ಧಾರ್ಮಿಕ

‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ ಮುಂದೂಡಲಾಗಿದೆ | ಜ.31 ರ ಬದಲು ಫೆ.3 ರಂದು ಲೋಕಾರ್ಪಣೆ

ಪುತ್ತೂರು: ಇಂದು ನಡೆಯಬೇಕಾಗಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ‘ಅನ್ನಪೂರ್ಣೇಶ್ವರಿ ಅನ್ನಛತ್ರ’ದ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಲಾಗಿದೆ. ಜ.31 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದು, ಫೆ.3 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಲೋಕಾರ್ಪಣೆ ಅಂಗವಾಗಿ ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ ಯಜ್ಞ, ಮಹಾಗಣಪತಿ ಹೋಮ ನಡೆದು ಬಳಿಕ ಅನ್ನಛತ್ರ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಬೇಕೆಂದು […]

‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ ಮುಂದೂಡಲಾಗಿದೆ | ಜ.31 ರ ಬದಲು ಫೆ.3 ರಂದು ಲೋಕಾರ್ಪಣೆ Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ | ಜ. 31ರಂದು ಮಾಚಿಲ ಉಳ್ಳಾಕ್ಲು, ಉಳ್ಳಾಲ್ತಿ ನೇಮೋತ್ಸವ

ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಜ. 29ರಂದು ನಡೆಯಿತು. ಜ. 23ರಂದು ಗೊನೆ ಮುಹೂರ್ತ ನಡೆದಿದ್ದು, ಜ. 28ರಂದು ಬೆಳಿಗ್ಗೆ ಅರುವಗುತ್ತು ಮನೆಯಿಂದ ದೇವರ ಆಭರಣ ತರಲಾಯಿತು. ನಂತರ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆದು, ದೇವಳದಲ್ಲಿ ತೋರಣ ಮುಹೂರ್ತ ಜರಗಿತು. ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, ದೇವರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ತಂತ್ರಿ ಪರಿವಾರವನ್ನು ಸ್ವಾಗತಿಸಲಾಯಿತು. ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು

ಕುಂಬ್ಲಾಡಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ | ಜ. 31ರಂದು ಮಾಚಿಲ ಉಳ್ಳಾಕ್ಲು, ಉಳ್ಳಾಲ್ತಿ ನೇಮೋತ್ಸವ Read More »

ನಾಳೆ: ‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ‘ಅನ್ನಪೂರ್ಣೇಶ್ವರಿ ಅನ್ನಛತ್ರ’ದ ಲೋಕಾರ್ಪಣೆ ಕಾರ್ಯಕ್ರಮ ಜ.31 ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಲೋಕಾರ್ಪಣೆ ಅಂಗವಾಗಿ ಬುಧವಾರ ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ ಯಜ್ಞ, ಮಹಾಗಣಪತಿ ಹೋಮ ನಡೆದು ಬಳಿಕ 9.32 ರ ಮೀನ ಲಗ್ನ ಸುಮುಹೂರ್ತದಲ್ಲಿ ಅನ್ನಛತ್ರ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ನಾಳೆ: ‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ Read More »

ಕೊಡಿಪ್ಪಾಡಿ: ಕಾಲೇಜು ವಿದ್ಯಾರ್ಥಿಗಳಿಂದ ಕರಸೇವೆ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಂದ ಕೊಡಿಪ್ಪಾಡಿ ದೇವಸ್ಥಾನದಲ್ಲಿ ಕರಸೇವೆ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರದಲ್ಲಿ ಕರಸೇವೆ ಜರಗಿತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯಾರ್ಥಿಗಳು ಕರಸೇವೆ ನಡೆಸಿದರು.

ಕೊಡಿಪ್ಪಾಡಿ: ಕಾಲೇಜು ವಿದ್ಯಾರ್ಥಿಗಳಿಂದ ಕರಸೇವೆ Read More »

ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಪಾಕ್ ಹೊಸ ಖ್ಯಾತೆ!!

ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವು ಕಳೆದ ವಾರ ನಡೆದಿದ್ದು, ಇಡೀ ವಿಶ್ವದ ಗಮನ ಸೆಳೆದಿತ್ತು. ಆದರೆ ಭಾರತ ಮತ್ತು ಭಾರತೀಯರ ಸಂತೋಷವನ್ನು ಸಹಿಸದ ಪಾಕಿಸ್ತಾನವು ಹೊಸ ವರಸೆ ಶುರು ಮಾಡಿದೆ. ಅಯೋಧ್ಯೆಯಲ್ಲಿ ದಶಕಗಳ ನಂತರ ದೇವಾಲಯ ಮತ್ತು ಮಸೀದಿಯ ವಿವಾದವು ಕೊನೆಗೊಂಡು ದೇವಾಲಯ ನಿರ್ಮಾಣವಾಗಿದೆ. ಆದರೆ ಪಾಕಿಸ್ತಾನವು ಮಂದಿರದ ಬಗ್ಗೆ ದೂರು ನೀಡಲು ವಿಶ್ವಸಂಸ್ಥೆಗೆ ಔಪಚಾರಿಕವಾಗಿ ಪತ್ರ ಬರೆದಿದೆ. ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ

ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಪಾಕ್ ಹೊಸ ಖ್ಯಾತೆ!! Read More »

ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವ: ಪೂರ್ವಭಾವಿ ಸಭೆ

ಕಾಣಿಯೂರು: ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ ಜ. 27ರಂದು ದೈವಸ್ಥಾನದ ಆವರಣದಲ್ಲಿ ನಡೆಯಿತು. ಮಾ. 9ರಂದು ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 9ಕ್ಕೆ ಕಟ್ಟತ್ತಾರು ಕಟ್ಟೆಯಲ್ಲಿ ಗಣಹೋಮ ನಡೆದು, ಸಂಜೆ ಅನ್ಯಾಡಿ ಗ್ರಾಮ ಚಾವಡಿಯಿಂದ ಭಂಡಾರ ಹೊರಟು ಕಟ್ಟತ್ತಾರು ಕಟ್ಟೆಯಲ್ಲಿ ನೇಮೋತ್ಸವ ನಡೆಯಲಿದೆ. ಇದೇ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ವಾರ್ಷಿಕ ನೇಮೋತ್ಸವದ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಪೂರ್ವತಯಾರಿ ನಡೆಯುತ್ತಿದ್ದು, ಯಶಸ್ಸಿಗಾಗಿ

ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವ: ಪೂರ್ವಭಾವಿ ಸಭೆ Read More »

ಅಯೋಧ್ಯೆಯಿಂದ ರಾಜ್ಯಕ್ಕೆ ಬರಲಿದೆಯೇ ರಾಮನ ಮೂರ್ತಿ?? | ರಾಘವೇಶ್ವರ ಶ್ರೀಗಳಿಂದ ಗೋಕರ್ಣದಲ್ಲಿ ಪ್ರತಿಷ್ಠಾಪನೆಗೆ ಚಿಂತನೆ?!

ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ನೂತನ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೆಂದು ಅಂತಿಮಗೊಂಡ ಮೂರು ಮೂರ್ತಿಗಳಲ್ಲೊಂದನ್ನು ರಾಜ್ಯಕ್ಕೆ ತರಲು ರಾಘವೇಶ್ವರ ಶ್ರೀ ಉತ್ಸಾಹಿತರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಶಿಲ್ಪಿ ಗಣೇಶ್‌ ಭಟ್‌ ಅವರು ರಚಿಸಿದ ವಿಗ್ರಹ ಇದಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ಉಳಿದೆರಡು ವಿಗ್ರಹಗಳನ್ನು ಅಯೋಧ್ಯೆಯಲ್ಲಿ ವೀಕ್ಷಣೆಗೆ ಇಡಲಾಗಿದೆ. ಇದನ್ನು ವೀಕ್ಷಿಸಿದ ಬಳಿಕ ರಾಘವೇಶ್ವರ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಚಿಸಿದ ಶ್ರೀರಾಮನ ವಿಗ್ರಹವನ್ನು ರಾಜ್ಯಕ್ಕೆ ತಂದು ಪ್ರತಿಷ್ಠಾಪಿಸಬೇಕೆಂಬ ಅಭಿಲಾಷೆ ನಮಗೂ ಇದೆ.

ಅಯೋಧ್ಯೆಯಿಂದ ರಾಜ್ಯಕ್ಕೆ ಬರಲಿದೆಯೇ ರಾಮನ ಮೂರ್ತಿ?? | ರಾಘವೇಶ್ವರ ಶ್ರೀಗಳಿಂದ ಗೋಕರ್ಣದಲ್ಲಿ ಪ್ರತಿಷ್ಠಾಪನೆಗೆ ಚಿಂತನೆ?! Read More »

ಮದರಸಾಗಳಲ್ಲಿ ಶ್ರೀರಾಮನ ಅಧ್ಯಯನಕ್ಕೆ ಅವಕಾಶ!!

ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ದೇಶಾದ್ಯಂತ ರಾಮನ ಕುರಿತ ವಿಚಾರಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಅತ್ತ ಉತ್ತರಾಖಂಡದಲ್ಲಿ ಮದರಸಾಗಳಲ್ಲಿ ರಾಮ ದೇವರ ಕುರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವ ಬಗ್ಗೆ ವರದಿಯಾಗಿದೆ. ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರೇ ಮಾಹಿತಿ ನೀಡಿದ್ದು,

ಮದರಸಾಗಳಲ್ಲಿ ಶ್ರೀರಾಮನ ಅಧ್ಯಯನಕ್ಕೆ ಅವಕಾಶ!! Read More »

ದೈವ ನರ್ತನದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ ನರ್ತಕ!! | ನರ್ತಕನ ಮಗನಿಗೆ ದೈವ ನೀಡಿತು ಅಭಯ!!

ಕಾಣಿಯೂರು: ದೈವ ನರ್ತನದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದ ದೈವ ನರ್ತಕನ ಪುತ್ರ ಮೋನಪ್ಪ ಅವರಿಗೆ ದೈವ ಅಭಯ ನೀಡಿದೆ. ಚಾರ್ವಾಕದ ಇಡ್ಯಡ್ಕ ತರವಾಡು ಮನೆಯಲ್ಲಿ ಕೆಲ ಸಮಯಗಳ ಹಿಂದೆ ಶಿರಾಡಿ ದೈವದ ನರ್ತನ ಸೇವೆ ಮಾಡುತ್ತಿದ್ದ ಕಾಂತು ಅಜಿಲ ಅವರು ಕುಸಿದು ಬಿದ್ದು ಮೃತಪಟ್ಟಿದ್ದರು. ದೈವ ನರ್ತನದ ವೇಳೆಯೇ ನರ್ತಕ ಸಾವಿಗೀಡಾದ್ದದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ಇದೀಗ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆ ಸಮೀಪಿಸುತ್ತಿದೆ. ಈ ಸಂದರ್ಭ ನಡೆಯುವ ದೈವಗಳ ನೇಮೋತ್ಸವದ ವಿಚಾರ ಪ್ರಸ್ತಾಪವಾದಾಗ,

ದೈವ ನರ್ತನದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ ನರ್ತಕ!! | ನರ್ತಕನ ಮಗನಿಗೆ ದೈವ ನೀಡಿತು ಅಭಯ!! Read More »

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ

ಅಯೊಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಕ್ರವಾರ ಸಂಜೆ ಶ್ರೀ ರಾಮನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು, ಉತ್ಸವ ನಡೆಸಲಾಯಿತು. ಶ್ರೀ ರಾಮಲಲ್ಲಾನ ವಿಗ್ರಹವನ್ನು ವಾದ್ಯಘೋಷ, ವಿಷ್ಣುಸಹಸ್ರನಾಮ, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆವರಣದ ಸುತ್ತ ಒಂದು ಸುತ್ತು ತಂದು, ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ Read More »

error: Content is protected !!
Scroll to Top