ಧಾರ್ಮಿಕ

ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ

ಪುತ್ತೂರು: :ಮುಳಿಯ  ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ತನ್ನ ನವೀಕೃತ, ನೂತನ ಹಾಗೂ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಏಪ್ರಿಲ್ 20 ರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅದರ ಭಾಗವಾಗಿ ಮಂಗಳವಾರ ಪುತ್ತೂರು ಮುಳಿಯದಲ್ಲಿ  ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಕುಂಕುಮಾರ್ಚನೆಯ ಪುಣ್ಯ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ಉದಯ ಭಟ್ ಅವರ ವೇದಪಾರಂಗತದೊಂದಿಗೆ ನೆರವೇರಿತು.  ಸತತವಾಗಿ  3 ವರ್ಷಗಳಿಂದ  ಮಾತಾಭಗಿನಿಯರಿಗೆ ಲಲಿತಾ ಸಹಸ್ರನಾಮ  ಹೇಳಿಕೊಟ್ಟ  ನೆಲೆಯಲ್ಲಿ  […]

ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ಟೀಮ್‍ ಬಾಯ್ಲರ್ ಸಿಸ್ಟಮ್‍ ಉದ್ಘಾಟನೆ

ಪುತ್ತೂರು:  ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರದಲ್ಲಿ ಸುಮಾರು 16 ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಸ್ಟೀಮ್ ಬಾಯ್ಲರ್ ಸಿಸ್ಟಮ್ ನ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಕೆನರಾ ಬ್ಯಾಂಕ್ ನ 10 ಲಕ್ಷ ರೂ.,  ಕರ್ಣಾಟಕ ಬ್ಯಾಂಕ್ ನ 5 ಲಕ್ಷ ರೂ. ಹಾಗೂ ದಾನಿಗಳ ದೇಣಿಗೆಯಲ್ಲಿ ಸ್ಟೀಮ್ ಬಾಯ್ಲರ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು. ಬೆಳಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಸಂತ ಕುಮಾರ್ ಕೆದಿಲಾಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಬಳಿಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ಟೀಮ್‍ ಬಾಯ್ಲರ್ ಸಿಸ್ಟಮ್‍ ಉದ್ಘಾಟನೆ Read More »

ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ

ಇರುಮುಡಿ ಹೊತ್ತು ಅಯ್ಯಪ್ಪನ ಸನ್ನಿಧಾನಕ್ಕೆ ಹೋಗಲಿರುವ ರಾಷ್ಟ್ರಪತಿ ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು. ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಶಬರಿಮಲೆ ಏರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಭದ್ರತಾ ಇಲಾಖೆಯು ಅವರು ನೇರವಾಗಿ ಇಳಿಯಲು ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು ಆದರೆ ವಿರೋಧದಿಂದಾಗಿ ಆ ಆಲೋಚನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ನಿಲಕ್ಕಲ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿದ್ದಾರೆ.

ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ Read More »

ಪುತ್ತೂರಿನ ಧರ್ಮಶಿಕ್ಷಣ ತರಗತಿಗಳಿಗೆ ಶೃಂಗೇರಿ ಜಗದ್ಗುರುಗಳಿಂದ ಚಾಲನೆ | ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎರಡು ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಕಾರ್ಯಕರ್ತರು

ಪುತ್ತೂರು: ಇಡಿಯ ದೇಶದಲ್ಲೇ ಪ್ರಪ್ರಥಮವಾಗಿ ಪುತ್ತೂರಿನಲ್ಲಿ ಜಾರಿಗೊಳಿಸಲು ಯೋಜಿಸಿರುವ ಹಿಂದೂ ಧರ್ಮ ಶಿಕ್ಷಣ ತರಗತಿಗಳಿಗೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಧಾರ್ಮಿಕ ಶಿಕ್ಷಣದ ಮಾರ್ಗದರ್ಶಕರೂ, ಪ್ರೇರಕರೂ ಆದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಧರ್ಮ ಶಿಕ್ಷಣ ತರಗತಿ – ಧರ್ಮಾಭ್ಯುದಯವನ್ನು  ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಸ್ವಾಮೀಜಿಗಳು, ಹಿಂದೂ ಧರ್ಮವೆಂಬುದು ಅನಾದಿ ಕಾಲದಿಂದಲೂ ಬಂದ ಸನಾತನ ಧರ್ಮ. ಎಷ್ಟೇ ಜನ ಈ ಧರ್ಮವನ್ನು ನಾಶಗೊಳಿಸುತ್ತೇವೆಂದು ಅಂದುಕೊಂಡರೂ ಅದು

ಪುತ್ತೂರಿನ ಧರ್ಮಶಿಕ್ಷಣ ತರಗತಿಗಳಿಗೆ ಶೃಂಗೇರಿ ಜಗದ್ಗುರುಗಳಿಂದ ಚಾಲನೆ | ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎರಡು ಸಾವಿರಕ್ಕೂ ಅಧಿಕ ಮಂದಿ ಧಾರ್ಮಿಕ ಕಾರ್ಯಕರ್ತರು Read More »

ಮೇ 14 : ಅರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಕಡಬ: ತಾಲೂಕಿನ ಸವಣೂರು ಗ್ರಾಮದ ಅರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್‍ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮೇ 14 ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ 12 ಸೋಮವಾರ ಬೆಳಿಗ್ಗೆ 9.30 ಕ್ಕೆ ಹಸಿರುಹೊರೆಕಾಣಿಕೆ ಸಮರ್ಪಣೆ, ಉಪಾಹಾರ, ಅಲಂಕಾರ ಸೇವೆ, ಸ್ವಚ್ಛತೆ, ಸಂಜೆ 5 ಕ್ಕೆ ತಂತ್ರಿಗಳ ಆಗಮನ, ರಾತ್ರಿ 7 ಕ್ಕೆ ಸಾರ್ವಜನಿಕ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಪರಿಗ್ರಹ, ಪುಣ್ಯಾಹ ಪ್ರಾಸಾದ ಶುದ್ಧಿ,

ಮೇ 14 : ಅರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ Read More »

ಮೇ. 6 : ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ  ಪ್ರತಿಷ್ಠಾ ವಾರ್ಷಿಕೋತ್ಸವ ಮೇ. 6 ರಂದು ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ.5ರಂದು ಬೆಳಿಗ್ಗೆ 8.35ಕ್ಕೆ ನಿತ್ಯ ಮಹಾಪೂಜೆ, 11.30ಕ್ಕೆ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿ ಶ್ರೀ ದೇವಳಕ್ಕೆ ಹೊರೆಕಾಣಿಕೆ ಸಮರ್ಪಣೆ,  ಮಧ್ಯಾಹ್ನ 12.15 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 1ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಮೇ.6ರಂದು ಬೆಳಿಗ್ಗೆ 8.35ಕ್ಕೆ ನಿತ್ಯ ಮಹಾಪೂಜೆ, ಬೆಳಿಗ್ಗೆ

ಮೇ. 6 : ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಕಾಣಿಯೂರು (ಮೇ. 11) : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮ| ಸತ್ಯನಾರಯಣ ಪೂಜೆ

ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮದ ವತಿಯಿಂದ 49ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ನರಸಿಂಹ ಜಯಂತಿ, ವಿಶೇಷ ಪೂಜೆ ಮೇ.11 ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮೇ. 6 ಮಂಗಳವಾರದಿಂದ ಪ್ರತಿದಿನ ಸಂಜೆ 6ಗಂಟೆಯಿಂದ 9ಗಂಟೆಯವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಸುವರ್ಣ ಸಂಭ್ರಮದ ಪ್ರಯುಕ್ತ ವಿಶೇಷ ಭಜನಾ ಸೇವೆ, ಶ್ರೀ ರಾಮತೀರ್ಥ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್‍ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮೇ.11 ಭಾನುವಾರ ಬೆಳಗ್ಗೆ

ಕಾಣಿಯೂರು (ಮೇ. 11) : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮ| ಸತ್ಯನಾರಯಣ ಪೂಜೆ Read More »

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು : ಬಾಲಕೃಷ್ಣ ಬೋರ್ಕರ್ | ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ

ಪುತ್ತೂರು: ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಇಡಿಯ ದೇಶದಲ್ಲೇ ನಡೆಸಲು ಉದ್ದೇಶಿಸಲಾಗಿರುವ ಹಿಂದೂ ಧರ್ಮ ಶಿಕ್ಷಣ ವ್ಯವಸ್ಥೆ ಮೊದಲು ಪುತ್ತೂರಿನಲ್ಲಿ ಜಾರಿಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಮಹೋನ್ನತ ಹಾಗೂ ಐತಿಹಾಸಿಕ ಘಟನೆಗೆ ಪುತ್ತೂರಿನ ನಾಗರಿಕ ಸಮಾಜ ಸಾಕ್ಷಿಯಾಗುತ್ತಿದೆ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಹೇಳಿದರು. ಅವರು ನಗರದ ತೆಂಕಿಲದಲ್ಲಿರುವ ಸ್ವಾಮಿ ಕಲಾ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು : ಬಾಲಕೃಷ್ಣ ಬೋರ್ಕರ್ | ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ Read More »

ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ನೇಮೋತ್ಸವ | ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ, ಹರಕೆ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28 ರಂದು ಪೂರ್ವಶಿಷ್ಟ ಸಂಪ್ರದಾಯದಂತೆ ನೆರವೇರಿತು. ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ನೇಮೋತ್ಸವ | ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ, ಹರಕೆ ಸಮರ್ಪಣೆ Read More »

ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ ‘ಕುಂಕುಮ ಮಹತಿ’ ಕೃತಿ ಲೋಕಾರ್ಪಣೆ

ಪುತ್ತೂರು: ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಮುಳಿಯ ಅವರ ಮುತುವರ್ಜಿಯಲ್ಲಿ, ಕಾಸರಗೋಡಿನ  ಲೇಖಕಿ  ಶೀಲಾ ಲಕ್ಷ್ಮೀ ಅವರು ಬರೆದ ಕೃತಿ ‘ಕುಂಕುಮ ಮಹತಿ’ ಯು ಭಾನುವಾರ  ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣ ದಲ್ಲಿ ಲೋಕಾರ್ಪಣೆ ಗೊಂಡಿತು. ದೇವಾಲಯ ಸಂವರ್ಧನ  ಸಮಿತಿ ಮಂಗಳೂರು ವಿಭಾಗ, ಮುಳಿಯ ಪ್ರತಿಷ್ಠಾನ ಪುತ್ತೂರು ಸಹಯೋಗದಲ್ಲಿ , ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ  ಕೃತಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಚಿಂತಕ ಕಶೆಕೋಡಿ ಸೂರ್ಯನಾರಾಯಣ ಭಟ್ ಕೃತಿ ಲೋಕಾರ್ಪಣೆ

ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ ‘ಕುಂಕುಮ ಮಹತಿ’ ಕೃತಿ ಲೋಕಾರ್ಪಣೆ Read More »

error: Content is protected !!
Scroll to Top