ಪುತ್ತೂರು

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು

ಪುತ್ತೂರು: ಲೋಕಾಯುಕ್ತ ಎಸ್ಪಿ ಡಿ. 19ರಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪುತ್ತೂರು ತಹಸೀಲ್ದಾರ್ ಅವರ ನ್ಯಾಯಾಲಯ ಸಂಕೀರ್ಣದಲ್ಲಿ ಉಪಸ್ಥಿತರಿದ್ದ ಲೋಕಾಯುಕ್ತ ಅಧಿಕಾರಿಗಳು, ಒಟ್ಟು 21 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದರು. ಇವೆಲ್ಲವೂ ಕಂದಾಯ ಹಾಗೂ ಸರ್ವೇ ಇಲಾಖೆಗೆ ಸಂಬಂಧಪಟ್ಟ ಪ್ರಕರಣಗಳು. ಇವನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. ಸರ್ಕಾರಿ ಅಧಿಕಾರಿಗಳಿಂದ ಆಗಬೇಕಾದ ಕೆಲಸದಲ್ಲಿ ವಿಳಂಬ, ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು, ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ ತೊಂದರೆಗೊಳಗಾದ ಸಾರ್ವಜನಿಕರು ದೂರು […]

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿಯಿತ್ತ ಬಿ.ಎಲ್. ಸಂತೋಷ್

ಪುತ್ತೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿಯಿತ್ತ ಬಿ.ಎಲ್. ಸಂತೋಷ್ Read More »

ಡಿ. 22, 23ರಂದು ವಿದ್ಯಾರಶ್ಮಿಯಲ್ಲಿ ಸನ್ಮಾನ ರಶ್ಮಿ, ಸಂಭ್ರಮ ರಶ್ಮಿ

ಪುತ್ತೂರು: ಸವಣೂರು ವಿದ್ಯಾಗಂಗೋತ್ರಿ ವಿದ್ಯಾರಶ್ಮಿ ವಿದ್ಯಾಲಯದ ಆಶ್ರಯದಲ್ಲಿ ಸನ್ಮಾನ ರಶ್ಮಿ ಹಾಗೂ ಸಂಭ್ರಮ ರಶ್ಮಿ ಡಿ. 22, 23ರಂದು ವಿದ್ಯಾಚೇತನ ಆಡಿಟೋರಿಯಂನಲ್ಲಿ ನಡೆಯಲಿದೆ. 22ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಸನ್ಮಾನ ರಶ್ಮಿ ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಬಂಡಾರಿ ಸಿ. ಮುಖ್ಯ ಅತಿಥಿಯಾಗಿರುವರು. ವಿದ್ದ್ಯಾರಶ್ಮಿ ಓಲ್ಡ್ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷ ದ್ರುವ ಮುಂದೋಡಿ ಗೌರವ ಅತಿಥಿಯಾಗಿರುವರು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ

ಡಿ. 22, 23ರಂದು ವಿದ್ಯಾರಶ್ಮಿಯಲ್ಲಿ ಸನ್ಮಾನ ರಶ್ಮಿ, ಸಂಭ್ರಮ ರಶ್ಮಿ Read More »

ಶತಮಾನ ಕಳೆದರೂ ಪತ್ರಿಕೆಗಳು ವಿಶ್ವಾಸಪೂರ್ಣ: ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸದಲ್ಲಿ ಸುಧಾಕರ ಸುವರ್ಣ

ಪುತ್ತೂರು: ವರ್ಷಗಳು ಕಳೆದಂತೆ ಮಾಧ್ಯಮ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ. ಸುದ್ದಿಗಳು ವೇಗವಾಗಿ ಜನರನ್ನು ತಲುಪುತ್ತಿವೆ. ಆದರೆ ಟಿ.ವಿ., ೨೪*೭ ನ್ಯೂಸ್,  ವೆಬ್ ನ್ಯೂಸ್, ಯೂಟ್ಯೂಬ್ ಚಾನಲ್, ಲೈವ್ ನ್ಯೂಸ್ ಯುಗದಲ್ಲೂ ದಿನಪತ್ರಿಕೆಗಳು ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ನಿಖರ ಸುದ್ದಿಗಳಿಗಾಗಿ ಜನತೆ ದಿನಪತ್ರಿಕೆಯನ್ನೇ ಅವಲಂಬಿಸಿದ್ದಾರೆ ಎಂದು ಪುತ್ತೂರಿನ ವಿಜಯ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು. ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ

ಶತಮಾನ ಕಳೆದರೂ ಪತ್ರಿಕೆಗಳು ವಿಶ್ವಾಸಪೂರ್ಣ: ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸದಲ್ಲಿ ಸುಧಾಕರ ಸುವರ್ಣ Read More »

ಪರ್ಯಾಯವಿಲ್ಲದ ರಕ್ತದ ದಾನವೇ ಸೇವೆ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಡಾ. ಮಾರ್ಟೀನಾ

ಪುತ್ತೂರು: ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ. ಇದನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ ಹಾಗಾಗಿ ಸುರಕ್ಷಿತ ರಕ್ತದಾನವನ್ನು ಸೇವೆ ಎಂದು ಪರಿಗಣಿಸಲಾಗುತ್ತದೆ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯೆ ಡಾ. ಮಾರ್ಟಿನಾ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‌ಎಸ್‌ಎಸ್ ಘಟಕ, ಯೂತ್ ರೆಡ್-ಕ್ರಾಸ್ ಘಟಕ ಹಾಗೂ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರದ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತದಾನದಿಂದ ಮೂರು

ಪರ್ಯಾಯವಿಲ್ಲದ ರಕ್ತದ ದಾನವೇ ಸೇವೆ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಡಾ. ಮಾರ್ಟೀನಾ Read More »

ಡಿ. 25: ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಭ್ರಮ 2022

ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ 2022 ಡಿ. 25ರಂದು ಬೆಳಿಗ್ಗೆ 9 ಗಂಟೆಗೆ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. 7 ವಲಯದ ತಂಡಗಳ ಕ್ರೀಡೋತ್ಸವ ಇದಾಗಿದ್ದು, ವಿವಿಧ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಕ್ರಿಕೆಟ್ ನಡೆಯಲಿದೆ. ಹಗ್ಗಜಗ್ಗಾಟಕ್ಕೆ 9 ಜನರ

ಡಿ. 25: ಒಕ್ಕಲಿಗ ಗೌಡ ಸೇವಾ ಸಂಘದಿಂದ ಯುವ ಕ್ರೀಡಾ ಸಂಭ್ರಮ 2022 Read More »

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದ್ವಿಗುಣಗೊಳಿಸಿದ ರಾಜ್ಯ ಸರ್ಕಾರ

ಪುತ್ತೂರು: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ.ಎಸ್. ಬಾನೊಳಿ ಅವರು ಆದೇಶ ಹೊರಡಿಸಿದ್ದು, 2017ರ ಮೇ 5ರ ಆದೇಶದಂತೆ ರಾಜ್ಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳಗೊಳ್ಳಲಿದೆ. ಇದುವರೆಗೆ ಗ್ರಾ.ಪಂ. ಅಧ್ಯಕ್ಷರಿಗೆ 3 ಸಾವಿರ ರೂ., ಉಪಾಧ್ಯಕ್ಷರಿಗೆ 2 ಸಾವಿರ ರೂ., ಸದಸ್ಯರಿಗೆ 1 ಸಾವಿರ ರೂ.ವನ್ನು ತಿಂಗಳ

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದ್ವಿಗುಣಗೊಳಿಸಿದ ರಾಜ್ಯ ಸರ್ಕಾರ Read More »

ಅಶಿಸ್ತಿನ ಹೇಳಿಕೆ ಸಹಿಸಲ್ಲ: ಅಬ್ದುಲ್ ಕುಂಞಿಯನ್ನು ಉಚ್ಚಾಟಿಸಿ ಸ್ಪಷ್ಟ ಸಂದೇಶ ರವಾನಿಸಿದ ಬಿಜೆಪಿ

ಪುತ್ತೂರು: ಬಿಜೆಪಿ ಪ್ರಮುಖರು ಹಾಗೂ ಪಕ್ಷದ ಬಗ್ಗೆ ಜರೆದು, ಅಶಿಸ್ತಿನಿಂದ ಮಾತನಾಡಿದ್ದ ಬಿಜೆಪಿ ಕಾರ್ಯಕರ್ತ, ಕೆಡಿಪಿ ಸದಸ್ಯ ಅಬ್ದುಲ್ ಕುಂಞಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಸದರು, ಶಾಸಕರಾದಿಯಾಗಿ ಬಿಜೆಪಿ ಪ್ರಮುಖರ ಬಗ್ಗೆ ಅಶಿಸ್ತಿನಿಂದ ಮಾತನಾಡಿದ್ದು ಮಾತ್ರವಲ್ಲ, ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆಯೂ ಆಧಾರರಹಿತ ಹೇಳಿಕೆ ನೀಡಿರುವುದು ಆಡಿಯೋದಲ್ಲಿ ದಾಖಲಾಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಪುತ್ತೂರು ಬಿಜೆಪಿ ಮಂಡಲದ

ಅಶಿಸ್ತಿನ ಹೇಳಿಕೆ ಸಹಿಸಲ್ಲ: ಅಬ್ದುಲ್ ಕುಂಞಿಯನ್ನು ಉಚ್ಚಾಟಿಸಿ ಸ್ಪಷ್ಟ ಸಂದೇಶ ರವಾನಿಸಿದ ಬಿಜೆಪಿ Read More »

ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’

ಬೆಂಗಳೂರು: ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’ ಭಾನುವಾರ ಬೆಂಗಳೂರಿನ ಅರಮನೆ ವೈದಾನದಲ್ಲಿ ಜರಗಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶವನ್ನು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಶಕ್ತಿ ಸಂಗಮ ಕಾರ್ಯಕ್ರಮ ಜರಗಿದ್ದು, ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಪ್ರಕೋಷ್ಠಗಳ ಇಂತಹ ಶಕ್ತಿ ಸಂಗಮವು, ಪಕ್ಷದ ಕಾರ್ಯಚಟುವಟಿಕೆಗಳಿಗೆ ಹೊಸ ಶಕ್ತಿಯನ್ನು

ಬಿಜೆಪಿಯ ೨೪ ಪ್ರಕೋಷ್ಠಗಳ ವಿವಿಧ ಸ್ತರದ ಪದಾಧಿಕಾರಿಗಳ ರಾಜ್ಯ ಸಮಾವೇಶ ‘ಶಕ್ತಿ ಸಂಗಮ’ Read More »

ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ವಾರ್ಷಿಕ ಕ್ರೀಡಾಕೂಟ | ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘ ಆಯೋಜನೆ

ಪುತ್ತೂರು: ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ವಲಯದ ಆಶ್ರಯದಲ್ಲಿ ಕಡಬ ಸಂತ ಜೋಕಿಮರ ಶಾಲಾ ಮೈದಾನದಲ್ಲಿ ಕಡಬ ವಲಯ ಮಟ್ಟದ ವಾರ್ಷಿಕ ಕ್ರೀಡಾಕೂಟ ರವಿವಾರ ನಡೆಯಿತು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಬಿಳಿನೆಲೆ ಕಾರ್ಯಕ್ರಮ ಉದ್ಘಾಟಿಸಿದರು. ಕಡಬ ವಲಯ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ನಿವೃತ್ತ

ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ವಾರ್ಷಿಕ ಕ್ರೀಡಾಕೂಟ | ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘ ಆಯೋಜನೆ Read More »

error: Content is protected !!
Scroll to Top