೆ

ನಾಳೆ (ಫೆ.18) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ Read More »

ಫೆ.19 : ಡಾ.ಶ್ರೀಧರ ಭಂಡಾರಿ “ಯಕ್ಷ ದೇಗುಲ” ಪ್ರಶಸ್ತಿ ಪ್ರಧಾನ ಸಮಾರಂಭ

ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ಅಭಿಮನ್ಯು ಕೀರ್ತಿಶೇಷ ಸ್ವರ್ಗೀಯ ಪುತ್ತೂರು ಡಾ.ಶ್ರೀಧರ ಭಂಡಾರಿ ಸಂಸ್ಮರಣಾ ಕಾರ್ಯಕ್ರಮ “ಡಾ.ಶ್ರೀಧರ ಭಂಡಾರಿ “ಯಕ್ಷದೇಗುಲ” ಪ್ರಶಸ್ತಿ ಪ್ರದಾನ ಸಮಾರಂಭ ಫೆ.19 ಭಾನುವಾರ ಸಂಜೆ 5 ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ. ಕಾಸರಗೋಡು ಶ್ರೀ ಎಡನೀರು ಮಠದ ಜಗದ್ಗುರು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ

ಫೆ.19 : ಡಾ.ಶ್ರೀಧರ ಭಂಡಾರಿ “ಯಕ್ಷ ದೇಗುಲ” ಪ್ರಶಸ್ತಿ ಪ್ರಧಾನ ಸಮಾರಂಭ Read More »

ಫೆ.18 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶತರುದ್ರಾಭಿಷೇಕ

ಪುತ್ತೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ಫೆ.18 ಶನಿವಾರ ನಡೆಯಲಿರುವುದು. ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಪುಣ್ಯ ಕಾರ್ಯದ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ಶನಿಪ್ರದೋಷ ಪ್ರಯುಕ್ತ ಸಾಮೂಹಿಕ ಶನೈಶ್ಚರ ಪೂಜೆಯೂ ಜರಗಲಿದೆ. ಸೇವೆ ಮಾಡಲಿಚ್ಛಿಸುವವರು ಶ್ರೀ ಸಂಸ್ಥಾನದ ಸೇವಾ ವಿಭಾಗದಲ್ಲಿ ಹೆಸರು ನೋಂದಾಯಿಸಬಹುದು ಎಂದು ಸಂಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.18 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶತರುದ್ರಾಭಿಷೇಕ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ

ಪುತ್ತೂರು : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ ಮಚ್ಚಿಮಲೆ ರಾಮಭಟ್ ಅವರ ಜಾಗದಲ್ಲಿ ನೆರವೇರಿತು. ಕಿರಾಲುಬೋಗಿ ಮರಕ್ಕೆ ಪೂಜೆಗೈದು ಪ್ರಾರ್ಥಿಸಿ, ಮರದ ಶಿಲ್ಪಿ ಮೂಲಕ ಕೊಡಲಿ ಹಾಕುವ ಮುಹೂರ್ತ ನಡೆಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್‍ ಆರ್ಯಾಪು, ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್‍ ರಾಧಾಕೃಷ್ಣ ರೈ, ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ Read More »

ಇಂದಿನಿಂದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ

ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ.15ರಿಂದ ಫೆ.17ರ ತನಕ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವೀರಮಂಗಲ ಕ್ಷೇತ್ರವು ಪ್ರಾಚೀನ ಕಾಲದಲ್ಲಿ ನಿತ್ಯಮಂಗಲ ಎಂಬ ಹೆಸರನ್ನು ಪಡೆದಿತ್ತು. ತದನಂತರ ಬಲ್ಲಾಳ ಮನೆತನದ ವೀರಮ್ಮ ಬಳ್ಳಾಲ್ತಿಯ ಶೌರ್ಯದ ಪ್ರತೀಕವಾಗಿ ವೀರಮಂಗಲವಾಯಿತೆಂಬ ಇತಿಹಾಸವಿದೆ. ಈ ಊರಿನ ಭಕ್ತರ ಪ್ರತೀಕವಾಗಿ ಪುಣ್ಯವಾಹಿನಿ ಕುಮಾರಧಾರ ನದಿ ತಟದಲ್ಲಿ ಕಂಗೊಳಿಸುವ ಪವಿತ್ರ ಕ್ಷೇತ್ರವಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ಸಂದರ್ಭ ವೀರಮಂಗಲ ಶ್ರೀ ವಿಷ್ಣುಮೂರ್ತಿ

ಇಂದಿನಿಂದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ Read More »

ಮಾ. 5: ಸಂಟ್ಯಾರು ಕಲ್ಲಕಟ್ಟದಲ್ಲಿ ರಾಜಗುಳಿಗ ದೈವದ ಕೋಲ, ಆಮಂತ್ರಣ ಬಿಡುಗಡೆ

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಜಂಕ್ಷನ್ ಬಳಿಯ ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸಾನಿಧ್ಯದಲ್ಲಿ ಮಾ. 5ರಂದು ಶ್ರೀ ರಾಜಗುಳಿಗ ದೈವದ ಕೋಲವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಫೆ. 13ರಂದು ಬಿಡುಗಡೆಗೊಳಿಸಲಾಯಿತು. ಸಂಕ್ರಮಣದ ಪ್ರಯುಕ್ತ ತಂಬಿಲ ಸೇವೆ ನಡೆದ ಬಳಿಕ ದೈವ ನರ್ತಕರಿಗೆ ವೀಳ್ಯ ನೀಡುವುದರೊಂದಿಗೆ ಶ್ರೀ ರಾಜಗುಳಿಗ ದೈವದ ಕೋಲ ಹಾಗೂ ವೈದಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಎಸ್. ಮಾಧವ ರೈ ಕುಂಬ್ರ, ನವೀನ್ ಸಾಲ್ಯಾನ್ ಕಿನ್ನಿಮಜಲು, ದೇವದಾಸ್ ಕುರಿಯ, ದಾದು

ಮಾ. 5: ಸಂಟ್ಯಾರು ಕಲ್ಲಕಟ್ಟದಲ್ಲಿ ರಾಜಗುಳಿಗ ದೈವದ ಕೋಲ, ಆಮಂತ್ರಣ ಬಿಡುಗಡೆ Read More »

ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಅಗೇಲು

ಪುತ್ತೂರು: ನರಿಮೊಗರು ಗ್ರಾಮದ ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಮೋನಪ್ಪ ಸಪಲ್ಯ ಅಗೇಲು ಸೇವೆಯನ್ನು ಹಾಗೂ ನಿತಿನ್ ಭಟ್ ದೇವರ ಪೂಜೆಯನ್ನು ನೆರವೇರಿಸಿದರು. ಜಗದೀಶ ಗೌಡ ಸಹಕರಿಸಿದರು.

ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಅಗೇಲು Read More »

ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ – ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಪುತ್ತೂರು : ಬೆಳ್ಳಿಪ್ಪಾಡಿ ಗ್ರಾಮದ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಬೆಳ್ಳಿಪ್ಪಾಡಿಯಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಇದೀಗ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಜಿರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಗೌಡ ಪಮ್ಮನಮಜಲು, ಕೋಶಾಧಿಕಾರಿ ಚಂದ್ರ ಶೆಟ್ಟಿಗಾರ್ ಆಲಂಗೋಡಿ ಮತ್ತಿತರರು

ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ – ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ Read More »

ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶ್ರಮದಾನ

ಪುತ್ತೂರು: ಕುಂಜೂರುಪಂಜ  ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಫೆ. 15ರಂದು 20ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರಮದಾನ ಹಾಗೂ ಬಲ್ನಾಡು ಘಟಕದ ಮಾಸಿಕ ಸಭೆ ನಡೆಯಿತು. ಫೆ. 15ರಂದು ಮಂದಿರದಲ್ಲಿ ಸಾಮೂಹಿಕ  ದುರ್ಗಾ ಪೂಜೆ ಮತ್ತು ಅರ್ಧ ಏಕಾಹ ಭಜನೆ ನಡೆಯಲಿದೆ. ಮಾಸಿಕ ಸಭೆ: ಇದೇ ಸಂದರ್ಭ ಬಲ್ನಾಡು ಘಟಕದ  ಮಾಸಿಕ ಸಭೆ ನಡೆಯಿತು. ಲೆಕ್ಕಪರಿಶೋದಕಿ ಲತಾ, ವಲಯ ಮೇಲ್ವಿಚಾರಕ ಹರೀಶ್ ಮಾಹಿತಿ ನೀಡಿದರು. ಘಟಕದ ಸಂಯೋಜಕಿ ಆಶಾಲತಾ, ಪ್ರತಿನಿಧಿ ವಿನಯ, ಸದಸ್ಯರಾದ ಬಾಲಕೃಷ್ಣ, ಶಂಭು  ಪೂಜಾರಿ, ಹರಿಪ್ರಸಾದ್, ಸುನೀಲ್,

ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಶ್ರಮದಾನ Read More »

error: Content is protected !!
Scroll to Top