ಹಿಂದೂಗಳ ರಕ್ಷಣೆಗೆ ಬಿಜೆಪಿ ಸರಕಾರ ಅವಶ್ಯ |ಭಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ ವಾಪಾಸ್ ಮೊದಲಾದ ಕಾಂಗ್ರೆಸಿನ ಬೆದರಿಕೆಗೆ ಪ್ರತ್ಯುತ್ತರ ನೀಡಲೇಬೇಕು | ಪಾಂಗಲಾಯಿಯಲ್ಲಿ ನಡೆದ ಭಾರತ ಮಾತಾ ಪೂಜನಾದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ
ಪುತ್ತೂರು: ಈಗಾಗಲೇ ಕಾಂಗ್ರೆಸ್ ತಿಳಿಸಿರುವಂತೆ ಅಧಿಕಾರಕ್ಕೆ ಬಂದರೆ ಬಜರಂಗದಳಕ್ಕೆ ನಿಷೇಧ ಹೇರುತ್ತಾರಂತೆ. ಗೋ ಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ತಡೆಯುವ ಅವಶ್ಯಕತೆ ಇದೆ. ಇದನ್ನು ತಡೆಯಲು ವ್ಯಕ್ತಿಯೋರ್ವನಿಂದ ಅಸಾಧ್ಯ. ಸಂಘಟನೆಯ ಶಕ್ತಿಯಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲೇಬೇಕು ಎಂದು ಭಜರಂಗದಳದ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಪಾಂಗಲಾಯಿಯ ಸಂತೋಷ್ ಬೋನಂತಾಯ ಅವರ ಮನೆಯಲ್ಲಿ ಭಾನುವಾರ ಸಂಜೆ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ […]










