ಧಾರ್ಮಿಕ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರಾಶಾಹಿಯಾದ ಅಶ್ವತ್ಥ ಮರ ತೆರವು

ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಶ್ವತ್ಥ ಮರ ಪೂರ್ಣ ತೆರವು ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಪುಷ್ಕರಿಣಿ ಬಳಿಯಿರುವ ಅಶ್ವತ್ಥ ಮರದ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಸುಮಾರು 100 ವರ್ಷ ಮೇಲ್ಪಟ್ಟ ಅಶ್ವತ್ಥ ಮರ ಇದಾಗಿದ್ದು, ಧಾರ್ಮಿಕ ಮಹತ್ವ ಹೊಂದಿತ್ತು. ಪ್ರತಿದಿನ ನೂರಾರು ಮಂದಿ ಭಕ್ತರು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವ ದೃಶ್ಯ ಕಂಡುಬರುತ್ತಿತ್ತು. ಮಹಾಲಿಂಗೇಶ್ವರ ದೇವರ ಜಾತ್ರೆಯ ನಂತರ ಈ ಅಶ್ವತ್ಥ ಮರದ ಇನ್ನೊಂದು ಭಾಗದಲ್ಲಿ ಕ್ಷೇತ್ರದ ಕಾರಣಿಕ ದೈವ ಅಂಙಣತ್ತಾಯ ಸ್ವಾಮಿಯ ನೇಮ […]

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರಾಶಾಹಿಯಾದ ಅಶ್ವತ್ಥ ಮರ ತೆರವು Read More »

ರಾಜರು ಮಾಡುತ್ತಿದ್ದ ಧರ್ಮದ ಕಾರ್ಯ ಇಂದು ಪ್ರಜೆಗಳಿಂದ ನೆರವೇರುತ್ತಿದೆ | ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿದ್ದೇವೆ. ಆದ್ದರಿಂದ ಅಂದು ರಾಜರು ಮಾಡುತ್ತಿದ್ದ ದೇವಸ್ಥಾನದ ಕೆಲಸವನ್ನು, ಇಂದು ಪ್ರಜೆಗಳೇ ಮಾಡುತ್ತಿದ್ದಾರೆ. ಈ ಮೂಲಕ ದೇವರ ಭಕ್ತಿ, ಧರ್ಮದ ಶ್ರದ್ಧೆ, ಜನರ ಸಮರ್ಪಣೆಯನ್ನು ಕಾಣಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜರ ಕಾಲದ ಶಿಲ್ಪಕಲೆ, ಅವರ ಶ್ರದ್ಧೆಯನ್ನು ಇಂದು ನಾವು ಮತ್ತೊಮ್ಮೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲೂ ಸರ್ವಧರ್ಮೀಯರು

ರಾಜರು ಮಾಡುತ್ತಿದ್ದ ಧರ್ಮದ ಕಾರ್ಯ ಇಂದು ಪ್ರಜೆಗಳಿಂದ ನೆರವೇರುತ್ತಿದೆ | ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು Read More »

ಸಮುದಾಯ ಹಿಂದೂ ಸಮಾಜದ ರೆಂಬೆ | ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಗೆ ಚಪ್ಪರ ಮುಹೂರ್ತ ನೆರವೇರಿಸಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಸಮುದಾಯದ ಸಂಸ್ಕೃತಿ, ಸಂಸ್ಕಾರಗಳು ತನ್ನ ಚೌಕಟ್ಟಿನಲ್ಲಿ ಮುಂದುವರಿದಾಗ, ಹಿಂದೂ ಸಮಾಜ ಬಲಿಷ್ಠವಾಗಿ ಮುಂದುವರಿಯಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದೂ ಸಮಾಜ ಎನ್ನುವುದು ಒಂದು ವೃಕ್ಷ. ಸಮುದಾಯಗಳು ಅದರ ರೆಂಬೆಗಳಿದ್ದAತೆ.

ಸಮುದಾಯ ಹಿಂದೂ ಸಮಾಜದ ರೆಂಬೆ | ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಗೆ ಚಪ್ಪರ ಮುಹೂರ್ತ ನೆರವೇರಿಸಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ: ಕಾರ್ಯಾಲಯ ಉದ್ಘಾಟನೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ಸಭಾಭವನ ಕಟ್ಟಡದಲ್ಲಿ ಜ. ೧೫ರಂದು ಕಾರ್ಯಾಲಯ ಉದ್ಘಾಟನೆಗೊಂಡಿತು. ಆದಿಚುಂಚನಗಿರಿ ಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಕಾರ್ಯಾಲಯ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ: ಕಾರ್ಯಾಲಯ ಉದ್ಘಾಟನೆ Read More »

ಅಗಳಿ ಬ್ರಹ್ಮಕಲಶೋತ್ಸವ : ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ

ಪುತ್ತೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ, ಬಳಿಕ ಶ್ರೀ ಗಣಪತಿ ಹೋಮ, ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ, ತತ್ವ ಕಲಶಾಭಿಷೇಕ ಜರಗಿತು.ಬೆಳಂದೂರು ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ,ಬಿ.ಸಿ ಟ್ರಸ್ಟ್, ಅಬೀರ ಕೊಡಿಮಾರು ಗೆಳೆಯರ ಬಳಗದಿಂದ ಭಜನೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಮಧಾಹ್ನ ಸವಣೂರು ಶ್ರವಣ ರಂಗ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ, ಭಕ್ತಕೋಡಿ

ಅಗಳಿ ಬ್ರಹ್ಮಕಲಶೋತ್ಸವ : ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ Read More »

ಜ. 22: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ನೇತೃತ್ವದಲ್ಲಿ ಜ. 22ರಂದು ಬೆಳಿಗ್ಗೆ 10.30ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಗುರುವಂದನೆ, ರಜತ ತುಲಾಭಾರ, ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ, ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ಹಿನ್ನೆಲೆಯಲ್ಲಿ ರಜತ ತುಲಾಭಾರ, ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಮಹಾಪ್ರಬಂಧ ಸಂಸ್ಕೃತ

ಜ. 22: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆ Read More »

ಜ. 14: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಅಶ್ವತ್ಥ ಪೂಜೆ

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅಶ್ವತ್ಥ ಪೂಜೆ ಜ. 14ರಂದು ನಡೆಯಲಿದೆ. ಹಿಂದೂ ಜಾಗರಣಾ ವೇದಿಕೆ, ಕೂಡುರಸ್ತೆ ದುರ್ಗಾ ಭಜನಾ ಮಂಡಳಿ, ವಿಕ್ರಂ ಯುವಕ ಮಂಡಲ, ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜ. 14: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಅಶ್ವತ್ಥ ಪೂಜೆ Read More »

ಅಗಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ | ವಿವಿಧ ಧಾರ್ಮಿಕ ಕಾರ್ಯಕ್ರಮ

ಪುತ್ತೂರು: ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 13ರಂದು ಧನುಪೂಜೆ, ಹೋಮ ಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 5ಕ್ಕೆ ಧನುಪೂಜೆ, 6ರಿಂದ ಶ್ರೀ ಗಣಪತಿ ಹೋಮ ಅಂಕುರ ಪೂಜೆ , ಪ್ರಾಯಶ್ಚಿತ  ಹೋಮ ನಡೆಯಿತು. ನಂತರ ಬೆಳಂದೂರು ವಿಷ್ಣು ಪ್ರಿಯ ಭಜನಾ ಮಂಡಳಿ. ಕಲ್ಲಮಾಡ ಶ್ರೀ ಉಳ್ಳಾಕುಲು ಯುವಕ ಮಂಡಲದಿಂದ ಭಜನೆ ಜರಗಿತು. ಮಧ್ಯಾಹ್ನ ಹೋಮ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಮಧ್ಯಾಹ್ನ 3ರಿಂದ ಕುದ್ಮಾರು ಶ್ರೀ ಪಂಚಲಿಂಗೇಶ್ವರ

ಅಗಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ | ವಿವಿಧ ಧಾರ್ಮಿಕ ಕಾರ್ಯಕ್ರಮ Read More »

ಬೆಟ್ಟಂಪಾಡಿ: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಸಂಗ್ರಹಿಸಿದ ಹಣ ಬಾಲಕಿಗೆ ಹಸ್ತಾಂತರ

ಪುತ್ತೂರು: ಪಾಣಾಜೆ ಬಿ.ಬಿ. ಕ್ರಿಯೇಷನ್ ಪ್ರಾಯೋಜಕತ್ವದಲ್ಲಿ ಬೆಟ್ಟಂಪಾಡಿಯಲ್ಲಿ ಜ. 11ರಂದು ರಾತ್ರಿ ನಡೆದ ಯಕ್ಷಗಾನ ಸಂದರ್ಭ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ, ನೊಂದವರ ಪಾಲಿಗೆ ಆಸರೆ ವತಿಯಿಂದ 189ನೇ ಸೇವಾಯೋಜನೆ ನಡೆಯಿತು. ಅನಾರೋಗ್ಯದಿಂದ ಬಳಲುತ್ತಿರುವ ಸುಹಾಸಿನಿ ಎಂಬ ಬಾಲಕಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಧನ ಸಂಗ್ರಹಿಸಲಾಯಿತು.ಬಳಿಕ ಸಮಾರಂಭದಲ್ಲಿ ನಟ ದೀಪಕ್ ರೈ ಪಾಣಾಜೆ, ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಅವರ ಉಪಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಗೆ ಹಸ್ತಾಂತರಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಡಿ.ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಆಸರೆ

ಬೆಟ್ಟಂಪಾಡಿ: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಸಂಗ್ರಹಿಸಿದ ಹಣ ಬಾಲಕಿಗೆ ಹಸ್ತಾಂತರ Read More »

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧನುಪೂಜೆ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ. 13ರಂದು ಸಂಜೆ 5.30ರಿಂದ ನೆಹರೂನಗರ ರಕ್ತೇಶ್ವರಿ ವಠಾರದ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ ನಡೆಯಲಿದೆ. ಕಲಾಸಂಗಮದಲ್ಲಿ ಭಕ್ತಿಗಾನ ಭಜನಾಮೃತ, ಭಕ್ತಿರಸಮಂಜರಿ, ಸಾಂಪ್ರದಾಯಿಕ ನೃತ್ಯ, ಯಕ್ಷಗಾನ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಸಂಚಾಲಕ ಮನುಕುಮಾರ್ ಶಿವನಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ Read More »

error: Content is protected !!
Scroll to Top