ಪುತ್ತಿಲ ಪರಿವಾರದಿಂದ ಚಿಕಿತ್ಸೆಗೆ ಒಂದು ಲಕ್ಷ ರೂ. ಚೆಕ್ ಹಸ್ತಾಂತರ
ಪುತ್ತೂರು: ಪುತ್ತಿಲ ಪರಿವಾರದ ಕೆಮ್ಮಿಂಜೆ ವಾರ್ಡಿನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಅವರ ಮಗ ಮೆದುಳಿನ ಕಾಯಿಲೆಗೆ ತುತ್ತಾಗಿದ್ದು ಚಿಕಿತ್ಸೆಗೆ ಸುಮಾರು 10 ಲಕ್ಷದ ಅವಶ್ಯಕತೆಯಿದ್ದು, ಪುತ್ತಿಲ ಪರಿವಾರದಿಂದ ಒಂದು ಲಕ್ಷ ರೂ. ಧನಸಹಾಯ ನೀಡಲಾಯಿತು. ಪುತ್ತಿಲ ಪರಿವಾರದ ವತಿಯಿಂದ ಒಂದು ದಿನದಲ್ಲಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ಬಾಲಕೃಷ್ಣ ಗೌಡರಿಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.
ಪುತ್ತಿಲ ಪರಿವಾರದಿಂದ ಚಿಕಿತ್ಸೆಗೆ ಒಂದು ಲಕ್ಷ ರೂ. ಚೆಕ್ ಹಸ್ತಾಂತರ Read More »










