ಪುತ್ತೂರು

ಸಂಶೋಧನಾ ಜರ್ನಲ್ ‘ಲೀಗಲ್ ಸ್ಪೆಕ್ಟ್ರಂ -4’ರ ಬಿಡುಗಡೆ

ಪುತ್ತೂರು: ನೆಹರೂನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾದ ನ್ಯಾ. ರಾಜೇಶ್ ರೈ ಕಲ್ಲಂಗಳ ರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಹಾವಿದ್ಯಾಲಯದ ಸಂಶೋಧನಾ ಜರ್ನಲ್ ಲೀಗಲ್ ಸ್ಪೆಕ್ಟ್ರಂ -4 ರ ಬಿಡುಗಡೆ ಸಮಾರಂಭ ಶನಿವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನ್ಯಾ. ರಾಜೇಶ್ ರೈ ಕಲ್ಲಂಗಳ ರವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಶೋಧನಾ ಜರ್ನಲ್ ಲೀಗಲ್ […]

ಸಂಶೋಧನಾ ಜರ್ನಲ್ ‘ಲೀಗಲ್ ಸ್ಪೆಕ್ಟ್ರಂ -4’ರ ಬಿಡುಗಡೆ Read More »

ಪುತ್ತೂರಿನಲ್ಲಿ ಮೇಳೈಸಿದ “ಹಲಸು-ಹಣ್ಣು ಮೇಳ-2023” | ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆಗಳತ್ತ ಆಗಮಿಸಿದ ಹಲಸು ಪ್ರಿಯರ ದಂಡು

ಪುತ್ತೂರು: ಪುತ್ತೂರು: ಹಲಸಿನ ಹಣ್ಣುಗಳನ್ನು ಕೇಳುವವರೇ ಇಲ್ಲದ ಒಂದು ಕಾಲವಿತ್ತು. ಆದರೆ ಪ್ರಸ್ತುತ ಜಗತ್ತಿನಲ್ಲಿ ಹಲಸಿನ ಹಣ್ಣಿನ ಮೌಲ್ಯವರ್ಧನೆ ಜತೆಗೆ ವಿವಿಧ ರೀತಿಯ ಉತ್ಪನ್ನಗಳತ್ತ ಜನ ಆಕರ್ಷಿತರಾಗಿದ್ದಾರೆ ಎಂಬುದಕ್ಕೆ ಪುತ್ತೂರಿನಲ್ಲಿ ನವತೇಜ, ಬೆಂಗಳೂರು ಐಐಎಚ್ಆರ್ ಹಾಗೂ ಪುತ್ತೂರು ಜೆಸಿಐ ವತಿಯಿಂದ ನಗರದ ಜೈನಭವನದಲ್ಲಿ  ಶನಿವಾರ ಉದ್ಘಾಟನೆಗೊಂಡ ಹಲಸು-ಹಣ್ಣು ಮೇಳ ಸಾಕ್ಷಿಯಾಯಿತು. ಈ ಮೇಳದಲ್ಲಿ ಏನಿದೆ, ಏನಿಲ್ಲ ಎಲ್ಲವೂ ಇದೆ. ಕಳೆದ ನಾಲ್ಕೈದು ವರ್ಷಗಳಿಂದ ಹಲಸು ಮೇಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಮೇಳದಿಂದಾಗಿ ವರ್ಷದಿಂದ ವರ್ಷಕ್ಕೆ ಹಲಸಿನ ಮೌಲ್ಯಯುತ ಉತ್ಪನ್ನಗಳಿಗೆ

ಪುತ್ತೂರಿನಲ್ಲಿ ಮೇಳೈಸಿದ “ಹಲಸು-ಹಣ್ಣು ಮೇಳ-2023” | ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆಗಳತ್ತ ಆಗಮಿಸಿದ ಹಲಸು ಪ್ರಿಯರ ದಂಡು Read More »

ಸವಾಲಾಗಿ ಪರಿಣಮಿಸಿದ ಮೌಲ್ಯಾಧಾರಿತ ಶಿಕ್ಷಣ | ಡಾ. ಮೋಹನ್ ಆಳ್ವ |

ಪುತ್ತೂರು: ವಿದ್ಯಾಕ್ಷೇತ್ರವೂ ಪ್ರಸ್ತುತ ವ್ಯಾಪಾರಿಕರಣಗೊಳ್ಳುತ್ತಿದ್ದು, ಇದರ ನಡುವೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಮನೋಧರ್ಮ ಬದಲಾಗುತ್ತಿರುವುದು ಕಷ್ಟದ ವಿಷಯ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ತಿಳಿಸಿದರು. ಅವರು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಮಾಡಲಾದ ‘ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ಶನಿವಾರ ಪುತ್ತೂರಿನ ಜೈನ ಭವನದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿ ಮಾತನಾಡಿದರು. ಬದುಕಿನಲ್ಲಿ ಯಾವತ್ತೂ ಋಣಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳದೆ ಧನಾತ್ಮಕ

ಸವಾಲಾಗಿ ಪರಿಣಮಿಸಿದ ಮೌಲ್ಯಾಧಾರಿತ ಶಿಕ್ಷಣ | ಡಾ. ಮೋಹನ್ ಆಳ್ವ | Read More »

ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಬಿದ್ದ ಕಾರು | ಆರು ಮಂದಿಗೆ ಗಾಯ

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಕಿರು ಸೇತುವೆಯಿಂದ ಕೆಳಗೆ ಬಿದ್ದು ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಲ್ಯಾಡಿ ಸಮೀಪ ಶನಿವಾರ ನಡೆದಿದೆ. ಗಾಯಗೊಂಡವರನ್ನು ಬೆಂಗಳೂರು ಆರ್ ಟಿ ನಗರ ನಿವಾಸಿಗಳೆಂದು ಗುರುತಿಸಲಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದ ಎರಡು ವರ್ಷದ ಮಗುವೊಂದು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಬಿದ್ದ ಕಾರು | ಆರು ಮಂದಿಗೆ ಗಾಯ Read More »

ಆಲಂಕಾರು ಕಾಲೇಜು ರಸ್ತೆಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ

ಕಡಬ: ತಾಲೂಕು ಆಲಂಕಾರು ಕಾಲೇಜು ರಸ್ತೆಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಕಾಮನ್ ಸರ್ವೀಸ್ ಸೆಂಟರ್ ಶನಿವಾರ ಶುಭಾರಂಭಗೊಂಡಿತು. ಉದ್ಯಮಿ ಮೋಕ್ಷನ್ ಪೊಳಲಿ ದೀಪ ಬೆಳಗಿಸಿ ಡಿಜಿಟಲ್ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಂತಪ್ಪ ಗೌಡ, ಜನಾರ್ಧನ ಗೌಡ, ಜಗದೀಶ್, ಚಂದ್ರ, ಪುನೀತ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಹರೀಶ್ ಕಂದ್ಲಾಜೆ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯಲ್ಲಿ ಎಲ್ಲಾ ತರಹದ ಆನ್‍ಲೈನ್ ಸೇವೆಗಳು ಲಭ್ಯವಿದೆ. ಅಲ್ಲದೆ ಕ್ವಿಕ್ ಪಾಸ್ ಪೋರ್ಟ್ ಸೈನ್ ಫೋಟೊ, ವೆಡ್ಡಿಂಗ್ ಶೂಟ್, ಓಟ್

ಆಲಂಕಾರು ಕಾಲೇಜು ರಸ್ತೆಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ Read More »

ವಿಟ್ಲದಲ್ಲಿ ಬೈಕ್‍ಗಳೆರಡು ಮುಖಾಮುಖಿ ಡಿಕ್ಕಿ | ಸವಾರರಿಗೆ ಗಾಯ

ವಿಟ್ಲ: ಬೈಕ್ ಗಳೆರಡು ಡಿಕ್ಕಿ ಹೊಡೆದುಕೊಂಡು ಬೈಕ್‍ ಸವಾರರಿಬ್ಬರೂ ಗಾಯಗೊಂಡ ಘಟನೆ ವಿಟ್ಲ ಸಮೀಪ ನಡೆದಿದೆ. ಬೈಕ್‍ ಸವಾರರಾದ ಧ್ಯಾನ್ ಹಾಗೂ ರಮೇಶ್ ಗಾಯಗೊಂಡವರು. ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ವಿಟ್ಲದಲ್ಲಿ ಬೈಕ್‍ಗಳೆರಡು ಮುಖಾಮುಖಿ ಡಿಕ್ಕಿ | ಸವಾರರಿಗೆ ಗಾಯ Read More »

ಪುತ್ತೂರಿನಲ್ಲಿ ಮೇಳೈಸಿದ “ಹಲಸು-ಹಣ್ಣು ಮೇಳ-2023” | ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆಗಳತ್ತ ಆಗಮಿಸಿದ ಹಲಸು ಪ್ರಿಯರ ದಂಡು

ಪುತ್ತೂರು: ನವತೇಜಸ್ ಪುತ್ತೂರು, ಐಐಎಚ್ ಆರ್ ಬೆಂಗಳೂರು ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ 6ನೇ :ಹಲಸು-ಹಣ್ಣು ಮೇಳ-2023” ಕ್ಕೆ ಶನಿವಾರ ಬೆಳಿಗ್ಗೆ ಬಪ್ಪಳಿಗೆ ಜೈನ ಭವನದಲ್ಲಿ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ನಡೆಯುವ ಹಲಸು ಹಣ್ಣು ಮೇಳಕ್ಕೆ ಬೆಂಗಳೂರಿನ ಐಐಎಚ್ ಅರ್‍ ನಿರ್ದೇಶಕ ಡಾ.ಸಂಜಯ ಕುಮಾರ್ ಸಿಂಗ್ ಹಲಸಿನ ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಹಲಸಿನಹಣ್ಣು ಪ್ರಕೃತಿದತ್ತ ಹಾಗೂ ನಮ್ಮ ಸಂಸ್ಕೃತಿಯ ಹಣ್ಣು. ಇವುಗಳ ಕುರಿತು ಕಳೆದ ಕೆಲವು ವರ್ಷಗಳಿಂದ

ಪುತ್ತೂರಿನಲ್ಲಿ ಮೇಳೈಸಿದ “ಹಲಸು-ಹಣ್ಣು ಮೇಳ-2023” | ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆಗಳತ್ತ ಆಗಮಿಸಿದ ಹಲಸು ಪ್ರಿಯರ ದಂಡು Read More »

ಪುತ್ತೂರು ತಾಲೂಕಿನ 22 ಗ್ರಾಪಂಗಳ ಮೀಸಲಾತಿ ನಿಗದಿ ಪ್ರಕ್ರಿಯೆ | ಚುನಾವಣಾ ಆಯೋಗದ ವಿಶೇಷ ಸಾಫ್ಟ್ ವೇರ್ ಮೂಲಕ ಮೀಸಲಾತಿ ನಿಗದಿ

ಪುತ್ತೂರು: ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಶುಕ್ರವಾರ ಪುತ್ತೂರು ಪುರಭವನದಲ್ಲಿ ನಡೆಯಿತು. ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು. ಕಳೆದ 2020 ರಿಂದ ಇದುವರೆಗೆ ಆಯ್ಕೆಯಾದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟಿದ್ದರು. ಚುನಾವಣಾ ಆಯೋಗ ಮೀಸಲಾತಿ ಆಯ್ಕೆ ಪ್ರಕ್ರಿಯೆಗೆ ವಿಶೇಷ ಸಾಫ್ಟ್ ವೇರ್‍ ನ್ನು ಅಭಿವೃದ್ಧಿ ಪಡಿಸಿತ್ತು.

ಪುತ್ತೂರು ತಾಲೂಕಿನ 22 ಗ್ರಾಪಂಗಳ ಮೀಸಲಾತಿ ನಿಗದಿ ಪ್ರಕ್ರಿಯೆ | ಚುನಾವಣಾ ಆಯೋಗದ ವಿಶೇಷ ಸಾಫ್ಟ್ ವೇರ್ ಮೂಲಕ ಮೀಸಲಾತಿ ನಿಗದಿ Read More »

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಮುಂಬಯಿಯ ಜಿಯೋ ಕನ್ವೆನ್ಸ್ಯನ್ ಸೆಂಟರ್ ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಶಾಸಕಾಂಗ ಸಮ್ಮೇಳನಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಭಾಗವಹಿಸಿದರು. ಶಾಸಕರಿಗೆ ತರಬೇತಿ ಸೇರಿದಂತೆ ಶಾಸಕಾಂಗ ವಿಚಾರದಲ್ಲಿ ಮಾಹಿತಿ ಕಾರ್ಯಾಗಾರವೂ ಇಲ್ಲಿ ನಡೆಯುತ್ತದೆ. ದೇಶಾಧ್ಯಂತ ಸುಮಾರು‌2000 ಮಂದಿ ವಿವಿಧ ರಾಜ್ಯಗಳ ಶಾಸಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ಶನಿವಾರ ಸಮಾವೇಶ ಕೊನೆಗೊಳ್ಳಲಿದೆ.

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ Read More »

ಪುತ್ತೂರು ಇನ್ನರ್ ವೀಲ್ ಕ್ಲಬ್‍ ನೂತನ ಪದಾಧಿಕಾರಿಗಳ ಪದಗ್ರಹಣ

ಪುತ್ತೂರು: ಪುತ್ತೂರು ಇನ್ನರ್ ವೀಲ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಐಎಸ್‍ಒ ರಜನಿ ಭಟ್ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರಿದೇವಿ ರೈ, ಉಪಾಧ್ಯಕ್ಷೆ ರಾಜೇಶ್ವರಿ ಆಚಾರ್, ಕೋಶಾಧಿಕಾರಿ ಸೀಮಾ ನಾಗರಾಜ್, ಕ್ಲಬ್‍ಸಂಪಾದಕಿಯರಾದ ಸುಧಾ ಕಾರ್ಯಪ್ಪ, ಐಎಸ್‍ಒ ಅಶಾ ನಾಯಕ್, ವೆಬ್‍ಕೋ-ಆರ್ಡಿನೇಟರ್ ವಚನಾ ಜಯರಾಮ್, ನಿಕಟಪೂರ್ವ ಅಧ್ಯಕ್ಷೆ ಟೈನಿ ದೀಪಕ್‍ಅವರಿಗೆ ಪ್ರದಾನ ಮಾಡಲಾಯಿತು. ನಿರ್ದೇಶಕರಾದ

ಪುತ್ತೂರು ಇನ್ನರ್ ವೀಲ್ ಕ್ಲಬ್‍ ನೂತನ ಪದಾಧಿಕಾರಿಗಳ ಪದಗ್ರಹಣ Read More »

error: Content is protected !!
Scroll to Top