ಧಾರ್ಮಿಕ

ಜ. 22: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ನೇತೃತ್ವದಲ್ಲಿ ಜ. 22ರಂದು ಬೆಳಿಗ್ಗೆ 10.30ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಗುರುವಂದನೆ, ರಜತ ತುಲಾಭಾರ, ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ, ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ಹಿನ್ನೆಲೆಯಲ್ಲಿ ರಜತ ತುಲಾಭಾರ, ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಮಹಾಪ್ರಬಂಧ ಸಂಸ್ಕೃತ […]

ಜ. 22: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆ Read More »

ಜ. 14: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಅಶ್ವತ್ಥ ಪೂಜೆ

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅಶ್ವತ್ಥ ಪೂಜೆ ಜ. 14ರಂದು ನಡೆಯಲಿದೆ. ಹಿಂದೂ ಜಾಗರಣಾ ವೇದಿಕೆ, ಕೂಡುರಸ್ತೆ ದುರ್ಗಾ ಭಜನಾ ಮಂಡಳಿ, ವಿಕ್ರಂ ಯುವಕ ಮಂಡಲ, ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜ. 14: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ, ಅಶ್ವತ್ಥ ಪೂಜೆ Read More »

ಅಗಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ | ವಿವಿಧ ಧಾರ್ಮಿಕ ಕಾರ್ಯಕ್ರಮ

ಪುತ್ತೂರು: ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 13ರಂದು ಧನುಪೂಜೆ, ಹೋಮ ಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 5ಕ್ಕೆ ಧನುಪೂಜೆ, 6ರಿಂದ ಶ್ರೀ ಗಣಪತಿ ಹೋಮ ಅಂಕುರ ಪೂಜೆ , ಪ್ರಾಯಶ್ಚಿತ  ಹೋಮ ನಡೆಯಿತು. ನಂತರ ಬೆಳಂದೂರು ವಿಷ್ಣು ಪ್ರಿಯ ಭಜನಾ ಮಂಡಳಿ. ಕಲ್ಲಮಾಡ ಶ್ರೀ ಉಳ್ಳಾಕುಲು ಯುವಕ ಮಂಡಲದಿಂದ ಭಜನೆ ಜರಗಿತು. ಮಧ್ಯಾಹ್ನ ಹೋಮ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಮಧ್ಯಾಹ್ನ 3ರಿಂದ ಕುದ್ಮಾರು ಶ್ರೀ ಪಂಚಲಿಂಗೇಶ್ವರ

ಅಗಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ | ವಿವಿಧ ಧಾರ್ಮಿಕ ಕಾರ್ಯಕ್ರಮ Read More »

ಬೆಟ್ಟಂಪಾಡಿ: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಸಂಗ್ರಹಿಸಿದ ಹಣ ಬಾಲಕಿಗೆ ಹಸ್ತಾಂತರ

ಪುತ್ತೂರು: ಪಾಣಾಜೆ ಬಿ.ಬಿ. ಕ್ರಿಯೇಷನ್ ಪ್ರಾಯೋಜಕತ್ವದಲ್ಲಿ ಬೆಟ್ಟಂಪಾಡಿಯಲ್ಲಿ ಜ. 11ರಂದು ರಾತ್ರಿ ನಡೆದ ಯಕ್ಷಗಾನ ಸಂದರ್ಭ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ, ನೊಂದವರ ಪಾಲಿಗೆ ಆಸರೆ ವತಿಯಿಂದ 189ನೇ ಸೇವಾಯೋಜನೆ ನಡೆಯಿತು. ಅನಾರೋಗ್ಯದಿಂದ ಬಳಲುತ್ತಿರುವ ಸುಹಾಸಿನಿ ಎಂಬ ಬಾಲಕಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಧನ ಸಂಗ್ರಹಿಸಲಾಯಿತು.ಬಳಿಕ ಸಮಾರಂಭದಲ್ಲಿ ನಟ ದೀಪಕ್ ರೈ ಪಾಣಾಜೆ, ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಅವರ ಉಪಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಗೆ ಹಸ್ತಾಂತರಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಡಿ.ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಆಸರೆ

ಬೆಟ್ಟಂಪಾಡಿ: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಸಂಗ್ರಹಿಸಿದ ಹಣ ಬಾಲಕಿಗೆ ಹಸ್ತಾಂತರ Read More »

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧನುಪೂಜೆ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ. 13ರಂದು ಸಂಜೆ 5.30ರಿಂದ ನೆಹರೂನಗರ ರಕ್ತೇಶ್ವರಿ ವಠಾರದ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ ನಡೆಯಲಿದೆ. ಕಲಾಸಂಗಮದಲ್ಲಿ ಭಕ್ತಿಗಾನ ಭಜನಾಮೃತ, ಭಕ್ತಿರಸಮಂಜರಿ, ಸಾಂಪ್ರದಾಯಿಕ ನೃತ್ಯ, ಯಕ್ಷಗಾನ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಸಂಚಾಲಕ ಮನುಕುಮಾರ್ ಶಿವನಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ Read More »

ಜ. 14: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ

ಪುತ್ತೂರು: ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. 14ರಂದು ವರ್ಷಾವಧಿ ಉತ್ಸವ ನಡೆಯಲಿದೆ. ಜ. 7ರಂದು ಗೊನೆ ಮುಹೂರ್ತ ನಡೆದಿದ್ದು, ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ನಡೆಯಲಿದೆ. ಬೆಳಿಗ್ಗೆ 8ರಿಂದ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಶ್ರೀ ಸತ್ಯನಾರಾಯನ ದೇವರ ಪೂಜೆ, ಶ್ರೀ ವನದುರ್ಗಾ ದೇವಿ ಮಹಾಪೂಜೆ, ಶ್ರೀ ಶಾಸ್ತಾವು ದೇವರ ಮಹಾಪೂಜೆ, ಗುರುಪೂಜೆ,

ಜ. 14: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ Read More »

ಶಬರಿಮಲೆಯ ಅರವಣ ಪಾಯಸ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆ

ಪ್ರಸಾದ ವಿತರಿಸದಂತೆ ಹೈಕೋರ್ಟ್‌ ಆದೇಶ ಶಬರಿಮಲೆ : ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದ ‘ಅರವಣ ಪ್ರಸಾದ’ದಲ್ಲಿ ಕೀಟನಾಶಕ ಅಂಶ ಪತ್ತೆಯಾದ ಬಳಿಕ ಅದರ ತಯಾರಿಕೆ ಹಾಗೂ ಮಾರಾಟಕ್ಕೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ. ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಸಾದವನ್ನು ಮಾರಾಟ ಮಾಡದಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಆರೂವರೆ ಕೋಟಿ ರೂ. ಮೌಲ್ಯದ ಅರವಣ ಪ್ರಸಾದ ವ್ಯರ್ಥ ಆಗಲಿದೆ.ಪ್ರಸಾದ ತಯಾರಿಸಲು ಖರೀದಿಸುವ

ಶಬರಿಮಲೆಯ ಅರವಣ ಪಾಯಸ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆ Read More »

ಅಗಳಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ | ಜ. 16ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ

ಪುತ್ತೂರು: ಕಾಣಿಯೂರಿನ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಜ. 11ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬುಧವಾರ ಬೆಳಿಗ್ಗೆ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬುಧವಾರ ಸಂಜೆ ಅಗಳಿ ಶ್ರೀ ಸದಾಶಿವ ಭಜನಾ ಮಂಡಳಿ ಸದಸ್ಯರಿಂದ ಮತ್ತು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸದಸ್ಯರಿಂದ

ಅಗಳಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ | ಜ. 16ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ Read More »

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ ಸಂಸ್ಮರಣೆ: ವಿವಿಧೆಡೆ ವಲಯವಾರು, ಗ್ರಾಮವಾರು ಪೂರ್ವಭಾವಿ ಸಭೆ

ಪುತ್ತೂರು: ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 86ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಪೂರ್ವಭಾವಿಯಾಗಿ ವಲಯವಾರು ಹಾಗೂ ಗ್ರಾಮವಾರು ಸಭೆ ನಡೆಸಲಾಗುತ್ತಿದೆ.

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಜಯಂತ್ಯೋತ್ಸವ ಸಂಸ್ಮರಣೆ: ವಿವಿಧೆಡೆ ವಲಯವಾರು, ಗ್ರಾಮವಾರು ಪೂರ್ವಭಾವಿ ಸಭೆ Read More »

ಪಣೋಲಿಬೈಲು: ಇಂದಿನಿಂದ ಜ. 16ರವರೆಗೆ ಅಗೇಲು, ಕೋಲ ಇಲ್ಲ

ಬಂಟ್ವಾಳ: ಕಾರಣಿಕ ಕ್ಷೇತ್ರ ಬಂಟ್ವಾಳ ತಾಲೂಕಿನ ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಜ. 9ರಿಂದ ಜ. 16ರವರೆಗೆ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ. ಸಜೀಪ ಮಾಗಣೆ ಶ್ರೀ ಉಳ್ಳಾಲ್ದಿ ಅಮ್ಮನವರ ವಾರ್ಷಿಕ ಪುದ್ವಾರ್ ಮೆಚ್ಚಿ ಜಾತ್ರೆಯ ಹಿನ್ನೆಲೆಯಲ್ಲಿ ಪಣೋಲಿಬೈಲು ದೈವಸ್ಥಾನದಲ್ಲಿ ಅಗೇಲು ಸೇವೆ ಮತ್ತು ಕೋಲ ಸೇವೆ ಜ. 16ರವರೆಗೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

ಪಣೋಲಿಬೈಲು: ಇಂದಿನಿಂದ ಜ. 16ರವರೆಗೆ ಅಗೇಲು, ಕೋಲ ಇಲ್ಲ Read More »

error: Content is protected !!
Scroll to Top