ಪುತ್ತೂರು

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ

ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವವು ಸೋಮವಾರ ನಡೆಯಿತು. ಸಮಾರಂಭದಲ್ಲಿ ಶಾಲಾ ಸಂಚಾಲ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಜಗತ್ತಿಗೆ ಒಡೆಯನಾದ ಶ್ರೀ ಕೃಷ್ಣ ಪರಮಾತ್ಮನ ಗುರು ಸಾಂದೀಪನಿ ಹೆಸರಿನಲ್ಲಿ ಶಾಲಾಧ್ಯಕ್ಷರು ಶಾಲೆಯನ್ನು ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ವಿದ್ಯೆ ಎಂದರೆ ಕೇವಲ ಕಲಿಯುವುದು ಮಾತ್ರವಲ್ಲ ಒಳ್ಳೆತನವನ್ನು ಅಳವಡಿಸಿಕೊಂಡು, ಸಂಸ್ಕಾರಯುತವಾಗಿ, ತಂದೆ ತಾಯಿಗೆ ಗೌರವ ಕೊಟ್ಟು, ಶಾಲೆಗೆ ಚ್ಯುತಿ ಬಾರದ ಹಾಗೆ ಬಾಳಿ ಎಂದರು ಹಾಗೂ ನೂತನ […]

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ Read More »

ವೀಣಾ ಬನ್ನಂಜೆಯವರ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ

ಪುತ್ತೂರು: ನಮ್ಮ ನಿತ್ಯ ಜೀವನದ ವ್ಯವಹಾರಗಳು ಹಾಗೂ ವೈಯಕ್ತಿಕ ಬದುಕನ್ನು ಎತ್ತರಕ್ಕೆ ಏರಿಸುವಲ್ಲಿ ಆಧ್ಯಾತ್ಮಿಕ ಜ್ಞಾನದ ಅಗತ್ಯವಿದೆ. ಆದ್ದರಿಂದ ಭಾಗವತ ಪ್ರವಚನ ಎಂಬುದು ಒಂದು ಸದಭಿರುಚಿಯ ಹಾಗೂ ನಮ್ಮ ಜ್ಞಾನವನ್ನು ವಿಸ್ತರಿಸುವ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಪುತ್ತೂರಿನ ಮಂದಿ ಸಾಕಷ್ಟು ಸ್ಪಂದಿಸುತ್ತಾರೆ ಎಂದು ಜಿ.ಎಲ್.ಆಚಾರ್ಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು. ಅವರು ಭಾನುವಾರ ಸಂಜೆ ನಗರದ ದರ್ಶನ ಕಲಾ ಮಂದಿರದಲ್ಲಿ ಬಹುವಚನಂ ಪುತ್ತೂರು, ದಿ.ಜಿ.ಎಲ್.ಆಚಾಐ ಜನ್ಮಶತಾಬ್ಧಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ

ವೀಣಾ ಬನ್ನಂಜೆಯವರ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಉದ್ಘಾಟನೆ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶಾಲಾ ಆರಂಭೋತ್ಸವ “ಆರಂಭ-2025’

ಪುತ್ತೂರು: ಬನ್ನೂರಿನ ಅಲಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 2925-26ನೆ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ‘ ಆರಂಭ 2025’ ಅತ್ಯಂತ ಅರ್ಥಪೂರ್ಣವಾಗಿ  ನಡೆಯಿತು. ನಗರಸಭಾ ಮುಖ್ಯಾಧಿಕಾರಿ ಮಧು ಎಸ್. ಮನೋಹರ್ ಉದ್ಘಾಟಿಸಿ ಮಾತನಾಡಿ, ಮಾಡುವ ಕೆಲಸ ಸಣ್ಣದಾದರೂ ನಿರಂತರ ಪ್ರಯತ್ನ ಫಲ ನೀಡುತ್ತದೆ. ಅಂತೆಯೇ ಸಣ್ಣದಾಗಿ ಆರಂಭವಾದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಖಂಡಿತವಾಗಿಯೂ ದೊಡ್ಡದಾಗಿ ಬೆಳೆದು ಕೀರ್ತಿ ಪಡೆಯುತ್ತದೆ ಎಂದರು. ಶಾಲಾ ಸಂಚಾಲಕ ಎವಿ ನಾರಾಯಣ ಅವರ ಗುರುಗಳಾದ, ವಿವೇಕಾನಂದ ಪಾಲಿಟೆಕ್ನಿಕ್

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶಾಲಾ ಆರಂಭೋತ್ಸವ “ಆರಂಭ-2025’ Read More »

ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ : ರವಿ ಕುಮಾರ್ ಎನ್. | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ‘ವಿವೇಕ ಅಭಿನಂದನಮ್’

ಪುತ್ತೂರು: ವಿದ್ಯಾರ್ಥಿಗಳು ಕೊಠಡಿಯೊಳಗೆ ಉಳಿದರೆ ಯಶಸ್ಸು ಸಾಧಿಸಲಾಗುವುದಿಲ್ಲ. ಶಿಕ್ಷಣದಲ್ಲಿ ಅನುತ್ತೀರ್ಣರಾದವರು, ಜೀವನದಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಗ್ರ ರೀತಿಯಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ರವಿ ಕುಮಾರ್ ಎನ್. ಹೇಳಿದರು. ಅವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ವಿವೇಕ ಅಭಿನಂದನಮ್ ನಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ವಿವೇಕಾನಂದ

ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ : ರವಿ ಕುಮಾರ್ ಎನ್. | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ‘ವಿವೇಕ ಅಭಿನಂದನಮ್’ Read More »

ಬಕ್ರೀದ್ ಮುಂತಾದ ಸಂದರ್ಭದಲ್ಲಿ ಗೋವಿನ ಕುರ್ಬಾನಿ ಆಗದಂತೆ, ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಆಗದಂತೆ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು : ಡಾ.ಕೃಷ್ಣ ಪ್ರಸನ್ನ | ರಾತ್ರಿ ವೇಳೆ ಪೊಲೀಸರು ಕಾರ್ಯಕರ್ತರ ಮನೆಗೆ ತೆರಳಿ ಫೋಟೊ ತೆಗೆಯುತ್ತಿದ್ದು, ಹೆಚ್ಚು ಕಡಿಮೆಯಾದರೆ ಪೊಲೀಸ್ ಇಲಾಖೆಯೇ ನೇರ ಹೊಣೆ

ಪುತ್ತೂರು: ಬಕ್ರೀದ್ ಮತ್ತಿತರ ಸಂದರ್ಭದಲ್ಲಿ ಗೋವಿನ ಕುರ್ಬಾನಿ ಆಗದಂತೆ ತಡೆಯುವುದು ಹಾಗೂ ಹಿಂಸಾತ್ಮಕವಾಗಿ ಗೋವು ಸಾಗಾಟ ಮಾಡುವುದರ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕಾರ್ಯಕರ್ತರ ಮನೆಗೆ ರಾತ್ರಿ ವೇಳೆ ಪೊಲೀಸರು ತೆರಳಿ ಸೆಲ್ಪಿ ತೆಗೆಯುವ ಮೂಲಕ ಭಯ ಉಂಟು ಮಾಡುವ ಕಾರ್ಯಕ್ಕೆ ಕಡಿವಾಣ ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಆಗ್ರಹಿಸಿದ್ದಾರೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಪೊಲೀಸರು ರಾತ್ರಿ ವೇಳೆ ಕಾರ್ಯಕರ್ತರ ಮನೆಗಳಿಗೆ ತೆರಳಿ ಮನೆಯವರನ್ನು ಹೊರಗೆ ಕರೆದು

ಬಕ್ರೀದ್ ಮುಂತಾದ ಸಂದರ್ಭದಲ್ಲಿ ಗೋವಿನ ಕುರ್ಬಾನಿ ಆಗದಂತೆ, ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಆಗದಂತೆ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು : ಡಾ.ಕೃಷ್ಣ ಪ್ರಸನ್ನ | ರಾತ್ರಿ ವೇಳೆ ಪೊಲೀಸರು ಕಾರ್ಯಕರ್ತರ ಮನೆಗೆ ತೆರಳಿ ಫೋಟೊ ತೆಗೆಯುತ್ತಿದ್ದು, ಹೆಚ್ಚು ಕಡಿಮೆಯಾದರೆ ಪೊಲೀಸ್ ಇಲಾಖೆಯೇ ನೇರ ಹೊಣೆ Read More »

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ಕಲಬುರ್ಗಿಗೆ ಗಡಿಪಾರು ಆದೇಶ | ವಿಚಾರಣೆಗೆ ಹಾಜರಾಗಲು ಸೂಚನೆ

ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ದ.ಕ.ಜಿಲ್ಲೆಯಿಂದ ಕಲುಬುರ್ಗಿ ಜಿಲ್ಲೆಯ ಶಹಬಾದ್‍ ಪೊಲೀಸ್‍ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಹೊರಡಿಸಿದ್ದು, ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55 ರಂತೆ ಈ ಆದೇಶ ಹೊರಡಿಸಲಾಗಿದ್ದು, ಈ ಕುರಿತು ಜೂ.6 ರಂದು ವಿಚಾರಣೆಗೆ ನ್ಯಾಯವಾದಿಗಳ ಮೂಲಕ ಹಾಜರಾಗಿ ವಾದಿಸುವಂತೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಸೂಚನೆ ನೀಡಿದ್ದಾರೆ. ತಪ್ಪಿದಲ್ಲಿ ಈ ಪ್ರಕರಣದಲ್ಲಿ  ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸಿ ಲಭ್ಯವಿರುವ ಮಾಹಿತಿ ಆಧಾರದಲ್ಲಿ

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರಿಗೆ ಕಲಬುರ್ಗಿಗೆ ಗಡಿಪಾರು ಆದೇಶ | ವಿಚಾರಣೆಗೆ ಹಾಜರಾಗಲು ಸೂಚನೆ Read More »

ಎಸ್‍ ಡಿಪಿಐ ಮಾತು ಕೇಳಿ ಸಂಘಪರಿವಾರದ ಪ್ರಮುಖರನ್ನು ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ : ಅರುಣ್‍ ಕುಮಾರ್ ಪುತ್ತಿಲ

ಪುತ್ತೂರು: ಎಸ್‍ ಡಿಪಿಐ ಮಾತು ಕೇಳಿ ಸಂಘಪರಿವಾರದ ಪ್ರಮುಖರನ್ನು ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಎಂದು ಅರುಣ್‍ ಕುಮಾರ್‍ ಪುತ್ತಿಲ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತಿಚಿನ ಕೆಲವು ಘಟನೆಗಳು ಸಂಭವಿಸಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರನ್ನೇ ಗುರಿಯಾಗಿಸಿ ಕೇಸ್ ಜಡಿಯುವ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆಯುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಸುಹಾಸ್ ಶೆಟ್ಟಿ ಶ್ರದ್ದಾಂಜಲಿ  ಭಾಷಣ ನೆಪದಲ್ಲಿ ಸಂಘ ಪರಿವಾರದ

ಎಸ್‍ ಡಿಪಿಐ ಮಾತು ಕೇಳಿ ಸಂಘಪರಿವಾರದ ಪ್ರಮುಖರನ್ನು ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ : ಅರುಣ್‍ ಕುಮಾರ್ ಪುತ್ತಿಲ Read More »

ಕೃಷಿಕ ಮಹಾಬಲ ಶೆಟ್ಟಿ ಪಡ್ಡಾಯಿ ನಿಧನ

ಪುತ್ತೂರು: ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ ಮಹಾಬಲ ಶೆಟ್ಟಿ ಪಡ್ಡಾಯಿ ಇಂದು ಮುಂಜಾನೆ ನಿಧನರಾದರು. ಕೃಷಿಕರಾಗಿದ್ದ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂರು ಗಂಡು ಹಾಗೂ ನಾಲ್ವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೃಷಿಕ ಮಹಾಬಲ ಶೆಟ್ಟಿ ಪಡ್ಡಾಯಿ ನಿಧನ Read More »

ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘದ ಪ್ರಥಮ ಮಹಾ ಅಧಿವೇಶನ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ

ಪುತ್ತೂರು: ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ದ.ಕ.ಜಿಲ್ಲೆ ಇದರ ಸರ್ವ ಸದಸ್ಯರುಗಳ ಪ್ರಥಮ ಮಹಾ ಅಧಿವೇಶನ ಹಾಗೂ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ,. ಮಾತೃ ಸಂಘದ ಸಮಾವೇಶ ಪ್ರಥಮವಾಗಿದೆ. ಕುರುಂಜಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಆರಂಭಗೊಂಡಿರುವುದು ಸಂತೋಷ ತಂದಿದೆ. ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಕುರಿತು ಒಕ್ಕಲಿಗ ಸಂಘದ ಪ್ರತಿಯೊಬ್ಬರಿಗೂ ತಿಳಿಯಬೇಕು.

ದ.ಕ.ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘದ ಪ್ರಥಮ ಮಹಾ ಅಧಿವೇಶನ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ Read More »

ಧರ್ಮಾಭ್ಯುದಯ – ಧರ್ಮ ಶಿಕ್ಷಣ ಶಿಕ್ಷಕರಿಗೆ ಹಾಗೂ ಕಾರ್ಯಕರ್ತರಿಗೆ ಕಾರ್ಯಾಗಾರ | ಧಾರ್ಮಿಕ ಶಿಕ್ಷಣ ಸಮ್ಮೇಳನವಾಗಬೇಕು : ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಹಿಂದೂ ಧರ್ಮ ಶಿಕ್ಷಣ ಎಂಬುದು ಪ್ರತೀ ಹಿಂದೂ ಮನೆಯ ಪ್ರತಿಯೊಂದು ಮಗುವಿಗೂ ದೊರಕುವಂತಾಗಬೇಕು. ಈ ಹಿನ್ನೆಲೆಯಲ್ಲಿ ಧರ್ಮ ಶಿಕ್ಷಣಕ್ಕಾಗಿ ಇಡಿಯ ಹಿಂದೂ ಸಮಾಜ ಒಂದಾಗಬೇಕು. ವಿಶೇಷವಾಗಿ ಎಲ್ಲಾ ಮಠಾಧೀಶರೂ ಈ ವಿಚಾರವನ್ನು ಕೈಗೆತ್ತಿಕೊಳ್ಳಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿಯ ವಿಭಾಗ ಪ್ರಮುಖ್ ಮುಳಿಯ ಕೇಶವ ಪ್ರಸಾದ್ ಮುಳಿಯ ಹೇಳಿದರು. ಅವರು  ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ಭಾನುವಾರ ನಗರದ ಕಲ್ಲಾರೆಯಲ್ಲಿನ ಶಿವಕೃಪಾ ಸಭಾಭವನದಲ್ಲಿ ಧರ್ಮಾಭ್ಯುದಯ – ಹಿಂದೂ ಧರ್ಮ ಶಿಕ್ಷಣ ಸಂಘಟನೆಯ ಕಾರ್ಯಕರ್ತರು

ಧರ್ಮಾಭ್ಯುದಯ – ಧರ್ಮ ಶಿಕ್ಷಣ ಶಿಕ್ಷಕರಿಗೆ ಹಾಗೂ ಕಾರ್ಯಕರ್ತರಿಗೆ ಕಾರ್ಯಾಗಾರ | ಧಾರ್ಮಿಕ ಶಿಕ್ಷಣ ಸಮ್ಮೇಳನವಾಗಬೇಕು : ಕೇಶವ ಪ್ರಸಾದ್ ಮುಳಿಯ Read More »

error: Content is protected !!
Scroll to Top