ನ.14 ರಿಂದ 22 : ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಗೋನವರಾತ್ರಿ ಉತ್ಸವ: ಪುತ್ತೂರಿಗೆ ಆಗಮಿಸಿದ ಗೋರಥ ಯಾತ್ರೆ
ಪುತ್ತೂರು: ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಮಹಾಯಜ್ಞ ಹಾಗೂ ಗೋನವರಾತ್ರಿ ಉತ್ಸವ ನ.14 ರಿಂದ ಆರಂಭಗೊಂಡು ನ.22ರಂದು ಸಂಪನ್ನಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಅಲ್ಲಿಂದ ಹೊರಟ ಗೋರಥ ಗುರುವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಗೋರಥವನ್ನು ಸ್ವಾಗತಿಸಿದ ಬಳಿಕ, ಪುತ್ತೂರು ನಗರರ ಸಂಚಾರಕ್ಕೆ ತೆರಳಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗೋಪುರದ ಬಳಿ ಗೋಮಾತೆಗೆ ಆರತಿ ಬೆಳಗಲಾಯಿತು. ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ […]










