ನಾಳೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ, ಪರಿವಾರ ದೈವಗಳ ನೇಮೋತ್ಸವ | ಸ್ವರ್ಣದ ಮಲ್ಲಿಗೆಯ ಮೊಗ್ಗಿನ ಹಾರ, ಬೆಳ್ಳಿಯ ಗಗ್ಗರ ಸಮರ್ಪಣೆ
ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿ ಏ.28 ಸೋಮವಾರ ನಡೆಯಲಿದೆ. ನಡಾವಳಿಯ ಪೂರ್ವಭಾವಿಯಾಗಿ ಇಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಮಕರತೋರಣರೋಹಣ, ಶ್ರೀ ದೈವಗಳ ಭಂಡಾರ ತೆಗೆದು ಮೂಲಸ್ಥಾನದಿಂದ ನೇಮ್ ನಡೆಯುವ ದೈವಸ್ಥಾನಕ್ಕೆ ಆಗಮನ, ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಎ.28ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದ ಬಳಿಕ […]










