ಪುತ್ತೂರು

ಕಾಣಿಯೂರು: ಗ್ರಾಮೀಣ ಮಕ್ಕಳ ಬೇಸಿಗೆ  ಶಿಬಿರ

ಕಡಬ: ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸದುಪಯೋಗವನ್ನು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಬೇಕು ಎಂದು ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಹೇಳಿದರು. ಕಾಣಿಯೂರು ಗ್ರಾ.ಪಂ. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ಕಾಣಿಯೂರು ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಗ್ರಾ.ಪಂ. […]

ಕಾಣಿಯೂರು: ಗ್ರಾಮೀಣ ಮಕ್ಕಳ ಬೇಸಿಗೆ  ಶಿಬಿರ Read More »

ಆನೆ ಹಾವಳಿಯಿಂದ ರಕ್ಷಣೆ ನೀಡಲು ಸರಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು : ಬಿ.ಎಂ.ಭಟ್ ಆಗ್ರಹ

ಪುತ್ತೂರು: ಕಡಬ ತಾಲೂಕಿನಲ್ಲಿ ನಿರಂತರ ಆನೆ ಹಾವಳಿಯಿಂದ ಜನರು ಜೀವಭಯದಿಂದ ಬದುಕುವಂತಾಗದ್ದು, ರಕ್ಷಣೆ ಒದಗಿಸಲು ಸರಕಾರು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಬಿ.ಎಂ.ಭಟ್ ಸರಕಾರವನ್ನು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವಅವರು, ಜನರ ಜೀವಕ್ಕೆ ಅಪಾಯವಾಗುತ್ತಿರುವುದು ನಮ್ಮಕಣ್ಣ ಮುಂದೇ ಇದ್ದರೂ ಅದರ ಬಗ್ಗೆ ಸರಕಾರ ಗಮನ ನೀಡದಿರುವುದು ಖಂಡನೀಯ. ಬಿಜೆಪಿ ಸರಕಾರ ಆನೆ ತಡೆಗೆ ಯಾವುದೇ ವ್ಯವಸ್ಥೆ ಮಾಡದೇ ಜನರ ಸಾವಿಗೆ ಕಾರಣವಾಗಿತ್ತು. ಇದೀಗ ಪುನಃ ಆನೆ ದಾಳಿ

ಆನೆ ಹಾವಳಿಯಿಂದ ರಕ್ಷಣೆ ನೀಡಲು ಸರಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು : ಬಿ.ಎಂ.ಭಟ್ ಆಗ್ರಹ Read More »

ಕೊಯಿಲದ ಯುವಕ  ವಿದೇಶದಲ್ಲಿ ಆತ್ಮಹತ್ಯೆ

ಕಡಬ: ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಭಾನುವಾರ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ  ಸಂದೇಶ್ (32) ಎಂದು ಗುರುತಿಸಲಾಗಿದೆ. ಇವರು ಕೊಲ್ಲಿರಾಷ್ಟ್ರದ  ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು

ಕೊಯಿಲದ ಯುವಕ  ವಿದೇಶದಲ್ಲಿ ಆತ್ಮಹತ್ಯೆ Read More »

24ನೇ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ 4 ಕೂಟ ದಾಖಲೆ ಸಹಿತ 16 ಚಿನ್ನದ ಪದಕ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆಯಲ್ಲಿ ೪ ನೂತನ ಕೂಟ ದಾಖಲೆಗಳ ಸಹಿತ 16 ಚಿನ್ನದ ಪದಕ, 11 ಬೆಳ್ಳಿಯ ಪದಕ ಮತ್ತು 11 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮಹಿಳೆಯರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಮಹಿಳೆಯರ ವಿಭಾಗದ ಚಾಂಪಿಯನ್‌ ಶಿಪ್ ಟ್ರೋಫಿ, ಪುರುಷರ ವಿಭಾಗದ ಚಾಂಪಿಯನ್‌ನಲ್ಲಿ ಪ್ರಥಮ ರನ್ನರ್ ಅಪ್ ಟ್ರೋಫಿ ಹಾಗೂ ಕೂಟದ ಸಮಗ್ರ

24ನೇ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ 4 ಕೂಟ ದಾಖಲೆ ಸಹಿತ 16 ಚಿನ್ನದ ಪದಕ Read More »

ಶಿವಮಣಿ ಕಲಾವಿದರ ಹುಟ್ಟುಹಬ್ಬ ಸಂಭ್ರಮಾಚರಣೆ

ಪುತ್ತೂರು: ಇಲ್ಲಿನ ನೆಹರುನಗರದ ಶಿವನಗರ ಶಿವಮಣಿ ಕಲಾ ಸಂಘದ ವತಿಯಿಂದ ಕಲಾವಿದರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಭಾನುವಾರ ಆಚರಿಸಲಾಯಿತು. ಶಿವಮಣಿ ಬಾಲ ಸಮಿತಿಯ ಮುಂದಿನ ಯೋಜನೆಗಳು ಹಾಗೂ ಕಾರ್ಯವೈಖರಿಯನ್ನು ಸಭೆಯ ಮುಂದಿಟ್ಟ ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಉತ್ತಮ ಸಂಘಟನೆ, ಹೊಸ ಹುರುಪು, ಆತ್ಮವಿಶ್ವಾಸ, ಪ್ರಾಮಾಣಿಕತೆ ನಮ್ಮ ಜೀವನದ ಯಶಸ್ಸಿನ ಸೂತ್ರಗಳು. ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಲೆ, ‘ಕಲಿಕೆ’ ಹಾಗೂ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಂಘದ ಉಪಾಧ್ಯಕ್ಷ, ಕಲಾವಿದ ಕೃಷ್ಣಪ್ಪ ಶಿವಾಮಣಿ ಅವರು

ಶಿವಮಣಿ ಕಲಾವಿದರ ಹುಟ್ಟುಹಬ್ಬ ಸಂಭ್ರಮಾಚರಣೆ Read More »

ಅಂಬಿಕಾ ಸಿ. ಬಿ. ಎಸ್. ಇ ವಿದ್ಯಾಲಯದಲ್ಲಿ ಪೋಷಕರ ಸಭೆ

ಪುತ್ತೂರು : ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕ ಚಿಂತನೆಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಅದನ್ನು ನಕಾರಾತ್ಮಕವಾಗಿ  ಪರಿಗಣಿಸದೆ ಆ ತಪ್ಪನ್ನು ತಿದ್ದಿ ಸನ್ನಿವೇಶವನ್ನು ನಿಭಾಯಿಸಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ ಎಂದು ಅಂಬಿಕಾ ಸಿ ಬಿ ಎಸ್ ಇ ಶಾಲಾ   ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಹೇಳಿದರು. ಅವರು 2023 -24 ನೇ ಸಾಲಿನ  ಪೂರ್ವ ಪ್ರಾಥಮಿಕ  ವರ್ಷದ ಮೊದಲ ಪೋಷಕರ ಸಭೆಯಲ್ಲಿ ಮಾತನಾಡಿದರು. ಪೂರ್ವ ಪ್ರಾಥಮಿಕ ಶಾಲಾ ಹಂತ ಅಂದರೆ ಮೂರು,

ಅಂಬಿಕಾ ಸಿ. ಬಿ. ಎಸ್. ಇ ವಿದ್ಯಾಲಯದಲ್ಲಿ ಪೋಷಕರ ಸಭೆ Read More »

ರಾಜ್ಯ, ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ ವಿದ್ಯಾರ್ಥಿನಿ ಸಾಧಕರಿಗೆ ಗೌರವಾರ್ಪಣೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕಿನ ಕರ್ನೂರು ಒಕ್ಕೂಟದ ವತಿಯಿಂದ ಕಬಡ್ಡಿ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿನಿಯರಾದ  ಕುಮಾರಿ ಪ್ರನ್ವಿಕಾ ರೈ, ಕುಮಾರಿ ಯತೀಕ್ಷ ರೈ ಹಾಗೂ ಕೃತಿಕಾ ಜಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಆಶಾಲತಾ ರೈ, ಅರಿಯಡ್ಕ ವಲಯ ಅಧ್ಯಕ್ಷ ದಿನೇಶ್ ರೈ, ಪುತ್ತೂರು ತಾಲೂಕು ಆಂತರಿಕ ಲೆಕ್ಕ ಪರಿಶೋಧಕರಾದ ಲತಾ ಮೇಡಂ, ಉಪಾಧ್ಯಕ್ಷ ಸುಬ್ಬಣ್ಣ ರೈ ಕಲ್ಲಾಜೆ, , ವಲಯ ಮೇಲ್ವಿಚಾರಕ ಹರೀಶ್

ರಾಜ್ಯ, ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ ವಿದ್ಯಾರ್ಥಿನಿ ಸಾಧಕರಿಗೆ ಗೌರವಾರ್ಪಣೆ Read More »

ಸುಂದರಿ ವಿ. ಶೆಟ್ಟಿ ನಿಧನ

ಪುತ್ತೂರು: ಕುರಿಯ ಗ್ರಾಮದ ಕೊಡ್ಲಾರು ನಿವಾಸಿ ಸುಂದರಿ ವಿ. ಶೆಟ್ಟಿ (79) ಸ್ವಗೃಹದಲ್ಲಿ ಶನಿವಾರ ನಿಧನರಾದರು. ವಿಜಯಬ್ಯಾಂಕ್ ನಿವೃತ್ತ ಮೆನೇಜರ್ ಪಿ.ವಿಠ್ಠಲ ಶೆಟ್ಟಿ ಕೊಡ್ಲಾರು ಅವರ ಪತ್ನಿಯಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರುವ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುಂದರಿ ವಿ. ಶೆಟ್ಟಿ ನಿಧನ Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಗುಡ್ಡಕ್ಕೆ ಬೆಂಕಿ| ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಪುತ್ತೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ ತಗುಲಿ ಗುಡ್ಡ ಬಹುತೇಕ ಸುಟ್ಟುಹೋದ ಘಟನೆ ಭಾನುವಾರ ಸಂಜೆ ಕೆಯ್ಯೂರು ಗ್ರಾಮದ ನೂಜಿ ಎಂಬಲ್ಲಿ ನಡೆದಿದೆ. ನೂಜಿ ಮುತ್ತಪ್ಪ ರೈ ಎಂಬವರ ಮನೆಯ ಸಂಪರ್ಕದ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದ ಪರಿಣಾಮ ತಂತಿಯಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಬಿದ್ದ ಮಾಹಿತಿ ತಿಳಿದು ದಂಬೆಕ್ಕಾನ ಸದಾಶಿವ ರೈ ಹಾಗೂ ಎ.ಕೆ. ಜಯರಾಮ ರೈ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರು

ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ಗುಡ್ಡಕ್ಕೆ ಬೆಂಕಿ| ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ Read More »

ಕಾಡಾನೆ ದಾಳಿಯಿಂದ-ವ್ಯಕ್ತಿಗೆ ಗಾಯ

ನೆಲ್ಯಾಡಿ: ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಮೇ.28ರಂದು ಮಧ್ಯಾಹ್ನ ನಡೆದಿದೆ. ಇಚ್ಲಂಪಾಡಿ ನಿವಾಸಿ ವಿಜುಕುಮಾರ್ ಕಾಡಾನೆ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಇವರು ಮಧ್ಯಾಹ್ನ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಇಚ್ಲಂಪಾಡಿ ಗ್ರಾಮದ ನಡುಮನೆ ಕ್ರಾಸ್ ಬಳಿ ಕಾಡಾನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಗಂಭೀರ ಗಾಯಗೊಂಡಿರುವ ವಿಜುಕುಮಾರ್ ಅವರಿಗೆ ಕಡಬದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಪುತ್ತೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡು

ಕಾಡಾನೆ ದಾಳಿಯಿಂದ-ವ್ಯಕ್ತಿಗೆ ಗಾಯ Read More »

error: Content is protected !!
Scroll to Top