ಪುತ್ತೂರು

ಪಂಚವಟಿ ಸಂಪರ್ಕ ರಸ್ತೆ ಉದ್ಘಾಟನೆ

ಪುತ್ತೂರು: ಕೇಶವಸ್ಮೃತಿ ಸಂವರ್ಧನ ಸಮಿತಿ ನೇತೃತ್ವದಲ್ಲಿ ಪುತ್ತೂರು ಜಿಲ್ಲೆಯ ಆರ್.ಎಸ್.ಎಸ್. ಕಾರ್ಯಾಲಯ ಪಂಚವಟಿ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ಶುಕ್ರವಾರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ನಗರಸಭೆ ವ್ಯಾಪ್ತಿಯಲ್ಲಿರುವ ಪಂಚವಟಿ ಸಂಪರ್ಕಿಸುವ ರಸ್ತೆ 7 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಯಿತು.ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಉಪಸ್ಥಿತರಿದ್ದರು.

ಪಂಚವಟಿ ಸಂಪರ್ಕ ರಸ್ತೆ ಉದ್ಘಾಟನೆ Read More »

ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಬದುಕು ಕಟ್ಟಿಕೊಳ್ಳಿ | ಶ್ರೀರಾಮ್ ಫೈನಾನ್ಸ್‍ ಪ್ರಾಯೋಜಕತ್ವದ ವಿದ್ಯಾರ್ಥಿ ವೇತನ ವಿತರಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜಗತ್ತು ಸ್ಪರ್ಧೆಯ ಮೇಲೆ ನಿಂತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಧಿ ನೀಡುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಬೆಳೆಸುವಂತಹ ಕಾರ್ಯವನ್ನು ಶ್ರೀ ರಾಮ್ ಫೈನಾನ್ಸ್ ಮಾಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‍ನ ಪುತ್ತೂರು ಶಾಖೆ ಆಶ್ರಯದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಹಾಲ್‍ನಲ್ಲಿ ಶುಕ್ರವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಧಿ ವಿತರಿಸಿ ಮಾತನಾಡಿದರು. ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಇಂದೇ ತೀರ್ಮಾನ ಮಾಡಬೇಕು. ಹಾಗಾದಾಗ ಮಾತ್ರ ಭವಿಷ್ಯವನ್ನು ಸುಭದ್ರವಾಗಿ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು

ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಬದುಕು ಕಟ್ಟಿಕೊಳ್ಳಿ | ಶ್ರೀರಾಮ್ ಫೈನಾನ್ಸ್‍ ಪ್ರಾಯೋಜಕತ್ವದ ವಿದ್ಯಾರ್ಥಿ ವೇತನ ವಿತರಿಸಿ ಶಾಸಕ ಸಂಜೀವ ಮಠಂದೂರು Read More »

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಹಿಂದುತ್ವ-ರಾಷ್ಟ್ರೀಯತೆ’ಯ ಸಂಕಲ್ಪದೊಂದಿಗೆ ವಿವೇಕಾನಂದ ಜಯಂತಿ ಆಚರಣೆ

ಪುತ್ತೂರು: ಶರೀರ ಬುದ್ಧಿ ಮತ್ತು ಆತ್ಮದ ಜೀವಂತಿಕೆ ಇರುವುದು ನಮ್ಮ ಸಂಪ್ರದಾಯದ ಪಾಲನೆಯಲ್ಲಿ. ನಾವು ಯೋಗ್ಯತೆಯಲ್ಲಿ ಹಿಂದುಗಳಾಗಬೇಕು. ನಮ್ಮ ಸಾಂಪ್ರದಾಯಿಕ ಪರಂಪರೆಯ ಬಗ್ಗೆ ಸುಂದರ ಪರಿಕಲ್ಪನೆ ಇರಬೇಕು. ಉದಾತ್ತ ಚಿಂತನೆಗಳ ಜೊತೆ ಬದುಕಬೇಕು. ಬದುಕಿನ ಓಘ ಮತ್ತು ಶೈಲಿ ಯೋಗ್ಯವಾಗಿದ್ದಾಗ ಕನಸು ಕಾಣಲು ಅರ್ಹರಾಗಿರುತ್ತೇವೆ ಎಂದು ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಹಿಂದುತ್ವ-

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಹಿಂದುತ್ವ-ರಾಷ್ಟ್ರೀಯತೆ’ಯ ಸಂಕಲ್ಪದೊಂದಿಗೆ ವಿವೇಕಾನಂದ ಜಯಂತಿ ಆಚರಣೆ Read More »

ಬೆಟ್ಟಂಪಾಡಿ: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಸಂಗ್ರಹಿಸಿದ ಹಣ ಬಾಲಕಿಗೆ ಹಸ್ತಾಂತರ

ಪುತ್ತೂರು: ಪಾಣಾಜೆ ಬಿ.ಬಿ. ಕ್ರಿಯೇಷನ್ ಪ್ರಾಯೋಜಕತ್ವದಲ್ಲಿ ಬೆಟ್ಟಂಪಾಡಿಯಲ್ಲಿ ಜ. 11ರಂದು ರಾತ್ರಿ ನಡೆದ ಯಕ್ಷಗಾನ ಸಂದರ್ಭ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ, ನೊಂದವರ ಪಾಲಿಗೆ ಆಸರೆ ವತಿಯಿಂದ 189ನೇ ಸೇವಾಯೋಜನೆ ನಡೆಯಿತು. ಅನಾರೋಗ್ಯದಿಂದ ಬಳಲುತ್ತಿರುವ ಸುಹಾಸಿನಿ ಎಂಬ ಬಾಲಕಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಧನ ಸಂಗ್ರಹಿಸಲಾಯಿತು.ಬಳಿಕ ಸಮಾರಂಭದಲ್ಲಿ ನಟ ದೀಪಕ್ ರೈ ಪಾಣಾಜೆ, ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಅವರ ಉಪಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಗೆ ಹಸ್ತಾಂತರಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಡಿ.ಎಸ್. ಒಡ್ಯ, ಕಾರ್ಯದರ್ಶಿ ಮನೋಹರ್ ಪಲಯಮಜಲು, ಆಸರೆ

ಬೆಟ್ಟಂಪಾಡಿ: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಸಂಗ್ರಹಿಸಿದ ಹಣ ಬಾಲಕಿಗೆ ಹಸ್ತಾಂತರ Read More »

ರಾಷ್ಟ್ರೀಯ ಯುವಜನೋತ್ಸಕ್ಕೆ ಬೆಟ್ಟಂಪಾಡಿ ಕಾಲೇಜಿನ ಕಿರಣ್ ಆಯ್ಕೆ

ಪುತ್ತೂರು: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಅಯೋಜಿಸುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಮಂಗಳೂರು ನೆಹರು ಯುವ ಕೇಂದ್ರದ ಪ್ರತಿನಿಧಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಕಿರಣ್ ಕೆ. ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ತಂಡವನ್ನುಪ್ರತಿನಿಧಿಸಲಿದ್ದಾರೆ. 26ನೇ ರಾಷ್ಟ್ರೀಯ ಯುವಜನೋತ್ಸವವು ಈ ಭಾರೀ ಕರ್ನಾಟಕದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ರಾಜ್ಯಗಳ ಯುವಜನರು ಭಾಗವಹಿಸಲಿದ್ದಾರೆ ಎಂದು ನೆಹರು ಯುವಕೇಂದ್ರದ ಜಿಲ್ಲಾ ಯುವ

ರಾಷ್ಟ್ರೀಯ ಯುವಜನೋತ್ಸಕ್ಕೆ ಬೆಟ್ಟಂಪಾಡಿ ಕಾಲೇಜಿನ ಕಿರಣ್ ಆಯ್ಕೆ Read More »

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧನುಪೂಜೆ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ. 13ರಂದು ಸಂಜೆ 5.30ರಿಂದ ನೆಹರೂನಗರ ರಕ್ತೇಶ್ವರಿ ವಠಾರದ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ ನಡೆಯಲಿದೆ. ಕಲಾಸಂಗಮದಲ್ಲಿ ಭಕ್ತಿಗಾನ ಭಜನಾಮೃತ, ಭಕ್ತಿರಸಮಂಜರಿ, ಸಾಂಪ್ರದಾಯಿಕ ನೃತ್ಯ, ಯಕ್ಷಗಾನ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಸಂಚಾಲಕ ಮನುಕುಮಾರ್ ಶಿವನಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ Read More »

ಜ. 13ರಂದು ನಗರಸಭೆ ಬಜೆಟ್ ಪೂರ್ವಭಾವಿ ಸಭೆ

ಪುತ್ತೂರು: ನಗರಸಭೆಯ 2023-24ನೇ ಸಾಲಿನ ಆಯವ್ಯಯ ತಯಾರಿಕೆಯ ಪೂರ್ವಭಾವಿಯಾಗಿ ಜ. 13ರಂದು ಬೆಳಿಗ್ಗೆ 11.45ಕ್ಕೆ ಪುತ್ತೂರು ನಗರಸಭೆ ಸಭಾಭವನದಲ್ಲಿ ಸಭೆ ನಡೆಯಲಿದೆ.ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ನಗರಸಭೆ ಪ್ರಕಟಣೆ ತಿಳಿಸಿದೆ.

ಜ. 13ರಂದು ನಗರಸಭೆ ಬಜೆಟ್ ಪೂರ್ವಭಾವಿ ಸಭೆ Read More »

ಜ. 14: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ

ಪುತ್ತೂರು: ಇರ್ದೆ ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. 14ರಂದು ವರ್ಷಾವಧಿ ಉತ್ಸವ ನಡೆಯಲಿದೆ. ಜ. 7ರಂದು ಗೊನೆ ಮುಹೂರ್ತ ನಡೆದಿದ್ದು, ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಬೈಲಾಡಿ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ನಡೆಯಲಿದೆ. ಬೆಳಿಗ್ಗೆ 8ರಿಂದ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಶ್ರೀ ಸತ್ಯನಾರಾಯನ ದೇವರ ಪೂಜೆ, ಶ್ರೀ ವನದುರ್ಗಾ ದೇವಿ ಮಹಾಪೂಜೆ, ಶ್ರೀ ಶಾಸ್ತಾವು ದೇವರ ಮಹಾಪೂಜೆ, ಗುರುಪೂಜೆ,

ಜ. 14: ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ Read More »

ಚತುಷ್ಪಥ ಹೆದ್ದಾರಿ: ಶಾಸಕರ ಕಳಕಳಿ | ಪುತ್ತೂರು – ಉಪ್ಪಿನಂಗಡಿ ‘ಟ್ವಿನ್ ಸಿಟಿ’ ನಡುವಿನ 4 ಲೇನ್

ಪುತ್ತೂರು: ಒಂದೊಮ್ಮೆ ಉಪ್ಪಿನಂಗಡಿ ತಾಲೂಕು ಕೇಂದ್ರ. ಕ್ರಮೇಣ ತಾಲೂಕು ಕೇಂದ್ರ ಪುತ್ತೂರಿಗೆ ವರ್ಗವಾಯಿತು. ಹಾಗೆಂದು ಈ ಎರಡು ಪಟ್ಟಣಗಳ ನಡುವಿನ ಸಂಬಂಧ ಪ್ರತ್ಯೇಕಗೊಂಡಿಲ್ಲ. ಎರಡೂ ಪಟ್ಟಣಗಳು ಹುಬ್ಬಳ್ಳಿ – ಧಾರವಾಡ ಟ್ವಿನ್ ಸಿಟಿ ಮಾದರಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಇನ್ನಷ್ಟು ಬಲ ತುಂಬುವ ದಿಶೆಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ವೇಗ ಪಡೆಯುತ್ತಿದೆ. ಜಿ.ಪಂ. ರಸ್ತೆಯಾಗಿದ್ದ ಸಂದರ್ಭ ಈ ರಸ್ತೆಯ ಅಗಲ ಕೇವಲ 5.5 ಮೀ. ಎದುರಿನಿಂದ ವಾಹನ ಬಂದರೆ, ಪಕ್ಕಕ್ಕೆ ಸರಿದು ನಿಲ್ಲಬೇಕಾದ ಪ್ರಮೇಯ. ಆದ್ದರಿಂದ ರಸ್ತೆಯನ್ನು ಪಿಡಬ್ಲ್ಯೂಡಿಗೆ

ಚತುಷ್ಪಥ ಹೆದ್ದಾರಿ: ಶಾಸಕರ ಕಳಕಳಿ | ಪುತ್ತೂರು – ಉಪ್ಪಿನಂಗಡಿ ‘ಟ್ವಿನ್ ಸಿಟಿ’ ನಡುವಿನ 4 ಲೇನ್ Read More »

ಸುಳ್ಯ: ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆ

ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆ ಗುರುವಾರ ಸುಳ್ಯದಲ್ಲಿ ನಡೆಯಿತು. ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಎಲ್ಲರೂ ಜೊತೆಯಾಗಿ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡಾಗ, ಪಕ್ಷ ತಳಮಟ್ಟದಿಂದಲೇ ಬಲಯುತಗೊಳ್ಳುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರೈ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ: ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆ Read More »

error: Content is protected !!
Scroll to Top