ಪುತ್ತೂರು

ಬೊಳಿಂಜಡ್ಕ ವೆಂಕಟ ಸುಬ್ಬರಾವ್ ನಿಧನ

ಮಾಣಿಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತ, ಮಾಣಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಮಾರ್ಗದರ್ಶಕರೂ, ಸಹಕಾರಿಯೂ ಆಗಿದ್ದ ಬೊಳಿಂಜಡ್ಕ ವೆಂಕಟ ಸುಬ್ಬರಾವ್ ಮಂಗಳವಾರ ನಿಧನರಾದರು. ದಿ। ಬೊಳಿಂಜಡ್ಕ ಕೃಷ್ಣಭಟ್ಟರ ಪುತ್ರರಾದ ಮೃತರು ಪತ್ನಿ, ಮಗ, ಸೊಸೆ, ಮಗಳು, ಅಳಿಯ, ಸಹೋದರರು, ಸಹೋದರಿ, ಮೊಮ್ಮಕ್ಕಳು, ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳು, ಬಂಧುಮಿತ್ರರನ್ನು ಅಗಲಿದ್ದಾರೆ.

ಬೊಳಿಂಜಡ್ಕ ವೆಂಕಟ ಸುಬ್ಬರಾವ್ ನಿಧನ Read More »

ಭಿತ್ತಿಚಿತ್ರ-ವಿಜ್ಞಾನ ಮಾದರಿ : ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ನಗರದ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ವಳಚ್ಚಿಲ್‌ನ ಶ್ರೀನಿವಾಸ ಇನ್‌ಸ್ಟಿಟ್ಯೂಶನ್ ಆಫ್ ಫಾರ್ಮಸಿ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಭಿತ್ತಿಚಿತ್ರ ರಚನೆ ಹಾಗೂ ವಿಜ್ಞಾನ ಮಾದರಿ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ವಿದ್ಯಾಲಯದ ವಿದ್ಯಾರ್ಥಿಗಳಾದ ಸಮೀಕ್ಷಾ ಶೆಟ್ಟಿ ಮತ್ತು ಹರ್ಷಿತಾ ಟಿ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದರೆ, ವಿಜ್ಞಾನ ಮಾದರಿ ತಯಾರಿಯಲ್ಲಿ ಪೃಥ್ವಿರಾಜ್ ಪಿ. ಪ್ರಭು, ಕೆ ಶುಭನ್ ಶಣೈ ಹಾಗೂ ಅನಿರುದ್ಧ ಬಿ. ದ್ವಿತೀಯ ಬಹುಮಾನ ಗಳಿಸಿರುತ್ತಾರೆ. ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ

ಭಿತ್ತಿಚಿತ್ರ-ವಿಜ್ಞಾನ ಮಾದರಿ : ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ Read More »

ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ವೈಭವದ ಗಣೇಶೋತ್ಸವ | ಶೋಭಾಯಾತ್ರೆಗೆ ಮೆರುಗು ನೀಡಿದ ಕುಣಿತ ಭಜನೆ ತಂಡ

ಪುತ್ತೂರು: ತಾಲೂಕಿನ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟದ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಗಳವಾರ ರಾತ್ರಿ ವಿವಿಧ ವೈದಿಕ ಕಾರ್ಯಕ್ರಮ, ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ನಡೆದ ಉತ್ಸವದ ಅಂಗವಾಗಿ ಬೆಳಿಗ್ಗೆ 9 ಕ್ಕೆ ಮೂರ್ತಿ ಪ್ರತಿಷ್ಠಾಪನೆ ನಡೆದು, ಭಜನೆ, ಮಂಗಳಾರತಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಷಣ್ಮುಖದೇವ ಭಜನಾ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟದ ಅಧ್ಯಕ್ಷ ಮಂಜುನಾಥ್

ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ವೈಭವದ ಗಣೇಶೋತ್ಸವ | ಶೋಭಾಯಾತ್ರೆಗೆ ಮೆರುಗು ನೀಡಿದ ಕುಣಿತ ಭಜನೆ ತಂಡ Read More »

ಧಾರ್ಮಿಕತೆಯ ಗಣೇಶೋತ್ಸವಕ್ಕೆ ಸಾಮಾಜಿಕ ಮಹತ್ವವೂ ಇದೆ

“ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭl ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದಾl” ಹೀಗೆಂದು ಪ್ರಾರ್ಥಿಸುತ್ತಾ ಪ್ರತೀ ವರುಷ ದೇಶವಿಡೀ ಗಣೇಶ ಚತುರ್ಥಿಯನ್ನು ವಿಜ್ರಂಭಣೆಯಿಂದ ಆಚರಿಸುತ್ತೇವೆ. ಪೌರಾಣಿಕ, ಧಾರ್ಮಿಕ ಹಾಗೂ ಸಾಮಜಿಕ ಹಿನ್ನೆಲೆಯುಳ್ಳ ಈ ಹಬ್ಬವನ್ನು ಪ್ರತೀ ವರುಷ  ಭಾದ್ರಪದ  ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದು ನಡೆಸುತ್ತೇವೆ. ಕೆಲವೆಡೆ ಗೌರಿ ಗಣೇಶ ಹಬ್ಬ ಎಂದೇ ಕರೆಯಲಾಗುವ ಈ ಹಬ್ಬದಲ್ಲಿ ಮುತ್ತೈದೆಯರಿಗೆ ತವರು ಮನೆಯಿಂದ ಬಾಗಿನ ಕೊಡುವ ಸಂಪ್ರದಾಯವೂ ಇದೆ. ಮನೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ,

ಧಾರ್ಮಿಕತೆಯ ಗಣೇಶೋತ್ಸವಕ್ಕೆ ಸಾಮಾಜಿಕ ಮಹತ್ವವೂ ಇದೆ Read More »

ಬಲಿ ಉತ್ಸವ ಪ್ರಿಯ ಶ್ರೀ ಗಣೇಶನ ಉತ್ಸವಕ್ಕೆ ಚಾಲನೆ

ಪುತ್ತೂರು ನಗರದ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ವತಿಯಿಂದ ಏಳು ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ 66ನೇ ವರ್ಷದ ಗಣೇಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕಿಲ್ಲೆ ಮೈದಾನಕ್ಕೆ ತಂದು, 11 ಗಂಟೆಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಯಿತು.   ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಕಾರ್ಯದರ್ಶಿ ರಮೇಶ್, ಕೋಶಾಧಿಕಾರಿ ಸಿ.ಶ್ರೀಧರ ನಾಯಕ್, ಸಮಿತಿ ಸದಸ್ಯರಾದ ದಿನೇಶ್ ಕುಲಾಲ್ ಪಿ.ವಿ., ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ

ಬಲಿ ಉತ್ಸವ ಪ್ರಿಯ ಶ್ರೀ ಗಣೇಶನ ಉತ್ಸವಕ್ಕೆ ಚಾಲನೆ Read More »

ಶೋಭಾಯಮಾನ ಶೋಭಾಯಾತ್ರೆಯ ಶ್ರೀ ಗಣೇಶನ ಉತ್ಸವಕ್ಕೆ ಚಾಲನೆ

ಪುತ್ತೂರು: ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ತೆರೆದ ವಾಹನದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಬೊಳುವಾರಿನಿಂದ ಮೆರವಣಿಗೆಯಲ್ಲಿ ತರಲಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಿರ್ಮಿಸಿದ ಬೃಹತ್ ಪೆಂಡಾಲ್‍ ನಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಗೌರವಾಧ್ಯಕ್ಷ ಎಂ.ಕೆ. ಪ್ರಸಾದ್, ಕಾರ್ಯಾಧ್ಯಕ್ಷ ರಾಧಾಕೃಷ್ಣ

ಶೋಭಾಯಮಾನ ಶೋಭಾಯಾತ್ರೆಯ ಶ್ರೀ ಗಣೇಶನ ಉತ್ಸವಕ್ಕೆ ಚಾಲನೆ Read More »

ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ

ಕೆದಿಲ: ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುವ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ಗಣೇಶ ವಿಗ್ರಹ ಶೋಭಾಯಾತ್ರೆ ಮಂಗಳವಾರ ರಾತ್ರಿ ನಡೆಯಲಿರುವುದರಿಂದ ಶೋಭಾಯಾತ್ರೆ ಸಾಗುವ ಬೀಟಿಗೆ – ಕ್ಷೇತ್ರಪಳಿಕೆ – ಕಾಂತುಕೋಡಿ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಲಾಯಿತು. ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ಶೋಭಾಯಾತ್ರೆಗೆ ಸಮಸ್ಯೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ವಾರ್ಡಿನ ಸದಸ್ಯ ಶ್ಯಾಮ ಪ್ರಸಾದ್ ತಾವೇ ಸ್ವತಃ ತಮ್ಮ ಪಿಕಪ್ ವಾಹನದಲ್ಲಿ ಜಲ್ಲಿಕಲ್ಲು ಹಾಗೂ ಕ್ರಶರ್ ಹುಡಿ ಹಾಕಿ ಸರಿಪಡಿಸಿದರು. ಈ ಸಂದರ್ಭದಲ್ಲಿ

ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ Read More »

ಸ್ವಾತಂತ್ರ್ಯ ಹೋರಾಟದಲ್ಲೂ ಕಂಡಿದ್ದ ಗಣಪ – ಗಣೇಶೋತ್ಸವ ಆಚರಣೆಯ ಹಿನ್ನೆಲೆ ಇಲ್ಲಿದೆ…

ದೇಶದ ಪ್ರತಿಯೊಂದು ಧರ್ಮದ ಜನರು ಅವರವರ ಧರ್ಮಕ್ಕೆ ಸಂಬಂಧಪಟ್ಟಂತೆ ಹಬ್ಬವನ್ನು ಆಚರಿಸುತ್ತಾರೆ. ಯಾವುದೇ ಹಬ್ಬ ಬಂತೆಂದರೆ ಸಾಕು, ಪ್ರತಿಯೊಬ್ಬರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ದೇವಸ್ಥಾನಕ್ಕೆ ಹೋಗಿ ಪೂಜೆ ಪುರಸ್ಕಾರಗಳನ್ನು ಪೂರೈಸಿಕೊಂಡು ಬರುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಜನರಿಗೆ ಹಬ್ಬಗಳ ಹಿನ್ನಲೆ, ಇತಿಹಾಸದ ಜ್ಞಾನ ಬಹಳ ಕಡಿಮೆ. ಒಂದು ಹಬ್ಬವನ್ನು ಆಚರಿಸುತ್ತಾರೆ ಎಂದಾಗ ಈ ಹಬ್ಬವನ್ನು ಯಾಕೆ ಆಚರಿಸುತ್ತಾರೆ? ಇದರ ಮಹತ್ವವೇನು? ಎಂಬುದನ್ನು ನಾವು ತಿಳಿದುಕೊಳ್ಳುವುದು ತುಂಬಾ ಅಗತ್ಯವಿದೆ. ಪ್ರತಿವರ್ಷವೂ ಗಣೇಶ ಚತುರ್ಥಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಸ್ವಾತಂತ್ರ್ಯ ಹೋರಾಟದಲ್ಲೂ ಕಂಡಿದ್ದ ಗಣಪ – ಗಣೇಶೋತ್ಸವ ಆಚರಣೆಯ ಹಿನ್ನೆಲೆ ಇಲ್ಲಿದೆ… Read More »

ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ | ಮೆರವಣಿಗೆಯಲ್ಲಿ ಕರೆತಂದ ಮೂರ್ತಿ | ಪ್ರತಿಷ್ಠಾಪನೆ

ಮಾಣಿ: ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ ಪೆರ್ನೆ ಯುವಸ್ಪಂದನದ ಸಹಕಾರದೊಂದಿಗೆ ನಡೆಯುವ 28ನೇ ವರ್ಷದ ಗಣೇಶೋತ್ಸವದ ಶ್ರೀ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 9 ಗಂಟೆಗೆ ಪೆರ್ನೆ ಕೃಷಿಕರಾದ ರಾಮಣ್ಣ ಗೌಡ ಪಡ್ಡಾಯಿ ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಧ್ವಜಾರೋಹಣ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ಸ್ಥಾಪಕ

ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ | ಮೆರವಣಿಗೆಯಲ್ಲಿ ಕರೆತಂದ ಮೂರ್ತಿ | ಪ್ರತಿಷ್ಠಾಪನೆ Read More »

ಮೆರವಣಿಗೆಯಲ್ಲಿ ಕರೆತಂದ ಕಲ್ಲಾರೆ ಗಣೇಶನ ವಿಗ್ರಹ | ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾಮಂಟಪದಲ್ಲಿ ಪ್ರತಿಷ್ಠಾಪನೆ

ಪುತ್ತೂರು: ಇಲ್ಲಿಯ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಪುತ್ತೂರು ಕಲ್ಲಾರೆ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಡುವ ಶ್ರೀ ಗಣೇಶನ ವಿಗ್ರಹವನ್ನು ಮೆರವಣಿಗೆ ಮೂಲಕ ಕರೆತಂದು ಶ್ರೀ ರಾಘವೇಂದ್ರ ಮಠದ ಸಭಾ ಮಂಟಪದಲ್ಲಿ  ಪ್ರತಿಷ್ಠಾಪಿಸಲಾಯಿತು. ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪರು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯು.ಪೂವಪ್ಪ, ಪ್ರಧಾನ ಕಾರ್ಯದರ್ಶಿ ಯು.ಲೋಕೇಶ್ ಹೆಗ್ಡೆ, ಕೋಶಾಧಿಕಾರಿ ಬೆಟ್ಟ ಈಶ್ವರ ಭಟ್ಟ, ಸಮಿತಿ ಸದಸ್ಯರು,

ಮೆರವಣಿಗೆಯಲ್ಲಿ ಕರೆತಂದ ಕಲ್ಲಾರೆ ಗಣೇಶನ ವಿಗ್ರಹ | ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾಮಂಟಪದಲ್ಲಿ ಪ್ರತಿಷ್ಠಾಪನೆ Read More »

error: Content is protected !!
Scroll to Top