ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಕ್ಕೆ 2022-23ನೇ ಸಾಲಿನಲ್ಲಿ ಒಂದು ಕೋಟಿಗೂ ಆಧಿಕ ಲಾಭ : ಚಿದಾನಂದ ಬೈಲಾಡಿ
ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ 2022-23ನೇ ಸಾಲಿನಲ್ಲಿ 400 ಕೋಟಿಗೂ ಅಧಿಕ ವ್ಯವಹಾರ ನಡೆಸಿ ಒಂದು ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ. ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002ರಲ್ಲಿ ಸಂಘ ಆರಂಭಗೊಂಡಿದ್ದು, ಮುಖ್ಯ ಕಚೇರಿ ಸಹಿತ ಒಟ್ಟು 8 ಶಾಖೆಗಳನ್ನು ಹೊಂದಿದೆ. ಪುತ್ತೂರು ಎಪಿಎಂಸಿ ಮಾನಾಯಿ ಆರ್ಚ್ ಕಟ್ಟಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಆಲಂಕಾರು, ಕುಂಬ್ರ […]









