ಲಕ್ಷಾಂತರ ಭಕ್ತಾದಿಗಳ ಜಯಘೋಷದೊಂದಿಗೆ ನಡೆಯಿತು ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಬ್ರಹ್ಮ ರಥೋತ್ಸವ | ಆಕಾಶದೆತ್ತರದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು ಪ್ರದರ್ಶನ
ಪುತ್ತೂರು: ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮ ರಥೋತ್ಸವ ಬುಧವಾರ ರಾತ್ರಿ ವೈಭವದಿಂದ ನಡೆಯಿತು. ನೂರಾರು ಭಕ್ತರ ಕೈಗಳು ಬ್ರಹ್ಮ ರಥೋತ್ಸವವನ್ನು ಜಯಘೋಷಗಳೊಂದಿಗೆ ರಥಬೀದಿಯಲ್ಲಿ ಎಳೆಯುವ ಮೂಲಕ ಸಾಗಿದರು. ಈ ಪುಣ್ಯ ಕ್ಷಣವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಮೊದಲಿಗೆ ಒಳಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು. ನಂತರ ಶ್ರೀ ದೇವರು ರಥಾರೂಢರಾದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಪುತ್ತೂರು ಬೆಡಿ ಎಂಬ ಹೆಸರುವಾಸಿಯಾದ ಸುಡುಮದ್ದು ಪ್ರದರ್ಶನ ಆಕಾಶದೆತ್ತರಕ್ಕೆ […]










