ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅವಭೃತ ಸ್ನಾನ ಸಂಪನ್ನ | ಶ್ರೀ ದೇವರೊಂದಿಗೆ ತೆರಳಿದ ಸಹಸ್ರಾರು ಭಕ್ತಾದಿಗಳು
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ ಶನಿವಾರ ಮುಂಜಾನೆ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಕುಮಾರಧಾರ ನದಿಯಲ್ಲಿ ಶನಿವಾರ ಶುಕ್ರವಾರ ಮುಂಜಾನೆ ಅವಭೃತ ಸ್ನಾನ ಮುಗಿಸಿದರು. ಶುಕ್ರವಾರ ಸಂಜೆ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ರಕ್ತೇಶ್ವರಿ ದೈವಗಳೊಂದಿಗೆ ನುಡಿಗಟ್ಟು ನಡೆದು ಬಳಿಕ ರಥಬೀದಿಯಿಂದ ಅವಭೃತ ಸವಾರಿಗೆ ಹೊರಟರು. ಶ್ರೀ ದೇವರೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳಿದರು. ದಾರಿಯುದ್ದಕ್ಕೂ ಸುಮಾರು 54 ಕಟ್ಟೆಗಳಲ್ಲಿ […]









