ಪುತ್ತೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು, ಕಡಬ ಕೇಂದ್ರ ಒಕ್ಕೂಟದ ಪದಗ್ರಹಣ, ಸಾಧನ ಸಮಾವೇಶ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್  ಪುತ್ತೂರು ಹಾಗೂ ಕಡಬ ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಒಕ್ಕೂಟಗಳ ಸಾಧನ ಸಮಾವೇಶ ಡಿ. 23ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ಜರಗಿತು. ಸ್ವ-ಸಹಾಯ ಸಂಘಗಳಿಗೆ ಸರ್ಕಾರದ ಸವಲತ್ತು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸ್ವಸಹಾಯ ಸಂಘ ಸೇರಿದಂತೆ ಪುತ್ತೂರಿನಲ್ಲಿ ಬಹಳಷ್ಟು ಸ್ವಸಹಾಯ ಸಂಘಗಳು ಕೆಲಸ ನಿರ್ವಹಿಸುತ್ತಿವೆ. ಇತ್ತೀಚೆಗೆ ಇಂತಹ ಸಂಘಗಳಿಗೆ ಸರ್ಕಾರದ ಸವಲತ್ತು […]

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು, ಕಡಬ ಕೇಂದ್ರ ಒಕ್ಕೂಟದ ಪದಗ್ರಹಣ, ಸಾಧನ ಸಮಾವೇಶ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಪ್ಟಮ್‌ ಕಂಪನಿಯ ಕ್ಯಾಂಪಸ್‌ ನೇಮಕಾತಿ ತರಬೇತಿ ಸಮಾರೋಪ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಹಾಗೂ ನೇಮಕಾತಿ ಕೋಶ ಮತ್ತುಆಂತರಿಕ ಗುಣಮಟ್ಟ ಭರವಸೆ ಕೋಶಗಳ ಆಶ್ರಯದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಮೂಲದ ಬಹುರಾಷ್ಟ್ರೀಯ ಹೆಲ್ತ್‌ ಕೇರ್‌ ಮತ್ತು ಇನ್ಶೂರೆನ್ಸ್ ಕಂಪನಿ ಆಪ್ಟಮ್‌ನ ಮೆಡಿಕಲ್‌ ಕೋಡರ್‌ ಹುದ್ದೆಗಳಿಗಾಗಿ ನಡೆದ ನೇಮಕಾತಿ ತರಬೇತಿಯ ಸಮಾರೋಪ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ಯಾವುದೇ ಕಾರ್ಯದಲ್ಲಿ ನಾವು ಪ್ರಾಮಾಣಿಕ ಪ್ರಯತ್ನಪಟ್ಟರೆ ಯಶಸ್ಸು ನಿಶ್ಚಿತ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವುದು ಮಾತ್ರವಲ್ಲದೆ, ಉದ್ಯೋಗಕ್ಕಾಗಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಪ್ಟಮ್‌ ಕಂಪನಿಯ ಕ್ಯಾಂಪಸ್‌ ನೇಮಕಾತಿ ತರಬೇತಿ ಸಮಾರೋಪ Read More »

ಉತ್ತಮ ಸಮಾಜ ನಿರ್ಮಾಣಕ್ಕೆ ಯುವಜನತೆ ತಯಾರಾಗಬೇಕು

ಪುತ್ತೂರು:  ಆಧುನಿಕ ಯುಗದಲ್ಲಿ ಯುವಜನತೆಯು  ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಕೆಲವೊಮ್ಮೆ  ಎದುರಿಸುವ ಸಲುವಾಗಿ  ವಿಫಲವಾಗುತ್ತಾರೆ. ಕಷ್ಟಗಳು ಎದುರಾದಾಗ ಅದನ್ನು ಹಿಮ್ಮೆಟ್ಟಿ ಮುಂದುವೆರೆಯಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆ ಬಹಿರಂಗವಾಗಿ ಗೆದ್ದರೂ ಕೂಡ ಅಂತರಂಗದಲ್ಲಿ  ಸೋಲುತ್ತಾರೆ. ಯಾವುದೇ  ಸಂದರ್ಭದಲ್ಲೂ  ಹಿಂಜರಿಯದೆ ಸದೃಡತೆಯಿಂದ, ಆತ್ಮಸ್ಥೈರ್ಯದಿಂದ  ಮುನ್ನುಗ್ಗಬೇಕು. ಯುವಜನತೆ ಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಆಗಲು ಸಾಧ್ಯ. ಆದರಿಂದ ರಾಷ್ಟ್ರ ನಮ್ಮನ್ನು ಕಟ್ಟುವುದಲ್ಲ ನಾವು  ರಾಷ್ಟ್ರವನ್ನು ಕಟ್ಟಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಆರತಿ ಹೇಳಿದರು. ಇವರು

ಉತ್ತಮ ಸಮಾಜ ನಿರ್ಮಾಣಕ್ಕೆ ಯುವಜನತೆ ತಯಾರಾಗಬೇಕು Read More »

ಡಿ. 24: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸಂವಾದ, ಡಾ.ಗುರುರಾಜ ಕರಜಗಿ ಉಪನ್ಯಾಸ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಡಿ. ೨೪ರಂದು ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮ ಹಾಗೂ ಹೆತ್ತವರೊಂದಿಗೆ ಸಂವಾದ ನಡೆಯಲಿದೆ. ಅಂತಾರಾಷ್ಟ್ರೀಯ ತರಬೇತುದಾರ, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಗ್ಗೆ 9ಕ್ಕೆ ಡಾ.ಕರಜಗಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವರು. ತದನಂತರ 10.30ರಿಂದ 12.30ರ ವರೆಗೆ ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಅಪರಾಹ್ನ 1.30ರಿಂದ ಹೆತ್ತವರೊಂದಿಗೆ ಡಾ. ಗುರುರಾಜ ಕರಜಗಿ ಸಂವಾದ ನಡೆಸಲಿದ್ದು, ಸಾರ್ವಜನಿಕರಿಗೂ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ.

ಡಿ. 24: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸಂವಾದ, ಡಾ.ಗುರುರಾಜ ಕರಜಗಿ ಉಪನ್ಯಾಸ Read More »

ಪಂಜದಲ್ಲಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ

ಪುತ್ತೂರು: ಸುಳ್ಯ ತಾಲೂಕಿನಲ್ಲಿ ಸಮುದಾಯ ಸಮ್ಮಿಲನ ಕಾರ್ಯಕ್ರಮ ನಡೆಸುತ್ತಿರುವ ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಗುರುವಾರ ಪಂಜದಲ್ಲಿ ಆಶೀರ್ವಚನ ನೀಡಿದರು. ಇದೇ ಸಂದರ್ಭ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಉಪಸ್ಥಿತರಿದ್ದರು. ಪಂಜ ಆಸುಪಾಸಿನ ಆರು ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಸೇರಿದ್ದರು.

ಪಂಜದಲ್ಲಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ | ಬಲ್ಲೇರಿ ಮಲೆ ಯಾತ್ರೆ ಕೈಗೊಂಡ ಆರ್ಯಾಪು ಗ್ರಾಮಸ್ಥರು

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಡಿ. 22ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು. ಬಳಿಕ ದೇವಾಲಯದ ಮೂಲಸ್ಥಳವಾದ ಬಲ್ಲೇರಿ ಮಲೆಗೆ ತೆರಳಿ ಪೂಜೆ ನೆರವೇರಿಸಿ, ಮೃತ್ತಿಗೆ ತರಲಾಯಿತು. ಪ್ರತಿವರ್ಷ ಜಾತ್ರೆಗೆ ಪೂರ್ವಭಾವಿಯಾಗಿ ನಡೆಯುವ ಗೊನೆ ಮುಹೂರ್ತದಂದು, ಬಲ್ಲೇರಿ ಮಲೆಗೆ ತೆರಳುವ ಸಂಪ್ರದಾಯ ಬಹಳ ಹಿಂದಿನಿಂದಲೂ ಈ ದೇವಸ್ಥಾನದಲ್ಲಿ ನಡೆದು ಬಂದಿದೆ. ವರ್ಷಕ್ಕೆ ಒಂದೇ ಬಾರಿ ಮಾತ್ರ ಬಲ್ಲೇರಿ ಮಲೆಯ ತುದಿ ಭಾಗಕ್ಕೆ ತೆರಳುವುದು ವಾಡಿಕೆ. ಆದ್ದರಿಂದ ಹೋಗುವ ದಾರಿಯುದ್ಧಕ್ಕೂ ಬೆಳೆದು

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ | ಬಲ್ಲೇರಿ ಮಲೆ ಯಾತ್ರೆ ಕೈಗೊಂಡ ಆರ್ಯಾಪು ಗ್ರಾಮಸ್ಥರು Read More »

ಓದುವ ಹವ್ಯಾಸದಿಂದ ಜ್ಞಾನವೃದ್ಧಿ| ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸನ್ಮಾನ ರಶ್ಮಿಯಲ್ಲಿ ನವೀನ್ ಭಂಡಾರಿ

ಪುತ್ತೂರು: ಡಾಕ್ಟರ್, ಇಂಜಿನಿಯರ್ ಜೊತೆಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಸಮರ್ಥ ಅಧಿಕಾರಿಗಳ ಅವಶ್ಯಕತೆಯು ಈ ದೇಶಕ್ಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನ ಹರಿಸಬೇಕು ಎಂದು ಪುತ್ತೂರು ಹಾಗೂ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಅಡಿಟೋರಿಯಂನಲ್ಲಿ ದ. 22 ರಂದು ನಡೆದ ಸನ್ಮಾನ ರಶ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸ್ವರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಐಎಎಸ್, ಐಪಿಎಸ್ ಮುಂತಾದ ಪರೀಕ್ಷೆಗಳಲ್ಲಿ ಭಾಗಿಗಳಾಗಿ

ಓದುವ ಹವ್ಯಾಸದಿಂದ ಜ್ಞಾನವೃದ್ಧಿ| ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸನ್ಮಾನ ರಶ್ಮಿಯಲ್ಲಿ ನವೀನ್ ಭಂಡಾರಿ Read More »

ಅನ್ಯಾಡಿ: ನಾಗ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: ಕುದ್ಮಾರು ಗ್ರಾಮದ ಅನ್ಯಾಡಿ ಮನೆಯಲ್ಲಿ ನಾಗ ಪ್ರತಿಷ್ಠಾ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಡಿ. 22ರಂದು ನಾಗತಂಬಿಲ, ವಿಶೇಷ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಅನ್ಯಾಡಿ: ನಾಗ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೆಡಿಕಲ್ ಕಾಲೇಜು ಸ್ಥಾಪನೆ: ಹೋರಾಟ ಸಮಿತಿ

ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕು ಎನ್ನುವುದು ಜಿಲ್ಲಾ ಕೇಂದ್ರಕ್ಕೆ ಪೂರಕವಾದ ಬೇಡಿಕೆ. ಆದ್ದರಿಂದ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾಲೇಜು ನಿರ್ಮಾಣದ ಅನಿವಾರ್ಯತೆಯ ಬಗ್ಗೆ ನೆನಪಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ ಹೇಳಿದರು. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ ಈಗಾಗಲೇ ಪುತ್ತೂರಿನಲ್ಲಿ 40 ಎಕರೆ ಜಾಗ ಮೀಸಲಿಟ್ಟಿದೆ. ಈ ಜಾಗಕ್ಕೆ ಬೇಲಿ ನಿರ್ಮಿಸಿ, ನಾಮಫಲಕ ಅಳವಡಿಸಬೇಕು. ಅನ್ಯ ಕಾರ್ಯಕ್ಕೆ ಈ ಜಾಗವನ್ನು

ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೆಡಿಕಲ್ ಕಾಲೇಜು ಸ್ಥಾಪನೆ: ಹೋರಾಟ ಸಮಿತಿ Read More »

ಸರಣಿ ಆಡಿಯೋ ರಿಲೀಸ್: ಚುನಾವಣೆಗೆ ಭರ್ಜರಿ ತಯಾರಿಯೇ?

ಪುತ್ತೂರು: ಒಂದರ ಬೆನ್ನಿಗೆ ಇನ್ನೊಂದರಂತೆ ಹೊರಬರುತ್ತಿರುವ ಆಡಿಯೋ ತುಣುಕುಗಳು ಚುನಾವಣೆಗೆ ತಯಾರಿಯೇ? ಹೌದು ಎನ್ನುತ್ತಿವೆ ಬಲ್ಲಮೂಲಗಳು. ಚುನಾವಣೆ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ವರಸೆಗಳು ಆರಂಭವಾಗತೊಡಗುತ್ತವೆ. ಹೇಳಿಕೆಗಳ ವಾರ್, ವೀಡಿಯೋ ರಿಲೀಸ್ ಹೀಗೆ ಅನೇಕ ರೀತಿ. ಆದರೆ ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಆಡಿಯೋ ವಾರ್ ಆರಂಭವಾಗಿವೆ. ಈ ಆಡಿಯೋ ವಾರ್ ಯಾರನ್ನು ಗುರಿಯಾಗಿಸಿಕೊಂಡಿವೆ? ಉದ್ದೇಶವಾದರೂ ಏನು? ಆಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮಸಿ ಎರಚುವ ಹುನ್ನಾರವೇ? ಹೀಗೆ ಹತ್ತು ಹಲವು ಪ್ರಶ್ನೆಗಳು

ಸರಣಿ ಆಡಿಯೋ ರಿಲೀಸ್: ಚುನಾವಣೆಗೆ ಭರ್ಜರಿ ತಯಾರಿಯೇ? Read More »

error: Content is protected !!
Scroll to Top