ಪುತ್ತೂರು

ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ

ಪುತ್ತೂರು: ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ ಕೊಠಡಿ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕ ಸಂಜೀವ ಮಠಂದೂರು ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭ ಸಾರ್ವಜನಿಕ ಉದ್ಯಾನವನಕ್ಕೆ ಶಿಲಾನ್ಯಾಸ ನಡೆಸಲಾಯಿತು. ಬಳಿಕ ಮಾತನಾಡಿದ ಶಾಸಕರು, ಅಮೃತ ಗ್ರಾಮ ಯೋಜನೆಯಡಿ ಒಟ್ಟು 27 ಲಕ್ಷದ 25 ಸಾವಿರ ರೂ. ಮಂಜೂರಾಗಿದ್ದು, ಇದರಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಆಗಲಿದೆ. ಈ ಮೂಲಕ ಆಧುನಿಕತೆಗೆ ಗ್ರಂಥಾಲಯದ ಸ್ಪರ್ಶ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣ, ಮೊಬೈಲ್ […]

ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ Read More »

ಜ. 5, 6: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರಸ್ವಾಮಿ, ಧರ್ಮದೈವಗಳ ಪುನಶ್ಚೈತನ್ಯ ಕಲಶಾಭಿಷೇಕ, ನೇಮೊತ್ಸವ

ಪುತ್ತೂರು: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರಸ್ವಾಮಿ ಹಾಗೂ ಧರ್ಮದೈವಗಳ ಪುನಶ್ಚೈತನ್ಯ ಕಲಶಾಭಿಷೇಕ ಹಾಗೂ ನೇಮೊತ್ಸವ ಜ. 5ರಿಂದ ನಡೆಯಲಿದೆ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ಶೇವಿರೆ ಕೃಷ್ಣ ಮಡಪುಳಿತ್ತಾಯರವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದೆ. ಜ. 5ರಂದು ಬೆಳಿಗ್ಗೆ 6.30ಕ್ಕೆ ಕಲ್ಲೇಗ ಗುತ್ತಿನ ಭಂಡಾರ ಚಾವಡಿಯಿಂದ ಭಂಡಾರ ಹೊರಡಲಿದೆ. ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಪಂಚವಿಂಶತಿ, ಕಲಶ ಪೂಜೆ, ಬೆಳಿಗ್ಗೆ 10.28ಕ್ಕೆ ನಾಗಪ್ರತಿಷ್ಠೆ, ಪಂಚಾಮೃತ ಅಭಿಷೇಕ, ತಂಬಿಲಸೇವೆ, ಶ್ರೀ ಪುಣ್ಯಕುಮಾರ, ಶ್ರೀ ಅಣ್ಣಪ್ಪ

ಜ. 5, 6: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರಸ್ವಾಮಿ, ಧರ್ಮದೈವಗಳ ಪುನಶ್ಚೈತನ್ಯ ಕಲಶಾಭಿಷೇಕ, ನೇಮೊತ್ಸವ Read More »

ಜ. 5, 6: ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ. 6ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, 5ರಂದು ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸುವರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ವೆಂಕಟ್ರಮಣ ನಕ್ಷತ್ರಿತ್ತಾಯ, ಅರಣ್ ರೈ ಡಿಂಬ್ರಿ, ನವೀನ್ ಕಿನ್ನಿಮಜಲು, ಗೀತಾ, ರಾಮಣ್ಣ ಪಡ್ಪು ಅವರನ್ನು ಸನ್ಮಾನಿಸಲಾಗುವುದು. ಬಳಿಕ ಹನುಮಗಿರಿ ಶ್ರೀ

ಜ. 5, 6: ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಜ. 8: ವಿಶ್ವಕರ್ಮ ಸಮಾಜದ ವಟುಗಳಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ

ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜ, ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಮಹಿಳಾ ಮಂಡಳಿ ಆಶ್ರಯದಲ್ಲಿ ವಿಶ್ವಕರ್ಮ ಸಮಾಜದ ವಟುಗಳಿಗಾಗಿ 8ನೇ ಬಾರಿಯ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಜ. 8ರಂದು ಬೆಳಿಗ್ಗೆ 10.15ಕ್ಕೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಲಿದೆ. ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಪುರೋಹಿತ್ ಕೆ. ರಮೇಶ ಆಚಾರ್ಯ ಗೇರುಕಟ್ಟೆ ಅವರ ಆಚಾರ್ಯತ್ವದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ನಡೆಯಲಿದೆ. ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಈ ಸಲ 8ನೇ ಬಾರಿ

ಜ. 8: ವಿಶ್ವಕರ್ಮ ಸಮಾಜದ ವಟುಗಳಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ Read More »

ಜ. 14: ಶಾಂತಿಗೋಡಿನಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ ಫ್ರೆಂಡ್ಸ್ ಟ್ರೋಫಿ 2023

ಪುತ್ತೂರು: ಶಾಂತಿಗೋಡು ಫ್ರೆಂಡ್ಸ್ ಪಜಿರೋಡಿ ಆಶ್ರಯದಲ್ಲಿ ತಾಲೂಕು ಅಮೆಚ್ಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಪುರುಷರ 55 ಕೆ.ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಫ್ರೆಂಡ್ಸ್ ಟ್ರೋಫಿ 2023 ಜ. 14ರಂದು ಬೆಳಿಗ್ಗೆ 9.30ರಿಂದ ಶಾಂತಿಗೋಡು ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ 600 ರೂ. ನಿಗದಿಪಡಿಸಿದ್ದು, ಪ್ರಥಮ ಬಹುಮಾನ 5555 ರೂ., ದ್ವಿತೀಯ ಬಹುಮಾನ 4444 ರೂ., ತೃತೀಯ ಬಹುಮಾನ 3333 ರೂ., ಚತುರ್ಥ ಬಹುಮಾನ 2222 ರೂ. ಜೊತೆಗೆ ಟ್ರೋಫಿ

ಜ. 14: ಶಾಂತಿಗೋಡಿನಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ ಫ್ರೆಂಡ್ಸ್ ಟ್ರೋಫಿ 2023 Read More »

ಕುಂಬ್ಲಾಡಿ ಆಷ್ಠಬಂಧ ಬ್ರಹ್ಮಕಲಶೋತ್ಸವ, ಶ್ರೀ ಉಳ್ಳಾಕ್ಲು, ಶ್ರೀ ಉಳ್ಳಾಲ್ತಿ ಪ್ರತಿಷ್ಠೆ

ಪುತ್ತೂರು: ಚಾರ್ವಾಕ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೊತ್ಸವ ನಡೆಯುತ್ತಿದ್ದು, ಬುಧವಾರ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಸಾನಿಧ್ಯ ಕಲಶಾಭಿಷೇಕ ಜರಗಿತು. ಬೆಳಿಗ್ಗೆ ಬೆಳಿಗ್ಗೆ 8ರಿಂದ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಉಳ್ಳಾಲ್ತಿ ಸ್ಥಾನದಲ್ಲಿ ಗಣಪತಿ ಹೋಮ, ಸಾನಿಧ್ಯ ಕಲಶ ಪೂಜೆ, ಅನುಜ್ಞಾ ಕಲಶಪೂಜೆ, ಮಧ್ಯಾಹ್ನ 11.45ರಿಂದ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೇವಸ್ಥಾನದಲ್ಲಿ ಕುಂಬೇಶ ಕರ್ಕರೀ

ಕುಂಬ್ಲಾಡಿ ಆಷ್ಠಬಂಧ ಬ್ರಹ್ಮಕಲಶೋತ್ಸವ, ಶ್ರೀ ಉಳ್ಳಾಕ್ಲು, ಶ್ರೀ ಉಳ್ಳಾಲ್ತಿ ಪ್ರತಿಷ್ಠೆ Read More »

ಊರುಗಳನ್ನು ಬೆಸೆದ, ಅಭಿವೃದ್ಧಿಗೆ ಹಾದಿಯಾಗುವ ಪಂಜಿಗ ಕಿಂಡಿಅಣೆಕಟ್ಟಿನ ಸೇತುವೆ | ಶಾಸಕರ ಕನಸಿನ ಯೋಜನೆಗೆ ಜೀವ, ಊರಿಗೇ ಮರುಜೀವ

– ವಿನೋದ್ ಕೆ. ಕರ್ಪುತ್ತಮೂಲೆ ಪುತ್ತೂರು: ಹಲವು ಕನಸುಗಳನ್ನು ಹೊದ್ದು ಮಲಗಿದ್ದ ಪುಟ್ಟ ಊರು ಪಂಜಿಗ. ನರಿಮೊಗರು ಗ್ರಾ.ಪಂ.ನ ತೆಕ್ಕೆಯಲ್ಲಿರುವ ಪಂಜಿಗದಲ್ಲಿ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪಂಜಿಗ ಜನರ ಕನಸು ಮತ್ತೆ ಗರಿಗೆದರತೊಡಗಿವೆ. ಆನಡ್ಕ – ಶಾಂತಿಗೋಡು ನಡುವಿನ ಪಂಜಿಗ ಮೊದಲು ಹೀಗಿತ್ತು – ರಸ್ತೆ ಸಂಪರ್ಕವೇ ಇಲ್ಲ. ಪಕ್ಕದಲ್ಲಿ ಹರಿಯುವ ಹೊಳೆಗೆ ಹರುಕಲು – ಮುರುಕಲು ಪುಟ್ಟ ಕಾಲು ಸಂಕ. ಪಟ್ಟಣ ತಲುಪಬೇಕಾದರೆ ಹತ್ತಾರು ಕಿ.ಮೀ. ದೂರ ಸಾಗಬೇಕು. ರಿಕ್ಷಾ ಹಿಡಿಯಬೇಕಾದರೆ

ಊರುಗಳನ್ನು ಬೆಸೆದ, ಅಭಿವೃದ್ಧಿಗೆ ಹಾದಿಯಾಗುವ ಪಂಜಿಗ ಕಿಂಡಿಅಣೆಕಟ್ಟಿನ ಸೇತುವೆ | ಶಾಸಕರ ಕನಸಿನ ಯೋಜನೆಗೆ ಜೀವ, ಊರಿಗೇ ಮರುಜೀವ Read More »

ಕುಂಬ್ಲಾಡಿ ಬ್ರಹ್ಮಕಲಶ: ಭಜನಾ ಸೇವೆ

ಪುತ್ತೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶ ಸಂದರ್ಭ ಸುಳ್ಯ ಗೀತಾಂಜಲಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ಜರಗಿತು.

ಕುಂಬ್ಲಾಡಿ ಬ್ರಹ್ಮಕಲಶ: ಭಜನಾ ಸೇವೆ Read More »

ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆ | ಶ್ರೀ ಡಾ. ಧರ್ಮಪಾಲಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆ

ಪುತ್ತೂರು: ಭೈರವೈಕ್ಯರಾಗಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲಾನಂದ ಸ್ವಾಮೀಜಿ, ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆಯನ್ನು ಮಾಡುವ ಸೌಭಾಗ್ಯ ಈ ಭಾಗದ ಜನರದ್ದಾಗಿದೆ. ಆದ್ದರಿಂದ ನಿರೀಕ್ಷೆಗಳೂ ಹೆಚ್ಚಿದೆ.

ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಸಂಸ್ಮರಣೆ | ಶ್ರೀ ಡಾ. ಧರ್ಮಪಾಲಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆ Read More »

ನಾಳೆ ನರಿಮೊಗರು ಸಾಂದೀಪನಿಯಲ್ಲಿ ಕ್ರೀಡೋತ್ಸವ, ವಾರ್ಷಿಕೋತ್ಸವ

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶಿಶುಮಂದಿರ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹೊನಲು ಬೆಳಕಿನ ಕ್ರೀಡೋತ್ಸವ, ವಾರ್ಷಿಕೋತ್ಸವ ಜ. 4ರಂದು ಸಂಜೆ 5.15ಕ್ಕೆ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಸುಧಾಕರ ಪುತ್ತೂರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್., ಬಾಗಲಕೋಟೆ ಮುಧೋಳದ ಕೃಷಿಕ, ಹಿತಚಿಂತಕ ಬಾಬು ಗೌಡ ಪಾಟೀಲ್, ಬೆಳ್ಳಾರೆ ಪೊಲೀಸ್

ನಾಳೆ ನರಿಮೊಗರು ಸಾಂದೀಪನಿಯಲ್ಲಿ ಕ್ರೀಡೋತ್ಸವ, ವಾರ್ಷಿಕೋತ್ಸವ Read More »

error: Content is protected !!
Scroll to Top