ಪುತ್ತೂರು

ಬಜರಂಗದಳದ ಐವರು ಕಾರ್ಯಕರ್ತರ ಗಡಿಪಾರು ಆದೇಶ: ಅಧಿಕಾರಿಗಳಿಗೆ ಫೋನಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್

ಪುತ್ತೂರು: ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲು ಮಾನದಂಡವೇನು, ಕೇವಲ ಒಂದು ಕೇಸು ಇದ್ದವರಿಗೂ ಗಡಿಪಾರು ನೋಟೀಸ್ ನೀಡಲಾಗಿದೆ. ನನ್ನನ್ನು ಗಡಿಪಾರು ಮಾಡಿ, ಕಾರ್ಯಕರ್ತರನ್ನು ಯಾಕೆ ಗಡಿಪಾರು ಮಾಡ್ತೀರಾ. ಹೀಗೆಂದು ಹೇಳಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲ್. ಬಜರಂಗದಳ ಐದು ಮಂದಿ ಕಾರ್ಯಕರ್ತರ ಗಡಿಪಾರಿಗೆ ಆದೇಶ ಬಂದ ಹಿನ್ನಲೆಯಲ್ಲಿ ಬಜರಂಗಳದ ಕಾರ್ಯಕರ್ತರು ಸಂಸದರನ್ನು ಭೇಟಿ ಮಾಡಿದ್ದು, ಕಾರ್ಯಕರ್ತರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ಫೋನ್ ಮುಖಾಂತರ ಈ ಕುರಿತು ಮಾತನಾಡಿದರು. ಆದೇಶ ಮಾಡುವ ಮೊದಲು ಸರಿಯಾಗಿ ಪರಿಶೀಲನೆ ನಡೆಸಬೇಕು. ಅದನ್ನು […]

ಬಜರಂಗದಳದ ಐವರು ಕಾರ್ಯಕರ್ತರ ಗಡಿಪಾರು ಆದೇಶ: ಅಧಿಕಾರಿಗಳಿಗೆ ಫೋನಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್ Read More »

ನ.19: ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ತಪಾಸಣೆ ಶಿಬಿರ

ಪುತ್ತೂರು: ಮಂಗಳೂರು ಹಿದಾಯ ಫೌಂಡೇಶನ್, ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಎನ್‍ಆರ್‍ಐ ಪ್ರವಾಸಿಗಳು ಹಾಗೂ ಕಲ್ಲೇಗ ಜುಮ್ಮಾ ಮಸೀದಿ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ನ.19 ರಂದು ಕಲ್ಲೇಗ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕಲ್ಲೇಗ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಬಿ.ಎ.ಶಕೂರ್ ಹಾಜಿ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ಕಣ್ಣು, ಕಿವಿ, ಮೂಗು, ಗಂಟಲು, ಹಲ್ಲು, ಎಲುಬು, ಹೆರಿಗೆ ಮತ್ತು ಪ್ರಸೂತಿ

ನ.19: ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ತಪಾಸಣೆ ಶಿಬಿರ Read More »

ಉದ್ದೇಶಿತ ಕಾಮಗಾರಿ ಪೂರ್ಣಗೊಂಡರೆ ಪುತ್ತೂರಿಗೆ ‘ವಂದೇ ಮಾತರಂ’ ರೈಲು | ವಿವೇಕಾನಂದ ಕಾಲೇಜು ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ಹಲವು ವರ್ಷಗಳ ಬೇಡಿಕೆಯಾದ ನೆಹರುನಗರ – ಹಾರಾಡಿ ಸಂಪರ್ಕ ರಸ್ತೆಯ ವಿವೇಕಾನಂದ ಕಾಲೇಜು ಬಳಿ ಇರುವ ರೈಲ್ವೇ ಮೇಲ್ಸೇತುವೆ ಅಗಲೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು. ಅರ್ಚಕರು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಪೂಜಾ ವಿಧಿವಿಧಾನ ನೆರವೇರಿಸಿದರು. ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪುತ್ತೂರಿನಲ್ಲಿ ಮೂರು ಅಂಡರ್ ಪಾಸ್ ಅಭಿವೃದ್ಧಿಯ ಬೇಡಿಕೆಯಿತ್ತು. ಮುರ, ಎಪಿಎಂಸಿ ಹಾಗೂ ವಿವೇಕಾನಂದ ಮೇಲ್ಸೇತುವೆ. ಈ ಪೈಕಿ ಮುರ

ಉದ್ದೇಶಿತ ಕಾಮಗಾರಿ ಪೂರ್ಣಗೊಂಡರೆ ಪುತ್ತೂರಿಗೆ ‘ವಂದೇ ಮಾತರಂ’ ರೈಲು | ವಿವೇಕಾನಂದ ಕಾಲೇಜು ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ Read More »

ಡಿ.3: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿಯಿಂದ ಸಾರ್ವಜನಿಕ ಶ್ರೀ ಲಕ್ಷ್ಮೀಪೂಜೆ | ಆಮಂತ್ರಣ ಬಿಡುಗಡೆ

ಪುತ್ತೂರು: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿ ಆಯೋಜಕತ್ವದಲ್ಲಿ ಸಾರ್ವಜನಿಕ ಶ್ರೀ ಲಕ್ಷ್ಮೀ ಪೂಜೆಯ ಆಮಂತ್ರಣ ಬಿಡುಗಡೆ ಕಾಯ೯ಕ್ರಮ  ಕುಂಜೂರು ಶ್ರೀ ದುಗಾ೯ಪರಮೇಶ್ವರೀ  ದೇವಸ್ಥಾನದಲ್ಲಿ ನಡೆಯಿತು. ಡಿ.3 ರಂದು ಹಿಂದೂ ಸಮಾಜದ ಐಕ್ಯತೆಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುವ ಸಾರ್ವಜನಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸುವರು. ಪುತ್ತಿಲ ಪರಿವಾರದ ಆರ್ಯಾಪು ಗ್ರಾಮ ಸಮಿತ ಅಧ್ಯಕ್ಷ ವಿಶ್ವನಾಥ ಗೌಡ ಜಿ. ಸಂಟ್ಯಾರು ಅಧ್ಯಕ್ಷತೆ ವಹಿಸುವರು.

ಡಿ.3: ಪುತ್ತಿಲ ಪರಿವಾರ ಆರ್ಯಾಪು ಗ್ರಾಮ ಸಮಿತಿಯಿಂದ ಸಾರ್ವಜನಿಕ ಶ್ರೀ ಲಕ್ಷ್ಮೀಪೂಜೆ | ಆಮಂತ್ರಣ ಬಿಡುಗಡೆ Read More »

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಸಾರ್ವಜನಿಕ ಗೋ ಪೂಜೆ

ಕುಪ್ಪೆಪದವು: ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ 4ನೇ ವರ್ಷದ ಸಾರ್ವಜನಿಕ ಗೋ ಪೂಜೆ ಕಾಪಿಕಾಡ್ ಅಯ್ಯಪ್ಪ ಮಂದಿರದಲ್ಲಿ ನಡೆಯಿತು. ಕಾಯಕ್ರಮದ ಅಂಗವಾಗಿ ಇರುವೈಲ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮತ್ತು ಕುಪ್ಪೆಪದವು ಕಲ್ಲಾಡಿ ವೀರ ಶಿವಾಜಿ ಭಜನಾ ಮಂಡಳಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ರಾಮ್ ಸೇನಾ ವಾಯುಪುತ್ರ ಘಟಕದ ಸರ್ವ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಸಾರ್ವಜನಿಕ ಗೋ ಪೂಜೆ Read More »

ನೀರು ಪಾಲಾದ ವ್ಯಕ್ತಿಯ ಶವ ಪತ್ತೆ

ನೆಲ್ಯಾಡಿ: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ನೀರು ಪಾಲಾಗಿದ್ದ ಪಾಲಾಗಿದ್ದ ಸಿರಿಬಾಗಿಲು ಗ್ರಾಮದ ಬರ್ಚಿನಾಳ ನಿವಾಸಿ ಸೋಮಶೇಖರ (34) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ನ.14ರಂದು ಸಂಜೆ ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋಗಿದ್ದ ವೇಳೆ ಸೋಮಶೇಖರ ಅವರು ಕಾಲು ಜಾರಿ ನೀರು ಪಾಲಾಗಿದ್ದರು. ಬಳಿಕ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಹಾಗೂ ಶೌರ್ಯ ವಿಪತ್ತು ತಂಡದವರು ಮೃತ ದೇಹ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ನೀರು ಪಾಲಾದ ವ್ಯಕ್ತಿಯ ಶವ ಪತ್ತೆ Read More »

ಮಾಧ್ಯಮದಲ್ಲಿ ಶುದ್ಧ ಕನ್ನಡ ಬಳಕೆ ಹಾಗೂ ರಾಷ್ಟ್ರದ ಬಗೆಗಿನ ಕಾರ್ಯಕ್ರಮಕ್ಕಾಗಿ ಒತ್ತಾಯ | ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ

ಪುತ್ತೂರು: ಖಾಸಗಿ ದೂರದರ್ಶನ ಮಾಧ್ಯಮ ಹಾಗೂ ಬಾನುಲಿ ಕೇಂದ್ರಗಳಲ್ಲಿ ಶುದ್ಧ ಕನ್ನಡವನ್ನೇ ಬಳಸುವಂತೆ ಹಾಗೂ ಎಲ್ಲಾ ದೂರದರ್ಶನ ವಾಹಿನಿಗಳಲ್ಲಿ ಕಡ್ಡಾಯವಾಗಿ ದಿನಕ್ಕೆ ಒಂದು ತಾಸಿನಷ್ಟು ಹೊತ್ತು ದೇಶದ ಉತ್ಕೃಷ್ಟತೆಯ ಬಗ್ಗೆ ಕಾರ್ಯಕ್ರಮ ನೀಡುವಂತೆ ಸರಕಾರ ಸೂಕ್ತ ನಿರ್ದೇಶ ನೀಡುವಂತೆ ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,, ಈ ಕುರಿತು ಪುತ್ತೂರು ಶಾಸಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದರು. ಕನ್ನಡದ ಬೆಳವಣಿಗೆಗೆ ಸರ್ಕಾರಾದಿಯಾಗಿ ಕನ್ನಡ

ಮಾಧ್ಯಮದಲ್ಲಿ ಶುದ್ಧ ಕನ್ನಡ ಬಳಕೆ ಹಾಗೂ ರಾಷ್ಟ್ರದ ಬಗೆಗಿನ ಕಾರ್ಯಕ್ರಮಕ್ಕಾಗಿ ಒತ್ತಾಯ | ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ Read More »

ನ.17: ದ.ಕ.ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ‘ಸೀರತ್ ಸಮಾವೇಶ’

ಪುತ್ತೂರು: ದ.ಕ.ಜಿಲ್ಲೆ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸಾರ್ವಜನಿಕ ಸೀರತ್ ಸಮಾವೇಶ ನ.17 ರಂದು ಸಂಜೆ 6.30 ಕ್ಕೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪಸಂಚಾಲಕ ಅಮೀನ್ ಅಹ್ಸನ್ ಹೇಳಿದರು. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಮಾವೇಶ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್,

ನ.17: ದ.ಕ.ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ‘ಸೀರತ್ ಸಮಾವೇಶ’ Read More »

ನಾಳೆ : ವಿವೇಕಾನಂದ ಕಾಲೇಜು ಸಂಪರ್ಕ ರಸ್ತೆಯ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ

ಪುತ್ತೂರು: ನೆಹರುನಗರದ ವಿವೇಕಾನಂದ ಕಾಲೇಜು ಸಂಪರ್ಕ ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನ.16 ರಂದು ನಡೆಯಲಿದೆ. ಈಗಾಗಲೇ ಈ ಕಾಮಗಾರಿಗೆ ಸರಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸುವರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಂಸದರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಳೆ : ವಿವೇಕಾನಂದ ಕಾಲೇಜು ಸಂಪರ್ಕ ರಸ್ತೆಯ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಶಿಲಾನ್ಯಾಸ Read More »

ಬಾಲಕಿ ಮೇಲೆ ಅತ್ಯಾಚಾರ

ಬೆಳ್ಳಾರೆ: ಮೂತ್ರ ವಿಸರ್ಜನೆಗೆ ತೆರಳಿದ್ದ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾಗೇಶ (24) ಈ ಕೃತ್ಯ ಎಸಗಿ ಬಂಧಿತನಾದ ಆರೋಪಿ. ಮಹಾರಾಷ್ಟ್ರದ ಕೂಲಿ ಕಾರ್ಮಿರರೋರ್ವರ ಏಳು ವರ್ಷದ ಮಗಳು ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಅತ್ಯಾಚಾರದ ಬಳಿಕ ಬಾಲಕಿಗೆ ರಕ್ತಸ್ರಾವವಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ಈ ವೇಳೆ ಪ್ರಕರಣ ಬಯಲಾಗಿದೆ. ಈ ಕುರಿತು ಬಾಲಕಿಯ ಪೋಷಕರು ಬೆಳ್ಳಾರೆ ಠಾಣೆಗೆ

ಬಾಲಕಿ ಮೇಲೆ ಅತ್ಯಾಚಾರ Read More »

error: Content is protected !!
Scroll to Top