ಪುತ್ತೂರು

ಪ್ರವೀಣ್‌ ನೆಟ್ಟಾರು ಪತ್ನಿ ನೂತನ ಕುಮಾರಿಯವರಿಗೆ ಉದ್ಯೋಗದಿಂದ ಬಿಡುಗಡೆ

ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ಜುಲೈ 26ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾಗಿತ್ತು.ಈ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ದ.ಕ.ಸಂಸದ ನಳಿನ್‌ ಕುಮಾರ್ ಕಟೀಲ್‌ ಅವರು ಭರವಸೆ […]

ಪ್ರವೀಣ್‌ ನೆಟ್ಟಾರು ಪತ್ನಿ ನೂತನ ಕುಮಾರಿಯವರಿಗೆ ಉದ್ಯೋಗದಿಂದ ಬಿಡುಗಡೆ Read More »

ಮೇ 27 – ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಕಲ್ಪೋಕ್ತ ಶನೈಶ್ಚರ ಪೂಜೆ, ಧಾರ್ಮಿಕ ಸಭೆ

ಕಾಣಿಯೂರು: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್, ಸ್ವಸಹಾಯ ಸಂಘಗಳ ಒಕ್ಕೂಟ ಬೆಳಂದೂರು ಇದರ ಆಶ್ರಯದಲ್ಲಿ ಶ್ರೀ ಸದಾಶಿವ ದೇವಸ್ಥಾನ ಅಗಳಿ ಇದರ ಸಹಕಾರದೊಂದಿಗೆ ಸಾರ್ವಜನಿಕ ಕಲ್ಪೋಕ್ತ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮವು ಮೇ 27ರಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ಶ್ರೀ ಕಲ್ಪೋಕ್ತ ಶನೈಶ್ಚರ ಪೂಜೆ, ಮಹಾಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಗಳಿ ಶ್ರೀ ಸದಾಶಿವ

ಮೇ 27 – ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಕಲ್ಪೋಕ್ತ ಶನೈಶ್ಚರ ಪೂಜೆ, ಧಾರ್ಮಿಕ ಸಭೆ Read More »

ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಅಭಿವಂದನಮ್-2023

ಪುತ್ತೂರು: ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಪರಿಶ್ರಮ ಹೆಚ್ಚಿನ ಮಹತ್ವ ಪಡೆಯುತ್ತದೆ. ಸಾಧನೆಗೆ ಬುದ್ಧಿವಂತಿಕೆಯ ಜೊತೆಗೆ ಸತತ ಪರಿಶ್ರಮ ಅಗತ್ಯ ಎಂದು ಸಮಾಜ ಸೇವಾ ಕಾರ್ಯಕರ್ತ ಯತೀಶ್ ಆರ್ವಾರ್ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಸನ್ಮಾನ “ಅಭಿವಂದನಮ್-2023” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ನಮಗೋಸ್ಕರ ಮಾತ್ರವಲ್ಲದೇ ದೇಶಕ್ಕೋಸ್ಕರ ಬದುಕಬೇಕು. ಕೃಷ್ಣಂ ವಂದೇ ಜಗದ್ಗುರುಮ್ ಎಂಬ ನಂಬಿಕೆ ಇರುವ ನಾವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಜೀವನದಲ್ಲಿ

ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಅಭಿವಂದನಮ್-2023 Read More »

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಯೋಜನಾಧಿಕಾರಿಯಾಗಿ ಶಶಿಧರ್ ಎಮ್.

ಪುತ್ತೂರು: ಶ್ರೀಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿಟ್ರಸ್ಟ್ ತಾಲೂಕಿನ ನೂತನ ಯೋಜನಾಧಿಕಾರಿಯಾಗಿ ಶಶಿಧರ್ ಎಮ್ ಆಯ್ಕೆಯಾಯಾಗಿದ್ದಾರೆ. ತಾಲೂಕಿನ ಹಿಂದಿನ ಯೋಜನಾಧಿಕಾರಿಯಾಗಿ ಸೇವೆಸಲ್ಲಿಸಿದ ಆನಂದ ಕೆ.ಅವರಿಂದ ಜವಾಬ್ದಾರಿ ಪಡದುಕೊಂಡರು. ತಾಲೂಕಿನಲ್ಲಿ 2 ವಷ೯ ಸೇವೆ ನೀಡಿದ ಆನಂದ ಕೆ. ಯೋಜನೆಯ ಆದೇಶದಂತೆ ಧಮ೯ಸ್ಥಳ ಕೇಂದ್ರ ಕಛೇರಿಯ ಗುಂಪು ಲೆಕ್ಕಪರಿಶೋಧನಾ ವಿಭಾಗಕ್ಕೆ ಯೋಜನಾಧಿಕಾರಿಯಾಗಿ ವಗಾ೯ವಣೆಗೊಂಡಿದ್ದಾರೆ.   ನೂತನ ಯೋಜನಾಧಿಕಾರಿ ಶಶಿಧರ್ ಎಮ್ ಮೂಲತ: ಬೆಳ್ತಂಗಡಿತಾಲೂಕಿನ ಬಂಗಾಡಿಯವರಾಗಿದ್ದು, ಯೋಜನೆಯಲ್ಲಿ 18 ವಷ೯ಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿದ್ದು, ಪ್ರಸ್ತುತ ಮೈಸೂರು ಜಿಲ್ಲೆ, ಎಚ್

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಯೋಜನಾಧಿಕಾರಿಯಾಗಿ ಶಶಿಧರ್ ಎಮ್. Read More »

ಜೆ.ಇ.ಇ. ಆರ್ಕಿಟೆಕ್ಚರ್ 2023- ಅಂಬಿಕಾ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 284ನೇ ರ್ಯಾಂಕ್

ಪುತ್ತೂರು: ಆರ್ಕಿಟೆಕ್ಚರ್ ಹಾಗೂ ಪ್ಲಾನಿಂಗ್ ಕೋರ್ಸುಗಳಿಗೆ ನಡೆಸಲಾಗುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಪುತ್ತೂರಿನ ಪ್ರತಿಷ್ಠಿತ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಶ್ಯಮಂತ್ ಕುಮಾರ್ ಸಿ ಕೆ ಬಿ.ಆರ್ಕ್ ವಿಭಾಗದಲ್ಲಿ 284ನೇ ರ್ಯಾಂಕ್ (99.5612 ಪರ್ಸಂಟೈಲ್) ಗಳಿಸಿದ್ದಾರೆ. ಈ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ ಬಿ ಪ್ಲಾನಿಂಗ್  ವಿಭಾಗದಲ್ಲಿ 775ನೇ ರ್ಯಾಂಕ್ ಗಳಿಸಿದ್ದು ಅವರ ಸಾಧನೆಗೆ ಕಾಲೇಜಿನ ಸಂಚಾಲಕರು, ಕೋಶಾಧಿಕಾರಿಗಳು, ಆಡಳಿತ ಮಂಡಳಿ, ಪ್ರಿನ್ಸಿಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಜೆ.ಇ.ಇ. ಆರ್ಕಿಟೆಕ್ಚರ್ 2023- ಅಂಬಿಕಾ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 284ನೇ ರ್ಯಾಂಕ್ Read More »

1500 ರೂ. ಇದ್ದ ಅಂಕಪಟ್ಟಿ ನೈಜತೆ ಪರಿಶೀಲನೆ ಶುಲ್ಕ 500 ರೂ.ಗೆ ಇಳಿಕೆ: ಶಾಸಕ ಅಶೋಕ್ ರೈ ಕಾರ್ಯಕ್ಕೆ ಶ್ಲಾಘನೆ

ಪುತ್ತೂರು: ಅಂಕಪಟ್ಟಿ ನೈಜತೆ ಪರಿಶೀಲನೆಯ ದುಬಾರಿ ಶುಲ್ಕ ಉದ್ಯೋಗ ಆಕಾಂಕ್ಷಿತರಿಗೆ ಹೊರೆಯಾಗಿ ಪರಿಣಮಿಸಿದ್ದು, ಶುಲ್ಕವನ್ನು ಕಡಿತ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಒತ್ತಾಯ ಮಾಡಿದ್ದರ ಫಲವೆಂಬಂತೆ ಮಂಗಳೂರು ವಿಶ್ವವಿದ್ಯಾಲಯ ಶುಲ್ಕದಲ್ಲಿ ವಿನಾಯಿತಿ ನೀಡಿದೆ. ಗುರುವಾರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಇದುವರೆಗೆ ಒಂದು ಅಂಕಪಟ್ಟಿಗೆ 1500 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ ಎಲ್ಲಾ ಅಂಕಪಟ್ಟಿಗೆ ಒಟ್ಟು 13500 ರೂ. ಶುಲ್ಕ ಪಾವತಿಸಬೇಕಾಗಿತ್ತು. ಗ್ರಾಮೀಣ ಭಾಗದ ಬಡ ಉದ್ಯೋಗ ಆಕಾಂಕ್ಷಿತರು

1500 ರೂ. ಇದ್ದ ಅಂಕಪಟ್ಟಿ ನೈಜತೆ ಪರಿಶೀಲನೆ ಶುಲ್ಕ 500 ರೂ.ಗೆ ಇಳಿಕೆ: ಶಾಸಕ ಅಶೋಕ್ ರೈ ಕಾರ್ಯಕ್ಕೆ ಶ್ಲಾಘನೆ Read More »

ಬಡವರಿಗೆ ಒಳ್ಳೆಯ ಸೇವೆ ನೀಡಿ : ಶಾಸಕ ಅಶೋಕ್ ಕುಮಾರ್ ರೈ | ಸರಕಾರಿ ಸೇವೆಯಲ್ಲಿ ಸ್ಪಂದನೆ ನೀಡುವುದು ನನ್ನ ಕರ್ತವ್ಯ

ಪುತ್ತೂರು: ನಾನು ತುಂಬಾ ನಿರೀಕ್ಷೆಯಿಟ್ಟು ಶಾಸಕನಾಗಿ ಬಂದಿದ್ದು, ಸರಕಾರಿ ಸೇವೆಯಲ್ಲಿ ಸ್ಪಂದನೆ ನೀಡುವುದು ನನ್ನ ಕರ್ತವ್ಯವಾಗಿದೆ.. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಬಡವರಿಗೆ ಒಳ್ಳೆಯ ಸೇವೆ ನೀಡುವಲ್ಲಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಇಂದಿನಿಂದಲೇ ತೊಡಗಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಪುತ್ತೂರು ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿ ನಗರಸಭೆಗೆ ಶುಕ್ರವಾರ ಭೇಟಿ ನೀಡಿ ಸಭೆಯೊಂದನ್ನು ನಡೆಸಿ ನಗರಭೆಯ ಕಾರ್ಯವೈಖರಿ ಬಗ್ಗೆ ಚರ್ಚಿಸಿದರು. ನನ್ನ ನಿರೀಕ್ಷೆಯನ್ನು ಬಡ ಜನರ ನಿರೀಕ್ಷೆ ಎಂದು

ಬಡವರಿಗೆ ಒಳ್ಳೆಯ ಸೇವೆ ನೀಡಿ : ಶಾಸಕ ಅಶೋಕ್ ಕುಮಾರ್ ರೈ | ಸರಕಾರಿ ಸೇವೆಯಲ್ಲಿ ಸ್ಪಂದನೆ ನೀಡುವುದು ನನ್ನ ಕರ್ತವ್ಯ Read More »

ಪುತ್ತೂರು ದೇವಾಂಗ ಸೇವಾ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

ಪುತ್ತೂರು: ದೇವಾಂಗ ಸೇವಾ ಸಮಾಜದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಲಯನ್ಸ್ ಪುತ್ತೂರು ಸೇವಾ ಮಂದಿರದಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ ಎನ್ ಚೆಟ್ಟಿಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ನರಿಮೊಗರು ಗ್ರಾಪಂ ಪಿಡಿಒ ರವಿಚಂದ್ರ ಯು ಬಿಕಾಂ, ಎಂ.ಎ ಪಿ.ಡಿ.ಒ ನರಿಮೊಗ್ರು ಗ್ರಾಮ ಪಂಚಾಯತ್ ರವರು ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ದಿವಾಕರ ಶೆಟ್ಟಿ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ಮಲಾರವರು ಪ್ರಾರ್ಥಿಸಿದರು, ವಿಧ್ಯಾ ಗಿರಿಧರ್

ಪುತ್ತೂರು ದೇವಾಂಗ ಸೇವಾ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ Read More »

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನದಿಗೆ ಹಾರಿ ಆತ್ಮಹತ್ಯೆ

ಕಡಬ : ವ್ಯಕ್ತಿಯೊಬ್ಬರು ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಶಾಂತಿಮೊಗರು ಸೇತುವೆಯ ಮೇಲೆ ತನ್ನ ಕಾರು ನಿಲ್ಲಿಸಿ ಬಲೂನ್ ಕಟ್ಟಿ ನೀರಿಗೆ ಜಿಗಿದಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು, ಶವವನ್ನು ಮೇಲಕ್ಕೆತ್ತಲಾಗಿದೆ ಎಂದು  ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನದಿಗೆ ಹಾರಿ ಆತ್ಮಹತ್ಯೆ Read More »

ಮೇ 28: ಮುಂಡೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾರಂಭ

ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು, ಯುವ ಒಕ್ಕಲಿಗ ಗೌಡ ಸೇವಾ ಸಂಘ ಗ್ರಾಮ ಸಮಿತಿ ಮುಂಡೂರು, ಮಹಿಳಾ ಘಟಕ ಮುಂಡೂರು ಹಾಗೂ ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ಮುಂಡೂರು ಇದರ ವಾರ್ಷಿಕ ಸಮಾರಂಭ ಮೇ.28ರಂದು ಪಜಿಮಣ್ಣು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಗೌರವ ಸಲಹೆಗಾರ ಲೋಕಪ್ಪ ಗೌಡ ಕರೆಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗ್ರಾಮ ಸಮಿತಿ ಅಧ್ಯಕ್ಷ ರಮೇಶ

ಮೇ 28: ಮುಂಡೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾರಂಭ Read More »

error: Content is protected !!
Scroll to Top