ಧಾರ್ಮಿಕ

ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ

ಉಚಿತವಾಗಿ ಟ್ರಕ್‌ ಮತ್ತು ಚಾಲಕರನ್ನು ಒದಗಿಸಿದ ಬಿಜೆಪಿಯ ಹಿರಿಯ ನಾಯಕ ನಾಗರಾಜ ಶೆಟ್ಟಿ ಕಾರ್ಕಳ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಪ್ರತಿಷ್ಥಾಪನೆಯಾಗಲಿರುವ ಭವ್ಯ ಶ್ರೀರಾಮನ ಮೂರ್ತಿಯನ್ನು ಕೆತ್ತಲು ಕಾರ್ಕಳದಿಂದ ಕೃಷ್ಣ ಶಿಲೆಯನ್ನು ಸಾಗಿಸಿದ್ದು ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ನಾಗರಾಜ ಶೆಟ್ಟಿಯವರ ಟ್ರಾನ್ಸ್‌ಪೋರ್ಟ್‌ ಕಂಪನಿ. ಮೂರು ದಿನಗಳಲ್ಲಿ ಬೃಹತ್‌ ಶಿಲೆ ಅಯೋಧ್ಯೆ ತಲುಪಿದೆ. ಒಂಭತ್ತು ಟನ್ ತೂಕದ ಶಿಲೆಯನ್ನು ಅಯೋಧ್ಯೆಯಲ್ಲಿ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಸ್ವಾಗತಿಸಲಾಯಿತು. ಉದ್ಯಮಿ ನಾಗರಾಜ ಶೆಟ್ಟಿ ಮಾಲಕತ್ವದ […]

ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ Read More »

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ

ಪುತ್ತೂರು :  ಕಾವು ನವೋದಯ ಒಕ್ಕೂಟದ ಸದಸ್ಯರಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿಯಾಗಿ ಶ್ರಮದಾನ ನಡೆಯಿತು. ದೇವಸ್ಥಾನದ ಹೊರಾಂಗಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಮಾಜಿ ಉಪಾಧ್ಯಕ್ಷೆ ನಿರ್ಮಲಾ ರೈ  ಉಸ್ತುವಾರಿಯಲ್ಲಿ ನಡೆದ ಕರಸೇವೆಯಲ್ಲಿ ಎಲ್ಲಾ ಗುಂಪಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ Read More »

ಮಾ.25 ರಿಂದ 31 : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೋತ್ಸವ, ಪುಷ್ಪರಥ ಸಮರ್ಪಣೆ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವ ಮಾ.25 ರಿಂದ 31 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ,ಮ್ಮಿಂಜೆ ನಾಗೇಶ್ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಗೌರವ ಸಲಹೆಗಾರ ಜಯರಾಮ ಕೆದಿಲಾಯ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಜಲುಮಾರು ಕ್ಷೇತ್ರ

ಮಾ.25 ರಿಂದ 31 : ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೋತ್ಸವ, ಪುಷ್ಪರಥ ಸಮರ್ಪಣೆ Read More »

ಕಬಕ ಒಕ್ಕೂಟದ ವಿದ್ಯಾಪುರ ಶ್ರೀ ನಾಗ ಮತ್ತು ಪಂಚದೈವಗಳ ಸನ್ನಿಧಿಯಲ್ಲಿ  ನಮ್ಮ ಶೌರ್ಯ ತಂಡದ ಯೋಧರಿಂದ ಶ್ರಮದಾನ

ಪುತ್ತೂರು: ಕಬಕ  ವಿದ್ಯಾಪುರ  ಶ್ರೀ ನಾಗ ಮತ್ತು ಪಂಚ ದೈವಗಳ  ಸಾನಿದ್ಯದ ಜೀರ್ಣೋದ್ದಾರ ಪ್ರಯುಕ್ತ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ ಒಂದು ದಿನದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ  ಘಟಕದ  ಪ್ರತಿನಿಧಿ ವಿನಯ ನಾಯ್ಕ, ಜಗದೀಶ, ಲೋಕೇಶ್, ವಿನೋದ್ ಬಂಗಾರಡ್ಕ, ಹರಿಪ್ರಸಾದ್, ಚಂದ್ರಶೇಕರ, ಸುನೀಲ್ ಡಿಸೋಜ, ರೋಷನ್ ಡಿಸೋಜ, ಅಜಯ್, ಶಂಭು ಪೂಜಾರಿ, ಬಾಲಕೃಷ್ಣ, ಕಾರ್ತಿಕ್ ಸ್ವಾತಿ ಭಾಗವಹಿಸಿದ್ದರು, ದೈವಸ್ಥಾನದ  ಸಮಿತಿಯವರು  ಸೇವೆ ಸಲ್ಲಿಸಿದ  ಎಲ್ಲರಿಗೂ  ಅಭಿನಂದನೆ  ಸಲ್ಲಿಸಿದರು, ಬಳಿಕ  ಮಾಸಿಕ  ಸಭೆ  ನಡೆಸಲಾಯಿತು, ಸಂಯೋಜಕಿ  ಆಶಾಲತಾ 

ಕಬಕ ಒಕ್ಕೂಟದ ವಿದ್ಯಾಪುರ ಶ್ರೀ ನಾಗ ಮತ್ತು ಪಂಚದೈವಗಳ ಸನ್ನಿಧಿಯಲ್ಲಿ  ನಮ್ಮ ಶೌರ್ಯ ತಂಡದ ಯೋಧರಿಂದ ಶ್ರಮದಾನ Read More »

ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸವಣೂರು : ಕಡಬ ತಾಲೂಕಿನ ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವಕ್ಕೆ ಶನಿವಾರ ಗೊನೆ ಮುಹೂರ್ತ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಗೊನೆ ಮುಹೂರ್ತ.ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರಮದಾನ

ಪುತ್ತೂರು: ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರಮದಾನ ನಡೆಯಿತು. ಏ.2 ಹಾಗೂ 3 ರಂದು ವಾರ್ಷಿಕ ಜಾತ್ರೋತ್ಸವ, ದೈವಗಳ ನೇಮೋತ್ಸವದ ಅಂಗವಾಗಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿದ್ದ ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸುವ ಕಾರ್ಯವನ್ನು ಶ್ರಮದಾನ ಮೂಲಕ ಮಾಡಿದರು. ಶ್ರಮದಾನದಲ್ಲಿ ಯುವಕ ಮಂಡಲದ ಸದಸ್ಯರಾದ ಶಿವಪ್ರಸಾದ್ ಕೈಂದಾಡಿ, ಪ್ರಭಾತ್ ಸಾರಕರೆ, ವರುಣ್ ಶಾಂತಿಗೋಡು, ಪ್ರವೀಣ್ ಬೊಳ್ಳೆಕ್ಕು, ಕಾರ್ತಿಕ್ ಕುಕ್ಯಾನ, ಶಶಿ ಕುಮಾರ್ ಓಲಾಡಿ, ಭಾಸ್ಕರ ಓಲಾಡಿ, ವಿನೋದ್ ಓಲಾಡಿ, ಹರ್ಷಿತ್ ಬಂಡಶಾಲೆ,

ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರಮದಾನ Read More »

ಪೆರಿಗೇರಿ ಮೂಕಾಂಬಿ ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ | ಶಾಸಕ ಮಠಂದೂರು ಭಾಗಿ

ಪುತ್ತೂರು : ಬಡಗನ್ನೂರು ಗ್ರಾಮದ ಪೆರಿಗೇರಿ ನೂಚಿಲೋಡು ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು  ಧಾರ್ಮಿಕ ಸಭಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಭೂತಾರಾಧನೆ ಕುರಿತು ಬಯಲು ಸೀಮೆಯ ಜನ ಕೂಡ ತಿಳಿದುಕೊಳ್ಳುವ ಸಂಗತಿ ಕಾಂತರ ಸಿನಿಮಾದ ಮೂಲಕ ಆಗಿದೆ. ನಂಬಿಕೆ ಆಧಾರದಲ್ಲಿ ನಮ್ಮ ಜೀವನ ಪದ್ಧತಿ ಇದೆ ನಮ್ಮಲ್ಲಿ ಪ್ರೀತಿ ವಿಶ್ವಾಸ, ಸಹ ಬಾಳ್ವೆಯ ಜೀವನ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಿ ಬಂದಿದೆ. ದೈವಸ್ಥಾನಗಳ

ಪೆರಿಗೇರಿ ಮೂಕಾಂಬಿ ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ | ಶಾಸಕ ಮಠಂದೂರು ಭಾಗಿ Read More »

ಮಾ.22 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರ,ಮ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ಮಾ.22 ಚಾಂದ್ರಮಾನ ಯುಗಾದಿಯಂದು ಬೆಳಿಗ್ಗೆ 8 ಕ್ಕೆ ನಡೆಯಲಿದೆ. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.22 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರ,ಮ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಪೂರ್ವಭಾವಿಯಾಗಿ ಅನುಜ್ಞಾ ಕಲಶ ದೇವಸ್ಥಾನದ ಗರ್ಭಗುಡಿ ಎದುರು  ಪ್ರಾರ್ಥನೆಯೊಂದಿಗೆ ಶುಕ್ರವಾರ ನಡೆಯಿತು. ಕ್ಷೇ್ತ್ರದ  ವೇ.ಮೂ.ರವೀಶ ತಂತ್ರಿ ಅವರ ನೇತೃತ್ವದಲ್ಲಿ ವೇ.ಮೂ. ಗುರು ತಂತ್ರಿ ಶ್ರೀ ದೇವರಿಗೆ ಅನುಜ್ಞಾ ಕಲಶ ನೆರವೇರಿಸಿದರು. ಬಳಿಕ ಗರ್ಭಗುಡಿ ಎದುರು ಪ್ರಾರ್ಥನೆ ನೆರವೇರಿಸಿದರು. ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ Read More »

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಪನ್ನ

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಗುರುವಾರ ಸಂಪನ್ನಗೊಂಡಿತು. ಜಾತ್ರೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ಜರಗಿತು. ರಾತ್ರಿ ರಂಗಪೂಜೆ ದೈವದ ನೇಮೋತ್ಸವದೊಂದಿಗೆ ಜಾತ್ರೆ  ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಡಾ,ಎಂ.ಕೆ.ಪ್ರಸಾದ್, ವ್ಯವಸ್ಥಾಪನಾ

ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಪನ್ನ Read More »

error: Content is protected !!
Scroll to Top