ಪುತ್ತೂರು

ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು

ನೆಲ್ಯಾಡಿ: ಮಾರುತಿ ಎರ್ಟಿಗಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆ ಎಂಬಲ್ಲಿ ರಸ್ತೆ ಬದಿಯ ಹೊಳೆಗೆ ಕಾರು ಉರುಳಿ ಬಿದ್ದಿದೆ. ಗಾಯಾಳುವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ, ಮದ್ದಳೆ ಮತ್ತು ಭಾಗವತಿಕೆಯ ತರಬೇತಿ.ಉದ್ಘಾಟನೆ

ಪುತ್ತೂರು: ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ ವಾದನ ತರಬೇತಿ ಉದ್ಗಾಟನೆ ನಡೆಯಿತು. ತೆಂಕತಿಟ್ಟಿನ ಹೆಸರಾಂತ ಚಂಡೆ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ತರಬೇತಿಯ ಪ್ರಯೋಜನವನ್ನು ಪಡೆದು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎಸ್. ಡಿ.ಎಂ.ಸಿ ಸದಸ್ಯ ವಿಷ್ಣು ಕನ್ನಡಗುಳಿ,ಮಾಣಿಲ ಮಾತನಾಡಿ, ಅನೇಕ ಪ್ರಸಿದ್ಧ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ತವರೂರಾಗಿದೆ, ಮುಂದೆ ನಮ್ಮ ವಿದ್ಯಾರ್ಥಿಗಳೂ ಸಹ ಇಂತಹ ಕಲಾವಿದರಾಗಿ ರೂಪುಗೊಳ್ಳಲಿ ಎಂದರು. ಮುಖ್ಯಶಿಕ್ಷಕ ಭುವನೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಚಂಡೆ, ಮದ್ದಳೆ ಮತ್ತು ಭಾಗವತಿಕೆಯ ತರಬೇತಿ.ಉದ್ಘಾಟನೆ Read More »

ಸಿಡಿಲು ಬಡಿದು ಮನೆಗೆ ಹಾನಿ,

ಪತ್ತೂರು : ಇಂದು ಮಧ್ಯಾಹ್ನ ವೇಳೆ ಗುಡುಗು ಮಳೆಗೆ ಕಾವು ಮಾಡ್ನರು ಗ್ರಾಮದ ಪರನೀರು ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ. ಪರನೀರು ನಿವಾಸಿ ಈಶ್ವರ ಗೌಡ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಮೀಟರ್ ಸುಟ್ಟುಹೋಗಿದೆ. ನೆಲಕ್ಕೆ ಹಾಕಲಾಗಿದ್ದ ಟೈಲ್ಸ್ ಪುಡಿಯಾಗಿದೆ. ಘಟನೆ ಸಂದರ್ಭ ಈಶ್ವರ ಗೌಡರು ಮಾತ್ರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಸಿಡಿಲು ಬಡಿದು ಮನೆಗೆ ಹಾನಿ, Read More »

ಯಂತ್ರಶ್ರೀ ನಾಟಿ ಯಂತ್ರದ ಚಾಲನಾ ತರಬೇತಿಗೆ ಚಾಲನೆ

ಸುಳ್ಯ : ಸುಳ್ಯ ಸಿಹೆಚ್ಎಸ್ ಸಿ ವಿಭಾಗ ವ್ಯಾಪ್ತಿಯ ಪುತ್ತೂರು ಉಪ್ಪಿನಂಗಡಿ ಪೆರಿಯಡ್ಕ ಕೊರಗಪ್ಪರವರ ಜಮೀನು ನಲ್ಲಿ  ಯಂತ್ರಶ್ರೀ ನಾಟಿ ಯಂತ್ರದ ಚಾಲನ ತರಬೇತಿ ಕಾರ್ಯಾಗಾರ ಶನಿವಾರ ನಡೆಯಿತು. ಕಾರ್ಯಾಗಾರವನ್ನು ರಾಧಮ್ಮ ಉದ್ಘಾಟಿಸಿದರು. ಕೇಂದ್ರ ಕಛೇರಿ ಕೃಷಿ ವಿಭಾಗದ ಯಂತ್ರಶ್ರೀ ಯೋಜನಾಧಿಕಾರಿ ಜಯನಂದ ಚಾಲಕರಿಗೆ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದುಕೊಂಡು ಸಿಹೆಚ್ಎಸ್ ಸಿ ಕೇಂದ್ರದಲ್ಲಿ ಉತ್ತಮ ಸೇವೆಯನ್ನು ನೀಡಿ ಎಂದು ತಿಳಿಸಿದರು. ನಾಟಿ ಯಂತ್ರದ ಚಾಲನೆ ಮತ್ತು ಅನುಪಾಲನೆ ಮಾಡುವ ಬಗ್ಗೆ ತಾಂತ್ರಿಕ ಅಭಿಯಂತರ ತೇಜಸ್ ಮತ್ತು

ಯಂತ್ರಶ್ರೀ ನಾಟಿ ಯಂತ್ರದ ಚಾಲನಾ ತರಬೇತಿಗೆ ಚಾಲನೆ Read More »

ಪುತ್ತೂರು: ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಸವಣೂರು :  ಇಂಡಿಯನ್ ರೆಡ್ ಕ್ರಾಸ್ ಘಟಕ ಪುತ್ತೂರು, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ರೋಟರ‍್ಯಾಕ್ಟ್ ಕ್ಲಬ್ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಸವಣೂರು ಯುವಕ ಮಂಡಲ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಜೂ.10ರಂದು  ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ  ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು

ಪುತ್ತೂರು: ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ Read More »

ಅರುಣ್ ಕುಮಾರ್ ಪುತ್ತಿಲದಿಂದ ಪೇಜಾವರ ಮಠಾಧೀಶರಿಗೆ ಪಾದ ಪೂಜೆ

ಪುತ್ತೂರು: ಪೇಜಾವರ ಮಠಾಧೀಶರಾದ ಶ್ರೀ ಶ್ರೀ  ವಿಶ್ವಪ್ರಸನ್ನತೀರ್ಥ ಸ್ವಾಮಿಜೀ ಯವರು ಅರುಣ್ ಕುಮಾರ್ ಪುತ್ತಿಲರ ಮನೆಯಲ್ಲಿ ಜೂ.9 ಶುಕ್ರವಾರ ವಾಸ್ತವ್ಯ ಮಾಡಿದರು. ಅರುಣ್ ಕುಮಾರ್ ಪುತ್ತಿಲ ದಂಪತಿ ಸ್ವಾಮೀಜಿಯವರ ಪಾದ ಪೂಜೆ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಅರುಣ್ ಪುತ್ತಿಲರಲ್ಲಿ ಹಲವು ಮಾತುಕತೆ ನಡೆಸಿದರು. ಸ್ವಾಮೀಜಿ ಜೊತೆ ಪೇಜಾವರ ಆಪ್ತ ವರ್ಗ ಕೂಡ ಆಗಮಿಸಿತ್ತು.

ಅರುಣ್ ಕುಮಾರ್ ಪುತ್ತಿಲದಿಂದ ಪೇಜಾವರ ಮಠಾಧೀಶರಿಗೆ ಪಾದ ಪೂಜೆ Read More »

ರಾಷ್ಟ್ರ ಮಟ್ಟದ ಯೋಗ ಪಂದ್ಯಾಟಕ್ಕೆ ವಿವೇಕಾನಂದ  ಪದವಿ ಪೂರ್ವ  ಕಾಲೇಜಿನ ನಿಶ್ಚಲ್ ಕೆ ಜೆ ಆಯ್ಕೆ

ಪುತ್ತೂರು : ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸುವ  99ನೇ ರಾಷ್ಟ್ರ ಮಟ್ಟದ ಯೋಗ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ ಜೆ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅವರು ಪುತ್ತೂರಿನ ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ರಾಷ್ಟ್ರ ಮಟ್ಟದ ಯೋಗ ಪಂದ್ಯಾಟಕ್ಕೆ ವಿವೇಕಾನಂದ  ಪದವಿ ಪೂರ್ವ  ಕಾಲೇಜಿನ ನಿಶ್ಚಲ್ ಕೆ ಜೆ ಆಯ್ಕೆ Read More »

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ ನಡೆಸುವ 99ನೇ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ವಿದ್ಯಾಭಾರತಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಬಾರ್ತಿಕುಮೆರ್ ಇವರ ನೇತೃತ್ವದಲ್ಲಿ  ಈ ತಂಡವು ತರಬೇತಿಯನ್ನು ಪಡೆದಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಖೋ ಖೋ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ನಾಳೆ (ಜೂ.11) : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಜೂ.11 ಭಾನುವಾರ ಬೆಳಿಗ್ಗೆ 8 ರಿಮದ 11.15 ತನಕ ನಡೆಯಲಿದೆ. ವೇದ ಸಂವರ್ಧನಾ ಪ್ರತಿಷ್ಠಾನದಿಂದ ರುದ್ರ ಪಠಣ, ಪರ್ಜನ್ಯ ಜಪ ಮತ್ತು ಭಕ್ತರಿಂದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಈ ಲೋಕ ಕ್ಷೇಮಕರ ಕಾರ್ಯದಲ್ಲಿ ಭಾಗವಹಿಸಿ ಕೃತಾರ್ಥರಾಗೋಣ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜೂ.11) : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತಮ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ Read More »

ದುಡಿಮೆಯ ಒಂದು ಭಾಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿ : ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು | ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಪುತ್ತೂರು: ಹಿಂದೂ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದ್ದು ನಮ್ಮ ಕರ್ತವ್ಯವಾಗಿದ್ದು, ಇದಕ್ಕಾಗಿ ನಮ್ಮ ದುಡಿಮೆಯ ಒಂದು ಭಾಗವನ್ನು ಅರ್ಪಣೆ ಮಾಡಬೇಕು. ಹೀಗಾದಲ್ಲಿ ದೇವಸ್ಥಾನಗಳಿಗೆ ಚೈತನ್ಯ ಬರುವ ಜತೆಗೆ ನಮ್ಮ ಜೀವನವೂ ನೆಮ್ಮದಿಯಿಂದಿರಲು ಸಾಧ್ಯ ಎಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. 800 ವರ್ಷ ಇತಿಹಾಸ ಇರುವ

ದುಡಿಮೆಯ ಒಂದು ಭಾಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿ : ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು | ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ Read More »

error: Content is protected !!
Scroll to Top