ಪುತ್ತೂರು

ಕೆಯ್ಯೂರು ಪಬ್ಲಿಕ್ ಸ್ಕೂಲ್‍ನಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ

ಪುತ್ತೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕಿನ ಕೆದಂಬಾಡಿ ವಲಯದ ಪರಿಸರ ಮಾಹಿತಿ ಕಾರ್ಯಕ್ರಮ, ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಇಕೋ ಕ್ಲಬ್ ವನಶ್ರೀ ಇಕೋ ಕ್ಲಬ್ ಸಂಯೋಗದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು. ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ, […]

ಕೆಯ್ಯೂರು ಪಬ್ಲಿಕ್ ಸ್ಕೂಲ್‍ನಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ Read More »

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ

ಸುಬ್ರಹ್ಮಣ್ಯ: ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನೆಟ್ಟಣದಲ್ಲಿ ನಡೆದಿದೆ. ಕಡಬ ತಾಲೂಕಿನ ಐನೆಕಿದು ಪೈಲಾಜೆ ನಿವಾಸಿ ಧರ್ಮರಾಜ ಮುತ್ಲಾಜೆ (45) ಈ ಕೃತ್ಯ ಎಸಗಿದವರು. ಧರ್ಮರಾಜ್ ಎಲಿಮಲೆ ರಬ್ಬರ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಕೆಲ ಸಮಯಗಳಿಂದ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದರು ಎಂದು ತಿಳಿದು ಬಂದಿದೆ. ಗೂಡ್ಸ್‍ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ Read More »

ಹೆರಿಗೆ ವೇಳೆ ಬಾಣಂತಿ ಮೃತಪಟ್ಟ ಬೆನ್ನಲ್ಲೇ ಹಸುಗೂಸು ಮೃತ್ಯು

ಉಪ್ಪಿನಂಗಡಿ : ಹೆರಿಗೆ ವೇಳೆ ತೀವ್ರ ರಕ್ತಸಾವ್ರದಿಂದ ಬಾಣಂತಿ ಮೃತಪಟ್ಟ ಬೆನ್ನಲ್ಲೇ ಇದೀಗ ಹಸುಗೂಸು ಮೃತಪಟ್ಟ ಘಟನೆ ಮಂಗಳೂರು ಜಿಲ್ಲಾ ಆಸ್ಪತ್ರೆ ವೆನ್‌ಲಾಕ್‌ನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ. 20ರಂದು ರಾತ್ರಿ ಹೆರಿಗೆ ಸಂದರ್ಭ ರಕ್ತಸ್ರಾವದಿಂದ ಸಾವನ್ನಪ್ಪಿದ ಬೆನ್ನಿಗೆ ಅವರ ಹಸುಕೂಸು ಗುರುವಾರ ಮುಂಜಾನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಭವ್ಯರವರು ತನ್ನ 3ನೇ ಹೆರಿಗೆಗಾಗಿ ಪುತ್ತೂರು

ಹೆರಿಗೆ ವೇಳೆ ಬಾಣಂತಿ ಮೃತಪಟ್ಟ ಬೆನ್ನಲ್ಲೇ ಹಸುಗೂಸು ಮೃತ್ಯು Read More »

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸಾಮೂಹಿಕ ಯೋಗಾಸನ

ಪೆರ್ನೆ : ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕೆದಿಲ ಗಾಂಧಿನಗರ ಪಂಚಾಯಿತು ಸಭಾಭವನದಲ್ಲಿ ಸಾಮೂಹಿಕ ಯೋಗಾಸನ  ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು  ಲೋಕಯ್ಯಪೂಜಾರಿ. ಉದ್ಘಾಟಿಸಿದರು. ವಿವೇಕಾನದ ಕನ್ನಡ ಮಾಧ್ಯಮ ಶಾಲೆಯ ಯೋಗ ಶಿಕ್ಷಕ ರಂಗಪ್ಪ ಯೋಗಾಸನ  ಹೇಳಿಕೊಟ್ಟರು. ಈ ಸಂದರ್ಭದಲ್ಲಿ. ಪೆರ್ನೆ ವಲಯ ಮೇಲ್ವಿಚಾರಕಿ ಶಾರದ  ಪೆರ್ನೆ ಶೌರ್ಯ ವಿಪತ್ತು ಘಟಕದ ಸಂಯೋಜಕಿ ಅಶ್ಮಿತಾ, ಸದಸ್ಯರಾದ  ಜಗದೀಶ  ವೆಂಕಪ್ಪ. ಗಿರೀಶ . ಸುರೇಶ. ಕೇಶವ. ಮತ್ತು ಸೇವಾಪ್ರತಿನಿದಿಗಳಾದ ಶಾರದ, ಜಯಂತಿ, ಜಯಶ್ರೀ, ಸಂಜೀವಿನಿ ಸಂಯೋಜಕಿ ಆಶಾ, ಪಂಚಾಯಿತಿ

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸಾಮೂಹಿಕ ಯೋಗಾಸನ Read More »

ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನ ವಾರ್ಷಿಕ ಕಾರ್ಯಕ್ರಮ ಸಮಾರೋಪ | ಸಂಪನ್ಮೂಲ ವ್ಯಕ್ತಿಯಿಂದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಾಗಾರ

ಪುತ್ತೂರು: ಕೆಲಸಕ್ಕೆ ಮುಂದಾಗುವಾಗ ಸವಾಲುಗಳು ಸಾಮಾನ್ಯ. ಹಾಗೆಂದು ಆ ಸವಾಲನ್ನು ಎದುರಿಸದೇ ಇದ್ದರೆ, ಯಶಸ್ಸು ಸಿಕ್ಕಲು ಸಾಧ್ಯವೇ ಇಲ್ಲ. ಆದ್ದರಿಂದ ಒಂದು ಹೆಜ್ಜೆ ಮುಂದಕ್ಕೆ ಇಡಿ. ಸವಾಲುಗಳನ್ನು ಎದುರಿಸಿ, ತಾಳ್ಮೆ, ಪರಿಶ್ರಮದಿಂದ ಕೆಲಸವನ್ನು ಸಾಧಿಸಿಕೊಳ್ಳು. ಯಶಸ್ಸು, ಕೀರ್ತಿ ನಿಮ್ಮ ಬಳಿಗೆ ಬರುತ್ತದೆ ಎಂದು ಪುತ್ತೂರು ರೋಟರಿ ಕ್ಲಬ್ಬಿನ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ್ ಹೇಳಿದರು. ನೆಹರುನಗರ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ ನಡೆದ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನ ವಾರ್ಷಿಕ ಕಾರ್ಯಕ್ರಮ ಸಮಾರೋಪ | ಸಂಪನ್ಮೂಲ ವ್ಯಕ್ತಿಯಿಂದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಾಗಾರ Read More »

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪುರಸಭಾ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ಬಂಟ್ವಾಳ ಪೇಟೆ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಕೂಟೇಲು ಸೇತುವೆ ಸಮೀಪದಲ್ಲಿ ಮಹಿಳೆಯ ಚಪ್ಪಲಿ ಕಂಡು ಬಂದ ಕಾರಣಕ್ಕಾಗಿ ನದಿಯಲ್ಲಿ ನೋಡಿದಾಗ ಮಹಿಳೆಯ ಮೃತದೇಹ ಕವಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆಯ ಬಗ್ಗೆ ಗುರುತು ಪತ್ತೆಗಾಗಿ

ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ Read More »

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ

ಪೆರ್ನೆ: ಶೌರ್ಯ ವಿಪತ್ತು  ವಾರ್ಷಿಕೋತ್ಸವದ  ಅಂಗವಾಗಿ. ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ  ಕೆದಿಲ ಗಾಂಧಿನಗರ  ಅಂಗನವಾಡಿಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಸುತ್ತಮುತ್ತಲು ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ. ಪೆರ್ನೆ ವಲಯ ಮೇಲ್ವಿಚಾರಕಿ ಶಾರದ  ,ಪೆರ್ನೆ ಶೌರ್ಯ ವಿಪತ್ತು ಘಟಕದ ಸಂಯೋಜಕಿ ಅಶ್ಮಿತಾ ,ಸದಸ್ಯರಾದ  ಜಗದೀಶ  ವೆಂಕಪ್ಪ. ಗಿರೀಶ . ಸುರೇಶ. ಕೇಶವ. ಮತ್ತು ಸೇವಾಪ್ರತಿನಿದಿಗಳಾದ  ಶಾರದ, ಜಯಂತಿ, ಜಯಶ್ರೀ  ಅಂಗನವಾಡಿ  ಶಿಕ್ಷಕಿ. ಲೀನಾ ಸಂಜೀವಿನಿ ಸಂಯೋಜಕಿ ಆಶಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ Read More »

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ

ಕೌಕ್ರಾಡಿ: ಜಮೀನು ಖಾತೆ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟ ಕೌಕ್ರಾಡಿ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿ ಗ್ರಾಮದಲ್ಲಿ ಜಾಗದ 9/11 ಖಾತೆ  ಬದಲಾವಣೆಗೆ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದ ಹಿನ್ನಲೆಯಲ್ಲಿ 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಆದರೂ ಬದಲಾವಣೆ ಆಗಿರಲಿಲ್ಲ. ಗ್ರಾಪಂ ಪಿಡಿಒ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ Read More »

ಅಕ್ಷಯ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಹೇಮ ಚಂದ್ರಹಾಸ್ ಅಗಳಿ ಮಾತನಾಡಿ, ಯೋಗಾಸಾನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ ಮನಸ್ಸು ಮತ್ತು ದೇಹದಿಂದ ಬರುವ ರೋಗಗಳನ್ನು ದೂರವಿರಿಸುತ್ತದೆ. ನಮ್ಮ ಆರೋಗ್ಯವನ್ನು ನಾವು ಯೋಗದಿಂದ ಸ್ಥಿರವಾಗಿಡಬಹುದು. ಅಲ್ಲದೇ, ಸ್ವೀಕರಿಸಿದ ವಿಷಗಾಳಿಯನ್ನು ಕಪಾಲಭಾತಿ ಕ್ರಿಯೆಯ ಮೂಲಕ ಹೊರಹಾಕಬಹುದು ಎಂದು ಹೇ:ಳಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ಯೋಗ ಸಾಧನೆಯಿಂದ

ಅಕ್ಷಯ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ “ಆರೋಗ್ಯ ಯೋಗ” ಕಾರ್ಯಕ್ರಮ | ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ

ಮಾಣಿಲ : ದೈಹಿಕ ಮಾನಸಿಕ ಸಮತೋಲನ ಕಾಪಾಡಲು ಯೋಗ ಅಗತ್ಯ. ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಸುಯೋಗ – ಎಂದು ಪ್ರತಿಷ್ಠಿತ ಸಂಸ್ಥೆ ವಿಟ್ಲ ಜೆಸಿಐ ನ ಅಧ್ಯಕ್ಷರಾದ ಪರಮೇಶ್ವರ ಹೆಗಡೆ ಹೇಳಿದರು. ಅವರು ‘ವಿಶ್ವ ಯೋಗ ದಿನ ‘ ಪ್ರಯುಕ್ತ ಸರ್ಕಾರಿ ಪ್ರೌಢ ಶಾಲೆ ಮಾಣಿಲ ದಲ್ಲಿ ಜೆಸಿಐ ವಿಟ್ಲ ಸಹಯೋಗದಲ್ಲಿ ಏರ್ಪಡಿಸಲಾದ ‘ಆರೋಗ್ಯ ಯೋಗ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಭುವನೇಶ್ವರ್

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ “ಆರೋಗ್ಯ ಯೋಗ” ಕಾರ್ಯಕ್ರಮ | ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ Read More »

error: Content is protected !!
Scroll to Top