ಪುತ್ತೂರು

ಡಿ. 9: ವಿದ್ಯಾಸರಸ್ವತಿ ಮಂದಿರದ ಕ್ರೀಡಾಕೂಟ, ಕ್ರೀಡಾ ಕೊಠಡಿ ಉದ್ಘಾಟನೆ

ಪುತ್ತೂರು: ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ವಾರ್ಷಿಕ ಕ್ರೀಡಾಕೂಟ ಹಾಗೂ ನೂತನ ಕ್ರೀಡಾ ಕೊಠಡಿ ಉದ್ಘಾಟನಾ ಸಮಾರಂಭ ಡಿ. 9ರ ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಉದ್ಯಮಿ ಸಂತೋಷ್ ಕುಮಾರ್ ಕೈಕಾರ ಕ್ರೀಡಾಕೂಟ ಉದ್ಘಾಟಿಸಲಿದ್ದು, ಪುಂಡಿಕಾಯಿ ಪುರೋಹಿತರಾದ ಕೃಷ್ಣ ಶಗ್ರಿತ್ತಾಯ ಕ್ರೀಡಾ ಕೊಠಡಿಯನ್ನು ಉದ್ಘಾಟಿಸುವರು. ವಿದ್ಯಾ ಮಂದಿರದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಡಿ. 9: ವಿದ್ಯಾಸರಸ್ವತಿ ಮಂದಿರದ ಕ್ರೀಡಾಕೂಟ, ಕ್ರೀಡಾ ಕೊಠಡಿ ಉದ್ಘಾಟನೆ Read More »

ಖಾಸಗಿ ಬಸ್’ನಡಿಗೆ ಬಿದ್ದು ವ್ಯಕ್ತಿ ಮೃತ್ಯು!!

ಬಸ್ಸಿನಡಿಗೆ ವ್ಯಕ್ತಿಯೋರ್ವರು ಬಿದ್ದು ಮೃತಪಟ್ಟ ಘಟನೆ ಈಶ್ವರಮಂಗಲ ಸಮೀಪದ ಗಾಳಿಮುಖದಲ್ಲಿ ಶುಕ್ರವಾರ ನಡೆದಿದೆ. ಘಟನೆಯಿಂದಾಗಿ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

ಖಾಸಗಿ ಬಸ್’ನಡಿಗೆ ಬಿದ್ದು ವ್ಯಕ್ತಿ ಮೃತ್ಯು!! Read More »

ತಾಲೂಕು ಮಟ್ಟದ ಶಾಂತಿವನ ಟ್ರಸ್ಟ್ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಜ್ಞಾನಶರಧಿ/ ಜ್ಞಾನವಾರಿಧಿ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧರಿತ ವಿವಿಧ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಗಳಿಸಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಸಾನ್ವಿ ಎಸ್. ಭಾಷಣದಲ್ಲಿ ಪ್ರಥಮ, ಆಧ್ಯನ್ ಆರ್. ಚಿತ್ರಕಲೆಯಲ್ಲಿ ಪ್ರಥಮ,

ತಾಲೂಕು ಮಟ್ಟದ ಶಾಂತಿವನ ಟ್ರಸ್ಟ್ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ Read More »

ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬ ಲೋಗೊ ಅನಾವರಣಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಲೋಗೊವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು. 25ನೇ ವರ್ಷದ ಸಂಭ್ರಮದಲ್ಲಿರುವ ಎಸ್.ಆರ್.ಕೆ. ಲ್ಯಾಡರ್ಸ್, ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಮಳಿಗೆಯನ್ನು ತೆರೆದಿದೆ. ಈ ಮಳಿಗೆಗೆ ಆಗಮಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಲೋಗೊ ಅನಾವರಣಗೊಳಿಸಿ, ಶುಭಹಾರೈಸಿದರು. ಈ ಸಂದರ್ಭ ಸಹಾಯಕ ಆಯುಕ್ತ ಗಿರೀಶ್ ನಂದನ್, ಮೊದಲಾದವರು ಉಪಸ್ಥಿತರಿದ್ದರು.

ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬ ಲೋಗೊ ಅನಾವರಣಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ Read More »

ಶ್ರೀನಿವಾಸ ಕಲ್ಯಾಣೋತ್ಸವ: ದೇವರಮಾರು ಗದ್ದೆಯಲ್ಲಿ ಚಪ್ಪರ ಮಹೋತ್ಸವ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ. 24 ಹಾಗೂ 25ರಂದು ಪುತ್ತಿಲ ಪರಿವಾರದ ವತಿಯಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತ ಶುಕ್ರವಾರ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಚಪ್ಪರ ಮುಹುರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸಂಘಟನೆ ಕಾರ್ಯಕರ್ತರು, ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀನಿವಾಸ ಕಲ್ಯಾಣೋತ್ಸವ: ದೇವರಮಾರು ಗದ್ದೆಯಲ್ಲಿ ಚಪ್ಪರ ಮಹೋತ್ಸವ Read More »

ಘಾಟ್ ನಡುವೆ ಜೆಸಿಬಿ ಆಪರೇಟರ್ ಕೊಲೆ ಶಂಕೆ! | ಇಬ್ಬರು ಪೊಲೀಸ್ ವಶಕ್ಕೆ??

ಪುತ್ತೂರು: ಜೆಸಿಬಿ ಆಪರೇಟರ್ ಓರ್ವರನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೊಲೆಯಾದವರನ್ನು ಬಾಗಲಕೋಟೆ ಮೂಲದ ಹನುಮಂತ (22) ಎಂದು ಗುರುತಿಸಲಾಗಿದೆ. ಇವರು ಕುಂಬ್ರ ಮೂಲದ ಉದ್ಯಮಿ ಸಂತೋಷ್ ಎಂಬವರ ಜೊತೆ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹನುಮಂತನನ್ನು ಘಾಟ್ ಮಧ್ಯೆ ಕೊಲೆ ಮಾಡಿ, ಬಿಸಾಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಠಾಣಾಧಿಕಾರಿ ರವಿ ಬಿ.ಎಸ್.  ಅವರ

ಘಾಟ್ ನಡುವೆ ಜೆಸಿಬಿ ಆಪರೇಟರ್ ಕೊಲೆ ಶಂಕೆ! | ಇಬ್ಬರು ಪೊಲೀಸ್ ವಶಕ್ಕೆ?? Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ಕಡಬ: ತಾಲೂಕಿನ ಬಳ್ಪ ಗ್ರಾಮದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಳ್ಪ ಗ್ರಾಮದ ದೊಡ್ಡಮನೆ ದಾಸಪ್ಪ ಗೌಡರ ಪುತ್ರ ಪ್ರಸಾದ್ (33) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯ ಸಮಸ್ಯೆ ಕಾರಣ ಎನ್ನಲಾಗಿದೆ.

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಅಡಿಕೆ ಮರದಿಂದ ಬಿದ್ದು ಕೂಲಿ ಕಾರ್ಮಿಕ ಮೃತ್ಯು!

ಪುತ್ತೂರು: ಮರದಿಂದ ಅಡಿಕೆ ಕೀಳುವ ಸಂದರ್ಭ ಆಕಸ್ಮತ್ತಾಗಿ ಮರದಿಂದ ಬಿದ್ದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಬೆಟ್ಟಂಪಾಡಿಯಲ್ಲಿ ನಡೆದಿದೆ. ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ನಿವಾಸಿ ಸಯ್ಯದ್ (45) ಮೃತಪಟ್ಟವರು. ಬೆಟ್ಟಂಪಾಡಿಯ ಕೃಷಿಕರೋರ್ವರ ಮನೆಗೆ ಸಯ್ಯದ್ ಅವರು ಅಡಿಕೆ ಕೀಳಲು ತೆರಳಿದ್ದು, ಮರದಿಂದ ಆಕಸ್ಮಿಕವಾಗಿ ಮರದಿಂದ ಕಾಲುಜಾರಿ ಬಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಅಡಿಕೆ ಮರದಿಂದ ಬಿದ್ದು ಕೂಲಿ ಕಾರ್ಮಿಕ ಮೃತ್ಯು! Read More »

ಶೋಭಾ ಕರಂದ್ಲಾಜೆಗೆ ಕೇಂದ್ರದ ಹೆಚ್ಚುವರಿ ಖಾತೆ!

ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಕೇಂದ್ರ ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರು ಹೊಂದಿದ್ದ ಖಾತೆಗಳನ್ನು ಸಂಪುಟದ ಇತರ ಸದಸ್ಯರಿಗೆ ಮರುಹಂಚಿಕೆ ಮಾಡಲಾಗಿದೆ. ಈ ಪೈಕಿ ಶೋಭಾ ಕರಂದ್ಲಾಜೆ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯ ಹೊಣೆ ಸಿಕ್ಕಿದೆ. ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಂಸ್ಕರಣೆ ಖಾತೆ, ರಾಜೀವ್ ಚಂದ್ರಶೇಖರ್ ಅವರಿಗೆ ಜಲಶಕ್ತಿ ಖಾತೆಯನ್ನು ನೀಡಲಾಗಿದೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್ ಅವರ ಖಾತೆಯನ್ನು ಅರ್ಜುನ್ ಮುಂಡಾ

ಶೋಭಾ ಕರಂದ್ಲಾಜೆಗೆ ಕೇಂದ್ರದ ಹೆಚ್ಚುವರಿ ಖಾತೆ! Read More »

ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನಾಚರಣೆ | ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ ಸಾರ್ಥಕ 78 ವರ್ಷ

ಪುತ್ತೂರು: ನಾಡಿನ ಹೆಸರಾಂತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್’ನಲ್ಲಿ ಗುರುವಾರ ಸಂಸ್ಥಾಪಕರ ದಿನ ಆಚರಿಸಲಾಯಿತು. ಪುತ್ತೂರು, ಬೆಳ್ತಂಗಡಿ, ಗೋಣಿಕೊಪ್ಪಲ್, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆ ಕಳೆದ 78 ವರ್ಷಗಳಿಂದ ನಿರಂತರ ಗ್ರಾಹಕರ ಸೇವೆ ಮತ್ತು ಸಂತೃಪ್ತಿಯಲ್ಲಿ ಮನೆಮಾತಾಗಿದೆ. ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 7, 8 ಮತ್ತು 9ರಂದು ಗ್ರಾಹಕರು ಮುಳಿಯ ಜ್ಯುವೆಲ್ಸ್’ನಲ್ಲಿ ಖರೀದಿಸುವ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂ.ಗಳನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ

ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನಾಚರಣೆ | ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ ಸಾರ್ಥಕ 78 ವರ್ಷ Read More »

error: Content is protected !!
Scroll to Top