ಧಾರ್ಮಿಕ

ಫೆ.13: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ, ಕುಟುಂಬ ದೈವಗಳ ವಾರ್ಷಿಕ ತಂಬಿಲ

ಪುತ್ತೂರು: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ ಹಾಗೂ ಕುಟುಂಬದ ಧರ್ಮ ದೈವಗಳ ವಾರ್ಷಿಕ ತಂಬಿಲ ಫೆ.13 ಮಂಗಳವಾರ ಶ್ರೀ ದೇವಸ್ಥಾನದಲ್ಲಿ ನಡೆಯಲಿದೆ. ಉತ್ಸವದ ಅಂಗವಾಗಿ ಫೆ.7 ರಂದು ಬೆಳಿಗ್ಗೆ 8 ಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಬ್ರಹ್ಮಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟಗದ್ದೆ ಅವರ ನೇತೃತ್ವದಲ್ಲಿ ಗೊನೆ ಕಡಿಯುವುದು. ಫೆ.13 ರಂದು ಬೆಳಿಗ್ಗೆ 9 ಕ್ಕೆ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಬೆಳಿಗ್ಗೆ 8 ಕ್ಕೆ ದೇವಸ್ಥಾನದಲ್ಲಿ ದೇವತಾ […]

ಫೆ.13: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ವರ್ಷಾವಧಿ ಉತ್ಸವ, ಕುಟುಂಬ ದೈವಗಳ ವಾರ್ಷಿಕ ತಂಬಿಲ Read More »

ಭಗವಂತನ ಕೆಲಸದಲ್ಲಿ ಕೈ ಜೋಡಿಸಿದರೆ ಅನುಗ್ರಹ ಪ್ರಾಪ್ತಿ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ | ಪಶುಪತಿನಾಥ ಭಜನಾ ಮಂದಿರದ ನೀಲನಕಾಶೆ ಅನಾವರಣಗೊಳಿಸಿದ ರಾಘವೇಶ್ವರ ಶ್ರೀ

ಪುತ್ತೂರು: ಭಗವಂತ ಕೈಗೊಳ್ಳುವ ಕೆಲಸದಲ್ಲಿ ನಾವು ಕೈಜೋಡಿಸಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಪ್ರತಿಯೊಂದು ಮನೆಯಲ್ಲೂ ಗೋಸಾಕಣೆ, ಗೋವಿನ ಆರಾಧನೆ ಮಾಡಬೇಕಾದ ಅಗತ್ಯವಿದೆ ಎಂದು ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿ. ಸಮೀಪದ ಸಂಪ್ಯದಮೂಲೆಯ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಗವಂತನ ಕೆಲಸದಲ್ಲಿ ಕೈ ಜೋಡಿಸಿದರೆ ಅನುಗ್ರಹ ಪ್ರಾಪ್ತಿ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ | ಪಶುಪತಿನಾಥ ಭಜನಾ ಮಂದಿರದ ನೀಲನಕಾಶೆ ಅನಾವರಣಗೊಳಿಸಿದ ರಾಘವೇಶ್ವರ ಶ್ರೀ Read More »

ನಳೀಲು ದೇವಸ್ಥಾನದ ಮಹಾದ್ವಾರ, ರಸ್ತೆ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಫೆ. 17ರಿಂದ 24ರವರೆಗೆ ನಡೆಯಲಿದೆ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ

ಪೆರ್ಲಂಪಾಡಿ: ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಹಾದ್ವಾರ ಹಾಗೂ ರಸ್ತೆಯ ಉದ್ಘಾಟನೆಯನ್ನು ಶಾಸಕ ಹಾಗೂ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಅವರು ಫೆ. 4ರಂದು ನೆರವೇರಿಸಿದರು. ಫೆ. 17ರಿಂದ 24ರವರೆಗೆ ನಳೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಸಂದರ್ಭ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ತನ್ನ ಶಾಸಕ ನಿಧಿಯಿಂದ 20 ಲಕ್ಷ ರೂ. ಮಂಜೂರು ಮಾಡಿದ್ದರು. ಈ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು,

ನಳೀಲು ದೇವಸ್ಥಾನದ ಮಹಾದ್ವಾರ, ರಸ್ತೆ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಫೆ. 17ರಿಂದ 24ರವರೆಗೆ ನಡೆಯಲಿದೆ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ Read More »

ಗೋವು ಮನುಷ್ಯನ ಜೀವನದ ಅವಿಭಾಜ್ಯ ಅಂಗ | ಗೋಲೋಕೋತ್ಸವದಲ್ಲಿ ಹರೀಶ್ ರಾವ್

ಪುತ್ತೂರು: ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ದುರಾದೃಷ್ಟವಶಾತ್ ಇಂದಿನ ಜನಾಂಗ ಅದನ್ನು ಮರೆಯುತ್ತಿದ್ದು, ಮುಂದಿನ ಪೀಳಿಗೆಗೆ ಗೋವಿನ ಮಹತ್ವದ ಕುರಿತು ತಿಳಿಹೇಳಬೇಕಾದ ಅಗತ್ಯವಿದೆ ಎಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಹೇಳಿದರು. ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್‍.ಆರ್‍..ಸಿ.ಸಿ. ಸಮೀಪದ ಸಂಪ್ಯದಮೂಲೆಯಲ್ಲಿರುವ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಗೋವು-ನಾವು

ಗೋವು ಮನುಷ್ಯನ ಜೀವನದ ಅವಿಭಾಜ್ಯ ಅಂಗ | ಗೋಲೋಕೋತ್ಸವದಲ್ಲಿ ಹರೀಶ್ ರಾವ್ Read More »

ಧರ್ಮಗಳ ಬಗ್ಗೆ ಅರಿತುಕೊಂಡರೆ ಸೌಹಾರ್ದತೆ ನೆಲೆಸಲು ಸಾಧ್ಯ: ಶಾಸಕ ಅಶೋಕ್ ರೈ

ಪುತ್ತೂರು: ನಾನೇ ಶ್ರೇಷ್ಠ, ನನ್ನ ಧರ್ಮ ಮಾತ್ರ ಶ್ರೇಷ್ಠ ಉಳಿದವು ಶೂನ್ಯ ಎಂಬ ಭಾವನೆ ನಮ್ಮಲ್ಲಿ ಇರಬಾರದು, ಎಲ್ಲಾ ಧರ್ಮಗಳು ಒಳಿತನ್ನೇ ಕಲಿಸಿಸುತ್ತದೆ, ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡಲ್ಲಿ ಸಮಾಜದಲ್ಲಿ ಸೌಹಾರ್ಧತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪುರುಷರಕಟ್ಟೆ ಮದ್ರಸ ವಠಾರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕಲಿಸಬೇಕು. ತನ್ನ ಧರ್ಮವನ್ನು ಅರಿತುಕೊಳ್ಳುವುದರ ಜೊತೆಗೆ ಸಹೋದರ ಧರ್ಮದ

ಧರ್ಮಗಳ ಬಗ್ಗೆ ಅರಿತುಕೊಂಡರೆ ಸೌಹಾರ್ದತೆ ನೆಲೆಸಲು ಸಾಧ್ಯ: ಶಾಸಕ ಅಶೋಕ್ ರೈ Read More »

ನೀರ್ಕಜೆ ತರವಾಡು ಮನೆಯ 9ನೇ ವರ್ಧಂತಿ ಪ್ರಯುಕ್ತ ನವಕಕಲಶಾಭಿಷೇಕ, ನೇಮೋತ್ಸವ

ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ತರವಾಡು ಮನೆಯ 9ನೇ ವರ್ಷದ ವರ್ಧಂತಿ ಪ್ರಯುಕ್ತ ಶ್ರೀ ನಾಗದೇವರ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳ ನವಕಕಲಶಾಭಿಷೇಕ, ನೇಮೋತ್ಸವ ಜ. 28ರಂದು ನಡೆಯಿತು. ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಮುಡಿಪು ಪೂಜೆ, ನಾಗದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ಮಹಾಪೂಜೆ ಹಾಗೂ ಧರ್ಮದೈವ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನವಕಕಲಶಾಭಿಷೇಕ ಹಾಗೂ ದೈವಗಳಿಗೆ ತಂಬಿಲ ಪ್ರಸನ್ನ ಪೂಜೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು, ಸತ್ಯ

ನೀರ್ಕಜೆ ತರವಾಡು ಮನೆಯ 9ನೇ ವರ್ಧಂತಿ ಪ್ರಯುಕ್ತ ನವಕಕಲಶಾಭಿಷೇಕ, ನೇಮೋತ್ಸವ Read More »

ಫೆ.5 : ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ | ಮಕ್ಕಳ ಯಕ್ಷಗಾನ ಬಯಲಾಟ ‘ಶ್ರೀ ಕೃಷ್ಣ ಜನ್ಮ-ಶ್ರೀ ಕೃಷ್ಣ ಲೀಲೆ’ ಪ್ರದರ್ಶನ

ಬಂಟ್ವಾಳ: ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ ಫೆ.5 ಸೋಮವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6.30 ಕ್ಕೆ ಧ್ವಜಾರೋಹಣ, 7 ಕ್ಕೆ ಗಣಹೋಮ, 9 ರಿಂದ ಸಂಜೆ 4 ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 4 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 6 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 8 ಕ್ಕೆ ಪ್ರಸಾದ ವಿತರಣೆ ನಡೆದು ಬಳಿಕ

ಫೆ.5 : ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ | ಮಕ್ಕಳ ಯಕ್ಷಗಾನ ಬಯಲಾಟ ‘ಶ್ರೀ ಕೃಷ್ಣ ಜನ್ಮ-ಶ್ರೀ ಕೃಷ್ಣ ಲೀಲೆ’ ಪ್ರದರ್ಶನ Read More »

ಸ್ವಾಮಿ ಪ್ರಸಾದವು ಅನ್ನಪ್ರಸಾದ ರೂಪದಲ್ಲಿ ನಿರಂತರವಾಗಿ ನಡೆಯಲಿ : ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಪೂರ್ಣ ಛತ್ರ ಲೋಕಾರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಅನ್ನಪೂರ್ಣಾ ಅನ್ನಛತ್ರದ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಫೆ.3 ಶನಿವಾರ ನಡೆಯಿತು. ಬೆಳಿಗ್ಗೆ ಶ್ರೀ ಅನ್ನಪೂರ್ಣಾ ಅನ್ನಛತ್ರದ ಸಮೃದ್ಧಿಗೋಸ್ಕರ ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು. ಸುವಸ್ತುಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಇರಿಸಿ ಪ್ರಾರ್ಥಿಸಿ, ಬಳಿಕ ಮೆರವಣಿಗೆ ಮೂಲಕ ಎಲ್ಲಾ ಸುವಸ್ತುಗಳನ್ನು ಅನ್ನಪೂರ್ಣ ಅನ್ನಛತ್ರಕ್ಕೆ ತಂದು ಅಲ್ಲಿ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭ ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆಕಾರ್ಯಕ್ರಮ ನಡೆಯಿತು. ಅನ್ನಪೂರ್ಣಾ ಛತ್ರವನ್ನು

ಸ್ವಾಮಿ ಪ್ರಸಾದವು ಅನ್ನಪ್ರಸಾದ ರೂಪದಲ್ಲಿ ನಿರಂತರವಾಗಿ ನಡೆಯಲಿ : ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಪೂರ್ಣ ಛತ್ರ ಲೋಕಾರ್ಪಣೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚವನ್ನು ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‍ ಕುಮಾರ್‍ ಭಂಡಾರಿ ದಂಪತಿ ಹಾಗೂ ಮನೆಯವರು ಕೊಡುಗೆಯಾಗಿ ಶ್ರೀ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಸುಮಾರು 8 ಕೆ.ಜಿ. ಬೆಳ್ಳಿಯನ್ನು ದಾರಂದ ಕವಚಕ್ಕೆ ಬಳಕೆ ಮಾಡಲಾಗಿದ್ದು, ದಾರಂದ ಕವಚ ಕೆಲಸ ನಿರ್ವಹಿಸಿದ ಮುಳಿಯ ಜ್ಯುವೆಲ್ಸ್ ಸಂಸ್ಥೆಯಿಂದ ಬೆಳಿಗ್ಗೆ ಮೆರವಣಿಗೆ ಮೂಲಕ ಬೆಳ್ಳಿಯ ದಾರಂದ ಕವಚವನ್ನು ದೇವಸ್ಥಾನಕ್ಕೆ ತರಲಾಯಿತು. ಬಳಿಕ ದೇವಳದ ಸತ್ಯಧರ್ಮ ನಡೆಯಲ್ಲಿಟ್ಟು ಸಮರ್ಪಣಾ ಪ್ರಾರ್ಥನೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚ ಸಮರ್ಪಣೆ Read More »

ಗುರುಪುರ ಮಳಲಿ ಮಸೀದಿಯಲ್ಲಿ ಪತ್ತೆಯಾದ ಮಂದಿರದ ಅವಶೇಷ!! | ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್!

ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿಯೊಳಗಡೆ ಮಂದಿರದ ಅವಶೇಷ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಡೆಸಿದ ವಿಚಾರಣೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ. ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯಲ್ಲಿ ಮಂದಿರದ ಅವಶೇಷ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ, ಹಿಂದೆ ಅಲ್ಲಿ ಮಠ ಇತ್ತು ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದ ಕದ ತಟ್ಟಿತ್ತು. ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ: ಅರ್ಜಿಯ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸಿವಿಲ್

ಗುರುಪುರ ಮಳಲಿ ಮಸೀದಿಯಲ್ಲಿ ಪತ್ತೆಯಾದ ಮಂದಿರದ ಅವಶೇಷ!! | ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್! Read More »

error: Content is protected !!
Scroll to Top