ಧಾರ್ಮಿಕ

ನಳೀಲು ಕ್ಷೇತ್ರ ಅದ್ಭುತವಾಗಿ ಬೆಳೆದಿದೆ-ಸುಬ್ರಹ್ಮಣ್ಯ ಶ್ರೀ | ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪುತ್ತೂರು :  ನಮ್ಮ ಹಿರಿಯರು ಹಾಕಿಕೊಟ್ಟ ಜೀವನ ಪದ್ದತಿಯನ್ನು ನಾವು ಪಾಲಿಸಬೇಕು. ಕಣ್ಣಿಗೆ ಕಾಣದ ಶಕ್ತಿಗಳು ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಿಕೊಂಡು ಪರೋಪಕರಿಯಾಗಿ ನಿಸ್ವಾರ್ಥತೆಯಿಂದ ಬದುಕುವುದರ ಮೂಲಕ ಧರ್ಮವನ್ನು ಗಟ್ಟಿಗೊಳಿಸಬೇಕು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ  ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ನಳೀಲು ಕ್ಷೇತ್ರದಲ್ಲಿ 20 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷನಾಗುವ ಅವಕಾಶವನ್ನು […]

ನಳೀಲು ಕ್ಷೇತ್ರ ಅದ್ಭುತವಾಗಿ ಬೆಳೆದಿದೆ-ಸುಬ್ರಹ್ಮಣ್ಯ ಶ್ರೀ | ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ Read More »

ಫೆ.21-22 : ಕುಂಟ್ಯಾನ ಕುಟುಂಬದ ದುಗಲಾಯ, ಧರ್ಮದೈವ ರುದ್ರಾಂಡಿ, ಪರಿವಾರ ದೈವಗಳ ನೇಮ ನಡಾವಳಿ

ಪುತ್ತೂರು: ಬನ್ನೂರು ಗ್ರಾಮದ ಕುಂಟ್ಯಾನ ಕುಟುಂಬದ ದುಗಲಾಯ, ಧರ್ಮದೈವ ರುದ್ರಾಂಡಿ ಮತ್ತು ಪರಿವಾರ ದೈವಗಳ ನಡಾವಳಿ ಫೆ.21 ಹಾಗೂ 22 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಧರ್ಮ ನಡಾವಳಿ ಅಂಗವಾಗಿ ಫೆ.21 ರಂದು ಬೆಳಿಗ್ಗೆ 8 ಕ್ಕೆ ಗಣಹೋಮ, ಸಂಜೆ 4 ಕ್ಕೆ ದುಗಲಾಯ, ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವುದು. ಸಂಜೆ 6 ಕ್ಕೆ ದುಗಲಾಯ ದೈವದ ನೇಮ, ರಾತ್ರಿ 9 ಕ್ಕೆ ಅನ್ನಸಂತರ್ಪಣೆ, ವರ್ಣಾರ ಪಂಜುರ್ಲಿ, ಜಾವತೆ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ,

ಫೆ.21-22 : ಕುಂಟ್ಯಾನ ಕುಟುಂಬದ ದುಗಲಾಯ, ಧರ್ಮದೈವ ರುದ್ರಾಂಡಿ, ಪರಿವಾರ ದೈವಗಳ ನೇಮ ನಡಾವಳಿ Read More »

ಫೆ.21-22 : ಬನ್ನೂರು ಆನೆಮಜಲು  ದೈಯ್ಯೆರೆ ಮಾಡ ನಡಿಮಾರ್ ಬಾವದಕೆರೆ ಶ್ರೀ ನಾಗಸನ್ನಿಧಿ, ಶ್ರೀ ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪುತ್ತೂರು: ಬನ್ನೂರು ಆನೆಮಜಲು  ದೈಯ್ಯೆರೆ ಮಾಡ ನಡಿಮಾರ್ ಬಾವದಕೆರೆ ಶ್ರೀ ನಾಗಸನ್ನಿಧಿ, ಶ್ರೀ ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಫೆ.21 ಹಾಗೂ 22 ರಂದು ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಅಯೋಧ್ಯಾನಗರ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ರಹ್ಮಕಲಶೋತ್ಸವದ ಅಂಗವಾಗಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.21 ಬುಧವಾರ ಬೆಳಿಗ್ಗೆ 11 ಕ್ಕೆ ಹಸಿರುವಾಣಿ ಸಮರ್ಪಣೆ, ಸಂಜೆ 7 ರಿಂದ

ಫೆ.21-22 : ಬನ್ನೂರು ಆನೆಮಜಲು  ದೈಯ್ಯೆರೆ ಮಾಡ ನಡಿಮಾರ್ ಬಾವದಕೆರೆ ಶ್ರೀ ನಾಗಸನ್ನಿಧಿ, ಶ್ರೀ ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ನ್ಯೂಸ್ ಪುತ್ತೂರು ತಂಡದಿಂದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವಾ ಕಾರ್ಯ | ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ನಳಿಲು ದೇವಸ್ಥಾನ

ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಸಂಸ್ಥೆಯ ಮೂಲಕ ಟ್ರಸ್ಟ್ ಅಧ್ಯಕ್ಷರು ಹಾಗೂ ನಿರ್ದೇಶಕರಿಂದ ಕೊಳ್ತಿಗೆ ಗ್ರಾಮದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಸೇವಾ ಕಾರ್ಯ ನಡೆಯಿತು. ಭಾನುವಾರ ಸಂಜೆ ಬ್ರಹ್ಮಕಲಶೋತ್ಸವದ ಅನ್ನಸಂತರ್ಪಣೆಗಾಗಿ ತರಕಾರಿ ಹಚ್ಚುವ ಕೆಲಸದೊಂದಿಗೆ ಸೇವಾ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಹಾಗೂ ಎಲ್ಲಾ ನಿರ್ದೇಶಕರು ಮತ್ತು ನ್ಯೂಸ್ ಪುತ್ತೂರಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೇವಾ ಕಾರ್ಯಕ್ಕೆ ಬ್ರಹ್ಮಕಲಶೋತ್ಸವ

ನ್ಯೂಸ್ ಪುತ್ತೂರು ತಂಡದಿಂದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವಾ ಕಾರ್ಯ | ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ನಳಿಲು ದೇವಸ್ಥಾನ Read More »

ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು : ಶ್ರದ್ದಾ ಕೇಂದ್ರಗಳ ಅಭಿವೃದ್ದಿಯಾದರೆ ಆ ಊರು ಸುಭಿಕ್ಷೆಯಾಗುತ್ತದೆ. ದೇವಾಲಯಗಳ ಬ್ರಹ್ಮಕಲಶೋತ್ಸವದಲ್ಲಿ ಪ್ರತಿಯೊಬ್ಬರು  ಭಾಗವಹಿಸಿ ತನ್ನದೆ ಆದ ಸೇವೆ ನೀಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ, ಶಾಸಕ ಆಶೋಕ್ ಕುಮಾರ್ ರೈ ಹೇಳಿದರು.  ಅವರು  ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಶನಿವಾರ ರಾತ್ರಿ  ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಧಾರ್ಮಿಕ ಕೇಂದ್ರಗಳಲ್ಲಿನ ನಿರಂತರ ಧಾರ್ಮಿಕ ಚಟುವಟಿಕೆ  ಧರ್ಮದ ಉಳಿವಿಗೆ ಕಾರಣವಾಗುತ್ತದೆ. ಸನ್ಮಾರ್ಗದಲ್ಲಿ ನಡೆಯುತ್ತಾ   ದೇವರ ಕಾರ್ಯದಲ್ಲಿ ತನ್ನನ್ನು

ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮ Read More »

ಫೆ.22: ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ

ಪೆರ್ನೆ: ಪೆರ್ನೆ ಗ್ರಾಮದ ಮಾಡತ್ತಾರು ಕೊರತಿಕಟ್ಟೆ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಫೆ.22 ಗುರುವಾರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಹಲವು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿದೈವ ಮತ್ತು ಗುಳಿಗ ದೈವ ಹಾಗೂ ನಾಗ ಸನ್ನಿಧಿಯಲ್ಲಿ  ಫೆ.22 ರಂದು ಬೆಳಿಗ್ಗೆ 8.30 ಕ್ಕೆ ದೇವತಾಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಸಾನಿಧ್ಯ ಕಲಶ ಪೂಜೆ, ಕಲಶಾಭಿಷೇಕ, ತಂಬಿಲ ಸೇವೆ , ನಾಗಬನದಲ್ಲಿ

ಫೆ.22: ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ Read More »

ಫೆ.21-22 : ಕೋಡಿಯಡ್ಕ ತರವಾಡು ಕುಟುಂಬ ದೈವಗಳ ಧರ್ಮ ನಡಾವಳಿ

ಸುಳ್ಯ: ಕೋಡಿಯಡ್ಕ ಕುಟುಂಬದ ದೈವಗಳ ಧರ್ಮ ನಡಾವಳಿಯು ಫೆ.21 ರಿಂದ 22 ರವರೆಗೆ ನಡೆಯಲಿದೆ. ಧರ್ಮ ನಡಾವಳಿಯ ಅಂಗವಾಗಿ ಫೆ.21 ರಂದು ಬೆಳಿಗ್ಗೆ 8 ಕ್ಕೆ ಗಣಹೋಮ, ಮಧ್ಯಾಹ್ನ 11 ಕ್ಕೆ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ 6.30 ಕ್ಕೆ ಧರ್ಮದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8 ಕ್ಕೆ ಜಾವತೆ ದೈವದ ನೇಮ, ರಾತ್ರಿ 9 ಕ್ಕೆ ಅನ್ನಸಂತರ್ಪಣೆ, ರಾತ್ರಿ 10 ಕ್ಕೆ ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ನೇಮ ನಡೆಯಲಿದೆ.

ಫೆ.21-22 : ಕೋಡಿಯಡ್ಕ ತರವಾಡು ಕುಟುಂಬ ದೈವಗಳ ಧರ್ಮ ನಡಾವಳಿ Read More »

ಪೆರ್ನೆ ನೇಂಜದಲ್ಲಿ ಸರ್ಪ ಸಂಸ್ಕಾರ

ಪೆರ್ನೆ: ಕಳೆದ ಕೆಲವು ದಿನಗಳ ಹಿಂದೆ ಪೆರ್ನೆ ಜೀವನ್ ಜ್ಯೋತಿ ಅಂಗಡಿ ಮುಂಭಾಗದ ನೇಂಜ ಮಾರ್ಗದಲ್ಲಿ ಆಕಸ್ಮಿಕ ದುರ್ಮರಣಕ್ಕೀಡಾದ ನಾಗರ ಹಾವಿನ ಬಗ್ಗೆ ಪರಿಸರ ಕಲ್ಯಾಣ, ದೋಷ ತಡೆಗಾಗಿ ಸರ್ಪ ಸಂಸ್ಕಾರ ಪಿಂಡ ಪ್ರಧಾನ ಕ್ರಿಯೆ ಶುಕ್ರವಾರ ನಡೆಯಿತು. ವಿದ್ವಾಂಸರಾದ ಕಶೆಕೋಡಿ ಸೂರ್ಯನಾರಾಯಣ ಭಟ್  ನೇತೃತ್ವದಲ್ಲಿ ಬೆಳಿಗ್ಗೆ 8:00 ಗಂಟೆಗೆ ಆರಂಭಿಸಿ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ನಂತರ ಅನ್ನ ಪ್ರಸಾದ ಸ್ವೀಕಾರದೊಂದಿಗೆ  ಸಂಪನ್ನಗೊಂಡಿತು. ಈ ಪುಣ್ಯ ಕ್ರಿಯೆಯಲ್ಲಿ ಗ್ರಾಮಸ್ಥರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ ವಲಯ ಮೇಲ್ವಿಚಾರಕರು

ಪೆರ್ನೆ ನೇಂಜದಲ್ಲಿ ಸರ್ಪ ಸಂಸ್ಕಾರ Read More »

ಮಾ.3-4: ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ, ಪ್ರತಿಷ್ಠಾ ವರ್ಧಂತಿ

ಪುತ್ತೂರು: ಬನ್ನೂರು ಗ್ರಾಮದ ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ಹಾಗೂ ಪ್ರತಿಷ್ಠಾವರ್ಧಂತಿ ಮಾ.3 ಹಾಗೂ 4 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ಮಾ.3 ಭಾನುವಾರ ವೇ. ಮೂ. ಮಿತ್ತೂರು ತಿರುಮಲೇಶ್ವರ ಭಟ್ಟರ ನೇತೃತ್ವದಲ್ಲಿ ಮೂಡಪ್ಪಸೇವೆ ನಡೆಯಲಿದೆ. ಸಂಜೆ 4 ರಿಂದ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ, ರಾತ್ರಿ 7 ರಿಂದ ಸಂಕಲ್ಪ, ಮೂಡಪ್ಪ ಸಮರ್ಪಣೆ, ರಾತ್ರಿ 9 ರಿಂದ ರಂಗಪೂಜೆ, ಕಲ್ಪೋಕ್ತ

ಮಾ.3-4: ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ, ಪ್ರತಿಷ್ಠಾ ವರ್ಧಂತಿ Read More »

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ |ಉಗ್ರಾಣ ಮುಹೂರ್ತ, ಪಾಕಶಾಲೆ, ಕಾರ್ಯಾಲಯ ಉದ್ಘಾಟನೆ

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೊತ್ಸವಕ್ಕೆ ಇಂದು ವೈಭವದ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಫೆ.16ರಂದು ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕಶಾಲೆ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ ,ಗೊನೆ ಮುಹೂರ್ತ ನೆರವೇರಿತು. ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಅರ್ಚಕರಾದ ಶ್ರೀನಿವಾಸ್‌ ಹೆಬ್ಬಾರ್‌ ,ಪ್ರವೀಣ್‌ ಭಟ್‌ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.ಬಳಿಕ ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆಯನ್ನು ಪೆರುವಾಜೆ

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ |ಉಗ್ರಾಣ ಮುಹೂರ್ತ, ಪಾಕಶಾಲೆ, ಕಾರ್ಯಾಲಯ ಉದ್ಘಾಟನೆ Read More »

error: Content is protected !!
Scroll to Top