ಧಾರ್ಮಿಕ

ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ

ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು ಶಬರಿಮಲೆ : ಶಬರಿಮಲೆ ಯಾತ್ರಾ ಋತು ಶುರುವಾದ ಬರೀ 12 ದಿನದಲ್ಲೇ ಕ್ಷೇತ್ರದ ಆದಾಯದಲ್ಲಿ 15.89 ಕೋ.ರೂ. ಏರಿಕೆ ಕಂಡುಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಅನುಕೂಲವಾಗುವ ಅನೇಕ ಉಪಕ್ರಮಗಳನ್ನು ಕೇರಳದ ದೇವಸ್ವಂ ಬೋರ್ಡ್‌ ಈ ಸಲ ಕೈಗೊಂಡಿರುವುದರಿಂದ ಇಷ್ಟರ ತನಕದ ಯಾತ್ರೆ ಸರಾಗವಾಗಿ ನಡೆದಿದೆ. ಅಂತೆಯೇ ಕ್ಷೇತ್ರದ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ.ಕಳೆದ ವರ್ಷ ಆರಂಭದ 12 […]

ಶಬರಿಮಲೆ : 12 ದಿನದಲ್ಲಿ 63 ಕೋ.ರೂ. ಸಂಗ್ರಹ; 16 ಕೋ. ರೂ ಹೆಚ್ಚಳ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ ಶನಿವಾರ ರಾತ್ರಿ ನಡೆಯಿತು. ದೀಪೋತ್ಸವದ ಅಂಗವಾಗಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಂಜೆ ಬಲಿ ಉತ್ಸವ ನಡೆದು ಬಳಿಕ ಮಹಾಮಂಗಳಾರತಿ ನಡೆಯಿತು. ಮಹಾಮಂಗಳಾರತಿಯ ದೀಪದಿಂದ ದೇವಸ್ಥಾನ ರಥಬೀದಿ ಸಹಿತ ಒಳಾಂಗಣದಲ್ಲಿ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರಿಂದ ಅಚ್ಚುಕಟ್ಟಾಗಿ ಜೋಡಿಸಿಡಲಾದ ಹಣತೆಗೆ ಉರಿಸಲಾಯಿತು. ದೇವಸ್ಥಾನದ ಇಡಿ ವಠಾರ ಹಣತೆಯ ಬೆಳಕಿನಿಂದ  ಸೇರಿದ್ದ ಸಾವಿರಾರು ಭಕ್ತಾದಿಗಳಲ್ಲಿ ಭಕ್ತಿಯನ್ನುಂಟು ಮಾಡಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹೊರಾಂಗಣದಲ್ಲಿ ಕುಣಿತ ಭಜನೆ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಲಕ್ಷದೀಪೋತ್ಸವ Read More »

ಒಡಿಯೂರು  ಶ್ರೀಗಳಿಂದ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು :  ಡಿ. 25 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ನಡೆಯಲಿರುವ ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳುವಾರು  ಇದರ  56 ನೇ ವಾರ್ಷಿಕೋತ್ಸವ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ” ವಿಂಶತಿ”ವರ್ಷದ  ಆಮಂತ್ರಣ ಪತ್ರಿಕೆಯನ್ನು  ಒಡಿಯೂರಿನಲ್ಲಿ ಪರಮಪೂಜ್ಯ ಶ್ರೀ  ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿ ಶುಭಹಾರೈಸಿದರು . ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಮಹಿಳಾ ಕಲಾವಿದರಿಂದ ಯಕ್ಷ ತಾಪಸಿಯರು  ಸರಣಿ ಸಂವಾದ ಕಾರ್ಯಕ್ರಮ, ಹಿರಿಯ ಕಲಾವಿದರಿಂದ ತಾಳಮದ್ದಳೆ, ಯಕ್ಷಗಾನ ಸಂಘಟಕ

ಒಡಿಯೂರು  ಶ್ರೀಗಳಿಂದ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ Read More »

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ  ವಸ್ತು ಪ್ರದರ್ಶನ ಮಂಟಪದಲ್ಲಿ ಪುತ್ತೂರು  ಬೊಳುವಾರು  ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಸಂಭ್ರಮದ 15ನೇ ಸರಣಿ  ತಾಳಮದ್ದಳೆ “ಶರಸೇತುಬಂಧ ಜರಗಿತು. ಭಾಗವತರಾಗಿ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ, ಮದ್ದಲೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಪಿ.ಜಿ.ಜಗನ್ನಿವಾಸ ರಾವ್, ಮುಮ್ಮೇಳದಲ್ಲಿ ಶುಭಾ ಅಡಿಗ (ಹನೂಮಂತ), ಪ್ರೇಮಲತಾರಾವ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ),  ಹರಿಣಾಕ್ಷಿ .ಜೆ.ಶೆಟ್ಟಿ (ವೃದ್ಧ ಬ್ರಾಹ್ಮಣ) ಭಾಗವಹಿಸಿದ್ದರು. ಸಂಘದ ನಿರ್ದೇಶಕ ಭಾಸ್ಕರ

ಧರ್ಮಸ್ಥಳ ವಸ್ತು ಪ್ರದರ್ಶನ ಮಂಟಪದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ತಾಳಮದ್ದಳೆ Read More »

ನಾಳೆ (ನ.30) : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ | ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.30 ಶನಿವಾರ ನಡೆಯುವ ಲಕ್ಷದೀಪೋತ್ಸವದ ಅಂಗವಾಗಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ದೇವಸ್ಥಾನದ ರಥಬೀದಿ ಸಹಿತ ಸುತ್ತಮುತ್ತಲಲ್ಲಿ ಬಿದ್ದಿರುವ ಪ್ಲಾಸ್ಟಿಕ್‍, ಇನ್ನುಇನ್ನಿತರ ಕಡಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛತೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಬಜರಂಗದಳದ ಮುರಳೀಕೃಷ್ಣ ಹಸಂತಡ್ಕ, ಕೃಷ್ಣಪ್ರಸಾದ್ ಮುಳಿಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ನಾಳೆ (ನ.30) : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ | ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯ Read More »

ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳಲ್ಲಿ ಪೊಲೀಸರ ಫೋಟೊಶೂಟ್‌

ಸಂವೇದನಾ ರಹಿತ ಪೊಲೀಸರಿಗೆ ಕಠಿಣ ತರಬೇತಿಯ ಶಿಕ್ಷೆ ಶಬರಿಮಲೆ : ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಪರಮ ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಫೋಟೊ ಶೂಟ್‌ ಮಾಡಿರುವುದು ದೇಶವ್ಯಾಪಿ ಆಕ್ರೋಶದ ಕಿಡಿ ಎಬ್ಬಿಸಿದ್ದು, ಈ 23 ಪೊಲೀಸರನ್ನು ಶಬರಿಮಲೆಯ ಬಂದೋಬಸ್ತಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕಠಿಣ ತರಬೇತಿಗೆ ಕಳುಹಿಸುವ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿದೆ. ಭಾನುವಾರ ಸನ್ನಿಧಾನದಲ್ಲಿ ಕರ್ತವ್ಯದಲ್ಲಿದ್ದ 30 ಪೊಲೀಸರು ಪವಿತ್ರ ಹದಿನೆಂಟು ಮೆಟ್ಟಿಲುಗಳ ಮೇಲೆ ನಿಂತು ಫೋಟೊಶೂಟ್‌ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಶಬರಿಮಲೆಯ ಪವಿತ್ರ 18 ಮೆಟ್ಟಿಲುಗಳಲ್ಲಿ ಪೊಲೀಸರ ಫೋಟೊಶೂಟ್‌ Read More »

ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಕರೆ ಉತ್ಸವ ಮಂಗಳವಾರ ಮುಸ್ಸಂಜೆ ನಡೆಯಿತು.

ಪುತ್ತೂರು : ತುಳುನಾಡಿನಲ್ಲಿ ಭತ್ತವನ್ನು ಬೇಸಾಯ ಮಾಡುವ ರೈತಾಪಿ ಜನರು ಆರಾಧಿಸುತ್ತಾ ಬಂದಿರುವ ಆಚರಣೆಯಲ್ಲಿ ಪೂಕರೆ ಹಾಕುವ ಪದ್ಧತಿಯೂ ಒಂದು. ಫಲವಂತಿಕೆಯ ಹಿನ್ನೆಲೆಯಲ್ಲಿ ಸುಗ್ಗಿ ಪೂಕರೆಯ ವೇಳೆ ಬೇಸಾಯದ ದೈವವಾಗಿ ಎರುಕೋಲ ದೈವದ ಆರಾಧನೆ ನಡೆಯುತ್ತದೆ. ದೇವರ ಮಾರು ಗದ್ದೆಯಲ್ಲಿ ಪೂಕರೆ ಉತ್ಸವದ ಆಚರಣೆಯೂ ಇಲ್ಲಿನ ಸಂಪ್ರದಾಯಕ್ಕೆ ಸೇರಿದೆ. ಪೂಕರೆಯ ಅಂಗವಾಗಿ ಹಿಂದಿನ ಕಾಲದಿಂದ ನಡೆದು ಬಂದ ಈ ಕ್ಷೇತ್ರದ ಪೂರ್ವಶಿಷ್ಟ ಸಂಪ್ರದಾಯದಂತೆ ಪುಷ್ಪಕನ್ನಡಿ ರಹಿತವಾಗಿ ನಿತ್ಯದ ಬಲಿಮೂರ್ತಿಗೆ ಆಭರಣ ಮತ್ತು ವಿವಿಧ ಹೂವುಗಳಿಂದ ಓರಣವಾಗಿ ಅಲಂಕರಿಸಿ

ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಕರೆ ಉತ್ಸವ ಮಂಗಳವಾರ ಮುಸ್ಸಂಜೆ ನಡೆಯಿತು. Read More »

ಜ.12 : ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರ, ಧರ್ಮದೈವಗಳ ನೇಮೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರ ಹಾಗೂ ಧರ್ಮ ದೈವಗಳ ದೈವಸ್ಥಾನದಲ್ಲಿ ಜ.12 ರಂದು ನಡೆಯಲಿರುವ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಲ್ಲೇಗ ಮಾಡತ್ತಾರಿನಲ್ಲಿ ನಡೆಯಿತು. ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಆಮಂತ್ರಣ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಶೇವಿರೆ, ಅಧ್ಯಕ್ಷ ಯು. ಶ್ರೀಧರ್ ಹೆಗ್ಡೆ ಉಳಿಯ, ಕಾರ್ಯದರ್ಶಿ ಉಮೇಶ್ ಆಚಾರ್ಯ ಕಗ, ಉಪಾಧ್ಯಕ್ಷ ಜಿನ್ನಪ್ಪ ಪೂಜಾರಿ ಮುರ, ತಿಮ್ಮಪ್ಪ ಗೌಡ ಪೋಳ್ಯ ಹಾಗೂ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

ಜ.12 : ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರ, ಧರ್ಮದೈವಗಳ ನೇಮೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ನ.27 ರಿಂದ ಡಿ.12 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ನ.27 ರಿಂದ ಡಿ.12 ರವರೆಗೆ ನಡೆಯಲಿದೆ. ನ.27 ರಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.30 ರಂದು ಲಕ್ಷದೀಪೋತ್ಸವ, ಡಿ.1 ರಂದು ರಾತ್ರಿ ಶೇಷ ವಾಹನೋತ್ಸವ, ಡಿ.2 ರಂದು ರಾತ್ರಿ ಅಶ್ವವಾಹನೋತ್ಸವ, ಡಿ.3 ರಂದು ರಾತ್ರಿ ಮಯೂರವಾಹನೋತ್ಸವ, ಡಿ.4 ರಂದು ರಾತ್ರಿ ಶೇಷವಾಹನೋತ್ಸವ, ಡಿ.5 ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ.6  ರಂದು ರಾತ್ರಿ ಪಂಚಮಿ ಉತ್ಸವ,

ನ.27 ರಿಂದ ಡಿ.12 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ Read More »

ನ.25 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ  ಶ್ರೀ ದೇವರಿಗೆ ಮಹಾರುದ್ರ ಯಾಗ ನ.25 ಸೋಮವಾರ ನಡೆಯಲಿದೆ. ಈ ಯಾಗದಲ್ಲಿ 1333 ರುದ್ರಗಳನ್ನು ಜಪಿಸಿ ಮಹಾದೇವನಿಗೆ ಅರ್ಪಿಸಲಾಗುತ್ತದೆ. ಭಗವತಿ ಸೇವೆ, ಸಹಸ್ರ ಮೋದಕ ಹವನ, ಶತ ರುದ್ರಾಭಿಷೇಕ ಮೊದಲಾದ ಸೇವೆಗಳು ನಡೆಯಲಿವೆ. ಕಾರ್ತಿಕ ಸೋಮವಾರದಂದು ನಡೆಯಲಿರುವ ಈ ಯಾಗಕ್ಕೆ ವಸ್ತು ರೂಪದಲ್ಲಿ ಎಳ್ಳು, ಭತ್ತ, ತುಪ್ಪ ಅಥವಾ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಬಹುದು. ಮಹಾರುದ್ರ ಯಾಗದಲ್ಲಿ ಪ್ರಥಮವಾಗಿ ನೋಂದಾಯಿಸಿದ 1333 ಜನರಿಗೆ ಮಾತ್ರ ಅವಕಾಶವಿದೆ

ನ.25 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ Read More »

error: Content is protected !!
Scroll to Top