ಧಾರ್ಮಿಕ

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ವರಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸಕೇಂದ್ರ ಪುತ್ತೂರು ಘಟಕದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಆ.16ರಂದು ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ವೇ ಮೂ ಹರಿಪ್ರಸಾದ ವೈಲಾಯ ಅವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಎಚ್ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ […]

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ

ಪುತ್ತೂರು: ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಗೌಡವ ಯುವ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇಂದು ನಡೆಯಿತು. ಪೂಜೆಯ ಅಂಗವಾಗಿ ಬೆಳಿಗ್ಗೆ ವಿಶ್ರಾಂತ ಪ್ರಾಧ್ಯಾಪಕಿ ಲೀಲಾವತಿ ಎಂ. ನೇರಳ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಶಶಿಧರ್, ಸಮಿತಿಯ

ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ Read More »

ಸೆ.7 ರಿಂದ 9 : ವಿಟ್ಲ ವಿಎಚ್‍ ಪಿ  ಆಶ್ರಯದಲ್ಲಿ 43ನೇ ವರ್ಷದ ಶ್ರೀ ಗಣೇಶೋತ್ಸವ | ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ : ವಿಶ್ವ ಹಿಂದೂ ಪರಿಷದ್ ಆಶ್ರಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇದರ 43ನೇ ವರ್ಷದ  ಶ್ರೀ ಗಣೇಶೋತ್ಸವದ  ಆಮಂತ್ರಣ ಪತ್ರಿಕೆ ಬಿಡುಗಡೆ ವಿಟ್ಲ  ಶ್ರೀ ಪಂಚಲಿಂಗೇಶ್ವರ ದೇವರ ಸಾನ್ನಿಧ್ಯದಲ್ಲಿ ನಡೆಯಿತು.‌ ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು , ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು  ಉಪಸ್ಥಿತರಿದ್ದರು. ಸಾರ್ವಜನಿಕ  ಶ್ರೀ  ಗಣೀಶೋತ್ಸವ ಸೆಪ್ಟೆಂಬರ್ 7 ರಿಂದ 9 ರ ತನಕ ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಅನಂತ ಸದನದಲ್ಲಿ ಮೂರು ದಿವಸಗಳ ಕಾಲ ಧಾರ್ಮಿಕ,

ಸೆ.7 ರಿಂದ 9 : ವಿಟ್ಲ ವಿಎಚ್‍ ಪಿ  ಆಶ್ರಯದಲ್ಲಿ 43ನೇ ವರ್ಷದ ಶ್ರೀ ಗಣೇಶೋತ್ಸವ | ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಿಲ್ಲೇ ಮೈದಾನದ ಶ್ರೀ ಗಣೇಶೋತ್ಸವದ ವಿಗ್ರಹ ರಚನೆಗೆ ಚಾಲನೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು : ಶ್ರೀ ದೇವತಾ ಸಮಿತಿ ವತಿಯಿಂದ  ಪುತ್ತೂರು ಕಿಲ್ಲೇ ಮೈದಾನದಲ್ಲಿ ನಡೆಯುವ 67ನೇ ವರ್ಷದ ಮಹಾಗಣೇಶೋತ್ಸವದ ವಿಗ್ರಹ ರಚನೆಗೆ ಚಾಲನೆ, ಆಮಂತ್ರಣ ಪತ್ರಿಕೆ ಬಿಡುಗಡೆ ಶನಿವಾರ ನಡೆಯಿತು. ವುತ್ತೂರು ಕೋರ್ಟ್ ರಸ್ತೆಯಲ್ಲಿರುವ ಹೈ ಕಾಂಪ್ಲೆಕ್ಸ್ನ ಸಭಾಂಗಣದಲ್ಲಿ ವೇದಮೂರ್ತಿ ನುಬ್ರಹ್ಮಣ್ಯ ಹೊಳ್ಳರ ನೇತೃತ್ವದಲ್ಲಿ, ದೇವತಾ ನಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ವಿಗ್ರಹ ರಚನೆಗೆ ಮುಹೂರ್ತ ನಡೆಸಲಾಯಿತು. ಶಿಲ್ಪಿ ರಮೇಶ್ ಪೂಜಾರಿಯವರು ಶ್ರೀಗಣೇಶ ವಿಗ್ರಹ ರಚಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರತಿವರ್ಷ ನಾಗರ ಪಂಚಮಿಯ

ಕಿಲ್ಲೇ ಮೈದಾನದ ಶ್ರೀ ಗಣೇಶೋತ್ಸವದ ವಿಗ್ರಹ ರಚನೆಗೆ ಚಾಲನೆ, ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಆ.17 : ಕಲ್ಲಾರೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 50ನ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷದ್ ಮಾತೃ ಮಂಡಳಿ ಜಂಟಿ ಆಶ್ರದಯದಲ್ಲಿ 50ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.17 ರಂದು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷೆ ವೀಣಾ ಕೊಳತ್ತಾಯ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1974 ರಲ್ಲಿ ನಮ್ಮ ಸಂಸ್ಥೆಯಿಂದ ವರಮಹಾಲಕ್ಷ್ಮೀ ಪೂಜೆ ಆರಂಭಗೊಂಡಿದ್ದು, ಎರಡು ವರ್ಷಗಳ ಕಾಲ ವೆಂಕಟ್ರಮಣ ದೇವಸ್ಥಾನದಲ್ಲಿ ನಡೆಯಿತು. ಬಳಿಕ ಎರಡು

ಆ.17 : ಕಲ್ಲಾರೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 50ನ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ಪುಣ್ಚತ್ತಾರು ಶ್ರೀ ಸಾರ್ಜನಿಕ ಗಣೇಶೋತ್ಸವ ಸಮಿತಿಯಿಂದ 7ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಣಿಯರು: ಪುಣ್ಯತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಪುಣ್ಯತ್ತಾರು ನಡೆಯುವ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಹರಿ ಸಭಾಭವನದಲ್ಲಿ ಇಂದು ನಡೆಯಿತು. ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸಮಿತಿ ಸದಸ್ಯರಾದ ಮಾಧವ ಕಲ್ಪಡ, ಹರೀಶ್ ಕಟೀಲ್, ಅನಂತಕುಮಾರ್ ಬೈಲಂಗಡಿ, ಅಶ್ವಿನಿ ಕರಿಮಜಲು, ಹರೀಶ್ ಪೈಕ, ಮಹೇಶ್ ಪೈಕ,

ಪುಣ್ಚತ್ತಾರು ಶ್ರೀ ಸಾರ್ಜನಿಕ ಗಣೇಶೋತ್ಸವ ಸಮಿತಿಯಿಂದ 7ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ

ಸವಣೂರು: ಕಡಬ ತಾಲೂಕಿನ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿಯನ್ನು ಇಂದು ಆಚರಿಸಲಾಯಿತು. ನಾಗರಪಂಚಮಿ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ನಾಗತಂಬಿಲ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ Read More »

ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ

ಕಾಣಿಯೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದ ಶ್ರೀ ನಾಗ ಸನ್ನಿಧಿಯಲ್ಲಿ ನಾಗರಪಂಚಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಕ್ಷೀರಾಭಿಷೇಕ, ತಂಬಿಲ ಸೇವೆ ನಡೆಯಿತು. ದೇವಸ್ಥಾನದ ಆರ್ಚಕ ಈಶ್ವರಚಂದ್ರ ಭಟ್ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಯ ಮೊತ್ತೇಸರರಾದ ಶಿವರಾಮ ಗೌಡ ಅಗಳಿ, ಉದಯ ಕುಮಾರ್ ಅಗಳಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ Read More »

ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು ಬೆಳಿಗ್ಗೆ ಭಕ್ತಾದಿಗಳಿಂದ ಅರ್ಪಿತವಾದ ಹಾಲು, ಸೀಯಾಳಾಭಿಷೇಕ ನಡೆದು, ಮಧ್ಯಾಹ್ನ ಮಹಾಪೂಜೆ ನಡೆಯಿತು. ದೇವಸ್ಥಾನದ ಅರ್ಚಕ ವೆಂಕಟಕೃಷ್ಣ ಭಟ್‍ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಸದಸ್ಯರಾದ ವಸಂತ ದಲಾರಿ, ನಾರ್ಣಪ್ಪ ಗೌಡ ಜತ್ತೋಡಿ, ಆನಂದ ಗೌಡ ಬನೇರಿ, ಚಾರ್ವಾಕ ಸಿಎ ಬ್ಯಾಂಕ್‍ ಅಧ್ಯಕ್ಷ

ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ | ಸರತಿ ಸಾಲಿನಲ್ಲಿ ಭಕ್ತರಿಂದ ಹಾಲು, ಸೀಯಾಳ ಅರ್ಪಣೆ

ಸವಣೂರು: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿಯನ್ನು ಆಚರಿಸಲಾಯಿತು. ನೂರಾರು ಭಕ್ತಾದಿಗಳು ಮುಂಜಾನೆಯಿಂದಲೇ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಹಾಲು, ಸೀಯಾಳಾ, ಹಣ್ಣುಕಾಯಿ ಅರ್ಪಿಸಿ ಪುನೀತರಾದರು. ದೇವಸ್ಥಾನದ ಅರ್ಚಕರು ಶ್ರೀ ನಾಗನಿಗೆ ಅಭಿಷೇಕ ಮಾಡಿದರು. ಈ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಸಂಚಾಲಕ ಸವಣೂರು ಸೀತಾರಾಮ ರೈ, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಉತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರಪಂಚಮಿ | ಸರತಿ ಸಾಲಿನಲ್ಲಿ ಭಕ್ತರಿಂದ ಹಾಲು, ಸೀಯಾಳ ಅರ್ಪಣೆ Read More »

error: Content is protected !!
Scroll to Top