ಧಾರ್ಮಿಕ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಣಿಗೆ ಚೆಕ್ ಹಸ್ತಾಂತರ

ಪುತ್ತೂರು: ತಾಲೂಕಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಈಗಾಗಲೇ ಮೂರು ಲಕ್ಷ ರೂ. ದೇಣಿಗೆ ನೀಡಲಾಗಿದೆ. ಇದೀಗ ಎರಡನೇ ಹಂತದ 2.50 ಲಕ್ಷ ರೂ. ಹೀಗೆ ಒಟ್ಟು 5.50 ಲಕ್ಷ ರೂ. ನೀಡಿದ್ದಾರೆ. ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಮ್‍. ಸಮಿತಿ ಸದಸ್ಯರಿಗೆ 2.50 ಲಕ್ಷ ಚೆಕ್‍ ನ್ನು ಶುಕ್ರವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, […]

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಣಿಗೆ ಚೆಕ್ ಹಸ್ತಾಂತರ Read More »

ಮೇ 13: ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು: ಮಹತೋಭಾರ ಪುತ್ತೂರು  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ ಮೇ 13ರಂದು ಪ್ರತಿಷ್ಠಾ ವರ್ಧಂತ್ಯುತ್ಸವ  ನಡೆಯಲಿದೆ. ಕುಂಟಾರು  ರವೀಶ ತಂತ್ರಿಗಳ  ನೇತೃತ್ವದಲ್ಲಿ ವಿವಿಧ  ಧಾರ್ಮಿಕ  ಕಾರ್ಯಕ್ರಮ  ನಡೆಯಲಿದೆ. ರಾತ್ರಿ  7.30ಕ್ಕೆ  ದೇವರ ಬಲಿ ಹೊರಟು ಹೊರಾಂಗಣದಲ್ಲಿ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಬಂಡಿ  ಉತ್ಸವ ಜರಗಲಿದೆ  ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮೇ 13: ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ Read More »

ಮೇ 12 : ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ

ಪುತ್ತೂರು: ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ ನಡೆಯಲಿದೆ. ಪೂರ್ವಿಕರ ಕಾಲದಿಂದ ಆರಾಧಿಸಿಕೊಂಡು ಬಂದ ದೈವಗಳನ್ನು ಮಾಯದಿಂದ ಜೋಗಕ್ಕೆ ಬರಿಸಿ, ಒಂದು ಕುಡ್ತೆ ಹಾಲು, ತುಂಬು ಗೆರಸೆ ಬಾರಣೆ ಕೊಡಿಸುತ್ತೇವೆಂದು ಈ ಹಿಂದೆ ಮರಿಕೆಯ ಸಿಂಗಾರ ಮನೆಯವರು ಪ್ರಾರ್ಥಿಸಿಕೊಂಡ ಹಿನ್ನಲೆಯಲ್ಲಿ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8 ಕ್ಕೆ ಧರ್ಮದೈವ ನೇಮೋತ್ಸವ ನಡೆಯಲಿದೆ ಎಂದು ಡಾ. ನವೀನ್ ಕುಮಾರ್ ಮರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 12 : ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ Read More »

ಚಲನಚಿತ್ರದ ಮೂಲಕ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ | ‘ರಾಮನ ಅವತಾರ’ ಚಲನಚಿತ್ರ ನಿಷೇಧಿಸಲು ಆಗ್ರಹ

ಬೆಂಗಳೂರು : ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ಕನ್ನಡ ಚಲನಚಿತ್ರ ಮೇ 10 ರಂದು ಬಿಡುಗಡೆಗೊಳ್ಳಲಿದ್ದು ಅದರ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಲನಚಿತ್ರದಲ್ಲಿ ಕೋಟ್ಯಾಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಲಾಗಿದೆ. ಆದ್ದರಿಂದ ಸಿನಿಮಾದ ಹೆಸರನ್ನು ಬದಲಾಯಿಸಬೇಕು ಮತ್ತು ಅದರಲ್ಲಿನ ರಾಮಾಯಣದ ಅಪಮಾನಾತ್ಮಕ ಸನ್ನಿವೇಶಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಕರ್ನಾಟಕ

ಚಲನಚಿತ್ರದ ಮೂಲಕ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ | ‘ರಾಮನ ಅವತಾರ’ ಚಲನಚಿತ್ರ ನಿಷೇಧಿಸಲು ಆಗ್ರಹ Read More »

ಮೇ 10 ರಿಂದ ಕೇದಾರನಾಥ ದೇವಾಲಯ ಭಕ್ತರ  ದರ್ಶನಕ್ಕೆ ಮುಕ್ತ

ಕೇದಾರನಾಥ : ಕೇದಾರನಾಥ ಧಾಮದಲ್ಲಿ ಭಾನುವಾರದಿಂದ ವಿಶೇಷ ಪೂಜೆಗಳು ಆರಂಭವಾಗಿದೆ. ಮೇ 10 ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಸಂಜೆ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಭೈರವನಾಥ ದೇವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರ ಉಖಿಮಠದ  ಓಂಕಾರೇಶ್ವರ ದೇವಸ್ಥಾನದಿಂದ  ಪಂಚಮುಖಿ ಭೋಗಮೂರ್ತಿ ಪಲ್ಲಕಿ ಯಾತ್ರೆ ಆರಂಭವಾಯಿತು. ಇದೇ ತಿಂಗಳ 9ರಂದು ಕೇದಾರನಾಥ ಧಾಮ ತಲುಪಲಿದೆ. ಈ ತಿಂಗಳ 10 ರಂದು ಬೆಳಿಗ್ಗೆ 7 ಗಂಟೆಗೆ ಕೇದಾರನಾಥ ಧಾಮದ ಬಾಗಿಲು ಭಕ್ತರಿಗೆ ಪೂಜೆಗಾಗಿ ತೆರೆಯಲಾಗುತ್ತದೆ. ರುದ್ರಪ್ರಯಾಗದಲ್ಲಿರುವ 

ಮೇ 10 ರಿಂದ ಕೇದಾರನಾಥ ದೇವಾಲಯ ಭಕ್ತರ  ದರ್ಶನಕ್ಕೆ ಮುಕ್ತ Read More »

ನಾಳೆ (ಮೇ 5) : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಧನ್ಯೋತ್ಸವ’ ಸಭೆ

ಪುತ್ತೂರು : ತಾಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದು ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ‘ಧನ್ಯೋತ್ಸವ’ ಸಭೆ ಮೇ 5 ಭಾನುವಾರ ಸಂಜೆ 5 ಗಂಟೆಗೆ ಶ್ರೀ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಕರಸೇವಕರು, ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಕರಸೇವಕರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ

ನಾಳೆ (ಮೇ 5) : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಧನ್ಯೋತ್ಸವ’ ಸಭೆ Read More »

ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ | ವೈಭವದಿಂದ ನಡೆಯಿತು ಹೊರೆ ಕಾಣಿಕೆ ಸಮರ್ಪಣೆ, ವಿವಿಧ ವೈದಿಕ ಕಾರ್ಯಕ್ರಮಗಳು | 300 ವರ್ಷಗಳ ಬಳಿಕ ಧರ್ಮಚಾವಡಿಯಲ್ಲಿ ನಡೆಯಿತು ನೇಮೋತ್ಸವ

ಪುತ್ತೂರು: ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹದ ಅಂಗವಾಗಿ ಬುಧವಾರ ಸಂಜೆ ಗ್ರಾಮಸ್ಥರಿಂದ ವೈಭವದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ 4 ಗಂಟೆಗೆ ಶಾಂತಿಮೊಗರು ದೇವಸ್ಥಾನದ ದ್ವಾರದ ಬಳಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ದೈವಸ್ಥಾನಕ್ಕೆ ಬಂದು ಸಮರ್ಪಣೆಯಾಯಿತು. ಸಂಜೆ 6.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರಣೆ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ

ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ | ವೈಭವದಿಂದ ನಡೆಯಿತು ಹೊರೆ ಕಾಣಿಕೆ ಸಮರ್ಪಣೆ, ವಿವಿಧ ವೈದಿಕ ಕಾರ್ಯಕ್ರಮಗಳು | 300 ವರ್ಷಗಳ ಬಳಿಕ ಧರ್ಮಚಾವಡಿಯಲ್ಲಿ ನಡೆಯಿತು ನೇಮೋತ್ಸವ Read More »

ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಇಂದು ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ವರ್ಷಾವಧಿ ನೇಮೋತ್ಸವ

ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ, ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1ರಂದು ವರ್ಷಾವಧಿ ನೇಮೋತ್ಸವ ನಡೆಯಲಿದೆ. ದೈವಸ್ಥಾನದಲ್ಲಿ ಇಂದು ಬೆಳಿಗ್ಗೆ 7.30ರಿಂದ ಗಣಹೋಮ, ನವಕ ಕಲಶ, ಬೆಳಿಗ್ಗೆ11ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ವಿಜೃಂಭಣೆಯಿಂದ ನಡೆದಿದೆ. ಮಧ್ಯಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ. ರಾತ್ರಿ 11 ರಿಂದ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ

ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಇಂದು ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ವರ್ಷಾವಧಿ ನೇಮೋತ್ಸವ Read More »

ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿವಿಎಸ್ ಭೇಟಿ

ಸುಳ್ಯ: ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿರುವ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಮಂಗಳವಾರ ಭೇಟಿ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸ್ವಯಂಸೇವಕರಾಗಿ ದುಡಿದ ಎಲ್ಲರೊಂದಿಗೂ ಮಾತನಾಡಿ ಖುಷಿಪಡಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್,  ಬ್ರಹ್ಮಕಲಶೋತ್ಸವ ಸಮಿತಿಯ ಆಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ

ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಸದ, ಮಾಜಿ ಮುಖ್ಯಮಂತ್ರಿ ಡಿವಿಎಸ್ ಭೇಟಿ Read More »

ಇಂದು :  ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ |ಕಾಪು ರಂಗ ತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ

ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರಗಡಿಗುತ್ತು ಶ್ರೀ ಉಳ್ಳಾಕುಲು ಮಾಡ ,ಗ್ರಾಮ ದೈವ ಅಬ್ಬೆಜಲಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಮೇ.1ರಂದು ವರ್ಷಾವಧಿ ನೇಮೋತ್ಸವ ನಡೆಯಲಿದೆ. ದೈವಸ್ಥಾನದಲ್ಲಿ ಮೇ.1ರಂದು ಬೆಳಿಗ್ಗೆ 7.30ರಿಂದ ಗಣಹೋಮ, ನವಕ ಕಲಶ ,ಬೆಳಿಗ್ಗೆ11ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ,ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 6.30ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ. ರಾತ್ರಿ 11 ರಿಂದ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಮೇ.2ರಂದು

ಇಂದು :  ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ,ವರ್ಷಾವಧಿ ನೇಮೋತ್ಸವ |ಕಾಪು ರಂಗ ತರಂಗ ಕಲಾವಿದರ ಅಭಿನಯದ ಒರಿಯೆ ನಾಟಕ ಪ್ರದರ್ಶನ Read More »

error: Content is protected !!
Scroll to Top