ಪುತ್ತೂರು

7ನೇ ಸುತ್ತಿನ ಫಲಿತಾಂಶ | ಮುನ್ನಡೆಯಲ್ಲಿ ಪುತ್ತಿಲ | ಕ್ಲಾಸ್ ಮೇಟ್ ರೈಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪುತ್ತಿಲ

ಪುತ್ತೂರು: 7ನೇ ಸುತ್ತಿನ ಮತ ಎಣಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದುಕೊಳ್ಳಲು ಸಫಲವಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 27512 ಮತ ಪಡೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೊಕ್ ಕುಮಾರ್ ರೈ 27421 ಮತ ಪಡೆದಿದ್ದಾರೆ. ಈ ಮೂಲಕ ದೋಸ್ತಿಗಳ ನಡುವೆ ಪೈಪೋಟಿ ಏರ್ಪಟಿದ್ದು, ಪುತ್ತಿಲ ಮುನ್ನಡೆಯಲ್ಲಿ ಗುರುತಿಸಿಕೊಂಡಿದ್ದಾರೆ.

7ನೇ ಸುತ್ತಿನ ಫಲಿತಾಂಶ | ಮುನ್ನಡೆಯಲ್ಲಿ ಪುತ್ತಿಲ | ಕ್ಲಾಸ್ ಮೇಟ್ ರೈಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪುತ್ತಿಲ Read More »

6ನೇ ಸುತ್ತಿನಲ್ಲಿ ಹೆಚ್ಚು ಮತ ಬಾಚಿಕೊಂಡ ಪುತ್ತಿಲ

ಪುತ್ತೂರು: 6ನೇ ಸುತ್ತಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು 23102 ಮತ ಪಡೆದುಕೊಂಡು, ಅಶೋಕ್ ಕುಮಾರ್ ರೈ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಅಶೋಕ್ ಕುಮಾರ್ ರೈ 24592 ಮತ ಪಡೆದುಕೊಂಡು, ಗೆಲುವಿನ ಅಂತರವನ್ನು 1490 ಮತಗಳ ಅಂತರಕ್ಕೆ ಕುಸಿದಿದೆ. ಬಿಜೆಪಿ 15350 ಮತ ಪಡೆದುಕೊಂಡಿದೆ. ನೋಟಾ ಪರವಾಗಿ 273 ಮತ ಪಡೆದುಕೊಂಡಿದೆ. ಒಟ್ಟು 65377 ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ.

6ನೇ ಸುತ್ತಿನಲ್ಲಿ ಹೆಚ್ಚು ಮತ ಬಾಚಿಕೊಂಡ ಪುತ್ತಿಲ Read More »

5ನೇ ಸುತ್ತಿನ ಫಲಿತಾಂಶ | ಅಶೋಕ್ ರೈಗೆ 20094, ಪುತ್ತಿಲ 18873, ಆಶಾ 12505 | ನೋಟಾ ಪರ ಹೆಚ್ಚಳಗೊಂಡ ಮತ

ಪುತ್ತೂರು: 5ನೇ ಸುತ್ತಿನ ಫಲಿತಾಂಶ ಪ್ರಕಟವಾಗಿದ್ದು ಅಶೋಕ್ ಕುಮಾರ್ ರೈ 20094 ಮತ ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಪುತ್ತಿಲ 18873 ಮತ ಪಡೆದಿದ್ದಾರೆ.  ಒಟ್ಟು 50442 ಮತಗಳ ಎಣಿಕೆ ಈಗಾಗಲೇ ಮುಕ್ತಾಯಗೊಂಡಿದೆ. ಬಿಜೆಪಿಯ ಆಶಾ ತಿಮ್ಮಪ್ಪ 12505 ಮತ, ಶಾಫಿ ಬೆಳ್ಳಾರೆ 986, ದಿವ್ಯಪ್ರಭಾ ಚಿಲ್ತಡ್ಕ 230, ವಿಶು ಕುಮಾರ್ 194, ಐವನ್ ಫೆರಾವೊ 134, ಸುಂದರ ಕೊಯಿಲ 196, ನೋಟಾ 230 ಮತ ಪಡೆದಿದೆ.

5ನೇ ಸುತ್ತಿನ ಫಲಿತಾಂಶ | ಅಶೋಕ್ ರೈಗೆ 20094, ಪುತ್ತಿಲ 18873, ಆಶಾ 12505 | ನೋಟಾ ಪರ ಹೆಚ್ಚಳಗೊಂಡ ಮತ Read More »

4ನೇ ಸುತ್ತಿನ ಫಲಿತಾಂಶ ಔಟ್ | ಮತ್ತೆ ಕಾಂಗ್ರೆಸ್ ಮುನ್ನಡೆ, ಪುತ್ತಿಲ 2ನೇ ಸ್ಥಾನ

ಪುತ್ತೂರು: ಅಶೋಕ್ ಕುಮಾರ್ ರೈ ಅವರು 4ನೇ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡಿದ್ದು, 16666 ಮತ ಪಡೆದುಕೊಂಡಿದ್ದಾರೆ. ಅಂದರೆ 2289 ಮತಗಳ ಅಂತರದಲ್ಲಿ ಮುನ್ನಡೆಯಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು 14377 ಮತ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಅವರು 10043 ಮತಗಳನ್ನು ಪಡೆದಿದ್ದಾರೆ. ನೋಟಾ ಪರವಾಗಿ 188 ಮತ ಚಲಾವಣೆಯಾಗಿದೆ.

4ನೇ ಸುತ್ತಿನ ಫಲಿತಾಂಶ ಔಟ್ | ಮತ್ತೆ ಕಾಂಗ್ರೆಸ್ ಮುನ್ನಡೆ, ಪುತ್ತಿಲ 2ನೇ ಸ್ಥಾನ Read More »

3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾ ಪರವಾಗಿ 111 ಮತಗಳು | ಫುಲ್ ಡೀಟೈಲ್ ಇಲ್ಲಿದೆ

ಪುತ್ತೂರು: ಮತ ಎಣಿಕೆಯ 3ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 12541 ಮತಗಳನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳು 3ನೇ ಸುತ್ತಿನಲ್ಲಿ ಖಾತೆ ತೆರೆದಿದ್ದು, ನೋಟಾಕ್ಕೆ 111 ಮತ ಚಲಾವಣೆಯಾಗಿದೆ. ಒಟ್ಟು 30332 ಮತಗಳ ಎಣಿಕೆ ನಡೆದಿದ್ದು, ಇದರಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 10223 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 6452 ಮತ ಪಡೆದಿದ್ದು, ಜೆಡಿಎಸ್ ನ ದಿವ್ಯಪ್ರಭಾ ಚಿಲ್ತಡ್ಕ

3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾ ಪರವಾಗಿ 111 ಮತಗಳು | ಫುಲ್ ಡೀಟೈಲ್ ಇಲ್ಲಿದೆ Read More »

ಎಲ್.ಇ.ಡಿ. ಪರದೆಯಲ್ಲಿ ಫಲಿತಾಂಶ ವೀಕ್ಷಿಸುತ್ತಿರುವ ಪುತ್ತಿಲ ಮತ್ತು ಅಭಿಮಾನಿಗಳು

ಪುತ್ತೂರು: ಭಾರೀ ಕುತೂಹಲ ಮೂಡಿಸಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಅಭಿಮಾನಿಗಳು ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ಎಲ್.ಇ.ಡಿ. ಪರದೆಯ ಮೂಲಕ ಫಲಿತಾಂಶ ವೀಕ್ಷಿಸುತ್ತಿದ್ದಾರೆ. ಸಭಾಭವನದ ಮುಂಭಾಗದಲ್ಲಿ ಎಲ್.ಇ.ಡಿ. ಪರದೆಯನ್ನು ಹಾಕಲಾಗಿದ್ದು, ಕ್ಷಣ ಕ್ಷಣದ ಫಲಿತಾಂಶವನ್ನು ವೀಕ್ಷಿಸುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಕೂಡ ಉಪಸ್ಥಿತರಿದ್ದು, ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜೊತೆಯಾಗಿದ್ದಾರೆ.

ಎಲ್.ಇ.ಡಿ. ಪರದೆಯಲ್ಲಿ ಫಲಿತಾಂಶ ವೀಕ್ಷಿಸುತ್ತಿರುವ ಪುತ್ತಿಲ ಮತ್ತು ಅಭಿಮಾನಿಗಳು Read More »

ಬೀಗ ಮುರಿದು ಒಳಪ್ರವೇಶಿಸಿದ ಅಧಿಕಾರಿಗಳು?! ಮತ ಎಣಿಕೆ ಆರಂಭ | ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ

ಪುತ್ತೂರು: ಮತಗಟ್ಟೆ ಕೊಠಡಿಯ ಬೀಗ ಮರೆತು ಬಂದದ್ದರಿಂದ ಮತಗಟ್ಟೆ ಕೊಠಡಿಯ ಬೀಗವನ್ನು ಒಡೆದು ಒಳಪ್ರವೇಶಿಸಿದ ವಿಲಕ್ಷಣ ಘಟನೆಗೆ ಮಂಗಳೂರು ಸಾಕ್ಷಿಯಾಯಿತು ಎಂದು ತಿಳಿದುಬಂದಿದೆ. ಬಳಿಕ ನಡೆದ ಅಂಚೆ ಮತ ಎಣಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುರತ್ಕಲ್ ಎನ್.ಐ.ಟಿ.ಕೆ. ಆವರಣದಲ್ಲಿ ನಡೆಯುತ್ತಿರುವ ಮತ ಎಣಿಕೆಗಾಗಿ ಎಲ್ಲರೂ ಬಂದು ಸೇರಿದ್ದರು. ಅಷ್ಟರಲ್ಲಿ ಅಧಿಕಾರಿಯೋರ್ವರು ಕೀ ಮರೆತು ಬಂದಿರುವುದು ಬೆಳಕಿಗೆ ಬಂದಿತು. ಪುನಃ ಹಿಂದಿರುಗಿ ಕೀ ತರುವಷ್ಟು ಸಮಯ ಇಲ್ಲದೇ ಇರುವುದರಿಂದ ಬಾಗಿಲಿನ

ಬೀಗ ಮುರಿದು ಒಳಪ್ರವೇಶಿಸಿದ ಅಧಿಕಾರಿಗಳು?! ಮತ ಎಣಿಕೆ ಆರಂಭ | ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ Read More »

ಕೆಲ ನಿಮಿಷಗಳಲ್ಲೇ ಮತ ಎಣಿಕೆ | ಎನ್.ಐ.ಟಿ.ಕೆ. ಆವರಣ ಹೀಗಿದೆ

ಪುತ್ತೂರು: ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ. ಆವರಣ ಮತ ಎಣಿಕೆಗೆ ತಯಾರಾಗುತ್ತಿದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಎನ್.ಐ.ಟಿ.ಕೆ. ಆವರಣದಲ್ಲಿ ಪಕ್ಷದ ಪ್ರಮುಖರು ಜಮಾಯಿಸುತ್ತಿದ್ದಾರೆ. ಎನ್.ಐ.ಟಿ.ಕೆ.ಯ ಮತ ಎಣಿಕೆ ನಡೆಯುವ ಕೇಂದ್ರದ ಒಳಗಡೆ ಯಾರಿಗೂ ಪ್ರವೇಶವಿಲ್ಲ, ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ರಿಟರ್ನಿಂಗ್ ಅಧಿಕಾರಿಗಳ ಪಕ್ಕದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮತ ಎಣಿಕೆ ಕೇಂದ್ರದ ಅಧಿಕಾರಿಗಳು ಫಲಿತಾಂಶ ಹೊರಬಿಡದೇ, ಯಾರಿಗೂ ಮಾಹಿತಿ ತಿಳಿಯುವಂತಿಲ್ಲ. ಆದ್ದರಿಂದ ಫಲಿತಾಂಶ

ಕೆಲ ನಿಮಿಷಗಳಲ್ಲೇ ಮತ ಎಣಿಕೆ | ಎನ್.ಐ.ಟಿ.ಕೆ. ಆವರಣ ಹೀಗಿದೆ Read More »

ಯಾರಂತೆ ಪುತ್ತೂರ ಶಾಸಕ?!

ಪುತ್ತೂರು: ಪ್ರಚಾರ ಎಷ್ಟೇ ನಡೆದಿರಲಿ, ಅಬ್ಬರ ಎಷ್ಟೇ ಜೋರಾಗಿರಲಿ ಒಂದಂತೂ ಸತ್ಯ. ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೆ ಆಖಾಡದಲ್ಲಿ ಒಂದೇ ತೆರನಾದ ಟ್ರೆಂಡ್ ಚಾಲ್ತಿಯಲ್ಲಿತ್ತು. ಗೆಲುವು ಮೊದಲೇ ನಿರ್ಧರಿತವಾದಂತೆ. ಸಣ್ಣಪುಟ್ಟ ಏರುಪೇರುಗಳು ಇನ್ನೊಬ್ಬರಿಗೆ ಲಾಭವಾದೀತೇ ಹೊರತು, ಟ್ರೆಂಡ್ ಮಾತ್ರ ಇಂದಿನವರೆಗೆ ಯಥಾಸ್ಥಿತಿಯಲ್ಲಿತ್ತು. ಹಾಗಾಗಿ ಪುತ್ತೂರಿನ ಮುತ್ತು ಯಾರಾಗಲಿದ್ದಾರೆ ಎನ್ನುವುದು ಮುಗಿಯದ ಚರ್ಚೆಯಾಗಿದೆ. ಈ ಎಲ್ಲಾ ಚರ್ಚೆಗಳಿಗೆ, ಗೊಂದಲಗಳಿಗೆ ಮೇ 13 ಅಂದರೆ ನಾಳೆ ಮಧ್ಯಾಹ್ನದೊಳಗೆ ಉತ್ತರ ಸಿಗಲಿದೆ. ಸುರತ್ಕಲ್ ಎನ್.ಐ.ಟಿ.ಕೆ. ಆವರಣದೊಳಗೆ ನಡೆಯುವ ಮತ ಎಣಿಕೆ ಕಾರ್ಯಕ್ಕೆ

ಯಾರಂತೆ ಪುತ್ತೂರ ಶಾಸಕ?! Read More »

ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠೆ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆ ಶುಕ್ರವಾರ ಬೆಳಗ್ಗೆ ಗಂಟೆ 8.22ಕ್ಕೆ ವೇದಮೂರ್ತಿ ಜಗದೀಶ ಭಟ್ ಭಟಪಾಡಿ ಇವರ ನೇತೃತ್ವದಲ್ಲಿ ನೆರವೇರಿತು. ಶ್ರೀ ಉಳ್ಳಾಲ್ತಿಯ ಈ ಮೂಲಸ್ಥಾನವನ್ನು ಸಂಪೂರ್ಣ ಶಿಲಾಮಯವನ್ನಾಗಿ ರೂಪಿಸಲಾಗಿದ್ದು, ಸುಮಾರು ರೂ. 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆದಿದೆ. ವೈದಿಕ ಪಾರಂಪರಿಕವಾಗಿ ಆರಾಧನೆ ನಡೆಯುತ್ತಿದ್ದು, ಮಾರ್ಚ್ ಹುಣ್ಣಿಮಯ ದಿನದ ಹೂವಿನ ಪೂಜೆ, ಚಂಡಿಕಾ ಹೋಮ, ಗಣಹೋಮ ನಡೆಯುವುದು ಇಲ್ಲಿನ ವಿಶೇಷ. ಬಪ್ಪಳಿಗೆಯ ನಟ್ಟೋಜ ವಂಶಸ್ಥರ ಜಾಗದಲ್ಲಿರುವ ಈ

ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠೆ Read More »

error: Content is protected !!
Scroll to Top