ಧಾರ್ಮಿಕ

ಪರಿಸರ ಜಾಗೃತಿಗೆ ಸಾಕ್ಷಿಯಾಗಲಿರುವ ಶ್ರೀ ಮಾರಿಯಮ್ಮ ಬ್ರಹ್ಮಕಲಶೋತ್ಸವ

ದೇವಸ್ಥಾನಕ್ಕೆ ಬಳಸಿದ ಮರದ ಬದಲಾಗಿ 500 ಸಸಿ ನೆಡುವ ಸಂಕಲ್ಪ ಕಾರ್ಕಳ : ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ನಾಡಿನಲ್ಲಿ ಕಲೆ, ಸಂಸ್ಕೃತಿ, ವೈವಿಧ್ಯಮಯ ಆಚಾರ ವಿಚಾರ, ಶಿಲ್ಪಕಲೆಗಳಿಗೆ ಪ್ರಸಿದ್ಧಿ ಪಡೆದ ಕಾರ್ಕಳದ ನಗರದಲ್ಲಿ ನಡೆಯುತ್ತಿರುವ ಶ್ರೀ ಮಾರಿಗುಡಿ ಬ್ರಹ್ಮಕಲಶೋತ್ಸವವು ಪರಿಸರ ಜಾಗೃತಿಗೆ ಸಾಕ್ಷಿಯಾಗಲಿದೆ. ದೇವಾಲಯದ ನವೀಕರಣದ ಕೆಲಸ ಕಾರ್ಯಗಳಿಗೆ ಅನೇಕ ಮರಗಳನ್ನು ಬಳಸಿದ್ದು, ಇದಕ್ಕೆ ಪ್ರತಿಯಾಗಿ 500 ಸಸಿಗಳನ್ನು ನೆಟ್ಟು ಪೋಷಣೆಯ ಜವಾಬ್ದಾರಿಯ ಸಂಕಲ್ಪವನ್ನು ಜೀರ್ಣೊದ್ಧಾರ ಸಮಿತಿ ಹೊಂದಿದೆ. ಅರಣ್ಯ ಇಲಾಖೆಯವರಿಂದ ತೆಳ್ಳಾರು ರಸ್ತೆಯಲ್ಲಿನ ಕುಂಬ್ರಪದವಿನಲ್ಲಿ ಜಾಗ […]

ಪರಿಸರ ಜಾಗೃತಿಗೆ ಸಾಕ್ಷಿಯಾಗಲಿರುವ ಶ್ರೀ ಮಾರಿಯಮ್ಮ ಬ್ರಹ್ಮಕಲಶೋತ್ಸವ Read More »

ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು : ಮಿಥುನ್​ ರೈ ವಿವಾದಾತ್ಮಕ ಹೇಳಿಕೆ

ಮಂಗಳೂರು : ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಮಿಥುನ್ ರೈ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಮಿಥುನ್ ರೈ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆಕಾಂಗ್ರೆಸ್ ನಾಯಕ ಮಿಥುನ್​ ರೈ ತಮ್ಮ

ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು : ಮಿಥುನ್​ ರೈ ವಿವಾದಾತ್ಮಕ ಹೇಳಿಕೆ Read More »

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ

ಕುದ್ಮಾರು : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ಮಾ.9 ಗುರುವಾರ ಕುದ್ಮಾರು ದೈಪಿಲ ದ್ವಾರದ ಬಳಿ ಕಟ್ದತ್ತಾರು ಕಟ್ಟೆಯಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, ಸಂಜೆ 6 ಕ್ಕೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು, 8.30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು

ಮಾ.9 : ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ Read More »

ಇಂದು (ಮಾ.8) : ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ವಿತರಣೆ

ಪುತ್ತೂರು: ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ನೇಮೋತ್ಸವ ಮಾ.11 ರಂದು ನಡೆಯಲಿದ್ದು, ಇದರ ಅಂಗವಾಗಿ ಇಂದು ( ಮಾ.8 ) ಪುತ್ತೂರು ನಗರದಲ್ಲಿ ಆಮಂತ್ರಣ ಪತ್ರಿಕೆ ವಿತರಣೆ ನಡೆಯಲಿದೆ. ಸಂಜೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಿಂದ ದರ್ಬೆ ವೃತ್ತದ ತನಕ ಆಮಂತ್ರಣ ಪತ್ರ ವಿತರಿಸಲಾಗುವುದು. ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲಪ್ ಮೆಂಟ್ ಚಾರಿಟೇಬಲ್‍ ಟ್ರಸ್ಟ್‍ನ ಅಧ್ಯಕ್ಷ ಸಂಜೀವ ಕಲ್ಲೇಗ ಚಾಲನೆ ನೀಡಲಿದ್ದಾರೆ ಎಂದು

ಇಂದು (ಮಾ.8) : ಕಾರ್ಜಾಲು ದೊಂಪದ ಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ವಿತರಣೆ Read More »

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹವನ, ಚಕ್ರಾಬ್ಧ ಮಂಡಲ ವಿಷ್ಣು ಪೂಜೆ, ನಾಗ ಸಾನ್ನಿಧ್ಯದಲ್ಲಿ ನಾಗತಂಬಿಲ, ಮಧ್ಯಾಹ್ನ ಕಲಶಪೂಜೆ, ಕಲಶಾಭಿಷೇಕ, ವಿಶೇಷ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಬಳಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೈವಗಳ ಭಂಡಾರ ತೆಗೆದು ದೈವಸ್ಥಾನಗಳಗೆ ತೆರಳಿ ತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ Read More »

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆ

ಪುತ್ತೂರು: ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆ ಮಾರ್ಚ್ 7ರಂದು ಬಂಟ್ರಿಂಜ ಮಾಡದಲ್ಲಿ ನಡೆಯಿತು. ಸೋಮವಾರ ರಾತ್ರಿ ದೊಡ್ಡಮನೆಯಿಂದ ಭಂಡಾರ ಚಿತ್ತಿರಿಗೆ ಬೂಡುಗೆ ತೆರಳಿತು. ಅಲ್ಲಿ ಚಂದನದ ಮೊಗವನ್ನು ಜೊತೆ ಸೇರಿಸಿಕೊಂಡು, ಕಿರುವಾಳು ಭಂಡಾರ ಬಂಟ್ರಿಂಜ ಮಾಡಕ್ಕೆ ಆಗಮಿಸಿತು. ಮಂಗಳವಾರ ಬೆಳಿಗ್ಗೆ ಮೆಚ್ಚಿ ಜಾತ್ರೆ ಆರಂಭಗೊಂಡು, ಮೊದಲಿಗೆ ಚಂದನದ ಮೊಗ ಏರಿಸಲಾಯಿತು. ಬಳಿಕ ಚಿನ್ನದ ಮೊಗ ನಂತರ ಬೆಳ್ಳಿಯ ಮೊಗ ಏರಿಸಿ ನೇಮ ನಡೆಯಿತು. ಲಕ್ಷಾಂತರ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆ Read More »

ಇಂದು ಮತ್ತು ನಾಳೆ : ಕುದ್ಮಾರು ಕೆಲಂಬೀರಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ

ಕಾಣಿಯೂರು : ಕುದ್ಮಾರು ಗ್ರಾಮದ ಕೆಲಂಬಿರಿ ಗರಡಿಯಲ್ಲಿ 48ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ಮಾ.7 ಹಾಗೂ 8 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.7 ಮಂಗಳವಾರ ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ನಾಗ್ರಬ್ರಹ್ಮ ತಂಬಿಲ ಮಧ್ಯಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ, ರಾತ್ರಿ ಕಡಬ ಯುವ ವಾಹಿತಿ ಘಟಕದ ವತಿಯಿಂದ ಭಜನಾ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ತೆಗೆಯುವುದು, ಅನಂತರ ಅನ್ನಸಂತರ್ಪಣೆ ಜರಗಲಿದೆ. ಮಾ.8 ಬುಧವಾರ

ಇಂದು ಮತ್ತು ನಾಳೆ : ಕುದ್ಮಾರು ಕೆಲಂಬೀರಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ Read More »

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ಭಂಡಾರ ಆಗಮನ | ಮಂಗಳವಾರ ಮಧ್ಯಾಹ್ನ ಇತಿಹಾಸ ಪ್ರಸಿದ್ಧ ಮೆಚ್ಚಿಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಯ‌ ಹಿಂದಿನ‌ ದಿನವಾದ ಸೋಮವಾರ ರಾತ್ರಿ ದೈವಗಳ ಭಂಡಾರ ಆಗಮನವಾಯಿತು. ದೊಡ್ಡಮನೆಯಿಂದ ಸಂಪ್ರದಾಯದಂತೆ ಭಂಡಾರ ಹೊರಟು, ಚಿತ್ತರಿಗೆ ಬೂಡಿಗೆ ದೈವಗಳ ಭಂಡಾರ ಆಗಮನವಾಯಿತು. ಚಿತ್ತರಿಗೆ ಬೂಡಿನಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಪೂಜೆ ನೆರವೇರಿತು. ನಂತರ ದೈವಗಳ ಭಂಡಾರ ಬಂಟ್ರಿಂಜ ಮಾಡಕ್ಕೆ ತೆರಳಿತು. ಮಂಗಳವಾರ ಮಧ್ಯಾಹ್ನ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ನಡೆಯಲಿದೆ.

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ಭಂಡಾರ ಆಗಮನ | ಮಂಗಳವಾರ ಮಧ್ಯಾಹ್ನ ಇತಿಹಾಸ ಪ್ರಸಿದ್ಧ ಮೆಚ್ಚಿಜಾತ್ರೆ Read More »

ಉದ್ಯೋಗದ ಜೊತೆ ಸ್ವ – ಉದ್ಯೋಗಕ್ಕೂ ಗಮನ ಕೊಡಿ |  ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಭಾರತಿ ಎಂ.ಎಲ್.

ಪುತ್ತೂರು: ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಪ್ರಾಶಸ್ತ್ಯ ಪಡೆದುಕೊಂಡಿದ್ದು, ಉದ್ಯೋಗದ ಜೊತೆಗೆ ಸ್ವ-ಉದ್ಯೋಗ ನಡೆಸುವತ್ತಲೂ ಗಮನ ಕೊಡಬೇಕು ಎಂದು ಅಳದಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಎಂ.ಎಲ್. ಹೇಳಿದರು. ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ  ನಡೆದ ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯಅತಿಥಿಯಾಗಿ ಮಾತನಾಡಿದರು. ಸ್ತ್ರೀಯರನ್ನು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಶಿಕ್ಷಣವೇ ಇಂದು ಎಲ್ಲಾ ಕ್ಷೇತ್ರಗಳ ಅಡಿಪಾಯ. ಶಿಕ್ಷಣ ಪಡೆದವರು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ಸಾಧ್ಯ. ವ್ಯಕ್ತಿತ್ವ ವಿಕಸನವೂ ಆಗುತ್ತದೆ

ಉದ್ಯೋಗದ ಜೊತೆ ಸ್ವ – ಉದ್ಯೋಗಕ್ಕೂ ಗಮನ ಕೊಡಿ |  ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಭಾರತಿ ಎಂ.ಎಲ್. Read More »

ಮೇ 3 ರಂದು ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಉಜಿರೆ : ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಶನಿವಾರ ವಿವಾಹ ನೋಂದಣಿ ಕಾರ್ಯಾಲಯವನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ವರನಿಗೆ ಧೋತಿ ಮತ್ತು ಶಾಲು ಹಾಗೂ ವಧುವಿಗೆ ಸೀರೆ, ರವಿಕೆಕಣ, ಮಂಗಳಸೂತ್ರ ನೀಡಲಾಗುವುದು. ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ.

ಮೇ 3 ರಂದು ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ Read More »

error: Content is protected !!
Scroll to Top